Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ನಮ್ಮೆಲ್ಲರ” ರಕ್ತದಲ್ಲಿ “ರಾಮಾಯಣ”
- ವಿಶೇಷ ಸಮಾಚಾರ - ಸಿನಿಮಾ

“ನಮ್ಮೆಲ್ಲರ” ರಕ್ತದಲ್ಲಿ “ರಾಮಾಯಣ”

ನಮ್ಮ ರಕ್ತದಲ್ಲಿ ರಾಮಾಯಣ ರಾಮಾಯಣ ಅನ್ನೋದು ನಮ್ಮೆಲ್ಲರ,ಇಡೀ ಭಾರತೀಯರ ರಕ್ತದಲ್ಲೇ ಇದೆ.ರಾಮಾಯಣ ನಮ್ಮ ಅಸ್ಮಿತೆ,ನಮ್ಮ ಅಸ್ತಿತ್ವ.ನಮ್ಮೆಲ್ಲರ ಭಾವನೆ. ಇಡೀ ಪ್ರಪಂಚ ತುಂಬಾ ಕುತೂಹಲದಿಂದ ಕಾಯ್ತಾ ಇರುವಂತಹ ರಾಮಾಯಣ ಚಿತ್ರದ ಪ್ರಮೋಷನ್ ಇವತ್ತು ನಮ್ಮ ಬೆಂಗಳೂರಲ್ಲಿ, ನಮ್ಮ ಕರ್ನಾಟಕದಿಂದಲೇ ಶುರುವಾಗ್ತಿದೆ ಎಂದು ಮಾತು ಶುರು ಮಾಡಿದ ಯಶ್. ಹೊಸ ಯೋಚನೆ, ಹೊಸ ಆಲೋಚನೆ, ಹೊಸದೊಂದು ಪ್ರಯತ್ನ ಅದು ನಮ್ಮಲ್ಲಿ ನಡೆದಾಗ,ವಿಶೇಷವಾಗಿ ಕರ್ನಾಟಕದಲ್ಲಿ ನಡೆದಾಗ ನಾನು ತುಂಬಾ ಹೆಮ್ಮೆ ಪಡ್ತೀನಿ.,ಶ್ರದ್ಧೆಯಿಂದ ಕೆಲಸ ಮಾಡುವರಿಗೆ ಪ್ರಯತ್ನ ಪಡೋರಿಗೆ ಬೆಂಗಳೂರು ಸದಾ ತನ್ನ […]

ನಮ್ಮ ರಕ್ತದಲ್ಲಿ ರಾಮಾಯಣ

ರಾಮಾಯಣ ಅನ್ನೋದು ನಮ್ಮೆಲ್ಲರ,ಇಡೀ ಭಾರತೀಯರ ರಕ್ತದಲ್ಲೇ ಇದೆ.ರಾಮಾಯಣ ನಮ್ಮ ಅಸ್ಮಿತೆ,ನಮ್ಮ ಅಸ್ತಿತ್ವ.
ನಮ್ಮೆಲ್ಲರ ಭಾವನೆ.

ಇಡೀ ಪ್ರಪಂಚ ತುಂಬಾ ಕುತೂಹಲದಿಂದ ಕಾಯ್ತಾ ಇರುವಂತಹ ರಾಮಾಯಣ ಚಿತ್ರದ ಪ್ರಮೋಷನ್ ಇವತ್ತು ನಮ್ಮ ಬೆಂಗಳೂರಲ್ಲಿ, ನಮ್ಮ ಕರ್ನಾಟಕದಿಂದಲೇ ಶುರುವಾಗ್ತಿದೆ ಎಂದು ಮಾತು ಶುರು ಮಾಡಿದ ಯಶ್.

ಹೊಸ ಯೋಚನೆ, ಹೊಸ ಆಲೋಚನೆ, ಹೊಸದೊಂದು ಪ್ರಯತ್ನ ಅದು ನಮ್ಮಲ್ಲಿ ನಡೆದಾಗ,ವಿಶೇಷವಾಗಿ ಕರ್ನಾಟಕದಲ್ಲಿ ನಡೆದಾಗ ನಾನು ತುಂಬಾ ಹೆಮ್ಮೆ ಪಡ್ತೀನಿ.,ಶ್ರದ್ಧೆಯಿಂದ ಕೆಲಸ ಮಾಡುವರಿಗೆ ಪ್ರಯತ್ನ ಪಡೋರಿಗೆ ಬೆಂಗಳೂರು ಸದಾ ತನ್ನ ಪ್ರೀತಿಯ ಬಾಗಿಲನ್ನು ತೆರೆದಿರುತ್ತೆ,

