“ಜಸ್ಕರಣ ಸಿಂಗ್” ಧ್ವನಿಯಲ್ಲಿ –
ನೀ ನಂಗೆ ಅಲ್ಲವಾ..!!
ಜಸ್ಕರಣ ಸಿಂಗ್ ಧ್ವನಿಯಲ್ಲಿ ಮೂಡಿಬಂದ
“ನೀ ನಂಗೆ ಅಲ್ಲವಾ” ಚಿತ್ರದ ಹಾಡು ಬಿಡುಗಡೆ ಆದನಂತರ ಮಾತನಾಡಿದ ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ,ಸೋಲ್ ಆಫ್ ನೀ ನಂಗೆ ಅಲ್ಲವಾ ಬೇರೆ ರೇಂಜ್ ನಲ್ಲಿರೋ ಕಂಟೆಂಟ್, ಆದ್ರೆ ಇವತ್ತು ರಿಲೀಸ್ ಆದಂತಹ “ನೀ ನಂಗೆ ಅಲ್ಲವಾ” ಹಾಡಿನ ಬಗ್ಗೆ ಮಾತಾಡುವಾಗ,ಹಾಡಲ್ಲಿತುಂಬಾ ವೆರಿಎಶನ್ ಇದೇ,ನಿರ್ದೇಶಕರೇ ಹಾಡನ್ನು ಬರೆದಿದ್ದಾರೆ, ನನ್ನೆಲ್ಲ ಸಿನಿಮಾಗಳನ್ನು ನೀವು ನೋಡಿದ್ದೀರಿ ಸಪೋರ್ಟ್ ಮಾಡಿದ್ದೀರಿ ಹಾಗೆ ಮತ್ತೊಂದು ವಿಷ್ಯ,ನಮ್ಮ ನೀ ನಂಗೆ ಅಲ್ಲವಾ ಚಿತ್ರ ಇದೇ ನವೆಂಬರ್ 13ಕ್ಕೆ ಬಿಡುಗಡೆ ಆಗ್ತಾ ಇದೆ ನೋಡಿ ಎಂದರು.
ನಾಯಕ ನಟ ರಾಹುಲ್ ಆರ್ಕುಟ್ ಮಾತನಾಡಿ,
ನಾವು ಮಾಡಿರೋ ಚಿತ್ರ ತುಂಬಾ ಒಳ್ಳೇ ಕಂಟೆಂಟ್ ಇಟ್ಕೊಂಡು ಮಾಡಿರೋ ಸಿನಿಮಾ,ತುಂಬಾ ವರ್ಷಗಳ ಕನಸು, ತುಂಬಾ ವರ್ಷಗಳ ಆಸೆ,ನವೆಂಬರ್ 13ಕ್ಕೆ ನಿಮ್ಮ ಮುಂದೆ ಬರ್ತಿದೆ,ಚಿತ್ರದ ಮೇಕಿಂಗ್ ಅದ್ಬುತ ಅನುಭವ ಕೊಟ್ಟಿದ್ದು,ಎಲ್ಲರ ಶ್ರಮ ತುಂಬಾ ದೊಡ್ಡ ಮಟ್ಟದಲ್ಲಿ ನಿಮಗೆ ಕಾಣತ್ತೆ
ನೋಡಿ ಹರಸಿ ಎಂದರು.
ಎಲ್ಲಿ ನೋಡಿದರೂ ಕಾಶಿಮಾ ವಿಡಿಯೋ ಗಳದ್ದೇ ಹವಾ ಎನ್ನುವುದು ಸತ್ಯ,ನಾಯಕಿ ಕಾಶಿಮಾ ಮಾತನಾಡಿ,ಪ್ರತಿಯೊಬ್ಬ ನಟಿಗೂ ತಾನು ನಟಿಸಿದ್ದ ಪಾತ್ರ,ಮಾಡಿರುವ ಸಿನಿಮಾದಲ್ಲಿ ಕೆಲವು ಅದ್ಬುತ ಶಕ್ತಿಗಳು ಜೊತೆಯಾಗಿ ಇರಬೇಕು ಅನ್ನೋ ಆಸೆ ಇರತ್ತೆ,ನನಗೆ ಈ ಚಿತ್ರ ಖುಷಿ ಕೊಟ್ಟಿದೆ ಅನ್ನಿಸ್ತು.
