“ಕಾರ್ತಿಕ್ ವರ್ಣೇಕರ್” ಎಂಬ ಪ್ರತಿಭಾವಂತ ನಟ
ಉತ್ತರ ಕರ್ನಾಟಕವನ್ನು ಕರ್ನಾಟಕದ ಗಂಡುಮಟ್ಟಿನ ನಾಡೆಂದೆ ಇತಿಹಾಸ ಹೇಳುತ್ತದೆ, ಉತ್ತರ ಕರ್ನಾಟಕ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದಂತಹ ಗಟ್ಟಿ ಅಸ್ತಿತ್ವವನ್ನು ಹೊಂದಿದ್ದು ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿ ಮತ್ತು ಧಾರವಾಡದ ಬಗ್ಗೆ ಮಾತನಾಡುವಾಗ ಕಲೆ ಸಾಹಿತ್ಯ ಸಂಸ್ಕೃತಿ ಈ ರೀತಿಯ ಭವ್ಯ ಪರಂಪರೆ ನಮ್ಮೆಲ್ಲರ ಕಣ್ಮುಂದೆ ಬಂದು ನಿಲ್ಲುತ್ತದೆ.
ಧಾರಾವಾಹಿಗಳು ಸಿನಿಮಾಗಳು ನಾಟಕಗಳು ಸೇರಿದಂತೆ ನಟನೆ ಮತ್ತು ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಲು ದೂರದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ದಿನನಿತ್ಯ ನೂರಾರು ಜನ ತಮ್ಮ ಕನಸನ್ನ ನನಸು ಮಾಡಿಕೊಳ್ಳಲು ಬೆಂಗಳೂರು ಎಂಬ ಮಾಯಾನಗರಕ್ಕೆ ಬರುತ್ತಾರೆ.
ಹೀಗೆ ಧಾರಾವಾಹಿಗಳು ಸಿನಿಮಾಗಳು ಹಾಗೂ ಇನ್ನಿತರ ಮನೋರಂಜನೆಯ ವಿಭಾಗದ ಕೆಲಸಗಳಲ್ಲಿ, ಕಳೆದ ಹತ್ತು ವರ್ಷಗಳಿಂದ ತಮ್ಮನ್ನ ನಟನಾ ವಿಭಾಗದಲ್ಲಿ ತೊಡಗಿಸಿಕೊಂಡು ತಾವು ಒಬ್ಬ ಒಳ್ಳೆಯ ಕಲಾವಿದ ಎಂಬುದನ್ನು ನಿರೂಪಿಸಿದ ಪ್ರತಿಭಾವಂತ ನಟ ಹುಬ್ಬಳ್ಳಿಯ “ಕಾರ್ತಿಕ್ ವರ್ಣೇಕರ್”
ಕಾರ್ತಿಕ್ ನಮ್ಮ ಹುಬ್ಬಳ್ಳಿಯ ಹುಡುಗ ನಮ್ಮ ಕನ್ನಡಿಗ ಆದರೆ ಈತನನ್ನು ನೋಡಿದಾಗ ತಕ್ಷಣವೇ ಈತ ಬಾಲಿವುಡ್ ನಟ ಆಗಿರಬಹುದೇನೋ ಎಂಬ ಭಾವ ಮೂಡುತ್ತದೆ ಅಷ್ಟು ಸುಂದರ ಕಾರ್ತಿಕ್.
