ನ ಚ ಪ್ರಾಣಸಂ ಜ್ಞೋ ನ ವೈ ಪಂಚವಾಯು
ರ್ನ ವಾ ಸಪ್ತಧಾತುಃ ರ್ನ ವಾ ಪಂಚಕೋಶ:
ನ ವಾಕ್ಷಾಣಿಪಾದೌ ನ ಚೋಪಸ್ಥವಾಯು
ಚಿದಾನಂದ ರೂಪಹ ಶಿವೋಹ0 ಶಿವೋಹಂ || ಪ II
ಅರ್ಥ
ಉಸಿರು ಅಂದ್ರೆ ಪ್ರಾಣ. ನಾನಲ್ಲ . ಪಂಚವಾಯು ಕೂಡ ನಾನಲ್ಲ, ಪಂಚವಾಯುಗಳು ಅದಾವು. ಸಮಾನವಾಯು, ವ್ಯಾನವಾಯು, ಉದಾನವಾಯು, ಅಪಾನವಾಯು, ಪ್ರಾಣ ವಾಯು . ಸಪ್ತ ದಾತುಗಳು ಅಂದ್ರೆ ರಕ್ತ, ರಸ, ಶುಕ್ಲ, ಮಾಂಸ, ಮಜ್ಯ, ಮೇದಸ್ಸು, ರೇತಸ್ಸು,. ನಾನು ಸತ್ತ ಧಾತುವಲ್ಲ ಪಂಚ ಅಂದ್ರೆ ಐದು ಕೋಶಗಳು ಅದಾವು.ಅನ್ನಮಯ ಕೋಶ ಪ್ರಾಣಮಯ ಕೋಶ ಮನೋಮಯ ಕೋಶ ಜ್ಞಾನಮಯ ಕೋಶ ಆನಂದಮಯಕೋಶ ಆ ಪಂಚಕೋಶವು ನಾನಲ್ಲ. ವಾಕ್ ಅಂದ್ರೆ ಬಾಯ್ಯೂ ನಾನಲ್ಲ ಕೈಯು ನಾನಲ್ಲ ಪಾದವು ನಾನಲ್ಲ ಗುಹ್ಯ ಸ್ಥಾನನು ನಾನಲ್ಲ ನಾನ್ಯಾರು ಅಂದ್ರೆ ನಾನು ಚಿದಾನಂದ ರೂಪ ಶಿವನು.
ನ ಮೇ ದ್ವೇಷರಾಗೌ ನ ಮೇ ಲೋಭಮೋಹೌನ
ಮಧೋ ನೈವ ಮೇ ನೈವ ಮಾತ್ಸ ರ್ಯಭಾವ :
ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷ:
ಚಿದಾನಂದ ರೂಪ ಶಿವೋಹಂ ಶಿವೋಹಂ || ಪ ||
ಅರ್ಥ –
ರಾಗ ನಾನಲ್ಲ, ಅತಿಯಾದ ಪ್ರೇಮಕ ರಾಗ ಅಂತಾರ. ನನ್ನಲ್ಲಿ , ಲೋಭ ನಾನಲ್ಲ, ನನ್ನಲ್ಲಿ , ಮದ ಮಾತ್ಸರ್ಯಗಳು ನನ್ನಲ್ಲಿ ಇಲ್ಲ, ಧರ್ಮ ನಾನಲ್ಲ, ಅರ್ಥ ನಾನಲ್ಲ, ಕಾಮ ಮೋಕ್ಷಗಳೆಂಬ ಪುರುಷಾರ್ಥಗಳು ನಾನಲ್ಲ, ಅಂದ್ರೆ ನಾನ ಯಾರು ? ಚಿದಾನಂದ ರೂಪಹ ಶಿವೋಹಂ ಶಿವೋಹಂ ಅಂದ್ರೆ ಸತ್ ಚಿತ್ ಆನಂದ ನಿತ್ಯ ಪರಿಪೂರ್ಣ ಅನ್ನುವಂತಹ ಲಕ್ಷಣವನ್ನು ಹೊಂದಿದಂತಹ ಶಿವನ ರೂಪವೇ ನಾನಿದ್ದೀನಿ. ಇದನ್ನು ಶಂಕರಾಚಾರ್ಯರು ಹೇಳಿದ್ದು ನಿರ್ವಾಣ ಷಟ್ಕಂ. ನಿರ್ವಹಣಾ ಅಂದ್ರ ಬಯಲು.
ಷಟ್ ಅಂದರೆ ಆರು . ಬಯಲೊಳು ಬಯಲಾಗಕ್ಕ ಇದನ್ನು ತಿಳ್ಕೊಬೇಕು. ಸಿದ್ದೇಶ್ವರ ಶ್ರೀಗಳು ಬಿಡಿಸಿದ ಅಲ್ಲಮರ ವಚನದ ಉದಾಹರಣೆ ಇದು.
