ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆ ಹೆಜ್ಜೆ ಹಾಕಿದ ಮತ್ತು ಅವರ ಚಿತ್ರಗಳಲ್ಲಿ ನಟಿಸಿದ ಕನ್ನಡ ಸೇರಿ ಭಾರತೀಯ ಚಿತ್ರರಂಗದ ಎಲ್ಲ ಭಾಷೆಯ ತಾರೆಗಳು ಹಾಗೂ ನಾಯಕಿ ಮಣಿಯರು ತಮ್ಮದೇ ಆದಂತಹ ಇಮೇಜನ್ನ ಪಡೆದುಕೊಂಡಿದ್ದಲ್ಲದೆ, ಅಂತಹ ಕಲಾವಿದರು ಪ್ರಪಂಚದ ಯಾವುದೇ ಮೂಲೆಯಲ್ಲಿ ಹೋದರು ಸಹ ಅವರ ಸಿನಿಮಾಗಳ ಹೆಸರನ್ನು ಹೇಳುವುದರ ಜೊತೆಗೆ ಅವರು ಪುನೀತ್ ರಾಜಕುಮಾರ್ ಅವರ ಜೊತೆಗೆ ನಟಿಸಿದ ಚಿತ್ರಗಳ ಬಗ್ಗೆ ಹಾಡುಗಳ ಬಗ್ಗೆ ಪ್ರಸ್ತಾಪವಾಗುತ್ತಲೇ ಇರುತ್ತದೆ ಇದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಇರುವ ತಾಕತ್ತು ಹಾಗೂ ಅವರೊಟ್ಟಿಗೆ ತೆರೆ ಹಂಚಿಕೊಂಡ ಎಲ್ಲ ಕಲಾವಿದರಿಗೆ ಸಿಗುವ ಸೌಭಾಗ್ಯ ಎಂದರೆ ತಪ್ಪಿಲ್ಲ.
ಇಂತದ್ದೊಂದು ಮಹಾ ಸಂಭ್ರಮಕ್ಕೆ ಕಾರಣೀಭೂತರಾದವರು ಜಾಕಿ ಭಾವನಾ ಮೆನನ್.

ಕೇರಳ ಮೂಲದ ನಟಿ ಭಾವನಾ ಮೆನನ್,2002 ರಿಂದಲೇ ಸಿನಿಮಾ ಉದ್ಯಮದಲ್ಲಿ ಕೆಲಸ ಮಾಡಲು ಶುರು ಮಾಡಿದ್ದು, ಮಲಯಾಳಂ ಭಾಷೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿ ಪ್ರಸಿದ್ಧಿಯಲ್ಲಿದ್ದಂತಹ ಭಾವನ ಮೆನನ್ ಅವರಿಗೆ ಕನ್ನಡದಲ್ಲಿ ನಟಿಸುವ ಅವಕಾಶ ಸಿಕ್ಕಿತು ಅದುವೇ ಜಾಕಿ ಚಿತ್ರದ ಮೂಲಕ,
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೊತೆಗೆ ಹಾಕಿದ ಹೆಜ್ಜೆ ಮತ್ತು ಆ ವಿಶೇಷವಾದಂತಹ ಹಾಡು ಶಿವ ಅಂತ ಹೋಗುತ್ತಿದ್ದೆ ರೋಡಿನಲ್ಲಿ ಈ ಹಾಡನ್ನು ಯಾರು ತಾನೆ ಮರೆತಾರು ??
ಜಾಕಿ ಚಿತ್ರದ ನಂತರ ಭಾವನಾಮಿನನ್ ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳನ್ನ ಮಾಡಿದರು ಸಹ ಇವತ್ತಿಗೂ ಕನ್ನಡ ಚಿತ್ರಸಿಕರು ಹಾಗೂ ಕನ್ನಡ ಚಿತ್ರೋದ್ಯಮ ಭಾವನಾ ರನ್ನ ಜಾಕಿ ಭಾವನ ಅಂತಾನೆ ಅನುಮೋದಿಸುತ್ತದೆ ಇದು ಭಾವನಾ ಮನೆನವರಿಗೆ ಸಿಕ್ಕ ದೊಡ್ಡ ಅಸ್ತಿತ್ವ ಎಂದರೆ ತಪ್ಪಿಲ್ಲ.
