Wednesday, 4 November 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕರ್ನಾಟಕದ ಕಬೀರ….!!!

ಅವರು ವರಕವಿ ಕರ್ನಾಟಕದ ಮೊಹಮ್ಮದಿಯ ಕವಿ ಕರ್ನಾಟಕದ ಕಬೀರ ಅನ್ನಿಸಿಕೊಂಡರು. ಮಹಾತ್ಮರೆಲ್ಲ ಹಂಗಾಗಿ ಹೋಗ್ಯಾರ ಇಲ್ಲಿ ಎಷ್ಟು ಜನ ಮಹಾತ್ಮರು ಅವತರಿಸಿ ಯಾರು ಎಡ ಇಲ್ಲ ಬಲ ಇಲ್ಲ. ಕಡಕೋಳದ ಮಡಿವಾಳಪ್ಪನವರು ಹಂಗ ಬಳಬಟ್ಟಿ ಶರಣರು ಅಂಗ ಶರೀಫ ಸಾಹೇಬರು ಅಂಗ ನಾಗಭೂಷಣರು ಹಂಗ ಇನ್ನೇನು ಕೆಲವು ಮಂದಿ ಸಿದ್ಧಿ ಮಾಡಿಕೊಂಡಾರ ಸಿದ್ದಿಗಳು ಉಪಯೋಗ ಮಾಡ್ಯಾರ ಆದರೆ ಸಿದ್ಧಾರೂಢರು ಮಾತ್ರ ಯಾವ ಸಿದ್ದಿನೂ ದುರುಪಯೋಗ ಮಾಡಿಲ್ಲ. ಅವರು ಏನೇ ಮಾಡಿದರು ಎಲ್ಲಾ ಸಹಿಸಿಕೊಂಡಾರ. ಮರಳಿ ಅವರಿಗೆ ಕಲ್ಯಾಣ […]

ಅವರು ವರಕವಿ ಕರ್ನಾಟಕದ ಮೊಹಮ್ಮದಿಯ ಕವಿ ಕರ್ನಾಟಕದ ಕಬೀರ ಅನ್ನಿಸಿಕೊಂಡರು. ಮಹಾತ್ಮರೆಲ್ಲ ಹಂಗಾಗಿ ಹೋಗ್ಯಾರ ಇಲ್ಲಿ ಎಷ್ಟು ಜನ ಮಹಾತ್ಮರು ಅವತರಿಸಿ ಯಾರು ಎಡ ಇಲ್ಲ ಬಲ ಇಲ್ಲ.

ಕಡಕೋಳದ ಮಡಿವಾಳಪ್ಪನವರು ಹಂಗ ಬಳಬಟ್ಟಿ ಶರಣರು ಅಂಗ ಶರೀಫ ಸಾಹೇಬರು ಅಂಗ ನಾಗಭೂಷಣರು ಹಂಗ ಇನ್ನೇನು ಕೆಲವು ಮಂದಿ ಸಿದ್ಧಿ ಮಾಡಿಕೊಂಡಾರ ಸಿದ್ದಿಗಳು ಉಪಯೋಗ ಮಾಡ್ಯಾರ ಆದರೆ ಸಿದ್ಧಾರೂಢರು ಮಾತ್ರ ಯಾವ ಸಿದ್ದಿನೂ ದುರುಪಯೋಗ ಮಾಡಿಲ್ಲ. ಅವರು ಏನೇ ಮಾಡಿದರು ಎಲ್ಲಾ ಸಹಿಸಿಕೊಂಡಾರ. ಮರಳಿ ಅವರಿಗೆ ಕಲ್ಯಾಣ ಆಗ್ಲಿ ಅಂದಾರ ಯಾರಿಗೂ ಶಾಪ ಕೊಟ್ಟಿಲ್ಲ.