ಇದರಲ್ಲಿ ತುಂಬಾ ಒಳ್ಳೆ ಹಾಡಿಗೆ ಹೆಜ್ಜೆ ಹಾಕಿದ್ದೀನಿ,ನಾನೊಬ್ಬ ಒಳ್ಳೆ ಡ್ಯಾನ್ಸರ್,ಮೇಲಾಗಿ ನಮ್ಮ ಚಿತ್ರದ ಈ ಹಾಡಿಗೆ ಧ್ವನಿಯಾಗಿದ್ದು ಜಸ್ಕರಣ ಸಿಂಗ್ ಅನ್ನೋದು ನನಗೆ ಹೆಮ್ಮೆ ಎಂದರು.
ನಂತರ ಚಿತ್ರ ನಿರ್ದೇಶಕ
ಮನೋಜ್ ಪೀ ನಡಲುಮನೆ,ನಾನೊಬ್ಬ ಡೈರೆಕ್ಟರ್ ಆಗಿ ಈ ಹಾಡನ್ನು ಎಂಜಾಯ್ ಮಾಡೋದಕ್ಕಿಂತ ಒಬ್ಬ ಚಿತ್ರ ಸಾಹಿತಿಯಾಗಿ ಎಂಜಾಯ್ ಮಾಡಿದ್ದೀನಿ,ಕನ್ನಡ ಚಿತ್ರರಂಗದಲ್ಲಿ ಪ್ರೇಮದ ಊರಲಿ, ಬೇಲ್ ಚಿತ್ರಗಳು ತುಂಬಾ ಚೆನ್ನಾಗ್ ಆಗಿವೆ ನಮ್ಮ ಪ್ರೇಕ್ಷಕರು ನೀ ನಂಗೆ ಅಲ್ಲವಾ ಚಿತ್ರವನ್ನು ನೋಡ್ತಾರೆ ಅನ್ನೋ ಭರವಸೆ ನನಗಿದೆ ಎಂದರು.
ನೀ ನಂಗೆ ಅಲ್ಲವಾ ಚಿತ್ರದ ಎಲ್ಲ ಹಾಡುಗಳು ಸಾರೇಗಮಾ ಕನ್ನಡ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಿವೆ ಎಂದರು.
ಚಿತ್ರದ ಹಂಚಿಕೆದಾರ ಮನೋಜ್ ಮಾತನಾಡಿ, ನವೆಂಬರ್ 13ಕ್ಕೆ ರಾಜ್ಯಾದ್ಯಂತ ಅರವತ್ತಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗ್ತಿದೆ,ನೋಡ್ಕೊಂಡು ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಮಾಡೋ ಯೋಚನೆ ಇದೇ ಎಂದರು.
ಚಿತ್ರದ ತಾಂತ್ರಿಕ ವಿಭಾಗದ ಕೆಲಸಗಾರ
ಚಿತ್ರದ ಛಾಯಾಗ್ರಹ ಉದಯ್ ಲೀಲಾ ಮಾತನಾಡಿ,ಹಾಡಿನ ಮೇಕಿಂಗ್ ಅಂಡ್ ಸ್ಲೋ ಮೋಷನ್ ಬಗ್ಗೆ ಹೇಳಿದರು..
