ನಿರಂಜನ್ ಸುಧೀಂದ್ರ ನಟಿಸಿರುವ ಸ್ಪಾರ್ಕ್ ಚಿತ್ರದ ವಿಶೇಷ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಿಯಾಂಕ ಉಪೇಂದ್ರ ಮಾತನಾಡಿ,ಮದ್ವೆ ಆದ್ಮೇಲೆ ಉಪ್ಪಿ ಮನೆಗೆ ಬಂದಾಗ ನನ್ನನ್ನ ಗ್ರೀಟ್ ಮಾಡಿದ್ದು ನಿರಂಜನ್,ನನ್ನ Besty.ತುಂಬಾ ಹಂಬಲ್ ಆಗಿರೋ ಹುಡುಗ ಒಳ್ಳೆಯ ನಟ, ಈಗಾಗಲೇ ಬಿಡುಗಡೆಯಾದಂತಹ ಶಕಲಕ ಶಕಲಕ ಭೂಮ್ ಭೂಮ್ ಹಾಡಿಗೆ ನಾನು ಉಪ್ಪಿ ರೀಲ್ ಮಾಡೋಣ ಅಂತಾ ಪ್ಲಾನ್ ಮಾಡಿದ್ವಿ ಆದರೆ ಅದು ಆಗ್ಲಿಲ್ಲ.
ಆದರೆ ಇವತ್ತು ಬಿಡುಗಡೆ ಆದ ಮುಗುಳುನಗೆ ಹಾಡಿಗೆ ರೀಲ್ ಮಾಡಬಹುದು,ನನ್ನ ಮಗ ಆಯುಷ್ ಗೆ ನಿರಂಜನ್ ಒಳ್ಳೆ ಫ್ರೆಂಡ್ ತರಹ ತುಂಬಾ ಸಪೋರ್ಟ್ ಮಾಡ್ತಾನೆ, ನಿರಂಜನ್ ಸಿನಿಮಾ ಕಿರಿಯರ್ ನಲ್ಲಿ ಪಾರ್ಕ್ ಒಂದು ಒಳ್ಳೆ ಸಿನಿಮಾಗೆ ನಿಲ್ಲುತ್ತೆ ಎಂದು ಶುಭ ಹಾರೈಸಿದರು.
ನಿರಂಜನ್ ಮಾತಿನಲ್ಲಿ ಬಹಳ ತೂಕವಿತ್ತು, ಒಂದು ಕ್ಲಾರಿಟಿ ಇತ್ತು.
ನಾನೊಬ್ಬ ಸಿನಿಮಾ ಕಾರ್ಮಿಕ,ನಿರ್ಮಾಪಕರು ಹಣ ಹಾಕಿ ಸಿನ್ಮಾ ಮಾಡಿ,ನಮಗೆ ಸಂಬಳ ಕೊಟ್ಟು,ಅಭಿಮಾನಿಗಳಿಗೆ ಅಂತಾ ಸಿನ್ಮಾ ಮಾಡ್ತಾರೆ.
ಚಿತ್ರ ನೋಡಿದ ನಂತರ,ಒಬ್ಬ ಅಭಿಮಾನಿ ಐದು ಜನ ಹೊಸ ಪ್ರೇಕ್ಷಕರಿಗೆ ರೆಫರೆನ್ಸ್ ಮಾಡಿದ್ರೆ ಆಗ ಸಿನ್ಮಾ ಗೆಲ್ಲುತ್ತೆ,ನಟರಾಗಿ ನಾವು ಸಿನಿಮಾಗಳನ್ನು ಮಾಡ್ತಾ ಹೋಗ್ತೀವಿ ಅಷ್ಟಕ್ಕೂ ಗೆಲುವು ಕೊಡೋದು ಫ್ಯಾನ್ಸ್.ನನ್ನ ಮತ್ತು ರಚನಾ ಕಾಂಬಿನೇಷನ್ ತುಂಬಾ ಚೆಂದ ಬಂದಿದೆ,ಸ್ಪಾರ್ಕ್ ಕಥೆ ದುಡ್ಡು ಕೊಡುವ ಫ್ಯಾನ್ಸ್ ಗಳಿಗೆ ಮೋಸ ಮಾಡಲ್ಲ ಇದು ನನ್ನ ವಿಶ್ವಾಸದ ಮಾತು ಎಂದರು.

