Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಢವಳಗಿಗೆ ಹೋದಾಗಿನ ಘಟನೆ –
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಢವಳಗಿಗೆ ಹೋದಾಗಿನ ಘಟನೆ –

ಢವಳಗಿಗೆ ಹೋದಾಗಿನ ಘಟನೆ –      ಢವಳಗಿಯೊಳಗೆ ಒಬ್ಬರು ತಲಾಟಿ ಇದ್ದರು. ಅವರ ಮನೆಯಾಗ ಅವರ ಅಪ್ಪನ ಪುಣ್ಯ ತಿಥಿ ಇತ್ತು. ಅವರು ನಮ್ಮ ಸಂಬಂಧಿಕರು, ನಾವು ಹಳ್ಳೂರಿನಿಂದ ನಮ್ಮ ಕಲಾತಂಡದ ಮಂದಿಗೆ ಕರ್ಕೊಂಡು ಅಲ್ಲಿಗೆ ಭಜನಾ ಮಾಡಾಕಂತ ಹೋದೆವು. ತಲಾಟಿ ಕೈಯಲ್ಲಿ ಕೆಲಸಮಾಡುವವ ಹುಲ್ಲೂರಿನ ಬಿಎ ಪದವೀಧರ. ಅವನು ಭಾರಿ ಭಜನಾ ಮಾಡುವವರೀ,ಅವ ಸೂ….ರನು ಹಂಗ ಹಿಡಿತಾನ ಮತ್ತು ಅವನ ಸಂಗೀತನು ಚಂದ ಅದ , ಆ ಕಾರ್ಯಕ್ರಮಕ್ಕೆ ಅವನು ಬಂದಿದ್ದ.         ಸುತ್ತೆಲ್ಲಾ ಕಾಯಿ […]

ಢವಳಗಿಗೆ ಹೋದಾಗಿನ ಘಟನೆ –

     ಢವಳಗಿಯೊಳಗೆ ಒಬ್ಬರು ತಲಾಟಿ ಇದ್ದರು. ಅವರ ಮನೆಯಾಗ ಅವರ ಅಪ್ಪನ ಪುಣ್ಯ ತಿಥಿ ಇತ್ತು. ಅವರು ನಮ್ಮ ಸಂಬಂಧಿಕರು, ನಾವು ಹಳ್ಳೂರಿನಿಂದ ನಮ್ಮ ಕಲಾತಂಡದ ಮಂದಿಗೆ ಕರ್ಕೊಂಡು ಅಲ್ಲಿಗೆ ಭಜನಾ ಮಾಡಾಕಂತ ಹೋದೆವು. ತಲಾಟಿ ಕೈಯಲ್ಲಿ ಕೆಲಸ
ಮಾಡುವವ ಹುಲ್ಲೂರಿನ ಬಿಎ ಪದವೀಧರ. ಅವನು ಭಾರಿ ಭಜನಾ ಮಾಡುವವರೀ,ಅವ ಸೂ….ರನು ಹಂಗ ಹಿಡಿತಾನ ಮತ್ತು ಅವನ ಸಂಗೀತನು ಚಂದ ಅದ , ಆ ಕಾರ್ಯಕ್ರಮಕ್ಕೆ ಅವನು ಬಂದಿದ್ದ.

        ಸುತ್ತೆಲ್ಲಾ ಕಾಯಿ ಕೊಟ್ಟಿದ್ದರು. ತಾರ್ನಾಳ,
ನಾಯಿನೇಗಲಿ, ಬ್ಯಾಲ್ಯಾಳದವರು ಹಿಂಗ 8 10 ಊರಿನವರಿಗೂ ಕಾಯಿ ಕೊಟ್ಟಿದ್ದರು. ಧವಳ್ಗಿಯೊಳಗೂ ಅನುಭವಿಗಳು ಅದಾರೀ. ಕಾರ್ಯಕ್ರಮ ನೋಡಾಕ ತಲಾಟಿಗಳು ಬಹಳ ಮಂದಿ ಬಂದಿದ್ದರು. ಎಲ್ಲರ್ದು ಪ್ರೇಮ ಪದವೀಧರನ ಮ್ಯಾಗ ಬಹಳ ಇತ್ತು. ಅದನ್ನು ನೋಡಿದರೆ ಇಲ್ಲಿ ನಮ್ಮದೇನು ನಡೆಯುವಂತಿಲ್ಲ ಎಂದು ತಿಳಿದು ಸುಮ್ಮನೆ ಹಾಸಿಗೆ ಹಾಕಿ ಕೊಂಡು ಮಲಗಿದೆವು.

      ಭಜನಾ ಚಾಲುವಾತು. ಆ ಪದವೀಧರ ಭಜನಾಕಾರ ಮಾತು ಮಾತಿಗೆ ಬೈದಾಡಿಕೊಂಡು ಭಜನಾ ಮಾಡಾಂವ, ತಾರ್ನಾಳ ಸಂಗಣ್ಣ ,ಮಹದೇವ ಅವರು ಶಾಣೇರು.. ಆದ್ರೂ ಸಹಿತ ಅವರ ಆಟ ಅಲ್ಲಿ ನಡಿಲಿಲ್ಲ ಅದು ನಮ್ಮ ಮುಂದ. ನಾನು ಮಲಗಿಕೊಂಡಲ್ಲೇ ಭಜನಾ ಪದ ಕೇಳ ಕೇಳಲಕ್ಕೆ ಹಚ್ಚಿದ್ದೆ. ಅಜ್ಞಾನಿ ಅದಾನ ಆ ಪದವೀಧರ. ಅವನ ಕೂಡ ಏನು ಅಂತ ಸುಮ್ಮನೆ ಮಲಗಿಕೊಂಡೆ ತಾರಾ ಸಂಗಣ್ಣ ನನ್ನ ಹತ್ರ ಬಂದ….

