Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹೇಗಿದೆ “ನೀ ನಂಗೆ ಅಲ್ಲವಾ” ಟ್ರೈಲರ್
- ಸಿನಿಮಾ

ಹೇಗಿದೆ “ನೀ ನಂಗೆ ಅಲ್ಲವಾ” ಟ್ರೈಲರ್

ಕನ್ನಡ ಚಿತ್ರರಂಗದ ಆರು ಖ್ಯಾತ ನಿರ್ದೇಶಕರಿಂದ ‘ನೀ ನಂಗೆ ಅಲ್ಲವಾ’ ಟ್ರೇಲರ್ ಅನಾವರಣ ‘ನೀ ನಂಗೆ ಅಲ್ಲವಾ’ ಚಿತ್ರಕ್ಕೆ ಕನ್ನಡ ಚಿತ್ರರಂಗದ ನಿರ್ದೇಶಕರ ಬೆಂಬಲ. ಟ್ರೇಲರ್‌ಗೆ ಮೆಚ್ಚುಗೆ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆಯಲು ಸಜ್ಜಾಗಿರುವ ‘ನೀ ನಂಗೆ ಅಲ್ಲವಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಅನಾವರಣಗೊಂಡಿತು. ಜಯರಾಮ್ ದೇವಸಮುದ್ರ ಅವರ ನಿರ್ಮಾಣ ಹಾಗೂ ಮನೋಜ್ ಪಿ. ನಡಲಮನೆ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ […]

ಕನ್ನಡ ಚಿತ್ರರಂಗದ ಆರು ಖ್ಯಾತ ನಿರ್ದೇಶಕರಿಂದ ‘ನೀ ನಂಗೆ ಅಲ್ಲವಾ’ ಟ್ರೇಲರ್ ಅನಾವರಣ

‘ನೀ ನಂಗೆ ಅಲ್ಲವಾ’ ಚಿತ್ರಕ್ಕೆ ಕನ್ನಡ ಚಿತ್ರರಂಗದ ನಿರ್ದೇಶಕರ ಬೆಂಬಲ. ಟ್ರೇಲರ್‌ಗೆ ಮೆಚ್ಚುಗೆ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆಯಲು ಸಜ್ಜಾಗಿರುವ ‘ನೀ ನಂಗೆ ಅಲ್ಲವಾ’ ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ಧೂರಿಯಾಗಿ ಅನಾವರಣಗೊಂಡಿತು. ಜಯರಾಮ್ ದೇವಸಮುದ್ರ ಅವರ ನಿರ್ಮಾಣ ಹಾಗೂ ಮನೋಜ್ ಪಿ. ನಡಲಮನೆ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಶಶಾಂಕ್, ಪವನ್ ಒಡೆಯರ್, ಬಹದ್ದೂರ್ ಚೇತನ್, ಮಹೇಶ್ ಕುಮಾರ್, ರೋಹಿತ್ ಪದಕಿ ಹಾಗೂ ಗುರುದತ್ ಗಾಣಿಗ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇವರ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಅನಾವರಣಗೊಂಡಿತು. ‘ಪ್ರೇಮದ ಊರಲಿ’ ಚಿತ್ರದ ನಿರ್ಮಾಪಕ ದೇವೇಂದ್ರ ಅವರೂ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಟ್ರೇಲರ್ ವೀಕ್ಷಿಸಿದ ನಿರ್ದೇಶಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಚಿತ್ರದ ಕಥೆ ಹಾಗೂ ನಿರೂಪಣೆ ಕುತೂಹಲ ಮೂಡಿಸಿದೆ. ಸಂಗೀತ ಹಾಗೂ ಛಾಯಾಗ್ರಹಣ ಕೂಡ ಚೆನ್ನಾಗಿದೆ. ಸಿನಿಮಾ ಯಶಸ್ಸು ಕಾಣಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ನಿರ್ದೇಶಕರ ಈ ಮೆಚ್ಚುಗೆ ಹಾಗೂ ಬೆಂಬಲ ಚಿತ್ರತಂಡದ ಉತ್ಸಾಹವನ್ನು ಹೆಚ್ಚಿಸಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಾಪಕ ಜಯರಾಮ್ ದೇವಸಮುದ್ರ, ಹೊಸ ಪ್ರತಿಭೆಗಳ ಕನಸುಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಈ ಚಿತ್ರವನ್ನು ನಿರ್ಮಿಸಿರುವುದಾಗಿ ತಿಳಿಸಿದರು. ಒಂದು ಸಿನಿಮಾ ರೂಪುಗೊಳ್ಳುವ ಹಿಂದೆ ಕಲಾವಿದರು, ತಂತ್ರಜ್ಞರು ಸೇರಿದಂತೆ ಅನೇಕ ಮಂದಿಯ ಪರಿಶ್ರಮವಿರುತ್ತದೆ. ಪ್ರತಿಯೊಬ್ಬರ ಕನಸಿಗೂ ಪ್ರೋತ್ಸಾಹ ನೀಡುವುದು ಮುಖ್ಯ ಎಂದ ಅವರು, ತಮ್ಮ ಪ್ರಯತ್ನಕ್ಕೆ ಚಿತ್ರರಂಗದ ಗಣ್ಯರು ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು.

