Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹೇಗಿದೆ “ಹುಲಿಬೀರ”
- ಸಿನಿಮಾ

ಹೇಗಿದೆ “ಹುಲಿಬೀರ”

ಇಂದು ತೆರೆಗೆ ಉತ್ತರ ಕರ್ನಾಟಕಸೊಗಡಿನ “ಹುಲಿಬೀರ” ಬಹುತೇಕ ಉತ್ತರ ಕರ್ನಾಟಕದ ಮಂದಿಯೇ ಸೇರಿ ನಿರ್ಮಾಣ ಮಾಡಿರುವ ಚಿತ್ರ ಹುಲಿಬೀರ ಇಂದು (ಶುಕ್ರವಾರ) ರಾಜ್ಯಾದ್ಯಂತ ತೆರೆ ಕಂಡಿದ್ದು. ರಂಗ್ ಬಿರಂಗಿ ಖ್ಯಾತಿಯ ಮದರಂಗಿ ಮಲ್ಲಿಕಾರ್ಜುನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.. ಚಿತ್ರದ ಕಂಟೆಂಟ್ ನೋಡಿದಾಗ ಇದಂತೂ ಪಕ್ಕ ಉತ್ತರ ಕರ್ನಾಟಕದ ಜವಾರಿ ಕಥೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಉತ್ತರ ಕರ್ನಾಟಕದ ಪ್ರಮುಖ ಜಾಗಗಳಲ್ಲಿ ಚಿತ್ರೀಕರಣವಾಗಿರುವ ಹುಲಿಬೀರ,ಉತ್ತರ ಕರ್ನಾಟಕದ ಮಣ್ಣಿನ ಕಥೆಯಾಗಿ ಎಲ್ಲರ ಮನಸ್ಸನ್ನು […]

ಇಂದು ತೆರೆಗೆ ಉತ್ತರ ಕರ್ನಾಟಕ
ಸೊಗಡಿನ “ಹುಲಿಬೀರ”

ಬಹುತೇಕ ಉತ್ತರ ಕರ್ನಾಟಕದ ಮಂದಿಯೇ ಸೇರಿ ನಿರ್ಮಾಣ ಮಾಡಿರುವ ಚಿತ್ರ ಹುಲಿಬೀರ ಇಂದು (ಶುಕ್ರವಾರ) ರಾಜ್ಯಾದ್ಯಂತ ತೆರೆ ಕಂಡಿದ್ದು. ರಂಗ್ ಬಿರಂಗಿ ಖ್ಯಾತಿಯ ಮದರಂಗಿ ಮಲ್ಲಿಕಾರ್ಜುನ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ..

ಚಿತ್ರದ ಕಂಟೆಂಟ್ ನೋಡಿದಾಗ ಇದಂತೂ ಪಕ್ಕ ಉತ್ತರ ಕರ್ನಾಟಕದ ಜವಾರಿ ಕಥೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ, ಉತ್ತರ ಕರ್ನಾಟಕದ ಪ್ರಮುಖ ಜಾಗಗಳಲ್ಲಿ ಚಿತ್ರೀಕರಣವಾಗಿರುವ ಹುಲಿಬೀರ,ಉತ್ತರ ಕರ್ನಾಟಕದ ಮಣ್ಣಿನ ಕಥೆಯಾಗಿ ಎಲ್ಲರ ಮನಸ್ಸನ್ನು ಗೆಲ್ಲಲಿದೆ ಎಂಬ ಭರವಸೆ, ಇಡೀ ಚಿತ್ರತಂಕಕ್ಕೆ ಇರೋದು ಸಾಬೀತಾಗಿದ್ದು,ಈಗಾಗಲೇ ಚಿತ್ರ ನೋಡಿದ ಎಲ್ಲ ಅಭಿಮಾನಿಗಳು, ಹುಲಿಬೀರನಿಗೆ ಜೈಕಾರ ಹಾಕುತ್ತಿರುವುದು ಮತ್ತೊಂದು ಸಂತಸದ ಸಂಗತಿಯಾಗಿದೆ.ಮಣ್ಣಿನ ಕಥೆಗಳು,ಕಲೆ ಸಂಸ್ಕೃತಿ ಸಾರುವ ಕಥೆಗಳು,ನಮ್ಮ ಜೀವನದ ಕಥೆಗಳೇ ಅನ್ನಿಸಿಕೊಂಡ ಕಥೆಗಳು ಸಿನಿಮಾಗಳಾದಾಗ ಅವೆಲ್ಲವೂ,ನೋಡುಗರ ಮನದಲ್ಲಿ ನಮ್ಮತನ ಬರುವಂತೆ ಮಾಡುತ್ತವೆ ಎಂಬುದು,ಚಿತ್ರತಂಡದ ಆಶಯ.

