Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಜ್ಯಾತಿ ನೋಡಿ ಏನ್ ಮಾಡ್ತೀರಿ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಜ್ಯಾತಿ ನೋಡಿ ಏನ್ ಮಾಡ್ತೀರಿ

ಇವ್ನ ಪುರಾಣ ಕೇಳುವವರು ಅಪ್ಪಾಜಿ ಹಾಂಗ ಯಾರೂ ಹೇಳೂದಿಲ್ಲ. ಅನ್ನಾವು ಜನ.ಎರಡು ವರ್ಷ ಅಲ್ಲಿ ಹೇಳಿದ ಮೂರನೇ ವರ್ಷ ಎಂ ಏ ಕಲಿಲಿಕ್ಕೆ ಧಾರವಾಡಕ್ಕೆ ಹೋಗೋದು ಬಂತು ಮತ್ತೆ ಧಾರ್ವಾಡ್ಕ ಬಿಡುಗಡೆ ಆಗಲಾರದಂಗಾತು ಎಲ್ಲ ಬಿಟ್ಟುಕೊಟ್ಟು ಕಲಿಯಲಿಕ್ಕೆ ಹೋದ. ಯುವ ಪುರಾಣ ಹೇಳಾಕತ್ತಿಂದಒಬ್ಬ ವ್ಯಕ್ತಿಗೆ ತುಂಬಾ ಹೊಟ್ಟೆಕಿಚ್ಚು ಯಾಕಂದ್ರೆ ಮುಂದಿನ ವರ್ಷ ಪುರಾಣ ಹೇಳಾಕ ಬಂದ್ರ ಗುರು ಸ್ಥಾನ ಹೊಂದಿದವರು ಕೆಳಗ ಕೊಡಬೇಕು ಅಂತ ವಿಚಾರ ಮಾಡಿಹಳ್ಳೂರಲ್ಲಿ ಮುತ್ತಪ್ಪ ಪೂಜಾರಿ ಅಂತ ಆಯುರ್ವೇದಿಕ್ ವೈದ್ಯ ಅಂದ್ರ ಕೈ […]

ಇವ್ನ ಪುರಾಣ ಕೇಳುವವರು ಅಪ್ಪಾಜಿ ಹಾಂಗ ಯಾರೂ ಹೇಳೂದಿಲ್ಲ. ಅನ್ನಾವು ಜನ.ಎರಡು ವರ್ಷ ಅಲ್ಲಿ ಹೇಳಿದ ಮೂರನೇ ವರ್ಷ ಎಂ ಏ ಕಲಿಲಿಕ್ಕೆ ಧಾರವಾಡಕ್ಕೆ ಹೋಗೋದು ಬಂತು ಮತ್ತೆ ಧಾರ್ವಾಡ್ಕ ಬಿಡುಗಡೆ ಆಗಲಾರದಂಗಾತು ಎಲ್ಲ ಬಿಟ್ಟುಕೊಟ್ಟು ಕಲಿಯಲಿಕ್ಕೆ ಹೋದ.

ಯುವ ಪುರಾಣ ಹೇಳಾಕತ್ತಿಂದಒಬ್ಬ ವ್ಯಕ್ತಿಗೆ ತುಂಬಾ ಹೊಟ್ಟೆಕಿಚ್ಚು ಯಾಕಂದ್ರೆ ಮುಂದಿನ ವರ್ಷ ಪುರಾಣ ಹೇಳಾಕ ಬಂದ್ರ ಗುರು ಸ್ಥಾನ ಹೊಂದಿದವರು ಕೆಳಗ ಕೊಡಬೇಕು ಅಂತ ವಿಚಾರ ಮಾಡಿಹಳ್ಳೂರಲ್ಲಿ ಮುತ್ತಪ್ಪ ಪೂಜಾರಿ ಅಂತ ಆಯುರ್ವೇದಿಕ್ ವೈದ್ಯ ಅಂದ್ರ ಕೈ ಕಾಲ ಮುರಿದವರಿಗೆ ಆರಾಮ ಮಾಡ್ತಾನ ಅವರು ಸಹಿತ ನಮ್ಮ ಗುರುಗಳಿಂದ ದೀಕ್ಷೆ ಪಡೆದುಕೊಂಡ ವರು .

ಅವಾಗ ಗುರು ಸ್ಥಾನದಲ್ಲಿ ಇದ್ದವರು ಇಬ್ಬರೂ ಕೂಡಿ ಮಾತನಾಡಿಕೊಂಡಾರ ಅದು ಏನಂದರೆ ಈ ಸಾರಿ ಪುರಾಣಕ್ಕ ಯಾರಿಗಾದರೂ ಸ್ವಾಮಿಗಳಿಗೆ ಹೇಳಲಿಕ್ಕೆ ಹಚ್ಚೋಣ ಅಪ್ಪಾಜಿಗೆ ಬ್ಯಾಡ ಅಂತ ಮಾತನಾಡಿಕೊಂಡಾರ.

