ನಾ ಯಾಕ್ ಹುಟ್ಟೀನಿ ನಾ ಯಾಕ್ ಸಾಯ್ತಿನಿ ನನಗೆ ದುಃಖ ಯಾತರಿಂದ ಬರುತ್ತದೆ. ತಾಯಿಯ ಗರ್ಭದೊಳಗೆ ಮಹಾ ದುಃಖ.ಯಾವ ಕಡೆಗೂ ಸರಿದಾಡಲು ಜಾಗವಿಲ್ಲ. ಕುಕ್ಕುಟಾಸನ ಹಾಕಿ ಅಲ್ಲೇ ಮಲಮೂತ್ರ . ತಾಯಿ ಉಂಡಂತಹ ಉಪ್ಪು ಹುಳಿ ಕಾರ ಅವೆಲ್ಲವೂ ಮೈಗೆತಗಲಿರತ್ತದ. ಯಾವುದನ್ನು ಹೇಳೋಕೆ ಬರುವುದಿಲ್ಲ. ಅಲ್ಲಿ ಕುಂತು ನಾಮಸ್ಮರಣೆ ಮಾಡಿದ ಭಗವಂತ ಈ ಬಂಧನದೊಳಗೆ ಒಲ್ಲೆಪ್ಪ ಅಂತಾನ. ಅದಕ್ಕ ಬಂದಿಖಾನೆ ಮನೆ ಅಂತಾರೆ ಬಂದಿಕಾನೆ ಮನೆ ಬಿಟ್ಟು ಬಂದಿಲ್ಲ ನಂದೆಲ್ಲ
ನಂದೆಲ್ಲಗ .
ತತ್ವಪದ –
ದೇವ್ರಾಗಬೇಕೆಂದೆಲ್ಲ ದೆವ್ವದಿಲ್ಲಗ
ಬಂದಿಖಾನೆ ಮನೆ ಬಿಟ್ಟು ಬಂದೆಲ್ಲಗ ನಂದದ್ದೆಲ್ಲಗ
ಪರರಿಗೆ ನಿಂದಾ ನೀನಾಡದೆಲ್ಲಗ ಹಂದ್ಯಾದೆಲ್ಲದ
ಬಂದಿಖಾನೆ ಮನೆ ಬಿಟ್ಟು ಬಂದೆಲ್ಲಗ ನಂದದೆಲ್ಲಗ
ಪರರಿಗೆ ನಿಂದಾ ನೀನಾಡ್ದೆಲ್ಲಗ ಹಂದ್ಯಾದ್ಯಲ್ಲಗ
ಪೂಜೆ ಮಾಡಿ ಪುಸ್ತಕ ಹಿಡಿದೆಲ್ಲಗ ಪುಣ್ಯ ಪಡೆದೆಲ್ಲಗ
ಅದನ್ನೋದಿ ದೇವರಾಗಬೇಕೆಂದಿಲ್ಲ ದೆವ್ವಾದೆಲ್ಲಗ
ಪೂಜೆ ಮಾಡಿ ಪುಸ್ತಕ ಹಿಡಿದೆಲ್ಲಗ ಪುಣ್ಯ ಪಡೆದೆಲ್ಲಗ
ಅದನ್ನೋದಿ ದೇವರಾಗಬೇಕೆಂದಿಲ್ಲ ದೆವ್ವಾದೆಲ್ಲಗ
ಉಟ್ಟ ಸೀರಿ ತೊಟ್ಟ ಕುಬುಸ ಕಳೆದೆಲ್ಲಗ ಬಳಿ ಒಡೆದಿಲ್ಲ
ಹಳ್ಳ ದಾಟಿ ಹಳ್ಳಿ ಊರಿಗಿ ಹೋದೆಲ್ಲದ ಉಳುಗಾದೆಲ್ಲ
ಉಟ್ಟ ಸೀರಿ ತೊಟ್ಟ ಕುಬುಸ ಕಳೆದೆಲ್ಲಾಗ ಬಳಿ ಒಡೆದಲ್ಲಗ
ಹಳ್ಳ ದಾಟಿ ಹಳ್ಳಿ ಊರಿಗಿ ಹೋದೆಲ್ಲದ ಉಳುಗಾದೆಲ್ಲ
ಶಾರದಹಳ್ಳಿ ಶಂಕರಲಿಂಗನ ಮರೆತೆಲ್ಲಾಗ ಮಣ್ಣ ಕೊಡ್ಡೆಲ್ಲಗ
