Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಡಾರ್ಲಿಂಗ್ ಕೃಷ್ಣನ ಕೈಲಿ –ಅಮರ್ಥ ಟ್ರೈಲರ್
- ಸಿನಿಮಾ

ಡಾರ್ಲಿಂಗ್ ಕೃಷ್ಣನ ಕೈಲಿ –ಅಮರ್ಥ ಟ್ರೈಲರ್

ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವಿಯದ ನೆನಪು, ಕಿಚ್ಚ ಸುದೀಪ್ ಅವರೇ ನಟಿಸಿ ನಿರ್ದೇಶನ ಮಾಡಿದ ಮೈ ಆಟೋಗ್ರಾಫ್ ಚಿತ್ರದ ಈ ಒಂದು ಲೈನ್ ನೆನಪಿಗೆ ಕಾರಣ ಬಾಲ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಬಾಲ್ಯ ತನ್ನದೇ ಆದಂತಹ ವಿಶೇಷ ನರಗನ್ನ ಹೊಂದಿರುತ್ತದೆ ಅದು ನಾನಾಗಲಿ ನೀವಾಗಲಿ ಅಥವಾ ಓದುಗರಾಗಲಿ. ಬಾಲ್ಯದಲ್ಲಿ ಮನೆಯಲ್ಲಿ ಆಗುವ ತುಂಟಾಟದ ಪ್ರಸಂಗಗಳು ಪ್ರಾಥಮಿಕ ಹಂತದಲ್ಲಿ ಆಗುವಂತಹ ಒಂದಷ್ಟು ಕಲಿಕೆಯ ಹಾಸ್ಯಮಯ ಪ್ರಸಂಗಗಳು ಅದೇ ರೀತಿ ಯಾವಾಗ ನಾವು ಮಾಧ್ಯಮಿಕ […]

ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕು ಸವಿಯದ ನೆನಪು, ಕಿಚ್ಚ ಸುದೀಪ್ ಅವರೇ ನಟಿಸಿ ನಿರ್ದೇಶನ ಮಾಡಿದ ಮೈ ಆಟೋಗ್ರಾಫ್ ಚಿತ್ರದ ಈ ಒಂದು ಲೈನ್ ನೆನಪಿಗೆ ಕಾರಣ ಬಾಲ್ಯ.

ಪ್ರತಿಯೊಬ್ಬರ ಜೀವನದಲ್ಲಿಯೂ ಸಹ ಬಾಲ್ಯ ತನ್ನದೇ ಆದಂತಹ ವಿಶೇಷ ನರಗನ್ನ ಹೊಂದಿರುತ್ತದೆ ಅದು ನಾನಾಗಲಿ ನೀವಾಗಲಿ ಅಥವಾ ಓದುಗರಾಗಲಿ.

ಬಾಲ್ಯದಲ್ಲಿ ಮನೆಯಲ್ಲಿ ಆಗುವ ತುಂಟಾಟದ ಪ್ರಸಂಗಗಳು ಪ್ರಾಥಮಿಕ ಹಂತದಲ್ಲಿ ಆಗುವಂತಹ ಒಂದಷ್ಟು ಕಲಿಕೆಯ ಹಾಸ್ಯಮಯ ಪ್ರಸಂಗಗಳು ಅದೇ ರೀತಿ ಯಾವಾಗ ನಾವು ಮಾಧ್ಯಮಿಕ ಅಂದರೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಹೋಗುತ್ತೇವೆ ಅಲ್ಲಿಂದ ನಮ್ಮ ಬದುಕಿನ ಶೈಲಿ ಸ್ವಲ್ಪ ಚೇಂಜ್ ಆಗುತ್ತದೆ,

ಜೀವನದಲ್ಲಿ ಹಠ ಮತ್ತು ಸಾಧನೆ ಜೊತೆಗೆ ಪ್ರೀತಿ ಪ್ರೇಮದ ಕುರಿತಾಗಿ ಸಣ್ಣ ಮೊಳಕೆ ಪ್ರತಿಯೊಬ್ಬರ ಜೀವನದಲ್ಲಿ ಒಡೆಯಲು ಶುರುಮಾಡುತ್ತದೆ.

