Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕನಕರ ದಿನ – ಶ್ರೀ ಮಹಿಪತಿ ದಾಸರ ಆಗಮನ
- ಸಿನಿಮಾ

ಕನಕರ ದಿನ – ಶ್ರೀ ಮಹಿಪತಿ ದಾಸರ ಆಗಮನ

ಕನಕದಾಸರ ಜಯಂತಿಯಂದು (ನವೆಂಬರ್ 27) ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ಚಿತ್ರ ತೆರೆಗೆ ಐದು ವರ್ಷಗಳಲ್ಲಿ ಐದು ಹರಿದಾಸರ ಚಿತ್ರಗಳನ್ನು ನಿರ್ದೇಶಿಸಿದ ಮಧುಸೂದನ್ ಹವಾಲ್ದಾರ್ ದಾಸ ಸಾಹಿತ್ಯದ ಶ್ರೀಮಂತಿಕೆ, ಮಹಿಪತಿ ದಾಸರ ವೈರಾಗ್ಯದ ಪಯಣಕ್ಕೆ ಬೆಳ್ಳಿತೆರೆಯ ಸ್ಪರ್ಶ ಕನ್ನಡದ ದಾಸ ಸಾಹಿತ್ಯ ಮತ್ತು ಹರಿದಾಸರ ಜೀವನಗಾಥೆಯನ್ನು ಬೆಳ್ಳಿತೆರೆಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ತೊಡಗಿರುವ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರ ಐದನೇ ಹರಿದಾಸರ ಚಿತ್ರ ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ನವೆಂಬರ್ 27ರಂದು ಕನಕದಾಸರ ಜಯಂತಿಯ ಶುಭ […]

ಕನಕದಾಸರ ಜಯಂತಿಯಂದು (ನವೆಂಬರ್ 27) ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ಚಿತ್ರ ತೆರೆಗೆ

ಐದು ವರ್ಷಗಳಲ್ಲಿ ಐದು ಹರಿದಾಸರ ಚಿತ್ರಗಳನ್ನು ನಿರ್ದೇಶಿಸಿದ ಮಧುಸೂದನ್ ಹವಾಲ್ದಾರ್

ದಾಸ ಸಾಹಿತ್ಯದ ಶ್ರೀಮಂತಿಕೆ, ಮಹಿಪತಿ ದಾಸರ ವೈರಾಗ್ಯದ ಪಯಣಕ್ಕೆ ಬೆಳ್ಳಿತೆರೆಯ ಸ್ಪರ್ಶ

ಕನ್ನಡದ ದಾಸ ಸಾಹಿತ್ಯ ಮತ್ತು ಹರಿದಾಸರ ಜೀವನಗಾಥೆಯನ್ನು ಬೆಳ್ಳಿತೆರೆಯ ಮೂಲಕ ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ತೊಡಗಿರುವ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಅವರ ಐದನೇ ಹರಿದಾಸರ ಚಿತ್ರ ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ನವೆಂಬರ್ 27ರಂದು ಕನಕದಾಸರ ಜಯಂತಿಯ ಶುಭ ಸಂದರ್ಭದಲ್ಲಿ ರಾಜ್ಯಾದ್ಯಂತ ತೆರೆಕಾಣಲಿದೆ.

2021ರಲ್ಲಿ ‘ಜಗನ್ನಾಥ ದಾಸರು’ ಚಿತ್ರದ ಮೂಲಕ ಆರಂಭವಾದ ಈ ಪಯಣ, ‘ಪ್ರಸನ್ನ ವೆಂಕಟದಾಸರು’, ‘ವಿಜಯದಾಸರು’, ‘ಜಗನ್ನಾಥ ದಾಸರು ಭಾಗ-2’ ಚಿತ್ರಗಳ ಬಳಿಕ ಇದೀಗ ‘ಕಾಖಂಡಕಿ ಶ್ರೀ ಮಹಿಪತಿ ದಾಸರು’ ಚಿತ್ರದೊಂದಿಗೆ ಮುಂದುವರಿದಿದೆ. ಐದು ವರ್ಷಗಳಲ್ಲಿ ಐದು ಹರಿದಾಸರ ಜೀವನಾಧಾರಿತ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವುದು ತಮ್ಮ ಪಾಲಿನ ಪವಾಡವೇ ಸರಿ ಎಂದು ಹವಾಲ್ದಾರ್ ಸಂತಸ ವ್ಯಕ್ತಪಡಿಸಿದ್ದಾರೆ.

