ನನ್ನ ಮಗ ಪ್ರಚಾರ ಪ್ರಿಯನಲ್ಲ .ಅದು ನಮಗೆ ಬೇಕು ಇಲ್ಲ .ಏನ್ ಮಾಡಿದ್ರು ನಮ್ಮ ಜ್ಞಾನಕ್ಕಾಗಿ. ಈ ಲೋಕದಾಗ ಜಾತಿ ವ್ಯವಸ್ಥೆ ಹುಟ್ಟಿಕೊಂಡಿ0ದ ಜಾತಿ ಒಂದು ಅಡ್ಡ ಬರುತ್ತದ ಏನ ಮಾಡೋದು? ಎಲ್ಲಾ ಶಿವನ ಇಚ್ಚೆ ಎಂದು ಮನನೊಂದು ಹೇಳುವರು ಬಸಪ್ಪ ಶರಣರು.
ಈ ಜಗತ್ತಿನ ಏನಾಗಿದೆ ಅಂದ್ರೆ ಮನುಷ್ಯನನ್ನು ಸೇರುವುದಿಲ್ಲ ಕುಲ 18 ಜಾತಿಗಳಾಗ್ಯಾವು. ನಾಲ್ಕು ಆಶ್ರಮಗಳಾಗ್ಯಾವು . ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಬ್ರಾಹ್ಮಣರು ಅಂತರ ನಾವು ಅತಿ ಶ್ರೇಷ್ಠ ನಾವು ಬ್ರಾಹ್ಮಣರು ನಮ್ಮನ್ನು ಯಾರು ಮುಟ್ಟಬಾರದು. ಕ್ಷತ್ರಿಯ ಅಂದ್ರ ಅವ ಶೂರ ರಾಜ, ವೈಶ್ಯ ಅಂದ್ರ ಒಕ್ಕಲಿಗ, ಶೂದ್ರ ಹರಿಜನ ಗಿರಿಜನ .
ಸಾಕಿದ ನಾಯಿಯನ್ನು ಒಳಗೆ ಕರತರತಾರ ಮನೆಯಲ್ಲಿ ಮಲಗಿಸುತ್ತಾರೆ.ಅದೇ ಹೊಲೆಯರು ಮಾದರು ಅಂದ್ರ ಅಂಗಳದಾಗ ಕುಂದ್ರುಸ್ತಾರೆ. ಅವರಿಗೆ ಎತ್ತಿ ನೀರು ಹಾಕ್ತಾರ . ಅದಕ್ಕೆ ಹೇಳ್ತಾರೆ ಅವರು ಶೀಲ ಮಾಡು ಸಲುವಾಗಿ ಮುಡಿಚೆಟ್ಟಿನೋಳು ಹುಟ್ಟಿ ಮುಟ್ಟಿ ತಟ್ಟಿನಂತೀರಿ ಮುಡಿಚೆಟ್ಟು ಯಾವಲ್ಲದ ಹೇಳಣ್ಣ.?
ಮುಟ್ಟಾದ ಮೂರು ದಿನಕ್ಕೆ ಹುಟ್ಟಿ ಬಂದೀರಿ.ನೀನು ಮುಡಿ ಚೆಟ್ಟು ಯಾವಲ್ಲದ ಹೇಳಣ್ಣ ? ಯಾಕಂದ್ರೆ ಬ್ರಹ್ಮನ ಹಿಡಿದು ತಿರುಕನ ವರೆಗೂ ಎಲ್ಲರೂ ಮುಟ್ಟಿನ್ಯಾಗ ಹುಟ್ಟಿಯಾರ. ಮುಟ್ಟು ಗಟ್ಟಿಯಾಗಲಿಲ್ಲಂದ್ರಯಾರು ಹೊಟ್ಟೆ ಇಲ್ಲ ಮತ್ತು ಮುಟ್ಟಿನಾಗ ಹುಟ್ಟಿ ಮುಟ್ಟಬೇಡ ಅಂತಿಯಲ್ಲ ಅದರದ್ದು ನಿನಗೆ ಏನಾದರೂ ಅರಿವು ಅದೇನು ಅಂತ ಮಹಾತ್ಮರು ಕೇಳ್ಳಾರ .
