Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮಿಸ್ ಮ್ಯಾಚ್ “ಟೀಸರ್”
- ಸಿನಿಮಾ

ಮಿಸ್ ಮ್ಯಾಚ್ “ಟೀಸರ್”

ಟೀಸರ್ ನಲ್ಲೇ ಕುತೂಹಲ‌ ಮೂಡಿಸಿದೆ “ಮಿಸ್‌ಮ್ಯಾಚ್” .. ಈ ಚಿತ್ರದ ಮೂಲಕ “ಬಿ.ಟಿ.ಎಸ್” ಖ್ಯಾತಿಯ ಸಾಯಿ ಶ್ರೀನಿಧಿ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ . ಕಳೆದ ಕೆಲವು ದಿನಗಳ ಹಿಂದೆ ತೆರೆಕಂಡು ಎಲ್ಲರ ಮನ ಗೆದ್ದಿದ ಐದು ಕಥೆಗಳ “ಬಿ.ಟಿ.ಎಸ್” ಚಿತ್ರದ ಐದು ನಿರ್ದೇಶಕರಲ್ಲಿ ಸಾಯಿ ಶ್ರೀನಿಧಿ ಕೂಡ ಒಬ್ಬರು. “ಮಠ” ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿರುವ ಸಾಯಿ ಶ್ರೀನಿಧಿ ಅವರು “ನೋಡಿದವರು ಏನಂತಾರೆ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸಾಯಿ ಶ್ರೀನಿಧಿ ಅವರು “ಮಿಸ್ […]

ಟೀಸರ್ ನಲ್ಲೇ ಕುತೂಹಲ‌ ಮೂಡಿಸಿದೆ “ಮಿಸ್‌ಮ್ಯಾಚ್” ..

ಈ ಚಿತ್ರದ ಮೂಲಕ “ಬಿ.ಟಿ.ಎಸ್” ಖ್ಯಾತಿಯ ಸಾಯಿ ಶ್ರೀನಿಧಿ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ .

ಕಳೆದ ಕೆಲವು ದಿನಗಳ ಹಿಂದೆ ತೆರೆಕಂಡು ಎಲ್ಲರ ಮನ ಗೆದ್ದಿದ ಐದು ಕಥೆಗಳ “ಬಿ.ಟಿ.ಎಸ್” ಚಿತ್ರದ ಐದು ನಿರ್ದೇಶಕರಲ್ಲಿ ಸಾಯಿ ಶ್ರೀನಿಧಿ ಕೂಡ ಒಬ್ಬರು. “ಮಠ” ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿರುವ ಸಾಯಿ ಶ್ರೀನಿಧಿ ಅವರು “ನೋಡಿದವರು ಏನಂತಾರೆ” ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಸಾಯಿ ಶ್ರೀನಿಧಿ ಅವರು “ಮಿಸ್ ಮ್ಯಾಚ್” ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಮಲೆನಾಡಿನ ಸೊಗಡಿನಲ್ಲಿ ಮೂಡಿ ಬಂದಿರುವ ಒಂದು ಫೀಲ್‌ಗುಡ್ ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಮಲೆನಾಡ ಭಾಗದಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಕುತೂಹಲ ಮೂಡಿಸಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯೂ ಆಗುತ್ತಿದೆ.

“ಬಿ.ಟಿ.ಎಸ್” ಚಿತ್ರದಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದ ಕೌಶಿಕ್ ಹೆಗ್ಡೆ ಈ ಚಿತ್ರದ ನಾಯಕಾನಾಗಿ, “ಕಂಬ್ಳಿಹುಳ” ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ಅಶ್ವಿತಾ ಹೆಗ್ಡೆ ನಾಯಕಿಯಾಗಿ ನಟಿಸಿರುವ ಈ ಚಿತ್ರದ ತಾರಾಬಳಗದಲ್ಲಿ “ವಿಡಿಯೋ” ಖ್ಯಾತಿಯ ತೇಜೇಶ್, ಅಮೃತಾ, ಅನಿರುದ್ಧ್ ಆಚಾರ್ಯ, ನಾಗೇಂದ್ರ ಶಾ, ಲಕ್ಷ್ಮೀ ಸಿದ್ದಯ್ಯ ಮುಂತಾದವರಿದ್ದಾರೆ.

ಸಾಯಿ ಶ್ರೀನಿಧಿ ಅವರೆ ಕಥೆ, ಚಿತ್ರಕಥೆ, ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾಲ್ಕು ಹಾಡುಗಳಿದ್ದು ಮೂರು ಹಾಡುಗಳನ್ನು ಜೂಡಾ ಸ್ಯಾಂಡಿ ಅವರೆ ಹಾಡಿದ್ದಾರೆ. ಒಂದು ಹಾಡಿಗೆ ಲಕ್ಷ್ಮೀ ಬೆಳ್ಮಣ್ಣು ಧ್ವನಿಯಾಗಿದ್ದಾರೆ. ಗಣೇಶ್ ಮಹಾಬಲ ಛಾಯಾಗ್ರಹಣ ಹಾಗೂ ದೀಪಕ್ ಕುಲಾಲ್ ಸಂಕಲನ ಮಾಡಿದ್ದಾರೆ. ತೇಜಸ್ ವೆಂಕಟೇಶ್ ಅವರು ತೇಜಸ್ ಪಬ್ಲಿಕೇಶನ್ ಮತ್ತು ಸಟಾಯರ್ ಸಂಸ್ಥೆ ಮುಖೇನ “ಮಿಸ್ ಮ್ಯಾಚ್” ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಮೇಘನಾ (ಅಶ್ವಿತಾ ಹೆಗ್ಡೆ) ಸಣ್ಣ ಊರಿನ ಸಂಕುಚಿತ ಮನೋಭಾವದ ಬದುಕಿನಿಂದ ಹೊರಬಂದು ನಗರದಲ್ಲಿ ಸ್ವತಂತ್ರವಾಗಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ಹುಡುಗಿ. ಆಕಾಶ್ (ಕೌಶಿಕ್ ಗೌಡ) ನಗರವನ್ನು ತೊರೆದು ತನ್ನ ಊರಿನಲ್ಲೇ ಏನಾದರೂ ಅರ್ಥಪೂರ್ಣವಾದುದನ್ನು ಮಾಡಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ತನ್ನದೇ ದಾರಿಯನ್ನು ಕಟ್ಟಿಕೊಳ್ಳುತ್ತಿರುವ ಯುವಕ. ಪ್ರೀತಿ ವಹಿವಾಟಿನಂತೆ ಆಗಿರುವ ಇಂದಿನ ಸಮಯದಲ್ಲಿ, ಈ ಇಬ್ಬರ ವಿಭಿನ್ನ ಜಗತ್ತುಗಳು ಒಂದಾದಾಗ, ಅಲ್ಲಿ ಪ್ರೀತಿ-ಪ್ರೇಮ-ಸ್ನೇಹ ಮತ್ತು ಬಾಂಧವ್ಯಗಳ ನಡುವೆ ನಡೆಯುವ ಹಾಸ್ಯ ಮತ್ತು ಭಾವನಾತ್ಮಕ ನಂಟೇ “ಮಿಸ್ ಮ್ಯಾಚ್” ಸಿನಿಮಾದ ಕಥೆ ಎನ್ನುತ್ತಾರೆ ನಿರ್ದೇಶಕ ಸಾಯಿ ಶ್ರೀನಿಧಿ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.