ಹೈಸ್ಕೂಲಿನಲ್ಲಿ ನಡೆಯುವಂತಹ ಜೀವನದ ಪ್ರಕ್ರಿಯೆ ಕಾಲೇಜು ಹಂತಕ್ಕೆ ಹೋಗುವಷ್ಟರಲ್ಲಿ ಅದಕ್ಕೊಂದು ಬೇರೆ ರೂಪ ಬಂದಿರುತ್ತದೆ, ಈಕೆ ನನ್ನ ಇಷ್ಟದ ಹುಡುಗಿ ಎಂದು ಹುಡುಗರು, ಅವನೇ ನನ್ನ ಇಷ್ಟದ ಹುಡುಗ ಎನ್ನುವ ಹುಡುಗಿಯರು, ಇದಲ್ಲದರ ಮಧ್ಯೆ ಹೇಳಿಕೊಳ್ಳುವ ಪ್ರೀತಿ ಒಂದು ಕಡೆಯಾದರೆ ಹೇಳದೆ ನಮ್ಮಲ್ಲಿಯೇ ಉಳಿದುಕೊಳ್ಳುವ ಪ್ರೀತಿ ಮತ್ತೊಂದೆಡೆ.

ಹೈಸ್ಕೂಲು ಮತ್ತು ಕಾಲೇಜ್ ದಿನಗಳಲ್ಲಿ ನಡೆಯುವಂತಹ ಪ್ರೇಮ ಕಥೆಗಳ ಮೇಲೆ ಬಹಳಷ್ಟು ಸಿನಿಮಾಗಳು ಈಗಾಗಲೇ ಬಂದಿದ್ದು, ಇದಕ್ಕೆ ಹೊಂದುವಂತಹ ಮತ್ತೊಂದು ಶುದ್ಧ ಕನ್ನಡ ಚಿತ್ರ ಈ ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರದ ಹೆಸರು ಅಮರ್ಥ ಎಂದು.

ಗುರು ಹೆಗ್ಡೆ, ವಿನಯ್ ಪ್ರೀತಮ್ ಜಂಟಿ ನಿರ್ದೇಶನದ, ಡಾ||ಕನ್ಯಾನ ಸದಾಶಿವ ಶೆಟ್ಟಿ,ಗುರು ಹೆಗ್ಡೆ ನಿರ್ಮಾಣದ ಹಾಗೂ ಶ್ರೀನಗರ ಕಿಟ್ಟಿ, ಮೇಘನಾರಾಜ್, ಗುರು ಹೆಗ್ಡೆ, ಉಷಾ ಭಂಡಾರಿ, ಮಂಜು ಭಾಷಿಣಿ ಮುಂತಾದವರ ಅಭಿನಯದ “ಅಮರ್ಥ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಬೆಂಗಳೂರು ನಗರದ ಒರಾಯನ್ ಮಾಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು,
ಅಮರ್ಥ ಚಿತ್ರದ ಟ್ರೈಲರ್ ಲಂಚ್ ಮಾಡಿಕೊಟ್ಟವರು ಮುಖ್ಯ ಅತಿಥಿಗಳಾಗಿ ಬಂದಿದ್ದ ಡಾರ್ಲಿಂಗ್ ಕೃಷ್ಣ.

ಫೈನಲ್ ಲಾಂಚ್ ಮಾಡಿದ ನಂತರ ಮಾತನಾಡಿದ ಡಾರ್ಲಿಂಗ್, ನನಗೆ ಇತರದ ಕಥೆಗಳು ತುಂಬಾ ಇಷ್ಟ ಆಗುತ್ತವೆ, ಅದರಲ್ಲೂ ವಿಶೇಷವಾಗಿ ಪ್ರೀತಿ ಪ್ರೇಮ ಮತ್ತು ಎಮೋಷನಲ್ ಕಂಟೆಂಟ್ ಕ್ಯಾರಿ ಮಾಡುವಂತಹ ಕಥೆಗಳು ಜನರ ಮನಸ್ಸನ್ನು ತುಂಬಾ ಹತ್ತಿರದಿಂದ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತವೆ ಹೀಗಾಗಿ ಹಲವು ಜನ ನನಗೆ ಲವ್ ಸ್ಟೋರಿಸ್ ಇಷ್ಟ.