ತೊಗಲೀಗೆ ತೊಗಲೊತ್ತಿ ತಗಲಿ ಬಂದಿದಿ ನೀನು. ಅಂದ್ರ ತಂದೆ ತಾಯಿ ಸ್ಪರ್ಶದಿಂದ ಅಲ್ಲಿ ಇಂದ್ರಿಯ ಪತನಾಗಿದ್ದು ತಂದೆ ಬಿಂದು ತಾಯಿ ರಕ್ತ ಎರಡು ಕೂಡಿಕೊಂಡು ಅಲ್ಲಿ ಗಟ್ಟಿಯಾಗಿ ಹುಟ್ಟಿದ ಮೊದಲು ಏನು ಇಲ್ಲ. ನಾವು ಬರುವುದಕ್ಕಿಂತಲೂ ಮೊದಲು ಏನು ಇತ್ತು. ನಾವ್ ಬರುವುದ ನಂತರ ಏನು ಇಲ್ಲ.
ಅದಕ್ಕೆ ನೀನೇನಿರಾಕಾರದಿ ಜೈಕಾರ ನಾದಲಿ ಓಂಕಾರವನು ನುಡಿಸಿರಿ ಆಕಾರ ಉ ಕಾರ ಮಕರ ಮೂರನ್ನು ಏಕಾಕಾರವಮಾಡಿ ಎನ್ನೋಡು ತೂರಿದೆ ಎಂದು ಬಡವಟ್ಟಿ ಶರಣರು ಹೇಳಿರು. ನೀರು ನಿರಾಕಾರ ಅಲ್ಲಿ ಏನೂ ಇಲ್ಲ. ಅಲ್ಲೇನ ಹುಟ್ಟಿತು ಅಂದ್ರ ಅಕಾರ ಉಕಾರ , ಮಕಾರ ಮೂರೂ ಹುಟ್ಟಿದವು.. ಅ ಕಾರದೊಳಗ ಬ್ರಹ್ಮ ಹುಡ್ಡೇದ. ಉ ಕಾರದೊಳಗ ವಿಷ್ಣು, ಮ ಕಾರದೊಳಗ ರುದ್ರ ಹುಟ್ವೇದ .
ಬ್ರಹ್ಮ ಸೃಷ್ಟಿಕರ್ತನಾದ, ವಿಷ್ಣು ಸಂರಕ್ಷಣಕರ್ತನಾದ, ರುದ್ರ ಲಯಕರ್ತನಾದ. ಈ ಮೂರು ಅಧಿಕಾರಿಗಳನ್ನು ದೇವಿ ಮಾಡಿದಳು. ಇದು ದೇವಿಯ ಪುರಾಣದೊಳಗ ಬರ್ತದ.
ತೊಗಲೊಳುತೊಗಲೊತ್ತಿ ಬಿಂದು ಹನಿರಕ್ತ ಇದು ಎಲ್ಲರೊಳಗದ.
ಇದರೊಳಗ ರೋಮ ಅಷ್ಟೇ , ನರನಾಡಿಗಳು ಅಷ್ಟೇ, ಮಾಂಸ ಮಜ್ಜಗಳು ಅಷ್ಟೇ. ಎಲುಬುಗಳು ಅಷ್ಟೇ. ಇದರಾಗ ಏನೂ ಬೇಧವಿಲ್ಲ. ಹಾಗಿದ್ದ ಮ್ಯಾಲ ಯಾಕ ಭೇಧ ಮಾಡತೀರಿ.
ಎಲುವಿನಾಲಯದೊಳು ಒಳಹೊಕ್ಕು ನೀ ಕುಂತೀ ಓಡಾಡಲು ಬೇಡ ನೀನಣ್ಣ.ಇದರ ಬಗೆಯ ತಿಳಿಯದೇ ಬರಿಯ ಮಾತನಾಡಿದರೆ ನಗೆಗೇಡು ಆಗುವುದು ನೋಡಣ್ಣ.
ಮುಂದುವರೆಯುತ್ತದೆ . . . . .
ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

