Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಆರ್ಯನ್ ಸಂತೋಷ್ – ಈಗ ಡೈರೆಕ್ಟರ್
- ಸಿನಿಮಾ

ಆರ್ಯನ್ ಸಂತೋಷ್ – ಈಗ ಡೈರೆಕ್ಟರ್

ಆರ್ಯನ್ ಸಂತೋಷ್ ನಿರ್ದೇಶನದ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’ ಸಿನಿಮಾದಿಂದ ಮಾಸ್ ಸಾಂಗ್ ರಿಲೀಸ್: ಕುತೂಹಲ ಮೂಡಿಸಿದ ಫ್ಯಾಂಟಸಿ ಡ್ರಾಮಾ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಆರ್ಯನ್ ಸಂತೋಷ್ ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಅವರು ನಟಿಸಿ, ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಮಹತ್ವಾಕಾಂಕ್ಷೆಯ ಸಿನಿಮಾ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’. ಬೃಹತ್ ಕ್ಯಾನ್ವಾಸ್, ನಿಗೂಢತೆ ಹಾಗೂ ವಿಭಿನ್ನ ಕಾಲಘಟ್ಟಗಳ ಕಥಾಹಂದರ ಹೊಂದಿರುವ ಈ ಫ್ಯಾಂಟಸಿ ಡ್ರಾಮಾದಿಂದ ಇದೀಗ ಮಾಸ್ ಸಾಂಗ್ ಒಂದು ಬಿಡುಗಡೆಯಾಗಿ […]

ಆರ್ಯನ್ ಸಂತೋಷ್ ನಿರ್ದೇಶನದ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’ ಸಿನಿಮಾದಿಂದ ಮಾಸ್ ಸಾಂಗ್ ರಿಲೀಸ್: ಕುತೂಹಲ ಮೂಡಿಸಿದ ಫ್ಯಾಂಟಸಿ ಡ್ರಾಮಾ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಆರ್ಯನ್ ಸಂತೋಷ್ ಈಗ ನಿರ್ದೇಶಕರಾಗಿ ಹೊಸ ಹೆಜ್ಜೆ ಇಡುತ್ತಿದ್ದಾರೆ. ಅವರು ನಟಿಸಿ, ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಮಹತ್ವಾಕಾಂಕ್ಷೆಯ ಸಿನಿಮಾ ‘ಚೆಂಕೋಲ್: ದಿ ಲಾಸ್ಟ್ ಕಿಂಗ್‌ಡಮ್’. ಬೃಹತ್ ಕ್ಯಾನ್ವಾಸ್, ನಿಗೂಢತೆ ಹಾಗೂ ವಿಭಿನ್ನ ಕಾಲಘಟ್ಟಗಳ ಕಥಾಹಂದರ ಹೊಂದಿರುವ ಈ ಫ್ಯಾಂಟಸಿ ಡ್ರಾಮಾದಿಂದ ಇದೀಗ ಮಾಸ್ ಸಾಂಗ್ ಒಂದು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. “ಅತಿಶಯ ಪುಲಿ ಕಲಾ ನೋಡಿದ್ಯಾ ಇವ್ನಾ.. ಕ್ಲೀನ್ ಶೇವ್ ತಿಳಿ ಮೈಕಟ್ ಫೇರ್ ಆದ ಬಣ್ಣ..” ಎಂಬ ಸಾಹಿತ್ಯವಿರುವ ಈ ಗೀತೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದು, ಚಿತ್ರದಲ್ಲಿ ಆರ್ಯನ್ ನಿರ್ವಹಿಸಿರುವ ‘ಡಿಜೆ ಸಂತು’ ಪಾತ್ರದ ಖದರ್ ಅನ್ನು ಪರಿಚಯಿಸಿದೆ.

