Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಅಕ್ಕ – ತಂಗಿಯರ “ರಂಗಪ್ರವೇಶ”
- ಸಿನಿಮಾ

ಅಕ್ಕ – ತಂಗಿಯರ “ರಂಗಪ್ರವೇಶ”

ಅಕ್ಕ ತಂಗಿಯರಭರತನಾಟ್ಯ ರಂಗಪ್ರವೇಶ ನೂಪುರದ್ವಯಂ ಮೂಲಕಧನ್ಯಾಗಣೇಶ್- ಸಿರಿ ಗಣೇಶ್ಕಲಾಪಯಣ ಆರಂಭ ಬೆಂಗಳೂರು: ಗತಿಶ್ರೀ ಪರ್ಫಾರ್ಮಿಂಗ್ಆರ್ಟ್ಸ್ ಸೆಂಟರ್ (ರಿ) ವತಿಯಿಂದ ಆಯೋಜಿಸಲಾಗಿದ್ದ ನೂಪುರ ದ್ವಯಂ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ವೈಯಾಲಿಕಾವಲಿನ ತೆಲುಗು ವಿಜ್ಞಾನ ಸಮಿತಿಯ ಕೃಷ್ಣದೇವರಾಯ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಹೋದರಿಯರಾದ ಕುಮಾರಿ ಧನ್ಯಾ ಗಣೇಶ್ ಮತ್ತು ಕುಮಾರಿ ಸಿರಿ ಗಣೇಶ್ ಅವರ ಜೋಡಿ ರಂಗಪ್ರವೇಶ ನೃತ್ಯಕಾರ್ಯಕ್ರಮ ಎಲ್ಲರ ಮನಗೆದ್ದಿತು.ನಿರ್ಮಾಪಕ ಗಣೇಶ್ ಕೃಷ್ಣಮೂರ್ತಿ ಅವರ ಪುತ್ರಿಯರು ಹಾಗೂ ವಿದುಷಿ ಶ್ರೀಮತಿ ಶ್ರೀಲಕ್ಷ್ಮಿ ತೇಜಸ್ ಅವರ ಶಿಷ್ಯೆಯರಾದ […]

ಅಕ್ಕ ತಂಗಿಯರ
ಭರತನಾಟ್ಯ ರಂಗಪ್ರವೇಶ

ನೂಪುರದ್ವಯಂ ಮೂಲಕ
ಧನ್ಯಾಗಣೇಶ್- ಸಿರಿ ಗಣೇಶ್
ಕಲಾಪಯಣ ಆರಂಭ

ಬೆಂಗಳೂರು: ಗತಿಶ್ರೀ ಪರ್ಫಾರ್ಮಿಂಗ್
ಆರ್ಟ್ಸ್ ಸೆಂಟರ್ (ರಿ) ವತಿಯಿಂದ ಆಯೋಜಿಸಲಾಗಿದ್ದ ನೂಪುರ ದ್ವಯಂ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ವೈಯಾಲಿಕಾವಲಿನ ತೆಲುಗು ವಿಜ್ಞಾನ ಸಮಿತಿಯ ಕೃಷ್ಣದೇವರಾಯ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಹೋದರಿಯರಾದ ಕುಮಾರಿ ಧನ್ಯಾ ಗಣೇಶ್ ಮತ್ತು ಕುಮಾರಿ ಸಿರಿ ಗಣೇಶ್ ಅವರ ಜೋಡಿ ರಂಗಪ್ರವೇಶ ನೃತ್ಯಕಾರ್ಯಕ್ರಮ ಎಲ್ಲರ ಮನಗೆದ್ದಿತು.
ನಿರ್ಮಾಪಕ ಗಣೇಶ್ ಕೃಷ್ಣಮೂರ್ತಿ ಅವರ ಪುತ್ರಿಯರು ಹಾಗೂ ವಿದುಷಿ ಶ್ರೀಮತಿ ಶ್ರೀಲಕ್ಷ್ಮಿ ತೇಜಸ್ ಅವರ ಶಿಷ್ಯೆಯರಾದ ಈ ಸಹೋದರಿಯರು ಸುಮಾರು ನಾಲ್ಕು ಗಂಟೆಗಳ ಕಾಲ ವಿವಿಧ ಭರತನಾಟ್ಯ ಪ್ರಾಕಾರಗಳನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ನೆರೆದಿದ್ದ ಕಲಾಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಕಾರ್ಯಕ್ರಮದಲ್ಲಿ ಗುರು ಡಾ.ಲಲಿತಾ ಶ್ರೀನಿವಾಸನ್ (ನಿರ್ದೇಶಕರು, ನೂಪುರ ಸ್ಕೂಲ್ ಆಫ್ ಭರತನಾಟ್ಯ) ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಎನ್. ಕುಮಾರ್ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಶುಭಾ ಧನಂಜಯ್ ಭಾಗವಹಿಸಿ ಸಹೋದರಿಯರಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳು ಮಾತನಾಡಿ, “ಇಬ್ಬರು ಸಹೋದರಿಯರು ಒಟ್ಟಿಗೆ ರಂಗಪ್ರವೇಶ ಮಾಡುವುದು ವಿಶೇಷ. ಗುರು-ಶಿಷ್ಯ ಪರಂಪರೆಯನ್ನು ಇಬ್ಬರೂ ಉಳಿಸಿಕೊಂಡು ಬೆಳೆಸಲಿ. ಭರತನಾಟ್ಯ ಕೇವಲ ನೃತ್ಯವಲ್ಲ, ಒಂದು ತಪಸ್ಸು” ಎಂದು ಶುಭ ಹಾರೈಸಿದರು.


ಕಾರ್ಯಕ್ರಮವನ್ನು ಸಹೋದರಿಯರ ಪೋಷಕರು ಹಾಗೂ ಚಲನಚಿತ್ರ ನಿರ್ಮಾಪಕರಾದ ಶ್ರೀಮತಿ ಪ್ರತಿಮಾ ಗಣೇಶ್ ಮತ್ತು ಗಣೇಶ್ ಕೃಷ್ಣಮೂರ್ತಿ ಅವರು ಆಯೋಜಿಸಿದ್ದರು.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.