“ಕ ಮ್ಯೂಸಿಕ್” ತೆಕ್ಕೆಗೆ
“ಫಸ್ಟ್ ಲವ್ ಗುರು”
ಕಳೆದ ಆರು ವರ್ಷಗಳಿಂದ,ಕನ್ನಡ ಚಿತ್ರರಂಗದಲ್ಲಿ ತುಂಬಾ ಸಕ್ರಿಯವಾಗಿ ಕೆಲಸ ಮಾಡ್ತಾ ಇರುವ ಸಂಸ್ಥೆ “ಕ ಪಿಚ್ಚರ್”
ಕಳೆದ ಇಪ್ಪತ್ತು ವರ್ಷಗಳಿಂದ,
ಟಿವಿ9 ಸೇರಿದಂತೆ ನಾಡಿನ ಪ್ರತಿಷ್ಠಿತ ಸ್ಯಾಟಲೈಟ್ ವಾಹಿನಿಗಳಲ್ಲಿ ಸಿನಿಮಾ ವಿಭಾಗದ ಕಂಟೆಂಟ್ ರೈಟರ್ ಆಗಿ, ಮುಖ್ಯಸ್ಥರಾಗಿ ಕೆಲಸ ಮಾಡಿ ಅನುಭವ ಹೊಂದಿರುವ ಪ್ರವೀಣ್ ಏಕಾಂತ “ಕ ಪಿಚ್ಚರ್” ನ ಮುಖ್ಯಸ್ಥರು ಎಂಬುದು ವಿಶೇಷ.
ಇಲ್ಲಿಯ ತನಕ “ಕ ಪಿಚ್ಚರ್” ಸಂಸ್ಥೆಯು
ಚಿತ್ರ ತಂಡಗಳ ಸಂದರ್ಶನಗಳು, ಕಂಟೆಂಟ್ ಕ್ರಿಯೇಷನ್,
ಸಿನಿಮಾಗಳ ಸಂಪೂರ್ಣ ಪ್ರಮೋಷನ್ ಮತ್ತು ಸಿನಿಮಾಗಳ PR ಮೂಲಕ ತನ್ನದೇ ಆದಂತಹ ಒಳ್ಳೆಯ ಬ್ರ್ಯಾಂಡ್ ಹೊಂದಿರುವ “ಕ ಪಿಚ್ಚರ್” ಇದೀಗ ಆಡಿಯೋ ಕ್ಷೇತ್ರಕ್ಕೂ ಕಾಲಿಟ್ಟಿದ್ದು.
ನಿರ್ದೇಶಕ ಗುರು ಪ್ರಸಾದ್ ಮೊದಲ ಪ್ರಯತ್ನದ “ಫಸ್ಟ್ ಲವ್ ಗುರು” ಚಿತ್ರದ ಆಡಿಯೋವನ್ನು ತಮ್ಮ “ಕ ಮ್ಯೂಸಿಕ್” ಆಡಿಯೋ ಲೇಬಲ್ ನಲ್ಲಿ ಬಿಡುಗಡೆ ಮಾಡುತ್ತಿದ್ದು.
ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಸಿಹಿ ಸಂಧರ್ಭದಲ್ಲಿ, ಪ್ರವೀಣ್ ಏಕಾಂತ ಮತ್ತು ಚಿತ್ರ ತಂಡ ಎರಡು ಒಟ್ಟಿಗೆ ಸೇರಿ,
“ಕ ಮ್ಯೂಸಿಕ್” ಸಂಸ್ಥೆಯ ಲೋಗೋ ಸಹಿತ ಚಿತ್ರದ ಶೀರ್ಷಿಕೆಯ ಪೋಸ್ಟರ್ ಕೂಡಾ ಲಾಂಚ್ ಮಾಡಲಾಯಿತು.