ವಾಯು ನಿದ್ರೆಗೈದೆಡೆ ಆಕಾಶ ಜೋಗುಳ ಹಾಡಿತ್ತು. ಬಯಲು ಬಳಲಿದೆನೆ೦ದೆಡೆ ನಿರಾಳ ಮೂಲೆಗೊಟ್ಟಿತ್ತು , ಆಕಾಶ ಅಡಗಿತ್ತು ,ಜೋಗುಳ ನಿಂದಿತ್ತು , ಗುಹೇಶ್ವರನೈದಾನೆ ಇಲ್ಲದಂತೆ. ಯಾವ ಗುಹೇಶ್ವರನನ್ನು ಅಲ್ಲಮ ಪ್ರಭುದೇವರು ವಾಯು ನಿದ್ರೆ ಗೈದೆಡೆ, ವಾಯು ಅಂದ್ರೆ ಮನಸ್ಸು ಆಕಾಶದ ಎರಡಾಣಿ ಗಾಳಿಯ ಎಂಟಾಣಿ ಕೂಡಿ ಮನಸ್ಸಾಗೇದ. ಮನಸ್ಸು ನಿದ್ರೆದೈದಡೆ ನಿದ್ರೆಗೆಯುವುದು ಅಂದ್ರೆ ನಿಶ್ಚಲ ಆಯಿತೆಂದರೆ ಮನಸ್ಸು ಹರಿದಾಡೂದು ನಿಂತಿತು ಅಂದ್ರೆ ಆಕಾಶ ಜೋಗುಳ ಹಾಡಿತ್ತು. ಆಕಾಶ ಅಂದ್ರೆ ನಾನು ಆತ್ಮ. ನಾನು ಸಚ್ಚಿದಾನಂದ ರೂಪ. ನಾನು ಸಚ್ಚಿದಾನಂದ ರೂಪ ಅನ್ನುವಂತಹ ಭಾವ ಬರಲಿಕ್ಕೆ ಶುರುವಾಯಿತು.
ಜೋಗುಳ ಹಾಡ್ತು ಅಂದ್ರೆ ಅಲ್ಲಿ ಒಂದು ತರಹ ಆನಂದ ಶುರುವಾಯಿತು. ನಾನು ಸಚ್ಚಿದಾನಂದ ರೂಪ ನಾನು ಸಚ್ಚಿ ನಾನೊಂದು ಸ್ವರೂಪ ಭಗವಂತನೇ ನಾನು ದೇಹ ನಾನಲ್ಲ ಮನಸ್ಸು ನಾನಲ್ಲ, ಬುದ್ಧಿ ನಾನಲ್ಲ, 25 ತತ್ವಗಳು ನಾನಲ್ಲ, ಪಂಚ ತನ್ಮಾತ್ರಯಗಳು ನಾನಲ್ಲ,
ಇವು ಯಾವಲ್ಲ ನಾನು ಆತ್ಮ ಅನ್ನುವಂತಹ ಒಂದು ಜೋಗುಳ ಹಾಡು ಅಂದ್ರ ಆನಂದ ಶುರು ಆಯಿತು. ನಾನು ಆತ್ಮ ನಾನು ಆತ್ಮ ಅನ್ನು ವಂತಹ ಭಾವ ಎಲ್ಲೀತನ ಇರ್ತದ. ಅದು ಒಮ್ಮೆ ಮರೆಯಾಗ್ತದ.
ಆವಾಗ ಬಯಲು ಬಳಲೇದ ಅಂತಾರ. ಆಯಾಸಗೊಂಡಿತು. ಅಂದ್ರ ನಿರಾಳ. ನಿರಾಳ ಅಂದು ಏನಿಲ್ಲ ಅಲ್ಲಿ . ಒಟ್ಟು ಬಯಲು. ಅದು ಮೂಲೆಗೊಟ್ಟಿತ್ತು. ಅದು ಆಕಾರ ತಾಳಿತು. ನಿರಾಳ ತಾಳಿತು . ಮನುಷ್ಯ ಸಮಾಧಿ ಸ್ಥಿತಿಗೆ ಹೋದಾಗ ಅದು ಅನುಭವ ಆಗ್ತದ.
ಆಕಾಶ ಅಡಗಿತ್ತು ನಾನು ಆತ್ಮ ನಾನು ಆತ್ಮ ಅನ್ನುವಂತಹ ಭಾವ ಅಡಗಿತ್ತು ಜೋಗುಳನು ಇಲ್ಲ ಅಲ್ಲಿ ಹಾಡುನು ನಿಂತು ನಾನು ಭಾವನು ಇಲ್ಲ ಏನಿಲ್ಲ ಅಲ್ಲಿ,ಹೆಂಗದಾನು ಅಲ್ಲೇ ಗುಹೇಶ್ವರ ನೈದಾನೆ ಇಲ್ಲದಂತೆ. ಭಗವಂತ ಅದಾನ ಹೆಂಗದಾನ? ಇಲ್ಲದಂಗ ಅದಾನ. ಯಾವ ಶಬ್ದಗಳಿಂದಲೂ ಅವನನ್ನು ಹಿಡಿಯಲಿಕ್ಕೆ ಆಗುವುದಿಲ್ಲ ಅನುಭವಿಸಬೇಕು ಅದನ್ನ .ನಿಶ್ಚಲ ಅದಕ ಸಮಾಧಿಸ್ಥಿತಿ ರಾಮಕೃಷ್ಣ ಪರಮಹಂಸರು ಅನುಭವಿಸುತ್ತಿದ್ದರು ಅದನ್ನು.
ಮುಂದುವರಿಯುತ್ತದೆ ….
ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