ಪುರಾಣ ಇನ್ನೂ ಒಂದು ತಿಂಗಳು ಉಳಿದಾಗ ದಿನ ಮಾತಾಡೋರು.

ಯಾಕ್ರೀ ಪುರಾಣ ಬಂತಲ್ಲಪ್ಪ ಅಂದ್ರಂತೆ.

ಹೌದ್ರಿ ಬಂತಲ್ಲ ಅಂತಂದ್ರು ಮುತ್ತಪ್ಪ ಶರಣರು.

ಮತ್ತೆ ಹ್ಯಾಂಗ್ ಮಾಡುವುದು ?ಅಂತ ಪ್ರಶ್ನಿಸಿದ ಸ್ವಾಮಿ.

ಹೆಂಗ್ ಅನ್ನಕ್ಕೆ ಏನಾದ ಅಪ್ಪಾಜಿ ಅದನಲ್ಲ ಅಂದ್ರಂತ.

ಏ ಹಂಗ್ಯಂಗ …?
ಯಾಕ್ರಿ …?

ಮತ್ತು ಮಂದಿ ನಮಸ್ಕಾರಮಾಡಕ್ ಬಂದ್ರೆ ಹೆಂಗ ತಪ್ಪಾಗುದಿಲ್ಲೆನ್ರಿ ಗೊತ್ತಿದ್ರೆ ಸತ್ಯನ ಅದ.ಅಷ್ಟು ಮಿಕ್ಕಿ ನಮಸ್ಕಾರ್ ಮಾಡೋದಿದ್ರೆ ಅವರವರಿಗೆ ಬಿಟ್ಟಿದ್ದು ಅದು ಅವರ ಮರ್ಜಿ ಅದಕ್ಕೆ ಏನು ಅನ್ನಂಗಿಲ್ಲ ನಮಸ್ಕಾರ ಮಾಡಬೇಕಂತೆನಿಲ್ಲ.ಅವ್ವ ಎಂತಹ ಜಾತಿ ಯಾವ ಅದಾನ ಅನ್ನೋದು ಎಲ್ಲರಿಗೂ ತಿಳಿದ ವಿಷಯ.ಜಾತಿ ನೋಡಿ ಏನ್ ಮನ್ ಮಾಡುತ್ತೀರಿ ಅವನ ಜ್ಞಾನ ನೋಡ್ರಿ ಅಂದ್ರುಮುತ್ತಪ್ಪ ಶರಣರು.

ಆದರೂ ಒಬ್ಬ ಸ್ವಾಮಿ ಆದರೆ ಛಲೋ ಆಗ್ತದ ಅಂದ್ರು..

ಹಂಗಾದ್ರೆ ನೀವಿಬ್ರೂ ಗುರುಸ್ತಾನದವರೇ ಆಗಿರಿ ಅದ್ರಾಗ್ಯಾರರ ಒಬ್ರು ಪುರಾಣ ಹೇಳ್ಬಿಡ್ರಿ. ಹೆಂಗೂ ನೀವು ಗುರು ಸ್ಥಾನದವರು ನಿಮ್ ಪಾದ ಕೊಡಕ್ಕೂ ಯೋಗ್ಯದಿರಿ ಅಂತ ಮುತ್ತಪ್ಪ ಶರಣರು ಅಂದರು.

ಹ್ಹಹ್ಹಹ್ಹ …. ನಮ್ಮ ಪುರಾಣ ಹೇಳಕ್ಕಾಗೋದಿಲ್ಲ ರೀ.

ಮತ್ತ ನಿಮಗೆ ಪುರಾಣ ಹೇಳಕ್ಕಾಗುವುದಿಲ್ಲ ಏನ ಹೇಳಾಕ್ ಬರೋದಿಲ್ಲವೋ ?

ಹಂಗಲ್ಲ ಒಬ್ಬ ಗುರು ಅದಾನ.

ಎಲ್ಲಿ ಅದಾನ ?

ಇಂತಲ್ಲೇ ಅದಾನ…

ಅಂದ್ರೆ ಕರ್ಕೊಂಡು ಬಂದು ಬಿಡ್ರಲ್ಲ ಅಂದ್ರು ಮುತ್ತಪ್ಪ ಶರಣರು.

ಇಲ್ಲ ಅಮ್ಮ ಬರ್ಲಕ್ಕ 25000 ರೂ.ಕೇಳ್ತಾನೆ.

ಹಂಗಾದ್ರೆ ನೀವಿಬ್ರೂ ಕೂಡಿ ತಲ ಹನ್ನೆರಡು ಸಾವಿರದ ಐದುನೂರು ರೂಪಾಯಿ ಕೊಟ್ಟು ಕರೆದುಕೊಂಡು ಬರ್ರಿ ಪುರಾಣ ಹೇಳಕ ಹಚ್ಚರಿ ಒಟ್ಟಾರೆ ಅವನಿಗೆ ಬಿಡಿಸಿ ಬಿಡು ದು ಅಂದ್ರಂತ.