ಮೂವತ್ತರ ಆಸು ಪಾಸಿನ ಈ ಸುಂದರ ಹುಡುಗ ಕಾರ್ತಿಕ್ 2016 ರಿಂದ ತಮ್ಮ ಕಲಾಪಯಣವನ್ನು ಆರಂಭಿಸಿ ರಿಯಾ ಎಂಬ ಕನ್ನಡ ಚಿತ್ರದ ಮೂಲಕ ನಾಯಕ ನಟನಾಗಿ ಚಂದನವನಕ್ಕೆ ಪ್ರವೇಶ ಪಡೆಯುತ್ತಾರೆ ಅಷ್ಟೇ ಅಲ್ಲದೆ ರಿಯಾದಲ್ಲಿ ನಟಿಸಿದ ಪಾತ್ರಕ್ಕಾಗಿ ವಿಶೇಷ ಮೆಚ್ಚುಗೆಯನ್ನು ಪಡೆಯುತ್ತಾರೆ. ನಂತರ ಎವಿಡೆನ್ಸ್ ಆರಿದ್ರ ಸೇರಿದಂತೆ ಇನ್ನೂ ಕೆಲವು ಚಿತ್ರಗಳಲ್ಲಿ , ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಂಡು ತಾವು ಒಬ್ಬ ಒಳ್ಳೆಯ ಕಲಾವಿದ ಎಂಬುದನ್ನು, ನಿರೂಪಿಸುತ್ತಾರೆ ಇತ್ತೀಚಿಗೆ ಕಾರ್ತಿಕ್ ವರ್ಣೇಕರ್ ಮತ್ತೆ ಸುದ್ದಿಯಾಗಿದ್ದು, ಶೇರ್ ಚಿತ್ರದಲ್ಲಿ ನಟಿಸಿದ ಖಳನಟನ ಪಾತ್ರದ ವಿಚಾರಕ್ಕೆ.
ರಿಯಾ ಚಿತ್ರದ ಮೂಲಕ ನಾಯಕ ನಟನಾಗಿ ಪ್ರವೇಶ ಪಡೆದಿದ್ದರೂ ಸಹ ಕಾರ್ತಿಕ್ ಇಲ್ಲಿಯ ತನಕ ಮಾಡಿರುವ ಉಳಿದೆಲ್ಲ ಚಿತ್ರಗಳ ಪಾತ್ರಗಳು ನಟನೆಗೆ ಸ್ಕೋಪ್ ಇದ್ದ ಕಾರಣ ಎಂಬುದೇ ವಿಶೇಷ.
ಕಾರ್ತಿಕ್ ಹೇಳುವ ಹಾಗೆ, ತಾನು ಉದ್ಯಮಕ್ಕೆ ಬಂದಿದ್ದು ತಾನೊಬ್ಬ ಒಳ್ಳೆಯ ಕಲಾವಿದನಾಗುವುದಕ್ಕೆ ಮಾತ್ರ ನಾಯಕ ನಟನಾಗಿ ನಟಿಸಿದರೆ ಏನಾಯಿತು ಅದರ ನಂತರ ಬಂದಿದ್ದ ಹಾಗೂ ಇನ್ಮುಂದೆ ಬರುವ ಎಲ್ಲಾ ಒಳ್ಳೆಯ ಕಥೆಗಳಲ್ಲಿ ಪಾತ್ರವಾಗುವ ಆಸೆ ಆಶಯ ತನಗಿದೆ ಎಂಬುದನ್ನು ಬಹಳ ಪ್ರೀತಿಯಿಂದ ಹೇಳುತ್ತಾರೆ.
ಸಿನಿಮಾ ಅಷ್ಟೇ ಅಲ್ಲದೆ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾದ ನಿನಗಾಗಿ ಧಾರವಾಹಿಯಲ್ಲಿ ಮಾಡಿದ ಕಪಿಲ್ ಪಾತ್ರ, ಉದಯವಾಹಿನಿಯಲ್ಲಿ ಪ್ರಸಾರವಾದ ಚಿಕ್ಕ ಯಜಮಾನಯಲ್ಲಿ ಮಾಡಿದ ಅರ್ಜುನ್ ಪಾತ್ರ ಸೇರಿದಂತೆ ಕುಕ್ಕು ಮತ್ತು ಬುಲೆಟ್ ನಂತಹ ಮೈಕ್ರೋ ಡ್ರಾಮ ಸರಣಿಗಳಲ್ಲಿ, ಕಾರ್ತಿಕ್ ನಟಿಸುತ್ತಾ ಬ್ಯುಸಿಯಾಗಿರುವುದು, ಆತನಲ್ಲಿರುವ ನಟನ ವೃತ್ತಿಯ ಬಗ್ಗೆ ಇರುವ ಪ್ರೀತಿಯನ್ನು ತೋರಿಸುತ್ತದೆ.