ಆದಿಲ್‌ಶಾಹಿ ಅರಮನೆಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಮಹಿಪತಿ ದಾಸರು, ಸೂಫಿ ಸಂತ ಶಾನುಂಗ ಅವರ ಪ್ರಭಾವಕ್ಕೆ ಒಳಗಾಗಿ, ಬಳಿಕ ಭಾಸ್ಕರ ಸ್ವಾಮಿಗಳ ಶಿಷ್ಯತ್ವ ಸ್ವೀಕರಿಸಿ ವೈರಾಗ್ಯದ ಹಾದಿ ಹಿಡಿದ ಜೀವನಗಾಥೆಯೇ ಈ ಚಿತ್ರದ ಪ್ರಮುಖ ಆಕರ್ಷಣೆ. ಆರು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಮಹಿಪತಿ ದಾಸರ ಬದುಕಿನ ಮಹತ್ವದ ಘಟನೆಗಳನ್ನು ಇತಿಹಾಸಕ್ಕೆ ಧಕ್ಕೆಯಾಗದಂತೆ ಸಿನಿಮೀಯವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.

ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಹನುಮ, ಭೀಮ ಮತ್ತು ಮಧ್ವ ಪಾತ್ರಗಳನ್ನು ಕಲ್ಪನಾತ್ಮಕವಾಗಿ ರೂಪಿಸಿ, ವಿಶೇಷ ವಿಎಫ್‌ಎಕ್ಸ್ ತಂತ್ರಜ್ಞಾನದ ಮೂಲಕ ದೃಶ್ಯವನ್ನು ಪರಿಣಾಮಕಾರಿಯಾಗಿ ಮೂಡಿಸಲಾಗಿದೆ. ಖ್ಯಾತ ಗಾಯಕ ರಾಯಚೂರು ಶೇಷಗಿರಿದಾಸ್ ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ‘ಗುರುರಾಯನಂತ ಕರುಣಾಳು ಕಾಣೆ ಜಗದೊಳಗೆ’ ಹಾಡನ್ನೂ ಹಾಡಿದ್ದಾರೆ. ಮಹಿಪತಿ ದಾಸರ ಪಾತ್ರದಲ್ಲಿ ವಿಜಯಾನಂದ ನಾಯಕ್ ಕಾಣಿಸಿಕೊಂಡಿದ್ದಾರೆ. ಚಾಂದಿನಿ ಮಹಿಪತಿ ದಾಸರ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

ದಾಸ ಸಾಹಿತ್ಯದ ಮಹತ್ವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಚಿತ್ರವನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ವ್ಯಾಸರಾಜರು, ಪುರಂದರದಾಸರು, ಕನಕದಾಸರು ಸೇರಿದಂತೆ ಪ್ರಮುಖ ಹರಿದಾಸರು ಮತ್ತು ಯತಿಗಳ ಜೀವನಗಾಥೆಗಳನ್ನು ಆಧರಿಸಿದ ಏಳು ಭಾಗಗಳ ಚಿತ್ರ ಸರಣಿ ನಿರ್ಮಿಸುವ ಯೋಜನೆಯನ್ನೂ ಹವಾಲ್ದಾರ್ ಹೊಂದಿದ್ದಾರೆ. ವರ್ಷಕ್ಕೆ ಕನಿಷ್ಠ ಎರಡು ಚಿತ್ರಗಳನ್ನು ಪ್ರೇಕ್ಷಕರ ಮುಂದೆ ತರುವ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಹಿಪತಿ ದಾಸರ ಪತ್ನಿಯ ಪಾತ್ರ ನಿರ್ವಹಿಸಿರುವ ನಟಿ ಚಾಂದಿನಿ, ನಟ ಹೇರಂಬ, ‘ಸೌಂಡ್ ಆಫ್ ಮ್ಯೂಸಿಕ್’ ಖ್ಯಾತಿಯ ಗುರುರಾಜ್, ಗಾಯಕ ರಾಯಚೂರು ಶೇಷಗಿರಿದಾಸ್, ಸಹ ನಿರ್ದೇಶಕರಾದ ಸಾವಂತ್, ಬಾಬಿ, ನಟ ವಿಜಯ್ ಭಾಸ್ಕರ್ ಹಾಗೂ ಚಿತ್ರದ ವಿಎಫ್‌ಎಕ್ಸ್ ಕಾರ್ಯ ನಿರ್ವಹಿಸಿರುವ ದಯಾ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.