      ಏಳ್ರಿ …ಶರಣರ, ಏಳ್ರಿ….. ನೀವು ಕಡೆದ ಗಡಿ. ನೀವ ಹಿಂಗ ಮಲಗಿಕೊಂಡುಬಿಟ್ರ ಹೆಂಗ ? ಆ ಪದವೀಧರ ಹಾಡು, ಹೆಂಗೆಂಗರ ಹಾಡಾಕ್ ಹತ್ಯಾನ  ನಮಗೆ ಅಂತೂ ಸಿಟ್ಟ ಬರಾಕ್ಕ ಹತ್ಯದ ಅಂತ ಹೇಳಿ ನನಗೆ ಬಿಡಲಿಲ್ಲ ಹಂಗ ಎಬ್ಬಿಸಕ್ಕೆ ಹತ್ತಿದ.

         ಏ ಮಾರಾಯ..! ಈ ಊರಾಗ ತತ್ವಪದ ಕಟ್ಟುವಂತಹ ಜ್ಞಾನಿಗಳು ಬಹಳ ವಿರಳ.ಇಂತಾದ್ರಾಗ ಇಲ್ಲಿ ನಮ್ಮ ವ್ಯಾಪಾರ ಆಗುವುದಿಲ್ಲ. ನಾವು ಸುಮ್ಮನೆ ಕೇಳಾಕ್ಕ ಬಂದಿವಿ. ನೀವು ಇಲ್ಲಿ ಬಂದವರು ಹ್ಯಾಂಗ್ ಹಾಡ್ತಿರಿ ಹಾಡ್ರಿ ಅಂದೆ. ಅಂದ್ರು ಅವ ಬಿಡ್ಲಿಲ್ಲ ಜೋರು ಮಾಡಿ ನನ್ನನ್ನ ಎಬ್ಬಿಸಿದ ಹಿಂಗ ಒಂದು ಬೇವಿನ ಗಿಡ ಆ ಗಿಡದ ಮುಂದೆ ಬಂದು ಕಟ್ಟಿ ಆ ಕಟ್ಟೆ ಮೇಲೆ ಭಜನಾ ಹಚ್ಚಿದ್ರು.

           ಅವ ಭಜನಾ ಮಾಡಕ್ ಹಚ್ಚಿದ್ದ ಎದ್ದು ಹೋಗಿ ನಾನು ಅವನ ಮುಂದೆ ಕುಂತೆ-

            ಓಂ ನಮಃ ಶಿವಾಯ ಅಂತೀರಿ, ಓ ಎಲ್ಲಿ ಹುಟ್ಟಿತು ? ಮ ಎಲ್ಲಿ ಹುಟ್ಟಿತು ? ನ ಎಲ್ಲಿ ಹುಟ್ಟಿತು ? ಯ ಎಲ್ಲಿ ಹುಟ್ಟಿತು ? ಅಂತ ಹೇಳಬೇಕು. ಹೇಳಿಲ್ಲ ಅಂದ್ರ ನಿಮ್ಮಾಣೆ ನಿಮ್ಮ ಪ್ರಮಥರಾಣೆ ನಿಮ್ಮ ಗುರುವಿನ ಆಣೆ ಅಂತ ಹೇಳಿ ಅಂದಾ ಆಣೆ ಹಾಕಿಬಿಟ್ಟ.

         ಎಲಾ ಇವನ….ಅಂದೆ ನಾನು. ಅವು ಹೇಳಲಾರದ ವಿಷಯ ಮತ್ತು ಆಣೆ ಬೇರೆ ಹಾಕ್ಯಾನ್ ಇನ್ನು ಒಳತ್ತು ಅನ್ನಿಸಿಕೊಳ್ಳಲಾರದೆ ಊಟ ಮಾಡೋ ಹಾಗಿಲ್ಲ ಇದು ಹೊಳೆ ಬಂತಪ್ಪ ಅಂತ ಅಂದೆ.

    ಇದು ಬಿಡುಗಡೆ ಇಲ್ಲ ಅಂತ ನಗು ಬಂದು ನಗಲಾಕ್ ಹತ್ತಿದೆ. ನೋಡಪ್ಪ ಪದವೀಧರ ಶರಣ ಅದು ಮೊದ್ಲೇ ಹೇಳಬಾರದು. ನಿನಗೆ ಹೇಳಿದ್ರು ತಿಳಿಯುವ ಹಾಂಗಿಲ್ಲ . ಆಣೆ ಒಂದು ಹಾಕಿ ಅಲ್ಲ. ಅದಕ್ಕಾದರೂ ಹೇಳಬೇಬೇಕಾಗಿದ ಅಂದೆ.

ನ :  ಭೂಮಿಯೊಳಗೆ ಹುಟ್ಟಿದೆ
ಮಃ  ನೀರೊಳಗೆ ಹುಟ್ಟಿದೆ
ಶಿ :   ಬೆಂಕಿಯೊಳಗೆ ಹುಟ್ಟಿದೆ
ವಾ :  ವಾಯು ಒಳಗ ಹುಟ್ಟಿದೆ
ಯ :  ಆಕಾಶದೊಳಗ ಹುಟ್ಟಿದೆ

ಓಂ :  ಅದು ಹೊರಗೂ ಅದ, ಒಳಗೂ ಆದ.

ಮುಂದುವರಿಯುತ್ತದೆ ….


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.