ನೀ ನಂಗೆ ಅಲ್ಲವಾ ಹಾಡು ಸಖತ್ ಸುದ್ದಿ ಮಾಡ್ತಾ ಇರುವ ಸಂಧರ್ಭ ಸಂಗೀತ ನಿರ್ದೇಶಕ,ಸೂರಜ್ ಜೋಯಿಸ್ ಮಾತನಾಡಿ,ಕೆಲಸ ಮಾಡಿದ ನಾವೆಲ್ಲರೂ ಖುಷಿ ಪಡೋದು ಯಾವಾಗ ಅಂದ್ರೆ,ನಮ್ಮ ಎಫರ್ಟ್ ದೊಡ್ಡ ಮಟ್ಟಕ್ಕೆ ರೀಚ್ ಆದಾಗ, ನೀ ನಂಗೆ ಅಲ್ಲವಾ ಚಿತ್ರದಲ್ಲಿ ಎಲ್ಲರಿಗೂ ಬೇಕಾದ ಹಾಡುಗಳಿವೆ,ಸ್ಪೆಷಲ್ ಆಗಿ ಜಸ್ಕರಣ ಸಿಂಗ್ ಧ್ವನಿಗೆ ಇಡೀ ಕರ್ನಾಟಕ ಫಿದಾ ಆಗಿದೆ,ನಮ್ಮ ಚಿತ್ರದ ಮೂಲಕ ಅವ್ರಿಗೆ ಗೌಡ್ರು ಅನ್ನೋ ಬ್ರ್ಯಾಂಡ್ ಕ್ಯಾರಿ ಮಾಡ್ತಾರೆ ಎಂದರು.
ರಾಮ್ ಕಿರಣ್ ಡಾನ್ಸ್ ಮಾಸ್ಟರ್,ಕನ್ನಡದ ಹಾಡೊಂದು ನ್ಯಾಷನಲ್ ಲೆವೆಲ್ ನಲ್ಲಿ ಸುದ್ದಿ ಮಾಡೋ ತರಹ ಪ್ರಯತ್ನ ಮಾಡ್ಬೇಕು ಅನ್ನೋ ನಮ್ಮ ಆಶಯ ಈಡೇರಿದೆ,ನೀ ನಂಗೆ ಅಲ್ಲವಾ ಹಾಡಿನಲ್ಲಿ ಕಾಶಿಮಾ ಹಾಕಿದ ಸ್ಟೆಪ್ಸ್ ನೋಡಿದ್ರೆ ನನಗೆ ಹೆಮ್ಮೆ ಆಯ್ತು,ನಮ್ಮ ಇಂಡಸ್ಟ್ರಿ ಕಾಶಿಮಾ ಅವರಿಗೆ ಬಹಳಷ್ಟು ಅವಕಾಶಗಳು ಸಿಗ್ಬೇಕು ಅನ್ನೋ ಆಸೆ ನನಗೆ,ಹೀರೋ ರಾಹುಲ್ ಆರ್ಕುಟ್ ನೋಡೋದಕ್ಕೆ ಯಶ್ ತರಹ ಕಾಣ್ತಾರೆ, ಅವರಿಗೂ ಒಳ್ಳೇ ಅವಕಾಶ ಸಿಗಲಿ ಎಂದು ವಿಶ್ ಮಾಡಿದ್ರು.

ನಂತರ ಕೊನೆಯದಾಗಿ,ಚಿತ್ರ ತಂಡದ ಇನ್ನಿತರ ಎಲ್ಲ ಕಲಾವಿದರು ಮಾತನಾಡಿ,ನಾವು ಈ ಚಿತ್ರದಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದೀವಿ ಅನ್ನೋದನ್ನು ಹೊರತುಪಡಿಸಿ,ನಮಗೆ ನೀ ನಂಗೆ ಅಲ್ಲವಾ ಹಾಡನ್ನು ನೋಡಿದಾಗ, ಕಾಶಿಮಾ ಮತ್ತು ರಾಹುಲ್ ಆರ್ಕುಟ್ ಡಾನ್ಸ್ ನೋಡಿದಾಗ ಖುಷಿ ಆಯ್ತು, ಭವಿಷ್ಯದಲ್ಲಿ ಇದೊಳ್ಳೆ ಜೋಡಿ ಆಗತ್ತೆ ಎಂದು ಹಾರೈಸಿದರು.
ಚಿತ್ರ ನವೆಂಬರ್ 13ಕ್ಕೆ ರಿಲೀಸ್ ಆಗ್ತಾ ಇದ್ದು,ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.
ರವೀ ಸಾಸನೂರ್ MasterNews365.Com