ತುಂಬಾ ವರ್ಷಗಳಿಂದ ತಮ್ಮ ವಿಭಿನ್ನ ಮತ್ತು ಸೆನ್ಸಿಬಲ್ ನಟನೆಯಿಂದ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿರುವ, ಶ್ರೀನಗರ ಕಿಟ್ಟಿ ಮತ್ತು ಮೇಘನಾ ರಾಜ್ ಸರ್ಜಾ ಇಬ್ಬರ ಕಾಂಬಿನೇಷನ್ ತೆರೆಯ ಮೇಲೆ ತುಂಬಾ ಇಂಪ್ರೆಸ್ಟಿವ್ ಆಗಿ ಕಾಣುತ್ತಿದೆ.

ಕನ್ನಡದ ವೀಕ್ಷಕರು ಎಮೋಷನಲ್ ಕಂಟೆಂಟ್ ಇರುವ ಫ್ಯಾಮಿಲಿ ಡ್ರಾಮಾ ಗಳ ಚಿತ್ರಗಳನ್ನು ತಪ್ಪದೆ ನೋಡುತ್ತಾರೆ,ಅಂತಹ ಸಂಖ್ಯೆ ಕಮ್ಮಿಯಾಗಿಲ್ಲ ಎಂದರು.

ಈದೊಂದು ತುಂಬ ಸರಳವಾದ ಕಥೆ ಹೊಂದಿರುವ ಸಿನಿಮಾ, ಕಥೆಗೆ ಬೇಕಾದಂತಹ ಪಾತ್ರಗಳ ಆಯ್ಕೆ ವಿಚಾರದಲ್ಲಿ ನಿರ್ದೇಶಕ ಗುರು ಹೆಗಡೆ ಮತ್ತು ವಿನಯ ಇಬ್ಬರು ಗೆದ್ದಿದ್ದಾರೆ.

ನಾನು ಮತ್ತು ಮೇಘನಾ ಇಬ್ಬರು ಮೂರು ಚಿತ್ರಗಳಲ್ಲಿ ಒಟ್ಟಿಗೆ ನಡೆಸಿದ್ದೇವೆ, ಮೊದಲನೆಯದು ಬಹುಪರಾಕ್ ಎರಡನೇದು ಬುದ್ಧಿವಂತ2 ಅದಿನ್ನು ಬಿಡುಗಡೆ ಆಗಬೇಕಾಗಿದೆ ಅದನ್ನು ಬಿಟ್ಟರೆ ಅಮರ್ಥ ಸೆಪ್ಟೆಂಬರ್ 18ಕ್ಕೆ ಬಿಡುಗಡೆಯಾಗುತ್ತಿದೆ ಎಂದರು ಶ್ರೀನಗರ ಕಿಟ್ಟಿ..

ಕಿಟ್ಟಿ ಒಬ್ಬ ಸೆಟಲ್ ಆಕ್ಟರ್,ಇವರ ನಟನೆಯಲ್ಲಿ ತುಂಬಾ ಆಳವಾದ ಚಿಂತನೆ,ಗ್ರಹಿಕೆ ಇರುತ್ತದೆ,ಪಾತ್ರಕ್ಕೆ ಒಂದು ಹೆಜ್ಜೆ ಮುಂದೆ ಹೋಗಿ ಜೀವ ತುಂಬಬಲ್ಲ ನಟ ನಮ್ಮ ಕಿಟ್ಟಿ ಎಂದಿದ್ದು ಮೇಘನಾ ರಾಜ್.

ಇನ್ನು ನಿರ್ದೇಶಕ ಗುರು ಹೆಗಡೆ ಮಾತನಾಡಿ,ಸುಮಾರು 25 ವರ್ಷಗಳಿಂದ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತುಂಬಾ ಶ್ರಮವಹಿಸಿ ನಟನೆ ಮಾಡುತ್ತ,ಅನುಭವ ಪಡೆದ ನಂತರ ನಿರ್ದೇಶನಕ್ಕೆ ಹೆಜ್ಜೆ ಹಾಕಿದ್ದೇನೆ,ನನಗೆ ಸಾಥ್ ಕೊಟ್ಟಿದ್ದು ವಿನಯ್ ಪ್ರೀತಂ.

ಅಮರ್ಥ ಎಂಬಂತಹ ಬಹು ಅಪರೂಪದ ತನ್ನ ಚಿತ್ರತನ ಮತ್ತು ಚಿತ್ರ ವಿಮಶ್ರೆಗಳಿಗೂ ಮೀರಿದ ಏನೋ, ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಅಮರ್ಥ ಕೊಂಡಿದೆ ಅಂದಿದ್ದು
ಬಹಳ ವಿಶೇಷವಾಗಿತ್ತು

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.