ಕ ಮ್ಯೂಸಿಕ್ ಸಂಸ್ಥೆಯ ಲೋಗೋ ಅನಾವರಣ ಮಾಡಿ ಮಾತನಾಡಿದ, ಕವಿರಾಜ್,ಈಗಾಗಲೇ ಕ ಪಿಚ್ಚರ್ ಮೂಲಕ ಪ್ರವೀಣ್ ಕನ್ನಡ ಚಿತ್ರರಂಗದ ಕುರಿತಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ,ಒಳ್ಳೆಯ ವಿಷಯವನ್ನು ಹರಡುತ್ತಾರೆ,ಬೇಸರವಾದಾಗ ನನ್ನ ಹಾಗೆಯೇ ಸಿಟ್ಟಾಗುತ್ತಾರೆ, ಈಗ ಮುಂದೆ ಬರುವ ಬಹಳ ಚಿತ್ರ ಕರ್ಮಿಗಳಿಗೆ,ಚಿತ್ರ ತಂಡಕ್ಕೆ ಆಡಿಯೋ ವಿಚಾರದಲ್ಲಿ ಸ್ವಲ್ಪ ನೆಮ್ಮದಿಯಿಂದ ಇರುವ ಕಾಲ ಬಂದಿದೆ ಎನ್ನಬಹುದು ಎಂದರು,
ಚಂದನವನದ ಪ್ರತಿಭಾವಂತ ಚಿತ್ರ ಸಾಹಿತಿ ಮತ್ತು ಚಿತ್ರ ನಿರ್ದೇಶಕ,ಭರ್ಜರಿ ಖ್ಯಾತಿಯ ಚೇತನ್ ಕುಮಾರ್ ಮಾತನಾಡಿ, ತಮ್ಮ ಆರಂಭದ ಚಿತ್ರ ಜೀವನದ ಬಗ್ಗೆ ಮೆಲಕು ಹಾಕಿ, ತಾವು ಬರೆದ “ಬೈಟೆ ಬೈಟೆ” ಹಾಡನ್ನು ನೆನೆದು, ಆ ಸಂದರ್ಭದಲ್ಲಿ ಇಲ್ಲಿಯತನಕವು ತಮ್ಮನ್ನ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಅದರ ಜೊತೆಗೆ, ಕ ಪಿಚ್ಚರ್ ಸಂಸ್ಥೆಯ ಗೆಳೆಯ, ಕ ಮ್ಯೂಸಿಕ್ ಮ್ಯೂಸಿಕ್ ಮೂಲಕ ಹೊಸದೊಂದು ಹೆಜ್ಜೆ ಇಡುತ್ತಿದ್ದು, “ಕ ಎಂದರೆ ಕನ್ನಡ, ಕರುನಾಡು,ಕರ್ನಾಟಕ, ಕನ್ನಡ ಚಿತ್ರರಂಗ ಹೀಗೆ ಬಹಳಷ್ಟು ವಿಚಾರಗಳು ನಮ್ಮೆಲ್ಲರ ಕಣ್ಮುಂದೆ ಬರುತ್ತವೆ, ಗೆಳೆಯನಿಗೆ ಶುಭವಾಗಲಿ ಎಂದರು.
ನಂತರ ಕ ಮ್ಯೂಸಿಕ್ ಸಂಸ್ಥೆಯ ಮುಖ್ಯಸ್ಥ ಪ್ರವೀಣ್ ಏಕಾಂತ ಇಟ್ಟ ಹೆಜ್ಜೆ ಬಗ್ಗೆ ಹೆಮ್ಮೆಪಟ್ಟು ಮಾತನಾಡಿದ ಚಿತ್ರ ಸಾಹಿತಿ ನಾಗಾರ್ಜುನ ಶರ್ಮ, ಹತ್ತು ವರ್ಷದ ಹಿಂದೆ
ಹೊಸ ನಿರ್ದೇಶಕರಿಗೆ ಹೊಸ ನಿರ್ಮಾಪಕರಿಗೆ, ತಾವು ಮಾಡಿದ ಚಿತ್ರದ ಆಡಿಯೋ ಹಕ್ಕುಗಳನ್ನು ಯಾವ ಸಂಸ್ಥೆಗೆ ನೀಡಬೇಕು ಎಂಬ ಗೊಂದಲದಲ್ಲಿದ್ದರು,ಈಗ ಕಾಲ ಬದಲಾಗಿದ್ದು ಅಂತಹ ಎಲ್ಲರಿಗೂ, ಕ ಮ್ಯೂಸಿಕ್ ನಂತಹ ಸಂಸ್ಥೆ ನೆರವಿಗೆ ನಿಲ್ಲಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ನಂತರ ಚಿತ್ರದ ನಿರ್ದೇಶಕ ಗುರು ಪ್ರಸಾದ್ ಮಾತನಾಡಿ,
ತುಂಬಾ ಪ್ರೀತಿ,ಶ್ರಮ ಹಾಗೂ ಪ್ಯಾಷನ್ ನಿಂದಾಗಿ ಚಿತ್ರ ಮಾಡಿದ್ದೇವೆ,
ನನ್ನನ್ನ ನಿರ್ದೇಶಕನ್ನಾಗಿ ಮಾಡಿದ ಕಾಣದ ಕೈಗಳಾದ ಐದು ನಿರ್ಮಾಕರನ್ನು ನಾನು ನೆನೆಯುತ್ತೇನೆ ಎಂದರು.
