Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಅಕ್ಟೋಬರ್ 30ಕ್ಕೆ “ಅಪ್ಪು ಗ್ಯಾರೇಜ್” ರಿಲೀಸ್
- ಸಿನಿಮಾ

ಅಕ್ಟೋಬರ್ 30ಕ್ಕೆ “ಅಪ್ಪು ಗ್ಯಾರೇಜ್” ರಿಲೀಸ್

ಅಕ್ಟೋಬರ್ 30ಕ್ಕೆ“ಅಪ್ಪು ಗ್ಯಾರೇಜ್ ರಿಲೀಸ್” ತೇಜಸ್ ಪ್ರೊಡಕ್ಷನ್ಸ್ ರವರ, ವಿಶ್ವತೇಜ ಅರ್ಪಿಸುವ,“ಅಪ್ಪು ಗ್ಯಾರೇಜ್” ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ಒಟ್ಟು ನಾಲ್ಕು ಹಾಡುಗಳು ಮತ್ತು ಟ್ರೈಲರ್ ಪ್ರದರ್ಶನ ಮಾಡಲಾಯಿತು.ಚಂದ್ರಚೂಡೇಶ್ವರ ರಾಜು,ನಿರ್ಮಾಣ ಮತ್ತು ನಿರ್ದೇಶನದ ಅಪ್ಪು ಗ್ಯಾರೇಜ್ ಚಿತ್ರದ ಮೂಲಕ,ತಮ್ಮ ಮಗ ವಿಷ್ಣು ತೇಜಾ ನನ್ನು ನಾಯಕ ನಟರನ್ನಾಗಿ,ಚೆಂದನವನಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಇದು ನನ್ನ ಮೊಟ್ಟ ಮೊದಲ ನಿರ್ದೇಶನದ ಚಿತ್ರ,ನನ್ನ ಮಗನೇ ಇದಕ್ಕೆ ಹೀರೋ.ಬೆಂಗಳೂರು, ಬಿಡದಿಯ ಸುತ್ತ ಮುತ್ತಲು ಚಿತ್ರೀಕರಣ ಮಾಡಿದ್ದೇವೆ. ಮೊದಲು ಮಾತು ಶುರು ಮಾಡಿದ,ನಿರ್ಮಾಪಕ ಮತ್ತು ನಿರ್ದೇಶಕ,ಚಂದ್ರಚೂಡೇಶ್ವರ […]

ಅಕ್ಟೋಬರ್ 30ಕ್ಕೆ
“ಅಪ್ಪು ಗ್ಯಾರೇಜ್ ರಿಲೀಸ್”

ತೇಜಸ್ ಪ್ರೊಡಕ್ಷನ್ಸ್ ರವರ, ವಿಶ್ವತೇಜ ಅರ್ಪಿಸುವ,
“ಅಪ್ಪು ಗ್ಯಾರೇಜ್” ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ಒಟ್ಟು ನಾಲ್ಕು ಹಾಡುಗಳು ಮತ್ತು ಟ್ರೈಲರ್ ಪ್ರದರ್ಶನ ಮಾಡಲಾಯಿತು.
ಚಂದ್ರಚೂಡೇಶ್ವರ ರಾಜು,ನಿರ್ಮಾಣ ಮತ್ತು ನಿರ್ದೇಶನದ ಅಪ್ಪು ಗ್ಯಾರೇಜ್ ಚಿತ್ರದ ಮೂಲಕ,ತಮ್ಮ ಮಗ ವಿಷ್ಣು ತೇಜಾ ನನ್ನು ನಾಯಕ ನಟರನ್ನಾಗಿ,ಚೆಂದನವನಕ್ಕೆ ಪರಿಚಯ ಮಾಡಿಸುತ್ತಿದ್ದಾರೆ.

ಇದು ನನ್ನ ಮೊಟ್ಟ ಮೊದಲ ನಿರ್ದೇಶನದ ಚಿತ್ರ,ನನ್ನ ಮಗನೇ ಇದಕ್ಕೆ ಹೀರೋ.ಬೆಂಗಳೂರು, ಬಿಡದಿಯ ಸುತ್ತ ಮುತ್ತಲು ಚಿತ್ರೀಕರಣ ಮಾಡಿದ್ದೇವೆ.

ಮೊದಲು ಮಾತು ಶುರು ಮಾಡಿದ,ನಿರ್ಮಾಪಕ ಮತ್ತು ನಿರ್ದೇಶಕ,ಚಂದ್ರಚೂಡೇಶ್ವರ ರವರು,ಕಂಪ್ಲೀಟ್ ಕಥೆ ಅಪ್ಪು ಗ್ಯಾರೇಜ್ ಮೇಲೆ ಪ್ಲೇ ಆಗತ್ತೆ. ಈ ಚಿತ್ರದಲ್ಲಿ ಫ್ಯಾಮಿಲಿ ಕಂಟೆಂಟ್ ಕ್ಯಾರಿ ಆಗಿದ್ದು,ಚಿತ್ರದ ನಾಯಕ ಅಪ್ಪು ಗ್ಯಾರೇಜ್ ಹೆಸರಿನ ಅಂಗಡಿಯಲ್ಲಿ ಕೆಲಸ ಮಾಡ್ತಾ ಇರ್ತಾನೆ,ಅವನ ಜೀವನದಲ್ಲಿ ನಡೆಯುವ ಪ್ರೀತಿ, ಗೆಳೆತನ,ಫ್ಯಾಮಿಲಿ ಸೆಂಟಿಮೆಂಟ್,ಆಕ್ಷನ್ ಮೇಲೆ ಕಥೆ ಟ್ರಾವೆಲ್ ಆಗತ್ತೆ,ನನ್ನ ಮಗನನ್ನು ನಾಯಕ ನಟನನ್ನಾಗಿ ಲಾಂಚ್ ಮಾಡುತ್ತಿದ್ದು,ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ವಿನಂತಿಸಿಕೊಂಡರು.


