Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನವೆಂಬರ್ 6ಕ್ಕೆ “ಭಾವಾಂತರ”
- ಸಿನಿಮಾ

ನವೆಂಬರ್ 6ಕ್ಕೆ “ಭಾವಾಂತರ”

ನವೆಂಬರ್ 6ರಂದು ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆ. ‘ಭಾವಾಂತರ’ ಸಿನಿಮಾದ ಟ್ರೇಲರ್‌ ಈಗಾಗಲೇ ಸದ್ದು ಮಾಡುತ್ತಿದೆ. ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಗೀತ ನೀಡಿ, ನಟಿಸಿ, ನಿರ್ದೇಶಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಬಹಿರಂಗಗೊಂಡಿದೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ಜೊತೆಗೆ ಟ್ರಾನ್ಸ್‌ಜೆಂಡರ್ ಸಮುದಾಯದ ಬದುಕು, ಭಾವನೆಗಳು, ನೋವು ಹಾಗೂ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರವನ್ನು ನವೆಂಬರ್‌ 6ರಂದು ತೆರೆಗೆ […]

ನವೆಂಬರ್ 6ರಂದು ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆ.

‘ಭಾವಾಂತರ’ ಸಿನಿಮಾದ ಟ್ರೇಲರ್‌ ಈಗಾಗಲೇ ಸದ್ದು ಮಾಡುತ್ತಿದೆ. ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಸಂಗೀತ ನೀಡಿ, ನಟಿಸಿ, ನಿರ್ದೇಶಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಬಹಿರಂಗಗೊಂಡಿದೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರದಲ್ಲಿ ತ್ರಿಕೋನ ಪ್ರೇಮಕಥೆಯ ಜೊತೆಗೆ ಟ್ರಾನ್ಸ್‌ಜೆಂಡರ್ ಸಮುದಾಯದ ಬದುಕು, ಭಾವನೆಗಳು, ನೋವು ಹಾಗೂ ಹೋರಾಟವನ್ನು ಅತ್ಯಂತ ಸೂಕ್ಷ್ಮವಾಗಿ ಕಟ್ಟಿಕೊಡಲಾಗಿದೆ. ಈ ಚಿತ್ರವನ್ನು ನವೆಂಬರ್‌ 6ರಂದು ತೆರೆಗೆ ತರಲಾಗುತ್ತಿದೆ.

ಹಳ್ಳಿಯೊಂದರಲ್ಲಿ ನಡೆದ ವಿಶಿಷ್ಟ ಹಬ್ಬದ ಆಚರಣೆಯ ಎಳೆಯನ್ನಿಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ಈವರೆಗೆ ಬಂದಿರುವ ಮಂಗಳಮುಖಿಯರ ಕುರಿತಾದ ಕಥೆಗಳಿಗಿಂತ ಇದು ಸಂಪೂರ್ಣ ಭಿನ್ನವಾಗಿದ್ದು, ಸುಮಾರು ಶೇ. 80ರಷ್ಟು ಜನರಿಗೆ ತಿಳಿಯದ ಅಚ್ಚರಿಯ ಆಚರಣೆ ಹಾಗೂ ವಾಸ್ತವ ಸಂಗತಿಗಳು ಸಿನಿಮಾದಲ್ಲಿರಲಿವೆ. ಬರವಣಿಗೆ, ನಟನೆ ಮತ್ತು ಸಂಗೀತ ಎಲ್ಲವನ್ನೂ ತಾವೇ ನಿಭಾಯಿಸಿರುವ ಕಾರ್ತಿಕ್, ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶನಕ್ಕೂ ಕಾಲಿಟ್ಟಿದ್ದಾರೆ.

ಚಿತ್ರದಲ್ಲಿ ‘ರಾಧೆ’ ಎಂಬ ಪ್ರಮುಖ ಪಾತ್ರಕ್ಕೆ ನಟಿ ತನ್ವಿ ರಾವ್ ಜೀವ ತುಂಬಿದ್ದಾರೆ. ‘ಶನಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ನಟ ಪ್ರಣವ್ ಶ್ರೀಧರ್ ‘ಅಭಿಮನ್ಯು’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಶರ್ಮಾ ಅವರು ‘ಮಾಧವ’ ಮತ್ತು ‘ಮಾಧವಿ’ ಎಂಬ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇವರೊಂದಿಗೆ ಶ್ರೀ ವೈಷ್ಣವ್ ‘ಬ್ಯಾಟರಿ’ ಪಾತ್ರದಲ್ಲಿ ಹಾಗೂ ತ್ರಿವೇಣಿ ಪಾತ್ರದಲ್ಲಿ ವೇದಾ ರಾವ್ ನಟಿಸಿದ್ದಾರೆ.

ಕಾರ್ತಿಕ್ ಶರ್ಮಾ, ಪ್ರತಾಪ್ ಕೃಷ್ಣ ಮತ್ತು ಮನೋಜ್ ಕುಮಾರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸಾಗರ್ ಆಥಡ್ಕರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಂಸ್ಥೆ ‘ಹೊಂಬಾಳೆ ಮ್ಯೂಸಿಕ್’ ಭಾವಾಂತರ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದೆ. ಅಪರೂಪದ ಕಥಾವಸ್ತು, ಭಾವನಾತ್ಮಕ ಸನ್ನಿವೇಶಗಳು ಮತ್ತು ಹೊಸ ತಲೆಮಾರಿನ ತಂತ್ರಜ್ಞರ ಶ್ರಮದಿಂದ ಮೂಡಿಬಂದಿರುವ ‘ಭಾವಾಂತರ’ ಸಿನಿಮಾ ನವೆಂಬರ್‌ 6ರಂದು ದೀಪಾವಳಿ ಹಬ್ಬದ ಕೊಡುಗೆಯಾಗಿ ತೆರೆಗೆ ಬರಲು ಸಜ್ಜಾಗಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.