ನಮ್ಮ ನಿರ್ಮಾಣ ಸಂಸ್ಥೆ ಸುಮಾರು ಐವತ್ತು ಜನ ನಿರ್ದೇಶಕರನ್ನು ಮಾಡಿದ್ದೇನೆ ಆದ್ರೂ ಯಾರು ಸೆಟ್ ಆಗಿಲ್ಲ,ಮಹಾಂತೇಶ ಸಿನಿಮಾ ಕೆಲಸ ನನಗೆ ಇಷ್ಟ ಆಯ್ತು,ಶೂಟಿಂಗ್ ಶುರುವಾದ ನಂತರ ಪ್ರತಿದಿನ ಮಹಾಂತೇಶ ಜೊತೆ ಪ್ರತಿದಿನ ಜಗಳ ಆಡಿದ್ದೇನೆ,ಪ್ರೀತಿಯಿಂದ ಮಾತಾಡಿದ್ದೇನೆ ಎಂದು ನಿರ್ದೇಶಕ ಮಹಾಂತೇಶ್ ಬೆನ್ನು ತಟ್ಟಿದ ನಿರ್ಮಾಪಕರು
ಸ್ಪಾರ್ಕ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಅತಿಥಿಯಾಗಿ ಆಗಮಿಸಿದ್ದ
ಡಾರ್ಲಿಂಗ್ ಕೃಷ್ಣ, ನಿರಂಜನ್ಕನ್ನಡದ ಹೃತಿಕ್ ರೋಷನ್ ಇದ್ದಂತೆ ಈತನಿಗೆ ಒಳ್ಳೆ ಫ್ಯೂಚರ್ ಇದೆ ಎಂದು ಹರಸಿ,ನಿರಂಜನ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರೋದನ್ನ ನಾನು ಗಮನಿಸ್ತಾ ಇರ್ತೀನಿ, ಸಕ್ಕತ್ ಸ್ಟೇಟಸ್ ಮಾಡಿರುವ ವಿಡಿಯೋ ನೋಡಿ ನನಗೆ ಖುಷಿ ಆಯ್ತು, ಹಾಗೆ ನಿರಂಜನ್ ಒಬ್ಬ ಒಳ್ಳೆ ಡ್ಯಾನ್ಸರ್, ಎತ್ತರದ ನೆಲವು ಸುಂದರ ಮುಖ ಇವೆಲ್ಲವೂ ನಾಯಕನಟನಿಗೆ ಇರಬೇಕಾದ ಹೇಳಿಮಾಡಿಸಿದ ಅಂಶಗಳು ಎಂದು ಯುವನಟನ್ನು ಬೆಂಬಲಿಸಿದರು.ನಿರ್ದೇಶಕ ಮಹಾಂತೇಶ ನನ್ನ ಸಿನ್ಮಾ ಕೆರಿಯರ್ ನಲ್ಲಿ ಒಳ್ಳೆಯ ಗೆಳೆಯ,ಆತನ ಜರ್ನಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ ದೂರದ ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ಆಟ,ತುಂಬಾ ಸ್ಟ್ರಗಲ್ ಮಾಡಿರೋ ವ್ಯಕ್ತಿ ಎನ್ನುತ್ತಾ ತಮ್ಮ ಹಳೆಯ ದಿನಗಳನ್ನು ನೆನೆದರು.