ಸಿದ್ದಾರೂಢರಂತಹ ಜ್ಞಾನ ಯಾರಿಗೂ ಇಲ್ಲ ಅವರದು ಅಖಂಡ ಜ್ಞಾನ ಅವರು ಶಿವನ ಅವತಾರ ನಿಜಗುಣರ ಶಾಸ್ತ್ರ ಮೊದಲ ಬರೆದು ಇಟ್ಟು ಹೋಗಿದ್ದರಂತ. ಅವರೇ ಮತ್ತೆ ಈಗ ಸಿದ್ದಾರೂಢರಾಗಿ ಪುನರ್ಜನ್ಮ ಪಡೆದು ಅವತರಿಸಿ ಬಂದಿದ್ದಾರೆ ಎಂಬ ನಂಬಿಕೆ ನನ್ನದು.

ನಿಜಗುಣರು ಸಿದ್ದಾರೂಢರಾಗಿ ಪುನರ್ಜನ್ಮ ಒಂದೆರ ಅಂತ ತಾಳೆ ಎಲೆಗಳ ಮೇಲೆ ಬರೆದು ಇಟ್ಟಿದ್ದರಂತೆ. ಅದು ಸಂಸ್ಕೃತದಲ್ಲಿ ನಿಜಗುಣರು ಬರೆದ ವಿವೇಕ ಚಿಂತಾಮಣಿ ಎಂಬ ಕನ್ನಡದ ಪ್ರಪ್ರಥಮ ವಿಶ್ವಕೋಶ ಅದಕ್ಕೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ನಿಜಗುಣರಿಗೆ ಅಗ್ರಸ್ಥಾನವಿದೆ.

ನಿಜಗುಣರು ರಾಜರು ಎಲ್ಲಾ ಬಿಟ್ಟು ಶಂಭುಲಿಂಗನ ಬೆಟ್ಟಕ್ಕೆ ತಪಸ್ಸು ಮಾಡಲು ಹೋದರಂತೆ ಇದಕ್ಕ ಮುಖ ಕೊಳ್ಳಬೇಕಾದರೆ ಜ್ಞಾನ ತಿಳಿ ಬೇಕಾದರೆ ಒಂದೇ ಜನ್ಮದ ಪುಣ್ಯ ಇದ್ರೆ ಸಾಕಾಗುವುದಿಲ್ಲ. ಬಹು ಜನ್ಮಗಳ ಪುಣ್ಯ ಪಡೆದಿರಬೇಕು ಹಿಂದೆ ಸುಕೃತ ಮಾಡಿದೆ ಅದರ ಹಿಂದೆ ನಿನ್ನೊಳು ಕೂಡಿದೆ.ಹಿಂದೆ ಸುಕೃತ ಇದ್ರೆ ಬಂದು ಕೊಡ್ತದೆ ಇಲ್ಲ ಅಂದ್ರೆ ಕೊಡಲ್ಲ.ಶತ ಜನ್ಮಗಳು ಇದರಾಗ ಹಾಡಿರಬೇಕು ಅಂದ್ರಾ ತಿಳಿತದ ಒಂದೇ ಜನ್ಮಕ್ಕ ತಿಳಿಯಂಗಿಲ್ಲ ಎಂದು ತಾವು ಜ್ಞಾನ ಸಂಪಾದಿಸಿದ್ದುದ್ದನ್ನು ಕುರಿತು ಹರ್ಷ ಪಡುತ್ತಾ ಬಸಪ್ಪ ಶರಣು ಹೇಳುತ್ತಾರೆ.

ಇದರ ವಿಷಯ ವಾಸನೆ ಇರಬೇಕು. ಹಿಂದಿನ ಜನ್ಮದ ಬಲವಾದ ಪುಣ್ಯ ಇರಬೇಕು. ಜ್ಞಾನಕ್ಕೆ ಯಾರು ಕೆಟ್ಟಿಲ್ಲ ಅಂದ್ರೆ ಅವರಿಗೆ ಜನ್ಮ ಸ್ವಲ್ಪ ಅದಾವು ಅಂದ್ರೆ ಅವರಿಗೆ ತಿಳಿತದ ಇಲ್ಲಂದ್ರೆ ತಿಳಿಯಂಗಿಲ್ಲ. ಅಭ್ಯಾಸಗೆ ಮೂರು ಜನ್ಮ. ಮುಮುಕ್ಷಿಗೆ ಆರು ಜನ್ಮ ಅನುಭವಿಗೆ ಎರಡು ಜನ್ಮರಿಗೆ ಇದೇ ಜನ್ಮ .

