Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಡಾಲಿ ಪುಟ್ಟಮಲ್ಲಿ ಸಾಂಗ್
- ಸಿನಿಮಾ - ಸೀರಿಯಲ್

ಡಾಲಿ ಪುಟ್ಟಮಲ್ಲಿ ಸಾಂಗ್

ಡಾಲಿ ಧನಂಜಯ್ ಯಾಕೆ ಸ್ಪೆಷಲ್ ??ಡಾಲಿ ಧನಂಜಯ್ ಅವರ ಬಗ್ಗೆ ಯಾವುದೇ ಪತ್ರಿಕೆಯಲ್ಲಾಾಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ತುಂಬಾ ಜನ ಪ್ರೀತಿಯಿಂದ ಬರೆದಾಗ ಅದಕ್ಕೆ ಒಂದಷ್ಟು, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಅದರಲ್ಲಿ ಈ ಒಂದು ಪದ ಇದ್ದೇ ಇರುತ್ತದೆ ಅಂತ ?? ಜಯನಗರ ಫೋರ್ತ್ ಬ್ಲಾಕ್ ಎಂಬ ಶಾರ್ಟ್ ಫಿಲಂ ಬಗ್ಗೆ ಯಾರೇ ಮಾತನಾಡಲಿ ಎಲ್ಲಿಯೇ ಮಾತನಾಡಲಿ ಅಲ್ಲಿ ನಿರ್ದೇಶಕ ಸತ್ಯ ಪ್ರಕಾಶ್ ಜೊತೆಗೆ ಡಾಲಿ ಧನಂಜಯ್ ಅವರ ಹೆಸರು ಇದ್ದೇ ಇರುತ್ತದೆ ಕಾರಣ ಆ ಶಾರ್ಟ್ ಫಿಲಂನ […]

ಡಾಲಿ ಧನಂಜಯ್ ಯಾಕೆ ಸ್ಪೆಷಲ್ ??
ಡಾಲಿ ಧನಂಜಯ್ ಅವರ ಬಗ್ಗೆ ಯಾವುದೇ ಪತ್ರಿಕೆಯಲ್ಲಾಾಗಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಾಗಲಿ ತುಂಬಾ ಜನ ಪ್ರೀತಿಯಿಂದ ಬರೆದಾಗ ಅದಕ್ಕೆ ಒಂದಷ್ಟು, ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ ಅದರಲ್ಲಿ ಈ ಒಂದು ಪದ ಇದ್ದೇ ಇರುತ್ತದೆ ಅಂತ ??

ಜಯನಗರ ಫೋರ್ತ್ ಬ್ಲಾಕ್ ಎಂಬ ಶಾರ್ಟ್ ಫಿಲಂ ಬಗ್ಗೆ ಯಾರೇ ಮಾತನಾಡಲಿ ಎಲ್ಲಿಯೇ ಮಾತನಾಡಲಿ ಅಲ್ಲಿ ನಿರ್ದೇಶಕ ಸತ್ಯ ಪ್ರಕಾಶ್ ಜೊತೆಗೆ ಡಾಲಿ ಧನಂಜಯ್ ಅವರ ಹೆಸರು ಇದ್ದೇ ಇರುತ್ತದೆ ಕಾರಣ ಆ ಶಾರ್ಟ್ ಫಿಲಂನ ಪ್ರಮುಖ ಹೈಲೈಟ್ ಅಂದ್ರೆ ಡಾಲಿ ಧನಂಜಯ್.

ಗುರುಪ್ರಸಾದ್ ನಿರ್ದೇಶನದ ಡೈರೆಕ್ಟರ್ ಸ್ಪೆಷಲ್ ಎಂಬ ವಿಭಿನ್ನ ವಿನೂತನ ಕಾನ್ಸೆಪ್ಟ್ ಮೂಲಕ ಸ್ಯಾಂಡಲ್ ಹುಡ್ಗ ನಾಯಕ ನಟನಾಗಿ ಪರಿಚಯವಾದ ಡಾಲಿ ಧನಂಜಯ್ ಅಲ್ಲಿಂದ ಮದರ್ ಪ್ರಾಮಿಸ್ ತನಕ ಅವರು ಮಾಡಿದಂತಹ ಎಲ್ಲ ಸಿನಿಮಾಗಳು ಎಲ್ಲ ಪಾತ್ರಗಳು ವಿಭಿನ್ನ ಮತ್ತು ವಿನೂತನ.