“ದೀಪಾವಳಿಯ ಈ ಶುಭ ಸಂದರ್ಭದಲ್ಲಿ” ಕಾರ್ತಿಕ್ ನಮಗೆ ಕೊಟ್ಟ ಮಾಹಿತಿಯ ಪ್ರಕಾರ ಆತ ಒಪ್ಪಿಕೊಂಡಿರುವ ಹಾಗೂ ಮುಂಬರುವ ಕೆಲವು ಪ್ರಾಜೆಕ್ಟ್ ಗಳ ಬಗ್ಗೆ ನೋಡಿದರೆ,
ಕಾರ್ತಿಕ್ ನಾಯಕ ನಟನಾಗಿ ನಟಿಸುತ್ತಿರುವ “ಕನ್ಯಾ ರಾಶಿ” ಹಾಗೂ “ಡಬಲ್ ಡೋರ್ಸ್” ಚಿತ್ರಗಳು ಮತ್ತು ಖಳ ನಟನಾಗಿ ನಟಿಸುತ್ತಿರುವ “ನಮ್ಮೂರ ಕಿರಾತಕರು” ಚಿತ್ರ ಸೇರಿದಂತೆ ಇನ್ನೂ ಕೆಲವು ಪ್ರಾಜೆಕ್ಟ್ ಗಳ ಮಾತುಕತೆ ನಡೆಯುತ್ತಿದೆ ಎಂಬುದು ವಿಶೇಷ.
ಕಾರ್ತಿಕ್ ಒಬ್ಬ ಒಳ್ಳೆಯ ಕಲಾವಿದ ಅಷ್ಟೇ ಅಲ್ಲದೆ ಒಬ್ಬ ಹೃದಯವಂತ ವ್ಯಕ್ತಿ ಕೂಡ,
ಸೀರಿಯಲ್ ಸಿನಿಮಾ ಶೂಟಿಂಗ್ ಎಲ್ಲ ಕೆಲಸ ಇದ್ದಾಗ ಮಾತ್ರ ಸ್ನೇಹಿತರನ್ನ ನೆನಪಿಸಿಕೊಳ್ಳದೆ ಬೇರೆ ಸಮಯದಲ್ಲಿಯೂ ಸಹ ಈತ ಎಲ್ಲರ ಜೊತೆ ಸಂಪರ್ಕದಲ್ಲಿರುವ ಸ್ನೇಹಜೀವಿ ಎನ್ನಬಹುದು.

ಕನ್ನಡ ಚಿತ್ರರಂಗ ಎನ್ನುವುದು ಕೇವಲ ಮನರಂಜನೆಯ ಕ್ಷೇತ್ರವಲ್ಲ. ಇಲ್ಲಿ ಅಪಾರ ಪ್ರತಿಭೆ, ಸೃಜನಶೀಲತೆ, ಪರಿಶ್ರಮ ಮತ್ತು ಕಲೆಯ ಮೇಲಿನ ಅಪಾರ ಪ್ರೀತಿ ಹೊಂದಿರುವ ನೂರಾರು ಕಲಾವಿದರಿದ್ದಾರೆ. ಪ್ರತಿಯೊಬ್ಬ ಕಲಾವಿದನಲ್ಲಿಯೂ ಒಂದೊಂದು ವಿಭಿನ್ನ ಸಾಮರ್ಥ್ಯವಿದೆ. ನಾಯಕನಾಗುವ ಕನಸು ಹೊತ್ತವರು, ಖಳನಟರಾಗಿ ಗುರುತಿಸಿಕೊಳ್ಳಲು ಬಯಸುವವರು, ಪೋಷಕ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲುವವರು, ಹಾಸ್ಯದ ಮೂಲಕ ನಗಿಸುವವರು ಹೀಗೆ ಹಲವು ಪ್ರತಿಭೆಗಳು ಸ್ಯಾಂಡಲ್ವುಡ್ನಲ್ಲಿ ತಮ್ಮದೇ ಆದ ಗುರುತು ಮೂಡಿಸಲು ಕಾಯುತ್ತಿದ್ದಾರೆ.ಆದರೆ ಪ್ರತಿಭೆ ಇದ್ದ ಮಾತ್ರಕ್ಕೆ ಅವಕಾಶಗಳು ಸುಲಭವಾಗಿ ಸಿಗುತ್ತವೆ ಎನ್ನಲಾಗದು. ಅನೇಕ ಕಲಾವಿದರು ವರ್ಷಗಳ ಕಾಲ ಪರಿಶ್ರಮಪಟ್ಟರೂ ಸೂಕ್ತ ವೇದಿಕೆಗಾಗಿ ಕಾಯುತ್ತಿದ್ದಾರೆ. ಕೆಲವರಿಗೆ ಅವಕಾಶ ಸಿಕ್ಕರೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಸರಿಯಾದ ಪಾತ್ರಗಳು ಸಿಗುತ್ತಿಲ್ಲ. ಇನ್ನು ಕೆಲವರು ತಮ್ಮಲ್ಲಿರುವ ಸಾಮರ್ಥ್ಯವನ್ನು ಪ್ರದರ್ಶಿಸಲು ಒಂದು ಉತ್ತಮ ಅವಕಾಶದ ನಿರೀಕ್ಷೆಯಲ್ಲಿ ಸದಾ ಇರುತ್ತಾರೆ.
ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಉತ್ತರ ಕರ್ನಾಟಕದ ಪ್ರತಿಭೆಗಳ ಕೊಡುಗೆ ಅಪಾರ. ಕಲೆ, ಸಾಹಿತ್ಯ, ಸಂಗೀತ, ನಟನೆ ಹಾಗೂ ನಿರ್ದೇಶನ ಸೇರಿದಂತೆ ಸಿನಿಮಾ ರಂಗದ ವಿವಿಧ ಕ್ಷೇತ್ರಗಳಲ್ಲಿ ಉತ್ತರ ಕರ್ನಾಟಕದ ಅನೇಕ ಪ್ರತಿಭಾವಂತರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಉತ್ತರ ಕರ್ನಾಟಕದ ಮಣ್ಣಿನ ಸೊಗಡು, ಅಲ್ಲಿನ ಭಾಷೆಯ ಸೊಗಸು, ಬದುಕಿನ ಅನುಭವಗಳು ಹಾಗೂ ಅಲ್ಲಿನ ಜನರ ಕಲಾಸಕ್ತಿಯೇ ಅನೇಕ ಕಲಾವಿದರಿಗೆ ಸ್ಫೂರ್ತಿಯಾಗಿದೆ. ಸಾಕಷ್ಟು ಪ್ರತಿಭೆಗಳು ಅವಕಾಶಗಳಿಗಾಗಿ ಕಾಯುತ್ತಿದ್ದರೆ, ಇನ್ನು ಕೆಲವರು ತಮ್ಮ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಇದೇ ಹಾದಿಯಲ್ಲಿರುವ ಉತ್ತರ ಕರ್ನಾಟಕದ ಹುಬ್ಬಳ್ಳಿಯ ಹುಡುಗ ಕಾರ್ತಿಕ್ ವರ್ಣೇಕರ್, ಈ ಪ್ರತಿಭಾವಂತನಿಗೂ ಸಾಕಷ್ಟು ಅವಕಾಶಗಳು ಸಿಗಲಿ ಹಾಗೂ ಸಿಗುತ್ತವೆ ಎಂಬ ಭರವಸೆ ನಮಗಿದೆ.
ಬರೀ ಕಾರ್ತಿಕ್ ವರ್ಣೇಕರ್ ಮಾತ್ರವಲ್ಲದೆ ಕಾರ್ತಿಕ್ ತರಹವೇ ಇರುವ ಇನ್ನಷ್ಟು ಪ್ರತಿಭಾವಂತರನ್ನ ಚಂದನವನ ತಮ್ಮ ಸಿನಿಮಾಗಳಲ್ಲಿ ತಮ್ಮ ಧಾರಾವಾಹಿಗಳಲ್ಲಿ ತಾವು ಮಾಡುವ ಪ್ರಾಜೆಕ್ಟ್ ಗಳಲ್ಲಿ ಅವಕಾಶ ಕೊಟ್ಟರೆ,ಉದ್ಯಮ ಇನ್ನೂ ಸುಂದರವಾಗಿರುತ್ತದೆ ಎಂಬುದು ನಮ್ಮ ಆಶಯ
ರವೀ ಸಾಸನೂರ್
MasterNews365.Com