ಅಕ್ಟೋಬರ್ 30ಕ್ಕೇ ಸಿನಿಮಾ ಬಿಡುಗಡೆ ಮಾಡ್ತಾ ಇದ್ದಿವಿ ಸುಮಾರು ಎಂಬತ್ತಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬರತ್ತೆ ಎಂಬ ಭರವಸೆ ಇದೇ, ಒಂದೊಳ್ಳೆ ಕಂಟೆಂಟ್ ಮೇಲೆ ಈ ಚಿತ್ರ ಮಾಡಿದ್ದೇವೆ ಚಿತ್ರದ ಇನ್ನಿತರ ತಾರಾಬಳಗದಲ್ಲಿ ಹಿರಿಯ ಕಲಾವಿದರಾದ ಉಮೇಶ್,ಅವಿನಾಶ್.ಶೋಭರಾಜ್.ಹರೀಶ್ ರೈ.
ರವಿ ಕಾಳೆ..ಮುನಿ.ರಮೇಶ್ ಭಟ್ ಸೇರಿದಂತೆ ಮುಂತಾದವರ ದಂಡು ಇದೇ
,ಈ ಚಿತ್ರ ಒಳ್ಳೆಯ ಚಿತ್ರವಾಗಲಿದೆ,ಎಂಬ ಭರವಸೆ ಇದೇ ಎಂದರು.ನಂತರ ಮಾತನಾಡಿದ ಮಗ / ನಾಯಕ ನಟ
ವಿಷ್ಣು ತೇಜಾ ಮಾತನಾಡಿ,ಇದು ನನ್ನ ಮೊದಲ ಚಿತ್ರ ನನಗೆ ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ ದೊಡ್ಡ ಪ್ರೇರಣೆ ಅದನ್ನು ಬಿಟ್ಟು ಹೇಳೋದಾಡದರೆ,ನನ್ನ ಅಪ್ಪನೇ ನನಗೆ ದೊಡ್ಡ ಪ್ರೇರಣೆ,ಅಪ್ಪ ಕೂಡಾ ಕನ್ನಡ ಚಿತ್ರರಂಗದಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದಾರೆ,ಅಪ್ಪನ ಆಸೆ ಇತ್ತು ನಾನು ನಟನಾಗಿ ಎಂಟ್ರಿ ಆಗ್ಬೇಕು ಅಂತಾ,ನಾನು ಕೂಡಾ ನಟನಾಗಬೇಕು ಅಂತಾನೆ ಅಂದುಕೊಂಡಿದ್ದೆ.

ಚಿತ್ರದಲ್ಲಿ ನಾನು ಅಪ್ಪು ಗ್ಯಾರೇಜ್ ನಲ್ಲಿ,ಕೆಲಸ ಮಾಡ್ತಾ ಇರ್ತೀನಿ,ನನ್ನ ಓನರ್ ಆಗಿ ಹಿರಿಯ ನಟ ಅವಿನಾಶ್ ಸರ್ ಕೂಡಾ ನಟಿಸಿದ್ದು ನಮಗೆ ಖುಷಿ ಇದೇ ಅಂತಾ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಒಟ್ಟು ನಾಲ್ಕು ಹಾಡುಗಳನ್ನು ತೋರಿಸಲಾಯಿತು,ಅದರಲ್ಲಿ

ನಾಯಕ ಮತ್ತು ನಾಯಕಿಯ,ರೊಮ್ಯಾಂಟಿಕ್ ಸಾಂಗ್,ಪ್ರೀತಿ ಕೈ ಕೊಟ್ಟಾಗ ಹುಡುಗನ ಲೈಫಿನಲ್ಲಿ ಆಗುವ ನೋವಿನ ಸಾಂಗ್,ಆಯುಧ ಪೂಜೆಯ ಮಹತ್ವ ಮತ್ತು ಚಾಮುಂಡೇಶ್ವರಿ ಮೇಲೆ ಪ್ಲೇ ಆಗುವ ಭಕ್ತಿ ಪೂರ್ವಕ ಹಾಡು,ಈ ಹಾಡಿನಲ್ಲಿ ಹಿರಿಯ ನಟ ಅವಿನಾಶ್ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ
ಇನ್ನೊಂದು ಐಟಂ ನಂಬರ್ ಹಾಡು.

ಹಾಗೇ ಚಿತ್ರದ ಟ್ರೈಲರ್ ನಲ್ಲಿ,ಗೆಳೆಯನ,ಪ್ರೀತಿ,ಚಿಕ್ಕದೊಂದು ರೌಡಿಸಂ ಸೇರಿದಂತೆ ಕೆಲವು ಎಮೋಷನಲ್ ವಿಷಯಗಳನ್ನು ನಿರ್ದೇಶಕರು ಹೇಳಿದ್ದಾರೆ ಎಂಬ ಸೂಚನೆ ಸಿಕ್ಕಿದ್ದು, “ಅಪ್ಪು ಗ್ಯಾರೇಜ್” ಚಿತ್ರ ಇದೇ ಅಕ್ಟೋಬರ್ 30ಕ್ಕೆ ರಿಲೀಸ್ ಆಗ್ತಾ ಇದೆ,ನೋಡಿ ಸಹಕರಿಸಿ ಎಂದು ಚಿತ್ರತಂಡ ಕೇಳಿಕೊಂಡಿತು.

ರವೀ ಸಾಸನೂರ್
MasterNews365.Con

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.