ಅಮ್ಮನ ಹಾಡಿಗೆ ಧ್ವನಿಯಾದ ಜೋಗಿ ಪ್ರೇಮ್
ಕನ್ನಡ ಚಲನಚಿತ್ರ ಅಂಗದ ಇತಿಹಾಸದಲ್ಲಿ ದಾಖಲಾಗಿರುವಂತಹ ಅನೇಕ ಕಥೆಗಳು,ಚಿತ್ರ ಕಥೆಗಳು, ಸಂಭಾಷಣೆಗಳು, ಸಿನಿಮಾಗಳು, ಕಲಾವಿದರು, ನಿರ್ದೇಶಕರು, ಬರಹಗಾರರು, ಅನ್ನದಾತ ನಿರ್ಮಾಪಕರು ಹಾಗೂ ಇವರ ಜೊತೆ ಹೆಜ್ಜೆ ಹಾಕಿದ ಎಲ್ಲ ಸಿನಿಮಾ ಉತ್ಸಾಹಿ ಕೆಲಸಗಾರರಿಂದ ಆದಂತಹ,ಕನ್ನಡದ ಅನೇಕ ಚಿತ್ರಗಳು ಕೋಟ್ಯಾಂತರ ಸಿನಿಮಾ ಅಭಿಮಾನಿಗಳಿಗೆ ಮನೋರಂಜನೆಯ ರಸದೂತನವನ್ನು ನೀಡಿದ್ದು ಎಷ್ಟು ಸತ್ಯವೋ ಅಷ್ಟೇ ಭಾವನಾತ್ಮಕವಾಗಿಯೂ ಕೂಡ ಎಲ್ಲರ ಹೃದಯದಲ್ಲಿ ಶಾಶ್ವತ ಸ್ಥಾನವನ್ನ ಪಡೆದುಕೊಂಡಿವೆ.
ಕನ್ನಡದಲ್ಲಿ ಇಲ್ಲಿಯವರೆಗೆ ಬಂದಂತಹ ಯಾವುದೇ ಚಿತ್ರವಾಗಲಿ, ಅದು ತನ್ನ ಕಂಟೆಂಟ್ ಮೂಲಕ ಸುದ್ದಿಯಾಗುವದರ ಜೊತೆಗೆ ತನ್ನಲ್ಲಿನ ಹಾಡುಗಳ ಮೂಲಕ ಎಲ್ಲ ಪ್ರೇಕ್ಷಕರಿಗೆ ಖುಷಿಯನ್ನು ನೀಡುತ್ತಾ ಬಂದಿದೆ, ಅದರಲ್ಲೂ ವಿಶೇಷವಾಗಿ ಹೇಳುವುದಾದರೆ, ಮಾತೃದೇವತೆ ಅಂದರೆ ತಾಯಿಯ ಮೇಲೆ ಬಂದಂತಹ ಚಿತ್ರಗಳಾಗಲಿ ಹಾಡುಗಳಾಗಲಿ ಯಾವಾಗಲೂ ಸೂಪರ್ ಹಿಟ್.
ಡಾಕ್ಟರ್ ರಾಜಕುಮಾರ್ ಅವರಿಂದ ಹಿಡಿದು ಈಗಿನ ನಟರ ತನಕ ಹಾಗೂ ಮುಂದಿನ ಪೀಳಿಗೆಯ ಭವಿಷ್ಯದ ನಟರಿಗೂ ಅನ್ವಯಿಸುವಂತೆ ಹೇಳುವುದಾದರೆ, ತಾಯಿ ಮೇಲೆ ಬರೆದ ಸಾಹಿತ್ಯ ತಾಯಿ ಮೇಲೆ ಹಾಡಿದ ಗಾಯನ, ಎಲ್ಲವೂ ಅದ್ಭುತ ಅತ್ಯದ್ಭುತ.
ಜೋಗಿ ಪ್ರೇಮ್ ಅಂದಾಗ ನಮ್ಮೆಲ್ಲರ ಕಣ್ಮುಂದೆ ಬರುವಂತದ್ದು, ಅವರ ಕ್ಲಾಸಿಕ್ ಸಿನಿಮಾಗಳು ಕ್ಲಾಸಿಕ್ ಹಾಡುಗಳು ಕ್ಲಾಸಿಕ್ ಬರಹ,
ಪ್ರೇಮ್ ಒಂದು ಹಾಡು ಬರೆಯುತ್ತಾರೆ ಎಂದರೆ ಆ ಹಾಡು ಬರೆಯುವಾಗಲೇ ತನ್ನ ಹೈಪನ್ನು ಡಬಲ್ ಮಾಡಿಕೊಳ್ಳುತ್ತದೆ ಅದು ಪ್ರೇಮ್ ಇರುವ ತಾಕತ್ತು.