ಆಕಾಶಕ್ಕ ಕೈ ಮಾಡಿ ಕರೆದೆಲ್ಲದ ಮುಕ್ಕಿ ಬೇಡ್ದಲ್ಲಗ
ಶಾರದಹಳ್ಳಿ ಶಂಕರಲಿಂಗನ ಮರೆತೆಲ್ಲಾಗ ಮಣ್ಣ ಕೊಡ್ಡೆಲ್ಲಗ
ಆಕಾಶಕ್ಕ ಕೈ ಮಾಡಿ ಕರೆದೆಲ್ಲದ ಮುಕ್ಕಿ ಬೇಡ್ದಲ್ಲಗ
ಬಂದಿಖಾನೆ ಮನೆ ಬಿಟ್ಟು ಬಂದೆಲ್ಲಗ ನಂದದೆಲ್ಲಗ
ಪರರಿಗೆ ನಿಂದಾ ನೀನಾಡ್ದೆಲ್ಲಗ ಹಂದ್ಯಾದ್ಯಲ್ಲಗ II
ಅದು ಹಿಂದಿನ ಸುಕೃತ ಇದ್ರೆ ಅವಾ ಮತ್ತ ತಿಳುಕೊಳ್ಳುತ್ತಾನೆ. ಮತ್ತ ತಿಳಿ ಬೇಕಾದರೆ ಏನು ಬೇಕು ? ಗುರು ಬೇಕು. ಶ್ರೋತ್ರಿಯ ಬ್ರಹ್ಮನಿಷ್ಟ ಸದ್ಗುರುವಿನಲ್ಲಿ ಹೋಗಬೇಕು.ಗುರುಪಾದಕ ಹೊಂದಿ ಇದು ನನಗೆ ಹೆಂಗ್ ಬಂತು ? ಹೆಂಗಾದ್ರ ಬಿಡುಗಡೆ ಆಗ್ತದ ?ಏನರ ಮಾಡಬೇಕು ? ಅನ್ನೋದು ಗುರು ತಿಳಿಸುತಾನ.
ಮೊದಲು ಈ ದೇಹ ಇತ್ತೆನು ?ಇಲ್ಲ . ಈಗ ಆದ .ಮತ್ತ ಮುಂದ ಇಲ್ಲ . ನೀನು ಮೊದಲು ಅದಿದಿ ಹೀಗೂ ಅದಿದಿ. ಆದರ ಈ ದೇಹ ಪಾಪನುಗುಣದಿಂದ ಬಂದದ. ದೇಹ ನೀನಲ್ಲ ಯಾವಾಗಲೂ ನೀನು ಭಗವಂತನ ನಾಮ ನೋಡ್ಕೊಂಡು ನಿನಗ ಮುಕ್ತಿ ಆಗುತ್ತದೆ ಗುರುನಾಥ ಸಾಧನ ಹೇಳುತ್ತಾನೆ.
ದೇಹ ಭಾವ ದುಃಖಕ್ಕೆ ಕಾರಣ.ಆತ್ಮ ಭಾವ ಸುಖಕ್ಕೆ ಕಾರಣ ಚಿಂತಿಸದಿರು ಸುಖ ದುಃಖ ದೆಡೆಯುವುದು ನೀನು ತಿಳಿದೆಡೆ ಬಳಿ ಜೀವನ ಚಿಂತಿ ಮಾಡಬೇಡ. ತಿಳಿಯಲಾರದವರು ಬೇಕಿದ್ದರೆ ಮಾಡಲಿ, ತಿಳಿದ ಮೇಲೆ ನೀನಿನ್ನು ಮಾಡಬೇಡ. ಜೀವನದಲ್ಲಿ ಸುಖನು ಬರ್ತದ ದುಃಖನು ಬರುತ್ತದೆ ತಿಳಿದ ಮೇಲೆ ನೀ ಯಾಕ ಚಿಂತಿ ಮಾಡ್ತಿದಿ ?
ಮುಂದುವರೆಯುತ್ತದೆ ….
ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ ನಮಸ್ಕಾರ..

