ಲವ್ Towords ಫ್ಯಾಮಿಲಿ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದ ಜೂನಿಯರ್ ಕ್ರೇಜಿಸ್ಟಾರ್ ಮನೋರಂಜನ್ ಮಾತನಾಡಿ,
ನಿರ್ದೇಶಕ ಚಂದ್ರ ಮೋಹನ್ ತುಂಬಾ ಒಳ್ಳೆಯ ಕೆಲಸಗಾರ ಅಂತಾ ಗೊತ್ತು,ಅವ್ರು ನಮ್ಮ ತಂದೆಯವರ ಜೊತೆಗೂ ಕೆಲಸ ಮಾಡಿದ್ದಾರೆ,ಹಾಡು ಚೆನ್ನಾಗಿದೆ,ತುಂಬಾ ಫ್ರೆಶ್ ಆಗಿದೆ ಕಲರ್ ಫುಲ್ ಆಗಿದೆ,ನಾಯಕ ಧೀರಜ್ ತುಂಬಾ ಪ್ರಾಮಿಸಿಂಗ್ ಆಗಿ ಕಾಣ್ತಾ ಇದಾರೆ ಎಂದು ಶುಭ ಹಾರೈಸಿದರು,ಅದೇ ರೀತಿಯಾಗಿ ಮತ್ತೊಬ್ಬ ಮುಖ್ಯ ಅಥಿತಿ ಜನನಾಯಕ ಪ್ರಮೋದ್ ಶ್ರೀನಿವಾಸ ಮಾತನಾಡಿ,ಕೈಲಾಸ ದೊಡ್ಡದಲ್ಲ ಕಾಯಕ ದೊಡ್ದದು ಯಾವುದು ಕೂಡಾ ಒಮ್ಮೆಲೇ ದೊಡ್ಡದಾಗುವುದಿಲ್ಲ ಪ್ರತಿಯೊಂದು ಕೆಲಸವು ಅದರದೇ ಆದ ಸಕ್ಸಸ್ ಸಮಯ ತೆಗೆದುಕೊಳ್ಳುತ್ತೆ ಎನ್ನುವುದರ ಮೂಲಕ ಹೊಸ ತಂಡಕ್ಕೆ ಶಕ್ತಿ ತುಂಬಿದರು.
ನಿರ್ಮಾಪಕ B S ಲಿಂಗರಾಜ ಬಿದರೆ ತಾವು ನಿರ್ಮಾಣ ಮಾಡ್ತಾ ಇರುವ ಈ ಕಥೆ, ಫ್ಯಾಮಿಲಿ ಕಂಟೆಂಟ್ಹೊಂದಿರುವುದರಿಂದ,ಚಿತ್ರ ಎಲ್ಲ ವೀಕ್ಷಕರನ್ನು ತಲುಪಿ,ನಮ್ಮ ಪ್ರಯತ್ನಕ್ಕೆ ಸಾರ್ಥಕತೆ ಸಿಗುತ್ತೆ ಎಂದರು.
ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದ ಒಂದು ಅವಿಭಾಜ್ಯ ಅಂಗವೆಂಬಂತೆ ಬರವಣಿಗೆ ಮತ್ತು ನಿರ್ದೇಶನದ ಕೆಲಸ ಮಾಡಿ ತಮ್ಮದೇ ಛಾಪು ಮೂಡಿಸಿರುವ,
ಭರ್ಜರಿ ಚೇತನ್ಕನ್ನಡಕ್ಕೆ ನಾಯಕ ನಟರ ಅವಶ್ಯಕತೆ ಇದೆ,ಹೊಸ ನಟ ಧೀರಜ್ ಅವರಲ್ಲಿ ಆ ಉತ್ಸಾಹ ಹುಮ್ಮಸ್ಸು ಕಾಣಿಸ್ತಾ ಇದೆ,ಇವತ್ತಿನ ಹಾಡು ನೋಡಿದಾಗ ನಾಗಾರ್ಜುನ ಶರ್ಮಾ ಮತ್ತೆ ಮ್ಯಾಜಿಕ್ ಮಾಡಿದ್ದಾರೆ,ಅವ್ರ ರೈಟಿಂಗ್ ಅದ್ಬುತ ಎಂದರು.ಎಂದಿನಂತೆ ಹಾಸ್ಯಮಯವಾಗಿ ಮಾತು ಶುರು ಮಾಡಿದ,ಮಂಜು ಪಾವಗಡಕಥೆ ಇಂಟ್ರೆಸ್ಟಿಂಗ್ ಆಗಿದೆ ಅನ್ನಿಸ್ತಾ ಇದೆ, ಹೀರೋಯಿನ್ ತುಂಬಾ ಚೆನ್ನಾಗ್ ಕಾಣ್ತಾ ಇದಾರೆ ಎಂದು ವೇದಿಕೆ ಮೇಲೆ ಮಾಡಿದ ತಮಾಷೆಯ ಮಾತೂ, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.