ನಾನು ಮತ್ತು ಕ ಮ್ಯೂಸಿಕ್ ಪ್ರವೀಣ್ ಸುಮಾರು ವರ್ಷದ ಗೆಳೆಯರು,ನನ್ನ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ ಗಟ್ಟಿ ವ್ಯಕ್ತಿ,ಇಬ್ಬರು ಗೆಳೆಯರು ಒಂದಾದ ಸುಯೋಗ ಈ ಸಿನಿಮಾ ಮೂಲಕ ಆಗಿದ್ದು,
ನಮ್ಮ ಕೆಲಸಕ್ಕೆ ನಿಮ್ಮ ಬೆಂಬಲ ಇರಲಿ ಎಂದರು.
ನಾಯಕ ಯುದಿತ ಶೆಟ್ಟಿ, ನಾನು ಸೀರಿಯಲ್ ಮಾಡಿಲ್ಲ,ಸಿನಿಮಾ ಮಾಡಿಲ್ಲ ಇದರ ಮಧ್ಯ ಶಾರ್ಟ್ ಫಿಲಂ ಮಾಡ್ತಾ ಇದ್ದೆ,ದೇವರ ಆಶೀರ್ವಾದ,ನಿರ್ದೇಶಕ ಗುರು ಪ್ರಸಾದ್ ಕಡೆಯಿಂದ ಸಿಕ್ಕ ಅವಕಾಶ ಚಿತ್ರಕ್ಕಾಗಿ ನಡೆದ ವರ್ಕ್ ಶಾಪ್,ಚಿತ್ರೀಕರಣ ಇವತ್ತಿಗೆ ಎಲ್ಲವೂ ಆಗಿ ಅಂತಿಮವಾಗಿ ಚಿತ್ರ ನವೆಂಬರ್ 27ಕ್ಕೆ ರಿಲೀಸ್ ಆಗ್ತಾ ಇದೆ,ನಿಮ್ಮೆಲ್ಲರ ಸಪೋರ್ಟ್ ಇರ್ಲಿ ಎಂದು ಕೇಳಿದರು.
ಸಂಗೀತ ನಿರ್ದೇಶಕ
ಮನೋಜವo ಮಾತನಾಡಿ,
ಇದು ನನ್ನ ಮೊದಲ ಚಿತ್ರ,ಫಸ್ಟ್ ಲವ್ ಗುರು ನನ್ನ ಕೆರಿಯರ್ ನ ಬೆಸ್ಟ್ ಪ್ರಾಜೆಕ್ಟ್.ನಾನೊಬ್ಬ ಉತ್ಸಾಹಿ ಸಂಗೀತ ಅಭಿಮಾನಿ,ನನಗೆ ಅವಕಾಶ ಕೊಟ್ಟಂತಹ ನಿರ್ದೇಶಕ ಗುರು ಪ್ರಸಾದ್ ಅವ್ರಿಗೆ ಧನ್ಯವಾದ,ಈ ಚಿತ್ರದಲ್ಲಿ ಬಹುತೇಕ ಕನ್ನಡದ ಪ್ರತಿಭೆಗಳನ್ನು ಬಳಸಿ,ಕೆಲಸ ಕೊಟ್ಟು ಮಾಡಿದ ಚಿತ್ರ,ಇದರಲ್ಲಿ ಒಟ್ಟು ಐದು ಹಾಡುಗಳಿವೆ,ಚಿತ್ರ ಸಾಹಿತಿ ಗೆಳೆಯ ಪ್ರಮೋದ್ ನನ್ನ ಫೇವರೆಟ್,ನಾನು ಅವರನ್ನ ಪಮ್ಮಿ ಅಂತಾನೆ ಕರೀತೀನಿ,ತುಂಬಾ ಒಳ್ಳೆಯ ಹಾಡುಗಳನ್ನು ಬರೆದಿದ್ದಾರೆ.