ನಿರ್ದೇಶಕ ಮನೋಜ್ ಪಿ. ನಡಲಮನೆ ಮಾತನಾಡಿ, ತಮ್ಮ ಚಿತ್ರದ ಟ್ರೇಲರ್ ಅನಾವರಣ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರು ಆಗಮಿಸಿ ಬೆಂಬಲ ನೀಡಿರುವುದು ದೊಡ್ಡ ಪ್ರೋತ್ಸಾಹ. ಸಿನಿಮಾ ಚೆನ್ನಾಗಿದೆಯೇ, ಪ್ರೇಕ್ಷಕರಿಗೆ ಇಷ್ಟವಾಗುತ್ತದೆಯೇ ಎಂಬುದನ್ನು ಅಂತಿಮವಾಗಿ ಪ್ರೇಕ್ಷಕರೇ ನಿರ್ಧರಿಸುತ್ತಾರೆ. ನಮ್ಮ ತಂಡ ಪ್ರಾಮಾಣಿಕವಾಗಿ ಪರಿಶ್ರಮ ಹಾಕಿದ್ದು, ಟ್ರೇಲರ್ ಇಷ್ಟವಾದರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ನಾಯಕ ರಾಹುಲ್ ಆರ್ಕಾಟ್ ಮಾತನಾಡಿ, ಇದು ತಮ್ಮ ಮೊದಲ ಸಿನಿಮಾವಾಗಿದ್ದು, ಆರಂಭದಲ್ಲೇ ಚಿತ್ರರಂಗದ ಖ್ಯಾತ ನಿರ್ದೇಶಕರ ಆಶೀರ್ವಾದ ಮತ್ತು ಮಾಧ್ಯಮದ ಮಿತ್ರರ ಬೆಂಬಲ ದೊರೆತಿರುವುದು ಸಂತೋಷ ತಂದಿದೆ ಎಂದರು. ಸುಮಾರು ಮೂರೂವರೆ ವರ್ಷಗಳ ಹಿಂದೆ ಆರಂಭವಾದ ಈ ಸಿನಿಮಾ ಪಯಣದಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಆದರೂ ನಿರ್ದೇಶಕ ಮನೋಜ್ ಸೇರಿದಂತೆ ತಂಡದ ಪ್ರತಿಯೊಬ್ಬರೂ ಪ್ರಯತ್ನ ಕೈಬಿಡದೆ ಶ್ರಮಿಸಿದ್ದಾರೆ. ಈ ಕನಸು ನನಸಾಗಲು ನೆರವಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ನಾಯಕಿ ಕಾಶಿಮಾ ಮಾತನಾಡಿ, ‘ನೀ ನಂಗೆ ಅಲ್ಲವಾ’ ಸಿನಿಮಾ ತಮ್ಮ ಪಾಲಿಗೆ ವಿಶೇಷವಾದದ್ದು. ಚಿತ್ರರಂಗದಲ್ಲಿ ಮುಂದುವರಿಯಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದ ಸಂದರ್ಭದಲ್ಲಿ ಮತ್ತೆ ಸಿನಿಮಾ ಮಾಡುವ ಭರವಸೆ ನೀಡಿದ ಚಿತ್ರವಿದು. ತಾವು ನಿರ್ವಹಿಸಿರುವ ‘ಖುಷಿ’ ಪಾತ್ರದಲ್ಲಿ ನಗು, ಅಳು, ನೋವು, ಸಂತೋಷ ಸೇರಿದಂತೆ ಹಲವು ಭಾವನೆಗಳಿಗೆ ಅವಕಾಶವಿದೆ. ಮಹಿಳೆಯರು ಸಮಾಜದಲ್ಲಿ ಎದುರಿಸುವ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಸವಾಲುಗಳನ್ನು ಚಿತ್ರದಲ್ಲಿ ನೈಜವಾಗಿ ಕಟ್ಟಿಕೊಡಲಾಗಿದೆ ಎಂದರು.

ನಾಯಕನ ತಂದೆಯ ಪಾತ್ರದಲ್ಲಿ ಅಭಿನಯಿಸಿರುವ ನಟ ಮಂಜುನಾಥ ಹೆಗಡೆ, ನಿರ್ದೇಶಕ ಮನೋಜ್ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ತಂಡದ ಕೆಲಸದ ಶೈಲಿ ಮೆಚ್ಚುವಂತದ್ದು ಎಂದರು.

ಇದೇ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಸೂರಜ್ ದೇಸಾಯಿ, ಛಾಯಾಗ್ರಾಹಕ ಉದಯ್ ಲೀಲಾ ಹಾಗೂ ಸೌಂಡ್ ಎಂಜಿನಿಯರ್ ನವೀನ್ ಕುಮಾರ್ ಕೂಡ ಚಿತ್ರದ ಕುರಿತು ಮಾತನಾಡಿ, ತಮ್ಮ ತಮ್ಮ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹಾಗೂ ಚಿತ್ರದ ವಿಶೇಷತೆಗಳನ್ನು ಹಂಚಿಕೊಂಡರು.

ರಾಹುಲ್ ಆರ್ಕಾಟ್, ಕಾಶಿಮಾ ಹಾಗೂ ಮಂಜುನಾಥ ಹೆಗಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ನೀ ನಂಗೆ ಅಲ್ಲವಾ’ ಚಿತ್ರ ನವೆಂಬರ್ 13ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಟ್ರೇಲರ್‌ಗೆ ಕನ್ನಡ ಚಿತ್ರರಂಗದ ನಿರ್ದೇಶಕರಿಂದ ವ್ಯಕ್ತವಾಗಿರುವ ಮೆಚ್ಚುಗೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.