ಈಗಾಗಲೇ ಎಲ್ಲರಿಗೂ ಗೊತ್ತಿರುವ ಎಲ್ಲರಿಗೂ ತಿಳಿದಿರುವ ಎಲ್ಲರ ಗಮನಕ್ಕೂ ಬಂದಿರುವ ಎಲ್ಲರ ಜ್ಞಾನದಲ್ಲೂ ಹಡಕವಾಗಿರುವ ರಾಮಾಯಣವನ್ನು ಭಾರತೀಯ ಸಿನಿಮಾ ಮೂಲಕ ಇಡೀ ಜಗತ್ತಿಗೆ ತೋರಿಸುವಂತಹ ಪ್ರಯತ್ನ ಈ ಪ್ರಯತ್ನದಲ್ಲಿ, ಕನ್ನಡಿಗರ ಆಶೀರ್ವಾದ ನಿಮ್ಮೆಲ್ಲರ ಪ್ರೀತಿಯಿಂದ ನಾನು ಸಹ ರಾಮಾಯಣ ಚಿತ್ರದ ಒಂದು ಭಾಗವಾಗಿದ್ದೇನೆ ಅನ್ನೋದು ನನಗೆ ಹೆಮ್ಮೆ.

ಇನ್ನೇನು ತೆರೆಗೆ ಬರಲು ಸಿದ್ಧವಾಗಿರುವ ರಾಮಾಯಣ ಚಿತ್ರವನ್ನು, ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿರುವ “ಸೋನಿ ಪಿಚ್ಚರ್ಸ್” ರಾಮಾಯಣವನ್ನು ಇಡೀ ವಿಶ್ವದಾದ್ಯಂತ ತಲುಪಿಸುವ ಸಿದ್ಧತೆ ಮಾಡಿಕೊಂಡಿದೆ,ಇದು ಇಡೀ ಭಾರತೀಯರ ಹೆಮ್ಮೆ.
ರಾಮಾಯಣ ಚಿತ್ರದಲ್ಲಿ ಕೆಲಸ ಮಾಡಿದ ನಾವೆಲ್ಲ ಕಲಾವಿದರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡಿದ್ದೇವೆ ಇದೊಂದು ಸಿನಿಮಾ ಮಾತ್ರವಲ್ಲ ಇದೊಂದು ಅದ್ಭುತವಾದ ಶ್ರೇಷ್ಠ ಭಾವನೆ ಅಂತಾನೆ ನಾನು ಹೇಳ್ತೀನಿ.

ನಮ್ಮ ಕಲೆ ಸಂಸ್ಕೃತಿ ಪರಂಪರೆ ಇತಿಹಾಸವನ್ನು ನಾವೇ ಪ್ರಪಂಚಕ್ಕೆ ಹೇಳಬೇಕಾಗುತ್ತದೆ ಬೇರೆಯವರಿಗೆ ಅದು ಗೊತ್ತಾಗಿದೆ ಎಂದು ಸುಮ್ಮನೆ ಕುದುರೆ ಪ್ರಯೋಜನವಿಲ್ಲ, ಕೆಲವೊಮ್ಮೆ ಗಡಿ ದಾಟಿ ವ್ಯಾಪ್ತಿಯನ್ನು ಮೀರಿ ಕೆಲಸವನ್ನ ಪ್ರಯತ್ನವನ್ನ ಮಾಡಬೇಕಾಗುತ್ತದೆ ರಾಮಾಯಣವನ್ನು ಇಡೀ ವಿಶ್ವಕ್ಕೆ ಮತ್ತೊಮ್ಮೆ ತಲುಪಿಸುವುದು,ನಮಗೆ ನಂಬಿಕೆ ಇದೆ,ರಾಮಾಯಣ ಸಿನಿಮಾ ಅತಿದೊಡ್ಡ ಇತಿಹಾಸ ನಿರ್ಮಿಸತ್ತೆ ಎಂದು ಹೆಮ್ಮೆಯಿಂದ ಹೇಳಿದರು ರಾಕಿಂಗ್ ಸ್ಟಾರ್ ಯಶ್.

ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ಸಿನಿಮಾದ ಬಗ್ಗೆ ,ಅದರ ತಾಂತ್ರಿಕತೆಯ ಬಗ್ಗೆ, ಒಂದಷ್ಟು ಜನ ಕಾಮೆಂಟ್ ಮಾಡಿ ಇದು ಹೀಗಾಗಬಹುದು, ಹಾಗಾಗಬಹುದು, ಹಾಗೆ ಮಾಡಿದರೆ ಚಂದ ಇತ್ತು ಇವರ್ಯಾಕೆ ಇಂತಹ ಕಲಾವಿದರನ್ನೇ ಏಕೆ ಹಾಕಿಕೊಂಡರು,ಇಂಥ ಎಲ್ಲಾ ಪ್ರಶ್ನೆಗಳನ್ನ ಕೇಳಿದ್ದನ್ನ ಗಮನಿಸಿದ್ದೇನೆ, ಇದು ಒಳ್ಳೆಯ ಬೆಳವಣಿಗೆಯಲ್ಲ, ನಾವು ನಾವೇ ನಮ್ಮ ನಮ್ಮ ಕಾಲುಗಳನ್ನ ಎಳೆದುಕೊಂಡರೆ ಬೆಳವಣಿಗೆಯಾಗುವುದು ಯಾವಾಗ ಇದನ್ನೇ ಸ್ವತಂತ್ರ ಪೂರ್ವದಲ್ಲಿ ಬ್ರಿಟಿಷರು ನಮ್ಮ ಭಾರತೀಯರ ಮಧ್ಯೆ ತಂದು ತಮಾಷೆಯನ್ನು ನೋಡಿದ್ದರು,ಎಂಬ ಮಾತುಗಳ ಮೂಲಕ ಯಶ್ ತುಂಬಾ ಪವರ್ ಫುಲ್ ಆದಂತಹ ಸಂದೇಶವನ್ನು ಜನಕ್ಕೆ ಕೊಟ್ಟರು.