ಸ್ಪಾರ್ಕ್ ಚಿತ್ರದ ಮತ್ತೊಂದು ಆಕರ್ಷಣೀಯ ಕೇಂದ್ರಬಿಂದು ಭಾವನಾ ಮೆನನ್.
ಸ್ಪಾರ್ಕ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಂಡ ಭಾವನಾ ಮೆನನ್,ತಾವು ಕನ್ನಡಿಗರು ನೀಡಿದ ಪ್ರೀತಿಯ ಅಭಿಮಾನವನ್ನ ಎಂದೂ ಮರೆಯುವುದಿಲ್ಲ ಹಾಗು 2024 ರಲ್ಲಿ ಬಿಡುಗಡೆಯಾದಂತಹ ಕೇಸ್ ಆಫ್ ಕೊಂಡಾಣ ಚಿತ್ರದ ನಂತರ ನಾನು ಕಾಣಿಸಿಕೊಂಡಿಲ್ಲ ಅದರಲ್ಲೂ ವಿಶೇಷವಾಗಿ ಕನ್ನಡದ ಮಾಧ್ಯಮ ಸ್ನೇಹಿತರನ್ನು ಭೇಟಿಯಾಗಿಲ್ಲ, ಮಹಾಂತೇಶ್ ಅಂದ್ರ ನಿರ್ದೇಶನದ ಪಾರ್ಕ್ ಚಿತ್ರದಲ್ಲಿ ಒಂದು ಒಳ್ಳೆಯ ಪಾತ್ರ ನಾನು ಮಾಡಿರುವುದರಿಂದ ಇವತ್ತಿನ ಪತ್ರಿಕಾಗೋಷ್ಠಿಯಲ್ಲಿ ನಿಮ್ಮೆಲ್ಲರನ್ನ ನೋಡಿ ಮಾತನಾಡುವ ಅವಕಾಶ ಸಿಕ್ಕಿತ್ತು ಎಂದರು ಭಾವನಾ ಮೆನನ್.
ಇಲ್ಲಿಯ ತನಕದ ನನ್ನ ಸಿನಿಮಾ ಕೆರಿಯರ್ ನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದೇನೆ ಎಲ್ಲ ಭಾಷೆಗಳಲ್ಲೂ ನಟಿಸಿದ್ದೇನೆ,ಆದರೆ ನನಗೆ ನಾನು ಮಾಡುವ ಪಾತ್ರ ಸವಾಲಿನಿಂದ ಕೂಡಿದ್ದರೆ ಮಾತ್ರ ಅಂತಹ ಚಿತ್ರಗಳು ನನ್ನನ್ನ ತುಂಬಾ ಕಾಡುತ್ತವೆ ಹಾಗೂ ಪ್ರೇಕ್ಷಕರತ್ತ ನನ್ನನ್ನ ಕರೆದುಕೊಂಡು ಹೋಗುತ್ತವೆ ಇದನ್ನ ನಾನು ತುಂಬಾ ಬಲವಾಗಿ ನಂಬಿದ್ದೇನೆ, ಇಂಥದೊಂದು ಪಾತ್ರ ಸ್ಪಾರ್ಕ್ ನಲ್ಲಿ ನನಗೆ ಸಿಕ್ಕಿದೆ ಎಂದರು ಭಾವನಾ ಮೆನನ್.
ಡಾಕ್ಟರ್ ಗರೀಮಾ ಮತ್ತು ಅವಿನಾಶ್ ನಿರ್ಮಾಣದಲ್ಲಿ ಬರುತ್ತಿರುವ ಮಹಾಂತೇಶ್ ಹಂದ್ರಾಳ ನಿರ್ದೇಶನದ ಸ್ಪಾರ್ಕ್ ಚಿತ್ರ ಈಗಾಗಲೇ ತನ್ನ ಕಂಟೆಂಟ್ ಮತ್ತು ಹಾಡುಗಳಿಂದ ಸುದ್ದಿ ಮಾಡಿದೆ, ಸೆಪ್ಟೆಂಬರ್ 25ರಂದು ಭರ್ಜರಿಯಾಗಿ ಬಿಡುಗಡೆಯಾಗುತ್ತಿರುವ ಸ್ಪಾರ್ಕ್ ಚಿತ್ರದ ಎಲ್ಲಾ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ಹಾಡುಗಳಲ್ಲಿ ಕಾಣಿಸಿಕೊಂಡಂತಹ ನಿರಂಜನ್ ಸುಧೀಂದ್ರ ಮತ್ತು ರಚನಾ ಇಂದರ ನೋಡುಗರ ಮನಸ್ಸನ್ನು ಕದ್ದಿದ್ದಾರೆ.