ಚಿತ್ರದ ಪ್ರಚಾರ ಕಾರ್ಯ ಮತ್ತು ಚಿತ್ರ ತಂಡಕ್ಕೆ ಸಹಾಯ ಮಾಡಲು ಜತೆ ನಿಂತಿರುವ ಮದಗಜ
ಮಹೇಶ್,ಸಿನಿಮಾ ವಿಚಾರ ಬಂದ್ರೆ ಸ್ವಂತ ಅಪ್ಪ ಅಮ್ಮನೇ ಮಕ್ಕಳಿಗೆ ಹಣ ಕೊಡೋದಕ್ಕೆ ಹಿಂದೆ ಮುಂದೆ ನೋಡ್ತಾರೆ,
ಅಂತಹದರಲ್ಲಿ ಹೊಸ ಹುಡುಗನನ್ನು ಸ್ಟಾರ್ ಮಾಡೋದು ದೊಡ್ಡ ರಿಸ್ಕ್.ಅಂತಹ ಸವಾಲ್ ಲವ್ Towords ಫ್ಯಾಮಿಲಿ ನಿರ್ಮಾಪಕರು ತಗೆದು ಕೊಂಡಿದ್ದಾರೆ ಎಂದರು.
ಸಾಂಗ್ ಲಾಂಚ್ ಈವೆಂಟಲ್ಲಿ ಸ್ಯಾಂಡಲ್ವುಡನ್ ನಾಯಕಿ ನಟಿಯರಾದಪ್ರಜ್ಞಾ,ರೆಮೋಲಾ,ಕಾಶಿಮಾ,ಪಾಯಲ್ ಚೆಂಗಪ್ಪ,ಎನರ್ಜಿ ಮಾತು ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಭರ್ಜರಿ ಚೇತನ್ ಸರ್,
ಬರೆದ ಏನಮ್ಮೀ ಏನಮ್ಮೀ ಗಿಂತಲೂ ಸೂಪರ್ ಲಿರಿಕ್ಸ್ ಬರೆಯೋದಕ್ಕೆ ನನಗೆ ಸ್ವಲ್ಪ ಕಷ್ಟ,ಯಾಕೆಂದರೆ ಅವ್ರು ಬರೆದು ಬಿಟ್ಟ ಉಳಿದ ಪದಗಳನ್ನು ನಾನು ಉಪಯೋಗಿಸಿ,ಹೊಸ ಪ್ರಯತ್ನಗಳನ್ನು ಮಾಡ್ತೀನಿ.ಲವ್ ಫ್ಯಾಮಿಲಿ ಕಂಟೆಂಟ್ ನಲ್ಲಿ,ಲವ್ ಇದೆ ಹಾಗೆ ಫ್ಯಾಮಿಲಿ ನು ಇದೆ,ಸೋ ಎಲ್ಲರು ಈ ಚಿತ್ರ ನೋಡ್ತಾರೆ ಅನ್ನೋ ನಂಬಿಕೆ ಇದೇ ಎಂದರು ಸಾಹಿತಿ ನಾಗಾರ್ಜುನ್ ಶರ್ಮಾ.