ನೋಡು ನಿನ್ ಕೋತಿ ಗುಣ ಬಿಡುವುದಿಲ್ಲ ನೀವು ಅಂತ ಹೇಳಿದ್ರಂತ.

ನೋಡಿದರೆ ನೀವು ಗುರು ಸ್ಥಾನದವರು ನಿಮ್ಮ ಕೋತಿ ಬುಜ್ಜಿ ಬಿಡಲು ನೀವು ಹಿಂಗಾಗಿ ನಿಮ್ಮನ್ನು ಊರಾಗ ಯಾರು ಕರೆದುಕೊಳ್ಳವಲ್ಲರು ಹುಡುಗಾಟದಾಗ ಸತ್ತ ಹೆಣಕ ಮಂತ್ರ ಹೇಳೋದು ಅಷ್ಟೇ ನಿಮಗೆ ಗೊತ್ತಯ್ತ.ಹೊಟ್ಟೆಗೆ ಇಷ್ಟೊಂದು ಹೊಲಸು ತುಂಬಿಕೊಂಡಿರಲ್ಲ ಅಪ್ಪಾಜಿ ಯಾವಾಗ ಪುರಾಣ ಹೇಳೋದು ಸಾಕು ಅಂತ ಅವಾಗ ಪುರಾಣ ಬಂದ್ ಹೇಳಿದ್ರೆ ಅವನೇ ಹೇಳಬೇಕು ಇಲ್ಲ ಅಂದ್ರೆ ಯಾರಿಗೂ ಹೇಳಿಸು ಹಂಗಿಲ್ಲ ನಡ್ರಿ ನೀವುಇನ್ನು… ಅಂದರಂತೆ ಮುತ್ತಪ್ಪ ಶರಣ್ರು.

ಶಂಕರಾವದೂತರ ಕಡೆ ಈ ಶಿಷ್ಯ ಆಯುರ್ವೇದ ವೈದ್ಯರು ಆ ವೈದ್ಯರಿಗೆ ನಮ್ಮ ಮೇಲೆ ಬಹಳ ಪ್ರೇಮ ಈ ತರಹ ಅವರನ್ನು ಹಿಗ್ಗಾಮುಗ್ಗ ತಾರಾಟಿಗೆ ತೆಗೆದುಕೊಂಡು ಬಿಟ್ಟಿದ್ದರು ಅಪ್ಪಾಜಿ ಆ ವರ್ಷ ಹೋಗಿ ಪುರಾಣ ಹೇಳಿದನ್ರಿ. ಮುಂದಿನ ವರ್ಷ ಹೆಮ್ಮೆಯ ಕಲಿಯಲಿಕ್ಕೆ ಹೋಗಬೇಕಾತು ಹಿಂಗಾಗಿ ಪುರಾಣ ಹೇಳೋದು ಅಲ್ಲಿ ನಿಂತೇ ಹೋಯಿತು.

ಮುಂದೆ ಇಬ್ಬರು ಸೇರಿ ಕೊಡೆಕಲ್ಲದ ಒಬ್ಬ ಹೆಣ್ಣುಮಗಳು ಶರಣಂಗಳನ್ನು ಕರೆದುಕೊಂಡು ಬಂದು ಪುರಾಣ ಹೇಳಲಿಕ್ಕೆ ಹಚ್ಚಿದರು ಆ ಶರಣಮ್ ಹೇಳೋದು ನಮ್ಮಪ್ಪಾಜಿ ಹೇಳುವುದಕ್ಕೂ ಅಜಗಜಾಂತರ ವ್ಯತ್ಯಾಸವಾಗಿ ಜನ ಅಲ್ಲಿ ಕುಳಿತು ನಿದ್ದೆ ಮಾಡುವವರಂತೆ ಏನೇನೋ ಹೇಳುತ್ತಾಳೆ ಇಕಿ ಬರೆ ನಿದ್ದೇನೆಬರ್ತದ ಅವನ ಅಪ್ಪಾಜಿ ಏನು ಬೇಫಾಮ್ಹೇಳವ ಅಂತ ಜನ ಅಂತಿದ್ರಂತೆ ಅವನಿಗೆ ಹಿಂದಿನ ಜನ್ಮದ ಪುಣ್ಯ ಹಾಗೂ ಆತನ ಜ್ಞಾನ ಅದ.ಎಲ್ಲಾ ಹಿಂದಿನ ಜನ್ಮದ ಸಂಸ್ಕಾರ ಅಂತ ಬಹಳಷ್ಟು ಪ್ರಶಂಸೆ ಮಾಡುವರು.

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.