*ನಿಮ್ಮ ಪ್ರಕಾರ ಸ್ವಾಮಿಗಳು ಅಂತ ಯಾರಿಗೆ ಅನ್ನಬೇಕು?
*

ಬ್ರಹ್ಮ ಜ್ಞಾನ ಬಲ್ಲವನೇ ಬ್ರಾಹ್ಮಣ ಬ್ರಾಹ್ಮಣರ ವಂಶದಲ್ಲಿ ಹುಟ್ಟಿದವರು ಬ್ರಾಹ್ಮಣರಲ್ಲ. ಬ್ರಾಹ್ಮಣನೇ ತಾನಿದ್ದು ಬ್ರಹ್ಮ ಜ್ಞಾನವಿಲ್ಲದಿದ್ದರೆ ಆತನು ಹೊಲೆಯ, ಹೊಲೆಯನೇ ತಾನಿದ್ದು ಬ್ರಹ್ಮ ಜ್ಞಾನವಿದ್ದರ ಆತನು ಬ್ರಾಹ್ಮಣ ಅಂಗದ ನೆಲೆ ತಿಳಿದವನೇ ಜಂಗಮ ಅಂದರೆ ಸ್ವಾಮಿ.

ಸ್ವಾಮಿ ಅಂತ ಹೇಳಿ ಸ್ವಾಮಿಗಳ ಹೊಟ್ಯಾಗ ಹುಟ್ಟಿದವರು ಸ್ವಾಮಿಗಳಲ್ಲ. ಈ ಅಂಗದ ನೆಲೆ ಗೊತ್ತಿರಬೇಕು. ಈ ಅಂಗದೊಳಗೆ ಎಷ್ಟು ಲಿಂಗಗಳು ಅದಾವು ಯಾವ ಲಿಂಗಕ್ಕೆ ಎಷ್ಟು ಅಕ್ಷರಗಳು ಅದಾವು, ಯಾವ ಲಿಂಗ ಯಾವ ಜಾಗದೊಳಗೈತಿ ಈ ಲಿಂಗದ ನೆಲೆ ಅಂಗದ ನೆಲೆ ಗೊತ್ತಿರಬೇಕು.

ನಮ್ಮ ಕಾಲ್ ಬೆರಳುಗಳಿಂದ ತಲೆಯವರೆಗೂ ಅಳತೆ ಮಾಡಿದರೆ ಇದು 92 ಅಂಗುಲ ದೇಹ ಆದ . ಎಂಟು ಕೋಟಿ ರೂಮಗಳು ಅದಾವು. ಮೂರು ಪಂಚೇರ ಮಲ ಅದ. ಮೂರು ಶಸವಾ ಸೇರ ಬಿಂದು ಆದ
20,600 ಜಪ ದಿನವೊಂದಕ್ಕೆ ನಾಲ್ಕು ಸಾವಿರದ ನಾಲ್ಕ ನೂರಾ ನಲವತ್ತನಾಲ್ಕು ಮಾತು. 22 ಸಾವಿರ ಸಣ್ಣ ನಾಡಿಗಳು ಅದಾವು ಎರಡು ಸಾವಿರ ಅರವತ್ತು ದೊಡ್ಡನಾಡಿಗಳು ಅದಾವು. ಯಾವ ಯಾವ ನಾಡಿ ಏನು ಕೆಲಸ ಮಾಡ್ತದ ಯಾವ ಯಾವ ನಾಡಿಗಳು ಯಾವ ಯಾವ
ಸ್ಥಲದೊಳಗೆ ಅದಾವು ಇದನ್ನೆಲ್ಲಾ ಯಾರು ಬಲ್ಲರು ಅವರೇ ಜಂಗಮರು .

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.