ನಾಯಕ ನಟನಾಗಿ ಮಿಂಚಿ ಟಗರು ಚಿತ್ರದ ಮೂಲಕ ನೆಗೆಟಿವ ಪಾತ್ರದ ಮೂಲಕ ರೀ ಎಂಟ್ರಿ ಪಡೆದು ಹಾಗೆ ವಿಭಿನ್ನ ಪೋಷಕ ಪಾತ್ರಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಯಾವತ್ತು ಮನರಂಜನೆ ನೀಡುವಂತಹ ಡಾಲಿ ಧನಂಜಯ್ ವಿಶೇಷ ವ್ಯಕ್ತಿಯಾಗಿ ನಿಲ್ಲುತ್ತಾರೆ ಅದು ಬರೀ ನಟನಾಗಿ ಮಾತ್ರವಲ್ಲ ಒಬ್ಬ ನಿರ್ಮಾಪಕನಾಗಿಯೂ ಕೂಡ.

ಬರೀ ಕಲಾವಿದನಾಗಿ ತಮ್ಮ ನಟನೆಯನ್ನು ಮಾತ್ರ ಮಾಡಿಕೊಂಡು ಹೋಗುತ್ತಾ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ನಟನಾಗಿ ನಟಿಸುತ್ತಾ ಸುಮ್ಮನೆ ಇರಬಹುದಾಗಿತ್ತು ಡಾಲಿ ಧನಂಜಯ್ ಒಂದು ಹೆಜ್ಜೆ ಮುಂದೆ ಹೋಗಿ ನಿರ್ಮಾಣದ ಕೆಲಸದಲ್ಲಿಯೂ ಸಹ ತೊಡಗಿಕೊಂಡಿದ್ದು ತುಂಬಾ ಶ್ಲಾಘನೀಯ.

ನನಗೆ ಗೊತ್ತಿರುವುದು ಸಿನಿಮಾ ಮಾತ್ರ, ಹೊಸದಾಗಿ ಚಿತ್ರೋದ್ಯಮಕ್ಕೆ ಬರುವಂತಹ ಕಲಾವಿದರಿಗೆ ತಂತ್ರಜ್ಞರಿಗೆ ಏನೆಲ್ಲಾ ಕಷ್ಟಗಳು ಆಗಬಹುದು ಎಂಬ ಅರಿವು ತಮಗಿರುವ ಕಾರಣ ತಾನು ಹೊಸಬರಿಗಾಗಿಯೇ ಚಿತ್ರ ನಿರ್ಮಾಣಗಳನ್ನು ಮಾಡುತ್ತೇನೆ ಅದು ತಮ್ಮ ಕರ್ತವ್ಯ ಕೂಡ ಎಂಬುದು ಡಾಲಿ ಹೇಳಿದ ಆತ್ಮವಿಶ್ವಾಸದ ಮಾತುಗಳು.

ಇತ್ತೀಚಿಗಷ್ಟೇ ತಮ್ಮ ನಿರ್ಮಾಣ ಸಂಸ್ಥೆಯಲ್ಲಿ ಮಾಡಿದಂತಹ ಮದರ್ ಪ್ರಾಮಿಸ್ ನಂತಹ ಸಿನಿಮಾಗೆ ಸಿಕ್ಕ ಪ್ರೀತಿ ಪ್ರಶಂಸೆ ಅದು ಹಾಗೆ ಕ್ಯಾರಿಯಾಗುತ್ತದೆ,