ಚಿತ್ರ ನೋಡುಗರಿಗೆ ಗ್ಯಾರಂಟಿ ಒಳ್ಳೆಯ ಚಿತ್ರ ಮತ್ತು ಒಳ್ಳೆಯ ಹಾಡುಗಳನ್ನು ಕೇಳಿದೆವು ಅನ್ನೋ ಭಾವನೆ ನನಗಿದೆ,ಕನ್ನಡ ಪಿಚ್ಚರ್ ಸಂಸ್ಥೆಯ ಮುದ್ದಾದ ಕೂಸು ಕ ಮ್ಯೂಸಿಕ್ ಮೂಲಕ,ನಮ್ಮ ಚಿತ್ರದ ಹಾಡು ಇಂದು ಲೋಕಾರ್ಪಣೆ ಆಗಿದ್ದು ನನಗೆ ಖುಷಿ ಇದೇ ಎಂದರು.

ಚಂದ್ರಕಲಾ ಹಿರಿಯ ನಟಿ,ನಾನಿಲ್ಲಿ ನಾಯಕಿಯ ತಾಯಿಯ ಪಾತ್ರವನ್ನು ಮಾಡಿದ್ದು,ಚಿತ್ರರಂಗಕ್ಕೆ ಬರುವ ಹೊಸ ಕಲಾವಿದರುತುಂಬಾ ಎಫರ್ಟ್ ಹಾಕ್ತಾರೆ,ಕಷ್ಟ ಪಡ್ತಾರೆ ಹಾಗೇ ಒಳ್ಳೆಯ ಹೆಸರನ್ನು ಕೂಡಾ ಮಾಡ್ತಾರೆ,ನಮ್ಮ ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರು ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದರು.
ನಾಯಕಿ ರಾಧ್ಯಾ ರಾಜ್ ಮಾತನಾಡಿ,ನಾನಾಗ ಸೀರಿಯಲ್ ಮಾಡ್ತಾ ಇದ್ದ ಸಮಯ,ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕು ಅನ್ನೋ ಆಸೆ ಇತ್ತು,ಇದರ ಮಧ್ಯ ನಾನು ಚಿತ್ರಕ್ಕೆ ಆಯ್ಕೆ ಅದೇ ನಂತರ,ನಾನು ನಟಿಸೋದಕ್ಕೆ ಶುರು ಮಾಡಿದೆ,ಸೀರಿಯಲ್ ಬೇರೆ ಫಾರ್ಮ್ಯಾಟ್, ಸಿನ್ಮಾ ಬೇರೆ ಫಾರ್ಮ್ಯಾಟ್ ಎಲ್ಲವೂ ಅದ್ಭುತವಾಗಿ ಬಂದಿದೆ ಎಂದರು.