ಈ ಸಿನ್ಮಾ ಸುಮ್ನೇ ಆಗಿದ್ದಲ್ಲ, ಪಾರ್ಕ್ ನಲ್ಲಿ ಕೂತು ಈ ಸಿನಿಮಾ ಕಥೆ ಚರ್ಚೆ ಮಾಡಿದ್ವಿ,ತುಂಬಾ ದೊಡ್ಡ ರಿಸೋರ್ಸ್ ನಮಗೆ ಇರ್ಲಿಲ್ಲ,ಫೈನಲಿ ಮೂರನೇ ವರ್ಷನ್ ಕಥೆ ರೈಟಿಂಗ್ ಆದ್ಮೇಲೆ, ಶೂಟಿಂಗ್ ಪ್ಲಾನ್ ಮಾಡಿದ್ವಿ.2011 ರಿಂದ ನಾನು ಆಕ್ಟೀವ್ ಆಗಿದ್ದೀನಿ ಮೈಸೂರು ರಂಗವಲ್ಲಿ ಅಭಿನಯ ತರಬೇತಿಯಲ್ಲಿ ನಟನೆ ಕಲಿತೆ,ಆನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ದ ಮೂರನೇ ಬ್ಯಾಚ್ ಸ್ಟೂಡೆಂಟ್ ನಾನು,ತುಂಬಾ ಒಳ್ಳೆಯ ಗೋಲ್ ಇಟ್ಕೊಂಡು ಮಾಡಿದ ಚಿತ್ರ ಲವ್ Towards ಫ್ಯಾಮಿಲಿ ಎಂದು ಬಹಳ ಆತ್ಮವಿಶ್ವಾಸದಿಂದ ಹೇಳಿದ್ದು ನಾಯಕ ಧೀರಜ್.
ನಾಯಕಿ ಹೆಸರು ರಾಧೇ,ರಾಧೇ ಮಂಜುನಾಥ್,ತಾವು
ಆಡಿಷನ್ ಕೊಟ್ಟು ಆಯ್ಕೆಯಾದ ಚಿತ್ರ ಲವ್ ಫ್ಯಾಮಿಲಿ,ಇದು ನನ್ನ ಮೊದಲ ಚಿತ್ರ.ಇದಕ್ಕಿಂತ ಮೊದಲು ನಾನು ನಾಗ್ತಿಹಳ್ಳಿ ಟೆಂಟ್ ಸಿನಿಮಾದಲ್ಲಿ ಅಭಿನಯ ತರಬೇತಿ ಪಡೆದು ಬಂದಿದ್ದೇನೆ.
ಈ ಚಿತ್ರದಲ್ಲಿ ನನ್ನದು ಸಾಫ್ಟ್ ಪಾತ್ರ ಆದ್ರೆ ತುಂಬಾ ಚಾಲೆಂಜಸ್ ಇತ್ತು,ನಟನೆಯನ್ನು ಶ್ರದ್ಧೆಯಿಂದ ಮಾಡಿದ್ದೇನೆ ಎಂದರು.

ಸೂತ್ರಧಾರ ನಿರ್ದೇಶಕ ಚಂದ್ರ ಮೋಹನ್,
ಫಾರೆಸ್ಟ್ ಚಿತ್ರ ರಿಲೀಸ್ ಆದ್ಮೇಲೆ ಶುರು ಮಾಡಿದ ಚಿತ್ರ ಲವ್ ಫ್ಯಾಮಿಲಿ,ಸಾಮಾನ್ಯವಾಗಿ ನಾನು ಯಾರೇ ಹೊಸ ಕಲಾವಿದರನ್ನು ನೋಡಿದಾಗ,ಬೇಗ ಆಕರ್ಷಣೆ ಆಗಲ್ಲ ಆದರೆ
ಧೀರಜ್ ಅವರನ್ನು ಮೊದಲು ಸಾರಿ ನೋಡಿದ ತಕ್ಷಣ ನನಗೆಇಷ್ಟ ಆದ್ರು,ಸಿನ್ಮಾ ವಿಚಾರಕ್ಕೆ ಬಂದ್ರೆಇದಕ್ಕೂ ಮುಂಚೆ ನಾವು ಮಾಡಿಕೊಂಡ ಕಥೆ,ಆ ಸಮಯದಲ್ಲಿ ಬಿಡುಗಡೆ ಆಗಿದ್ದ ಏಳುಮಲೆ ಚಿತ್ರಕ್ಕೆ ಹೋಲಿಕೆ ಆಗ್ತಾ ಇತ್ತು, ಸೋ ಆ ಕಥೆನ ಡ್ರಾಪ್ ಮಾಡಿ ಬೇರೆ ವಿಷಯದ ಮೇಲೆ ಬರೆಯೋಕೆ ಶುರು ಮಾಡಿದ್ವಿ.ಕಥೆ ಚೆನ್ನಾಗಿದೆ ಎಂದು ಹೇಳಿ ಮಾತು ಮುಗಿಸಿದರು.
ರವೀ ಸಾಸನೂರ್ MasterNews365