ಡಿಸೆಂಬರ್ ನಲ್ಲಿ ಡಾಲ್ ಇದ್ದನಂಜಯ್ ಮತ್ತೆ ತೆರೆಯ ಮೇಲೆ ರಾರಾಜಿಸಲಿದ್ದಾರೆ ಅದು ಅಣ್ಣ ಫ್ರಮ್ ಮ್ಯಾಕ್ಸಿಕೋ ಚಿತ್ರದ ಮೂಲಕ, ಅದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ‘ಪುಟ್ಟಮಲ್ಲಿ’ ರಿಲೀಸ್‌, ಸೋಶಿಯಲ್‌ ಮೀಡಿಯಾದಲ್ಲಿ ಹವಾ; ಡಿಸೆಂಬರ್ 24ಕ್ಕೆ ಡಾಲಿ ಧನಂಜಯ ಸಿನಿಮಾ ರಿಲೀಸ್!*
ಚಂದನವನದ ಪ್ರತಿಭಾವಂತ ನಟ ‘ಡಾಲಿ’ ಧನಂಜಯ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ನೂತನ ‘ಪುಟ್ಟಮಲ್ಲಿ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿರುವ ಈ ಹಾಡು ಸದ್ಯ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹವಾ ಮಾಡುತ್ತಿದೆ. ರೆಟ್ರೋ ಶೈಲಿ ಹಾಗೂ ಆಧುನಿಕ ಟ್ರೆಂಡ್‌ಗಳ ಅದ್ಭುತ ಸಮ್ಮಿಲನವಾಗಿರುವ ಈ ಗೀತೆ ಇನ್‌ಸ್ಟಾಗ್ರಾಮ್ ರೀಲ್ಸ್, ಯೂಟ್ಯೂಬ್ ಶಾರ್ಟ್ಸ್ ಹಾಗೂ ಎಕ್ಸ್ (ಟ್ವಿಟರ್) ತಾಣಗಳಲ್ಲಿ #Puttamalli ಮತ್ತು #AnnaFromMexico ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

ವಾಸೂಕಿ ವೈಭವ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸುಮಧುರ ಹಾಡಿಗೆ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದು, ಖ್ಯಾತ ಗಾಯಕ ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ ಹಾಡು ಅತ್ಯಂತ ಆಕರ್ಷಕವಾಗಿ ಹೊರಹೊಮ್ಮಿದೆ. ಕೇಳುಗರನ್ನು ತಕ್ಷಣವೇ ಗುಂಗಿಗೆ ಕೆಡವುವ ಈ ಟ್ರ್ಯಾಕ್‌ಗೆ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ಈ ಗೀತೆಯು ಚಿತ್ರಕ್ಕೆ ದೊಡ್ಡ ಮಟ್ಟದ ಮೈಲೇಜ್ ತಂದುಕೊಟ್ಟಿದೆ.

ಶಂಕರ್ ಗುರು ನಿರ್ದೇಶನದ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರವು ಸಾಹಸ, ಹಾಸ್ಯ ಹಾಗೂ ಸಂಪೂರ್ಣ ಕೌಟುಂಬಿಕ ಮನರಂಜನೆಯ ಅಂಶಗಳನ್ನು ಒಳಗೊಂಡಿದೆ. ಕ್ರಿಸ್‌ಮಸ್ ಪ್ರಯುಕ್ತ ಡಿಸೆಂಬರ್ 24ರಂದು ಚಿತ್ರವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಈ ಹಾಡಿನ ಮೂಲಕ ಸದ್ದು ಮಾಡಿರುವ ಚಿತ್ರತಂಡ, ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಚಿತ್ರದ ಮಾಸ್ ಬೀಟ್‌ಗಳ ಹಾಡುಗಳನ್ನು ಹೊರತರಲು ಸಿದ್ಧತೆ ನಡೆಸಿದೆ.

ದಿ ರಾಯಲ ಸ್ಟುಡಿಯೋಸ್ ಹಾಗೂ ಐರಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ. ಹಟ್ಟಿಹೊಳಿ, ಮೃಣಾಲ್, ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಜಂಟಿಯಾಗಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಧನಂಜಯ ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಸಾಥ್ ನೀಡಿದ್ದು, ಉಮಾಶ್ರೀ, ರಂಗಾಯಣ ರಘು, ನಾಗಭೂಷಣ್, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು ಹಾಗೂ ಹುಲಿ ಕಾರ್ತಿಕ್ ಪ್ರಮುಖ ತಾರಾಗಣದಲ್ಲಿದ್ದಾರೆ. ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಛಾಯಾಗ್ರಹಣ, ಪ್ರಶಾಂತ್ ರಾಜಪ್ಪ ಸಂಭಾಷಣೆ ಹಾಗೂ ಅಜಯ್ ಕುಮಾರ್ ಮತ್ತು ನಿರಂಜನ್ ದೇವರಮನೆ ಅವರ ಸಂಕಲನ ಈ ಚಿತ್ರಕ್ಕಿದೆ. ಸ್ಯಾಂಡಲ್‌ವುಡ್‌ನಲ್ಲಿ ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.