ಇನ್ನು ಜೋಗಿ ಪ್ರೇಮ್, ಅಮ್ಮನ ಬಾಂಧವ್ಯವನ್ನು ಹೊಗಳುವ ಅಮ್ಮನ ಬಗ್ಗೆ ಪ್ರೀತಿಯ ಅಕ್ಕರೆಯ ಮಾತುಗಳಿರುವ ಹಾಡನ್ನು ಹಾಡುತ್ತಾರೆ ಎಂದರೆ ಇನ್ನೂ ಕ್ರೇಜ್ ಡಬಲ್ ಆಗುತ್ತದೆ ಇದಕ್ಕೆ ಮತ್ತೊಂದು ಉದಾಹರಣೆ ಯುವ ರೈತ ಚೇತನ್ ನಾಯಕತ್ವದ “ದೇವಿ” ಚಿತ್ರ
ಜೋಗಿ ಪ್ರೇಮ್ ಧ್ವನಿಯಲ್ಲಿ ‘ದೇವಿ ‘ತಾಯಿ ಹಾಡು
ಮಂಡ್ಯ ಹುಡ್ಗನ ದೇವಿಗೆ ಧನಿಯಾದ ಜೋಗಿ ಪ್ರೇಮ್
ಪ್ರೇಮ್ಗೆ ಹಸು ಕರುಗಳನ್ನ ಉಡುಗೊರೆ ಕೊಟ್ಟ ಯುವ ರೈತ
ಯುವ ರೈತ ಚೇತನ್ ಹಾಗೂ ಭವ್ಯ ಗೌಡ ಅಭಿನಯದ ದೇವಿ ಚಿತ್ರದ ಅಮ್ಮನ ಧ್ಯಾನಿಸೋ ಹಾಡಿನ ರೆಕಾರ್ಡಿಂಗ್ ಇಂದು ಲೂಪ್ ಸ್ಟುಡಿಯೋದಲ್ಲಿ ನಡೆಯಿತು.. ನಿರ್ದೇಶಕ ಜೋಗಿ ಪ್ರೇಮ್ ಗಾಯನದಲ್ಲಿ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ರೆಕಾರ್ಡ್ ಮಾಡಿದರು. ಪ್ಯಾಥೋ ಪ್ರಜ್ಜು ಸಾಹಿತ್ಯದ “ಜೋಗುಳುವ ಹಾಡಿ ನೀನು ಕೈತ್ತು ಕೊಟ್ಟೋಳು”
ಪದಗಳನ್ನ ಪ್ರೇಮ್ ಹಾಡಿದಾಗ ಜೋಗಿ ಚಿತ್ರದ ಬೇಡುವನು ವರವನ್ನು ಹಾಡು ನೆನಪಿಸಿದರು.
ಮಂಡ್ಯದ ಹುಡ್ಗ ಯುವ ರೈತ ಚೇತನ್ ದೇವಿ ಚಿತ್ರಕ್ಕೆ ಶುಭಹಾರೈಸೋದ್ರ ಜೊತೆಗೆ ನಮ್ಮೂರಿನ ಪ್ರತಿಭೆಗಳು ಅನ್ನೋ ಪ್ರೀತಿಗೆ ಪ್ರೇಮ್ ಈ ಹಾಡನ್ನ ಹಾಡಿಕೊಟ್ಟಿದ್ದಾರೆ.
ವಿಶೇಷ ಅಂದ್ರೆ ಪ್ರೇಮ್ ಅವ್ರಿಗೆ ಚಿತ್ರದ ನಾಯಕ ಮತ್ತು ನಿರ್ಮಾಪಕ ಚೇತನ್ ಎರಡು ಹಸುಕರುಗಳನ್ನ ಉಡುಗೊರೆಯಾಗಿ ಕೊಟ್ಟರು.

ಅಂದ್ಹಾಗೆ CR ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ, ಯುವ ರೈತ ಚೇತನ್ ಕುಮಾರ್ ಕಥೆ ಚಿತ್ರಕಥೆ ಬರೆದು, ನಟಿಸಿ, ನಿರ್ಮಿಸ್ತಿರುವ ಈ ಚಿತ್ರವನ್ನ ಪ್ರಕಾಶ್ ನಿರ್ದೇಶನ ಮಾಡ್ತಿದ್ದಾರೆ. ಚಿತ್ರೀಕರಣ ಭರದಿಂದ ಸಾಗ್ತಿದ್ದು, ಇದೀಗ ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಅಣಿಯಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಹೊಸ ವರ್ಷಕ್ಕೆ ದೇವಿ ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿದೆ ಚಿತ್ರತಂಡ.