ಕರ್ನಾಟಕದ ಎಲ್ಲ ಪ್ರೇಕ್ಷಕರು ಗ್ರಾಮೀಣ ಸೊಗಡಿನ, ಈ ಸುಂದರ ಚಿತ್ರವನ್ನು ಸಿನಿಮಾ ಮಂದಿರಗಳಲ್ಲಿ ನೋಡುತ್ತಾರೆ ಎಂಬ ಭರವಸೆ ಚಿತ್ರತಂಡದ್ದು..


ಯರ್ರಾಬಿರ್ರಿ ಖ್ಯಾತಿಯ ರೂರಲ್ ಹೀರೋ ಅಂಜನ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ, ವನು ಪಾಟೀಲ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.
ಉತ್ತರ ಕರ್ನಾಟಕದ ನೇಟಿವಿಟಿ, ಸೊಗಡು, ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ ಹೀಗೆ ಎಲ್ಲರೂ ಉತ್ತರ ಕರ್ನಾಟಕದವರೇ ಆಗಿರುವುದು ಈ ಚಿತ್ರದ ವಿಶೇಷ.
ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಮದರಂಗಿ ಮಲ್ಲಿಕಾರ್ಜುನ ಅವರ ನಿರ್ದೇಶನದ ಐದನೇ ಚಿತ್ರ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಧೈರ್ಯದಿಂದ ಮುನ್ನುಗ್ಗುವ ಯುವಕರನ್ನು ಅವ ನೋಡು ಹುಲಿಥರ ಇದಾನೆ ಅನ್ನುತ್ತಾರೆ, ನಾಯಕ ಬೀರ ಹಳ್ಳಿಯ ಯಾವುದೇ ಸಮಸ್ಯೆ ಇರಲಿ‌ ಮುಂದೆನಿಂತು ಕೆಲಸ ಮಾಡುತ್ತಾನೆ. ಆತನನ್ನು ಹಳ್ಳಿಯ ಜನರೆಲ್ಲ ಹುಲಿಬೀರ ಅಂತಿರ್ತಾರೆ. ಹಾಗೇ ವಿದ್ಯಾವಂತ ಯುವಕ, ಯುವತಿಯರೆಲ್ಲ ಕೆಲಸ ಅಂತ ಸಿಟಿಗೆ ಹೋದರೆ ಆ ಹಳ್ಳಿಗಳನ್ನು ಬೆಳೆಸೋರು ಯಾರು, ಈ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ. ಅವರೆಲ್ಲ ಮತ್ತೆ ಹೇಗೆ ಹಳ್ಳಿಗೆ ಮರಳುವಂತೆ ಮಾಡಿ ಹುಲಿಬೀರ ಎನಿಸಿಕೊಳ್ಳುತ್ತಾನೆ ಎನ್ನುವುದೇ ಈ ಚಿತ್ರದ ಕಾನ್ಸೆಪ್ಟ್. ಕಾಮಿಡಿ, ಸೆಂಟಿಮೆಂಟ್ , ಮನರಂಜನೆಯ ಜತೆಗೆ ಒಂದೊಳ್ಳೆ ಮೆಸೇಜ್ ಈ ಚಿತ್ರದಲ್ಲಿದೆ. ಬಾದಾಮಿ, ಸುತ್ತಮುತ್ತಲ ಗ್ರಾಮಗಳಲ್ಲಿ 51 ದಿನಗಳವರೆಗೆ ಹಾಡು ಹಾಗೂ ಮಾತಿನ ಭಾಗವನ್ನು ಚಿತ್ರೀಕರಿಸಲಾಗಿದೆ. ಹಿರಿಯ ನಟ ರಂಗಾಯಣ ರಘು ಗ್ರಾಮದ ಹಿರಿಯನಾಗಿ ಕಾಣಿಸಿಕೊಂಡಿದ್ದಾರೆ. ರಾಜೇಂದ್ರ ಕಾರಂತ್, ಮಲ್ಲು ಬಾಗಲಕೋಟ,ಸಂತೋಷ್ ಕೇರಿ, ರೇವಣ್ಣ ಉಳಿದ ತಾರಾಗಣದಲ್ಲಿದ್ದಾರೆ. ವೀರಸಮರ್ಥ ಅವರ ಸಂಗೀತ ಸಂಯೋಜನೆ, ಧರ್ಮ ವಿಶ್ ಅವರ ಹಿನ್ನೆಲೆ ಸಂಗೀತ, ಸನಾತನ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.