ನಾವು ಮಾಡುವ ಕೆಲಸ, ಆ ಕೆಲಸದ ಉದ್ದೇಶ, ಅದರಿಂದಾಗುವ ಪರಿಣಾಮ ಎಲ್ಲವೂ ಒಳ್ಳೆಯದೇ ಆಗಿದ್ದರೆ ಅಂತಹ ಕೆಲಸಕ್ಕೆ ಅಂತಹ ಪ್ರಯತ್ನಕ್ಕೆ ನಾವೆಲ್ಲ ಕೈಜೋಡಿಸಬೇಕು ಇಲ್ಲಿ ಆ ರಾಜ್ಯ ಈ ರಾಜ್ಯ ಎಂಬ ಭೇದಭಾವ ನಮ್ಮಲ್ಲಿ ಬರಬಾರದು, ನಾವೆಲ್ಲ ಒಂದೇ ಎಂಬ ಮಾನದಂಡ ಇದ್ದಾಗ ಮಾತ್ರ ಕೆಲವು ಹೊಸ ಪ್ರಯತ್ನಗಳು ಯಶಸ್ವಿಯಾಗುತ್ತವೆ ಎಂಬ ಬಾರ್ಮಿಕ ಮಾತನ್ನು ಯಶ್ ಹೇಳಿದ್ದು ತುಂಬಾ ಅರ್ಥಗರ್ಭಿತವಾಗಿತ್ತು.

ಭಾರತದ ಪ್ರತಿ ಹಳ್ಳಿ ಪ್ರತಿಗೂರು ಪ್ರತಿ ತಾಲೂಕು, ಪ್ರತಿ ಜಿಲ್ಲೆ ಪ್ರತಿ ರಾಜ್ಯ ಎಲ್ಲ ಕಡೆ ಪ್ರತಿಯೊಂದು ಗಲ್ಲಿ ಗಲ್ಲಿಗಳನ್ನು ರಾಮನ ದೇವಸ್ಥಾನವಿದೆ ರಾಮ ನಾಮವಿದೆ ಇದು ಇಡೀ ವಿಶ್ವಕ್ಕೆ ಮತ್ತೊಮ್ಮೆ ತಲುಪಬೇಕು ಆ ಒಂದು ಪ್ರಯತ್ನವೇ ನಮ್ಮೆಲ್ಲರ ಕೆಲಸ ನಮ್ಮೆಲ್ಲರ ಸೇವೆ ಎಂದರು ರಾಕಿಂಗ್ ಸ್ಟಾರ್ ಯಶ್.

ರಾಮಾಯಣ ಚಿತ್ರದಲ್ಲಿ ಕೆಲಸ ಮಾಡಿದ ಎಲ್ಲಾ ಕಲಾವಿದರ ಬಗ್ಗೆ ಮಾತನಾಡುತ್ತಾ ವಿಶೇಷವಾಗಿ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರ ಬಗ್ಗೆ ಮಾತನಾಡುತ್ತಾ ತಾವು ಚಿಕ್ಕವರಿದ್ದಾಗ ಅವರ ಹಾಡುಗಳಿಗೆ ಡಾನ್ಸ್ ಮಾಡಿದ್ದನ್ನು ನೆನಪಿಸುತ್ತ ಇಂದು ತಮ್ಮದೇ ನಿರ್ಮಾಣ ನಟನೆಯ ಚಿತ್ರದಲ್ಲಿ ಮಾಡುತ್ತಿರುವ ಬಗ್ಗೆ ಹೆಮ್ಮೆಯನ್ನು ತೋರಿದರು.

ರಾಮಾಯಣ ಚಿತ್ರವನ್ನು ನೀವೆಲ್ಲರೂ ನಿಮ್ಮ ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ನೋಡುವಂತಹ ಚಿತ್ರವಾಗಲಿದೆ, ಸಿನಿಮಾ ನೋಡಿದ ನಂತರ ನಿಮಗೆ ನಮ್ಮ ತಂಡದ ಬಗ್ಗೆ ಪ್ರೀತಿ ಗೌರವ ಜಾಸ್ತಿಯಾಗಲಿದೆ ಎಂಬ ಭರವಸೆಯ ಮಾತುಗಳನ್ನ ಹೇಳಿ ತಮ್ಮ ಮಾತುಗಳಿಗೆ ಯಶ್ ವಿರಾಮ ಹೇಳಿದರು.

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.