ನಿರಂಜನ ಸುಧೀಂದ್ರ ಮತ್ತು ರಚನಾ ಇಂದರ್ ಸೇರಿ ಈ ಚಿತ್ರದಲ್ಲಿ ನಟಿಸಿರುವಂತಹ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಹಾಂತೇಶ್ ಹಿರೇಮಠ್, ಧರ್ಮಣ್ಣ ಕಡೂರು, ವಿಜಯ್ ಚಂಡೂರ್ ಸೇರಿದಂತೆ ಇನ್ನೂ ಬಹುತಾರಾಗಣದ ಈ ಚಿತ್ರ ಎಲ್ಲ ವೀಕ್ಷಕರಿಗೆ ಮನೋರಂಜನೆಯ ಮಹಾಪೂರವನ್ನೇ ಹರಿಸಲಿದೆ ಎಂಬುದು ಸದ್ಯ ಗಾಂಧಿನಗರದಲ್ಲಿನ ಮಾತು.
ಕನ್ನಡದ ಚಿತ್ರಗಳು ಬಂದಾಗ ಅವುಗಳಿಗೆ ಅದರದೇ ಆದಂತ ಘನತೆ ಗಾಂಭೀರ್ಯ ಅನ್ನೋದು ಯಾವಾಗಲೂ ಇರುತ್ತದೆ, ಸ್ಪಾರ್ಕ್ ಚಿತ್ರದಲ್ಲಿ ತುಂಬಾ ಪ್ರಾಮಿಸಿಂಗ್ ಆಗಿ ಕಾಣಿಸಿಕೊಂಡಿರುವಂತಹ ನಿರಂಜನ್ ಸುಧೀಂದ್ರ ಮತ್ತು ಸಂಪೂರ್ಣ ಚಿತ್ರತಂಡ ಮಾಡಿದಂತಹ ಒಂದೊಳ್ಳೆಯ ಪ್ರಯತ್ನಕ್ಕೆ ಸ್ಪಾರ್ಕ್ ಚಿತ್ರದಲ್ಲಿ ಕಾಣಿಸಿಕೊಂಡ ಜಾಕಿ ಜಾತಿಯ ಭಾವನಾ ಮೆನನ್ ಕೂಡ ಒಂದು ಪ್ಲಸ್ ಪಾಯಿಂಟ್ ಆಗುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ.
ಸೆಪ್ಟಂಬರ್ 18ರಂದು, ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ,ರಿಯಲ್ ಸ್ಟಾರ್ ಉಪೇಂದ್ರ ಮತ್ತು ಶ್ರುತಿಯವರ ಹುಟ್ಟುಹಬ್ಬದ ಸಂಭ್ರಮವನ್ನ ಆಚರಿಸಿ ಅದೇ ದಿನಾಂಕದಂದು ಬಿಡುಗಡೆಯಾಗುವ ಎಲ್ಲಾ ಕನ್ನಡ ಚಿತ್ರಗಳನ್ನ ನೋಡಿ ಸಂಭ್ರಮಿಸುವಂತಹ ಅಭಿಮಾನಿ ದೇವರುಗಳಿಗೆ ಸೆಪ್ಟಂಬರ್ 25ರಂದು ಬರುವ ಸ್ಪಾರ್ಕ್ ಚಿತ್ರ ಕೂಡ ಎಲ್ಲರ ಮನಸ್ಸನ್ನು ಗೆಲ್ಲಲಿ ಎಂಬುದು ನಮ್ಮ ಆಶಯ
ರವೀ ಸಾಸನೂರ್ MasterNews365