ಒಳ್ಳೆಯ ನಿರ್ದೇಶಕ ಆಗ್ಬೇಕು ಅಂದ್ರೆ, ಅಂತವರಿಗೆ ಒಳ್ಳೆಯ ಗುರುಗಳು ಬೇಕು,ಒಳ್ಳೆಯ ಸಂಸ್ಥೆ ಸಿಕ್ಕಾಗ ಕಲಿಯುವಿಕೆ ತುಂಬಾ ಇರತ್ತೆ.ಲವ್ಲೀ ಸ್ಟಾರ್ ಪ್ರೇಮ್ ಅವರನ್ನು ಎಲ್ಲರೂ ಹೀರೋ ಆಗಿ ನೋಡಿದ್ದಾರೆ ಆದ್ರೆ ಅವ್ರು ವಿಲನ್ ಆಗಿ ಕಾಣಿಸಿಕೊಂಡ ಸ್ಪಾರ್ಕ್ ರಿಲೀಸ್ ಆದ್ಮೇಲೆ ಇನ್ನೂ ಫೇಮಸ್ ಆಗ್ತಾರೆ ಅನ್ನೋ ನಂಬಿಕೆ ನನಗಿದೆ ಅಂದಿದ್ದು ನಿರ್ದೇಶಕ ಮಹಾಂತೇಶ್ ಹಂದ್ರಾಳ,
ನಂತರ ಅವ್ರ ಗುರುಗಳು ದಯಾಳ್ ಪದ್ಮನಾಭನ್ ಮಾತನಾಡಿ,
ನನ್ನ ಜೊತೆ ತುಂಬಾ ವರ್ಷ ಕೆಲಸ ಮಾಡಿದ ಮಹಾಂತೇಶ್ ತುಂಬಾ ಹಾರ್ಡ್ ವರ್ಕರ್ ನಾನು ಕಮ್ಮಿ ಬಜೆಟ್ ನಲ್ಲಿ ಸಿನ್ಮಾ ಮಾಡುವ ಡೈರೆಕ್ಟರ್,ಆದ್ರೆ ನಮ್ಮ ಹುಡುಗ ದೊಡ್ಡ ದೊಡ್ಡ ಡೈರೆಕ್ಟರ್ ಜೊತೆ ಜರ್ನಿ ಮಾಡಿದ,ಅದರಲ್ಲೂ ಭರ್ಜರಿ ಚೇತನ್,ಗುರು ದೇಶಪಾಂಡೆ ದೊಡ್ಡ ಸ್ಕೇಲ್ ನಲ್ಲಿ ಮಾಡಿದಾಗ ಅದು ಮಹಾಂತೇಶ್ ಗೇ ಹೆಲ್ಪ್ ಆಯ್ತು ಎಂದು ಶಿಷ್ಯನನ್ನು ಹೊಗಳಿದರು.
ನಾಯಕಿರಚನಾ ಇಂದರ್ ,ಒಳ್ಳೆ ಕಥೆ ಹೇಗೆ ಒಳ್ಳೆ ಸ್ಕೋಪ ಇರೋ ಪಾತ್ರ,ಬಹಳಷ್ಟು ಚಿತ್ರ ಮಾಡಿದ್ದೀನಿ ಇದೊಂಥರಾ ಹೊಸ ಫೀಲ್ ಕೊಡತ್ತೆ,ಒಳ್ಳೆಯ ಬಜೆಟ್ ಒಳ್ಳೆಯ ಕಂಟೆಂಟ್ ಒಳ್ಳೆಯ ಕ್ಯಾನ್ವಾಸ್ ನಲ್ಲಿ ರೆಡಿಯಾಗಿರುವ ಚಿತ್ರ,ಇದರಲ್ಲಿ ನಾನು MBBS Student ಪತ್ರಕರ್ತ ನಿರಂಜನ್ ಮೇಲೆ ಲವ್ ಆಗತ್ತೆ ಅಷ್ಟೇ,ಮುಂದಿನ ಕಥೆ ಹೇಳಲ್ಲ ಅಂದ್ರು..
ಸೆಪ್ಟೆಂಬರ್ 25 ಸ್ಪಾರ್ಕ್ ಬಿಡುಗಡೆ ಆಗತ್ತೆ,ಮೊದಲ ಬಾರಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡಿರುವ ಲವ್ಲೀ ಸ್ಟಾರ್ ಪ್ರೇಮ್,ಸ್ಪಾರ್ಕ್ ಚಿತ್ರದ ಮತ್ತೊಂದು ಆಕರ್ಷಣೆ.
ರವೀ ಸಾಸನೂರ್ MasterNews365