ಹಿರಿಯ ನಟ (ಈ ಟಿವಿ) ಶ್ರೀಧರ್ ಮಾತನಾಡಿ,ಕನ್ನಡ ಭಾಷೆಯ ಅಸ್ಮಿತೆ,ಅಸ್ತಿತ್ವ ಹಾಗೂ ಕನ್ನಡದ ಇತಿಹಾಸದ ಕುರಿತಾಗಿ ಬಹಳಷ್ಟು ಜನ ಮಹನೀಯರು ಕೆಲಸ ಮಾಡಿದ ಕಾಯಕ ಯೋಗಿಗಳು ಓಡಾಡಿದ ಜಾಗದಲ್ಲಿ ನಾವು ಇದ್ದಿವಿ ಇದು ನಮ್ಮ ಸೌಭಾಗ್ಯ,ಅಂತಹದರಲ್ಲಿ ಇಂದು ಬಿಡುಗಡೆಯಾದ ಫಸ್ಟ್ ಲವ್ ಗುರು ಚಿತ್ರದ ಹಾಡು ಚೆನ್ನಾಗಿದೆ,ಕ ಮ್ಯೂಸಿಕ್ ಮೂಲಕ ನಮ್ಮ ಚಿತ್ರದ ಹಾಡು ಬಿಡುಗಡೆ ಆಗಿದ್ದು,ನಿಮ್ಮೆಲ್ಲರ ಸಹಕಾರ ಬೇಕೆಂದು ಕೇಳಿದರು.
ಪ್ರಸಿದ್ಧ ಮ್ಯಾಜಿಷಿಯನ್ ಕೆ ಎನ್ ರಮೇಶ್ ಮಾತನಾಡಿ,
ಕಳೆದ ಮೂವತ್ತೈದು ವರ್ಷಗಳಿಂದ ಉದ್ಯಮದಲ್ಲಿ ಇದ್ದೀನಿ,ಬಹಳಷ್ಟು ಕಲಾವಿದರು,ಸ್ಟಾರ್ ನಟರು ಎಲ್ಲರನ್ನೂ ನೋಡಿದ್ದೇನೆ,ಇದೊಂದು ಕ್ರಿಯೇಟಿವ್ ಜಗತ್ತು,ನಿರ್ದೇಶಕ ಗುರು ಪ್ರಸಾದ್ ನಮ್ಮ ಹುಡ್ಗ,ತುಂಬಾ ಒಳ್ಳೆಯ ಕೆಲಸಗಾರ ಎಂದು ಶುಭ ಕೋರಿ,ವೇದಿಕೆ ಮೇಲಿದ್ದ ತಮ್ಮ ಹುಡುಗನನ್ನು ಕರೆದು, ಒಂದು ಖಾಲಿ ಪೇಪರ್ ಕೊಟ್ಟು ಫೋಲ್ಡ್ ಮಾಡಿ,ಅದನ್ನು ಹಣವಾಗಿ ಮ್ಯಾಜಿಕ್ ಮಾಡಿ,ಮುಂದಿನ ಚಿತ್ರಕ್ಕೆ ಶೇರ್ ಹೋಲ್ಡರ್ ಅದೇ ಎಂದು ಹೇಳಿದರು.

ಪ್ರಮೋದ ಮರವಂತೆ
ಮಾತನಾಡಿ,ನನ್ನ ಶಾಲೆಯ,ಹೈಸ್ಕೂಲ್ ಮತ್ತು ಕಾಲೇಜ್ ದಿನಗಳಲ್ಲಿ ನನ್ನ ಗೆಳೆಯರ ಜೀವನ,ಅವರ ಪ್ರೀತಿ,ಪ್ರೇಮ ಮತ್ತು ಒಂದಷ್ಟು ಕ್ರಶ್ ಗಳ ಕುರಿತಾಗಿ ನಾನು ನೋಡಿದ್ದೆ,ಅದನ್ನ ನಾನು ತುಂಬಾ ಗಮನಿಸಿದ್ದೆ ಹಾಗು ಬದುಕಿನ ಕೆಲವು ಅನುಭವಗಳು ಒಟ್ಟಾಗಿ ಸೇರಿದಾಗ ಇಂತಹ ಒಳ್ಳೆಯ ಹಾಡುಗಳು ಬರುತ್ತವೆ,ಹಾಗೆ ಬಂದ ಒಂದೊಳ್ಳೆ ಹಾಡು ಫಸ್ಟ್ ಲವ್ ಗುರು ಚಿತ್ರದ ಹಾಡು.ನಿಮ್ಮೆಲ್ಲರಿಗೂ ಇಷ್ಟ ಆಗತ್ತೆ ಎಂದರು.
ರವೀ ಸಾಸನೂರ್
MasterNews365.Com