ಚಿತ್ರದ ಶೀರ್ಷಿಕೆಯಾಗಿರುವ ‘ಚೆಂಕೋಲ್’ ನ್ಯಾಯಯುತ ಅಧಿಕಾರ ಮತ್ತು ಆಳ್ವಿಕೆಯ ಸಂಕೇತವಾಗಿದೆ. ಈ ಕಥೆಯು ಪ್ರಮುಖವಾಗಿ ಎರಡು ಕಾಲಘಟ್ಟಗಳಲ್ಲಿ ಸಾಗಲಿದೆ. ಬೆಂಗಳೂರಿನಿಂದ ಕೇರಳದವರೆಗೆ ಸಾಗುವ ಕಥೆಯಲ್ಲಿ ಮೊದಲಾರ್ಧದಲ್ಲಿ ಇಂದಿನ ಕಾಲಘಟ್ಟದ ‘ಡಿಜೆ ಸಂತು’ ಪಾತ್ರವನ್ನು ತೋರಿಸಲಾಗುತ್ತದೆ. ಇನ್ನೂ ಈಗ ರಿಲೀಸ್ ಆಗಿರುವ ಹಾಡನ್ನು ಬರೆದು ಸಂಯೋಜಿಸಿ ಹಾಡಿರುವುದು ಆಲ್ ಓಕೆ ಅಲೋಕ್ ಅವರು. ಈ ಹಾಡಿನಲ್ಲಿ ತಮಿಳಿನ ಖ್ಯಾತ ನಟಿ ದಿಯಾ ಶಾರದಾ ಕಾಣಿಸಿಕೊಂಡಿರೋದು ವಿಶೇಷ.

ಈ ಚಿತ್ರದಲ್ಲಿ ಮಹಿಳಾ ಪಾತ್ರವರ್ಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ನಾಲ್ವರು ಪ್ರತಿಭಾವಂತ ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಖ್ಯಾತಿಯ ಮಾನಸ್ವಿ ಮನು ಕಥೆಯ ಕೇಂದ್ರ ಬಿಂದುವಾದ ‘ಮಹಿಮಾ’ ಪಾತ್ರದಲ್ಲಿ ನಟಿಸಿದ್ದು, ಸಮಕಾಲೀನ ಸನ್ನಿವೇಶವನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ಬೆಸೆಯುವ ಜವಾಬ್ದಾರಿ ಇವರ ಮೇಲಿದೆ. ಇವರೊಂದಿಗೆ ಮಲಯಾಳಂನಿಂದ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿರುವ ಶರಣ್ಯ ‘ಪಾರ್ವತಿ’ ಪಾತ್ರದಲ್ಲೂ, ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ಅಕ್ಷಿತಾ ಬೋಪಯ್ಯ ‘ಚಿರಕ್ಕಲ್ ದೇವಿ’ ಪಾತ್ರದಲ್ಲೂ ಮತ್ತು ಪೂಜಾ ಶೆಟ್ಟಿ ಚಿರಕ್ಕಲ್ ಸಾಮ್ರಾಜ್ಯದ ರಾಜಕುಮಾರಿಯ ಪಾತ್ರದಲ್ಲೂ ಅಭಿನಯಿಸಿದ್ದಾರೆ.

ತಾರಾಗಣದಲ್ಲಿ ಆರ್ಯನ್ ಸಂತೋಷ್, ಮಾನಸವಿ, ಶರಣ್ಯ, ಅಕ್ಷಿತಾ ಬೋಪಯ್ಯ, ಪೂಜಾ ಶೆಟ್ಟಿ ಅವರೊಂದಿಗೆ ಮಹಾಂತೇಶ್, ಅರವಿಂದ್ ರಾವ್, ಅರುಣಾ ಬಾಲರಾಜ್, ಸುಂದರ್ ವೀಣಾ, ನಂದ ಕಿಶೋರ್, ವಂಶಿ ಉದಯ್, ವಿಜಯ್ ರಾಜ್, ಸಚಿನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

‘ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್’ ಮತ್ತು ‘ಪಿಕ್ಸಿ ಒರಿಜಿನಲ್ಸ್’ ಜಂಟಿಯಾಗಿ ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿವೆ. ಆರ್ಯನ್ ಸಂತೋಷ್ ಅವರೇ ಕಥೆ ಬರೆದಿದ್ದು, ಎಲ್.ಆರ್.ಜೀವನ್, ಎಸ್.ಕೆ.ಸಂತೋಷ್ ಹಾಗೂ ಮಿಧುನ್ ಸಂಭಾಷಣೆ ರಚಿಸಿದ್ದಾರೆ. ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತ ಹಾಗೂ ಜೋ ಕೋಸ್ಟಾ – ಗೌತಮ್ ದಾಸ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ವಿಪಿಂದ್ ವಿ ರಾಜ್ ಛಾಯಾಗ್ರಹಣ ಹಾಗೂ ಉಮೇಶ್ ಆರ್.ಬಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.