Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮರ್ಯಾದೆ ಪ್ರಶ್ನೆ ನಿರ್ದೇಶಕನ ದೇವಿ ಮಹಾತ್ಮೆ
- ವಿಶೇಷ ಸಮಾಚಾರ

ಮರ್ಯಾದೆ ಪ್ರಶ್ನೆ ನಿರ್ದೇಶಕನ ದೇವಿ ಮಹಾತ್ಮೆ

ಮರ್ಯಾದೆ ಪ್ರಶ್ನೆ ನಿರ್ದೇಶಕನದೇವಿ ಮಹಾತ್ಮೆ ಮರ್ಯಾದೆ ಪ್ರಶ್ನೆ ಸಿನಿಮಾ ಮೂಲಕ ಚಂದನವನದಲ್ಲಿ ಹೊಸ ತರಹದ ನಿರೂಪಣಾ ಶೈಲಿಯ ಹಾಗೂ ಅಷ್ಟೇ ಕರಾರುವಕ್ಕಾಗಿ ಚಂದನವನದ ಅಖಾಡಕ್ಕೆ ನಿರ್ದೇಶಕನಾಗಿ ಕಾಲಿಟ್ಟಿದ್ದು ನಾಗರಾಜ್ ಸೋಮಯಾಜಿ, ತಮ್ಮ ಮೊದಲ ಪ್ರಯತ್ನದಲ್ಲಿಯೇ ಒಳ್ಳೆಯ ಸ್ಕೋರ್ ಮಾಡಿದ್ದು ಅವರ ಸಿನಿಮಾ ಅಕೌಂಟಲ್ಲಿ ಸದಾ ಇರುತ್ತದೆ. ಇಂತಹ ಸೃಜನಶೀಲ ನಿರ್ದೇಶಕ ಹಾಗೂ ಬರಹಗಾರರಿಂದ ಮತ್ತೊಂದು ಮಾಸ್ಟರ್ ಪೀಸ್ ಎನಿಸುವಂತಹ ಕಥೆ ಸಿದ್ಧವಾಗುತ್ತಿದೆ ಅದಾಗಲೇ ಚಿತ್ರೀಕರಣದ ಹಂತದಲ್ಲಿದ್ದು ಅದು ದೇವಿ ಮಹಾತ್ಮೆ ಚಿತ್ರವಾಗಿ ಅಭಿಮಾನಿಗಳ ಹೃದಯವನ್ನು ತಟ್ಟಲಿದೆ.ಚಿತ್ರದ ಪ್ರಮುಖ […]

ಮರ್ಯಾದೆ ಪ್ರಶ್ನೆ ನಿರ್ದೇಶಕನ
ದೇವಿ ಮಹಾತ್ಮೆ

ಮರ್ಯಾದೆ ಪ್ರಶ್ನೆ ಸಿನಿಮಾ ಮೂಲಕ ಚಂದನವನದಲ್ಲಿ ಹೊಸ ತರಹದ ನಿರೂಪಣಾ ಶೈಲಿಯ ಹಾಗೂ ಅಷ್ಟೇ ಕರಾರುವಕ್ಕಾಗಿ ಚಂದನವನದ ಅಖಾಡಕ್ಕೆ ನಿರ್ದೇಶಕನಾಗಿ ಕಾಲಿಟ್ಟಿದ್ದು ನಾಗರಾಜ್ ಸೋಮಯಾಜಿ, ತಮ್ಮ ಮೊದಲ ಪ್ರಯತ್ನದಲ್ಲಿಯೇ ಒಳ್ಳೆಯ ಸ್ಕೋರ್ ಮಾಡಿದ್ದು ಅವರ ಸಿನಿಮಾ ಅಕೌಂಟಲ್ಲಿ ಸದಾ ಇರುತ್ತದೆ.

ಇಂತಹ ಸೃಜನಶೀಲ ನಿರ್ದೇಶಕ ಹಾಗೂ ಬರಹಗಾರರಿಂದ ಮತ್ತೊಂದು ಮಾಸ್ಟರ್ ಪೀಸ್ ಎನಿಸುವಂತಹ ಕಥೆ ಸಿದ್ಧವಾಗುತ್ತಿದೆ ಅದಾಗಲೇ ಚಿತ್ರೀಕರಣದ ಹಂತದಲ್ಲಿದ್ದು ಅದು ದೇವಿ ಮಹಾತ್ಮೆ ಚಿತ್ರವಾಗಿ ಅಭಿಮಾನಿಗಳ ಹೃದಯವನ್ನು ತಟ್ಟಲಿದೆ.ಚಿತ್ರದ ಪ್ರಮುಖ ತಾರಾಗಣದಲ್ಲಿ ಕನ್ನಡದ ಪ್ರತಿಭಾವಂತ ನಟ ಹಾಗೂ ಇಡೀ ದೇಶವೇ ಮೆಚ್ಚುವಂತಹ ಕಲಾವಿದರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಅಪ್ಪಟ ಗ್ರಾಮೀಣ ಪ್ರತಿಭೆ ರಂಗಾಯಣ ರಘು ಸೇರಿ ಇನ್ನೂ ತುಂಬಾ ಜನ ಕಲಾವಿದರು ಇರುವುದು ಕುತೂಹಲ ಮೂಡಿಸಿದೆ.

ಈಗಾಗಲೇ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ದೇವಿ ಮಹಾತ್ಮೆ ಚಿತ್ರದ ಟೀಸರ್ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು ಇತ್ತೀಚಿಗೆ ಚಿತ್ರತಂಡದಿಂದ ಮತ್ತೊಂದು ಅಪ್ಡೇಟ್ ಬಂದಿದ್ದು,
ಕೆನಡಾದಲ್ಲಿ ಬೆಳೆದು ಕರ್ನಾಟಕ ಹಾಗೂ ಹಿಂದುಸ್ತಾನಿ ಸಂಗೀತ ಎರಡರಲ್ಲಿಯೂ ಪರಿಣಿತಿ ಹೊಂದಿರುವ ಕಾಂತಾರಾ ಚಾಪ್ಟರ್ 1 ಬ್ರಹ್ಮಕಲಶ ಹಾಡಿಗೆ ಧ್ವನಿಯಾದ ಅಬ್ಬಿ ವಿ, ದೇವಿ ಮಹಾತ್ಮೆ ಚಿತ್ರದ ಜಗವ ಕಾಯೋ ದೇವನು ಹಾಡಿಗೆ ಧ್ವನಿಯಾಗಿದ್ದು ಮತ್ತೊಂದು ವಿಶೇಷ,
ಪ್ರಮೋದ್ ಮರವಂತೆ ಬರೆದ ಸಾಹಿತ್ಯ ತುಂಬಾನೇ ಅರ್ಥಗರ್ಭಿತವಾಗಿದ್ದು ಸಖತ್ ಸುದ್ದಿ ಮಾಡುತ್ತಿದೆ,ದೇವಿ ಮಹಾತ್ಮೆ ಚಿತ್ರ ಅತಿ ಶೀಘ್ರದಲ್ಲಿ ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು ಅಭಿಮಾನಿಗಳು ಚಿತ್ರವನ್ನು ನೋಡಿ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ ಎಂಬುದು ನಮಗೆ ಸಿಕ್ಕ ಮಾಹಿತಿ

ರವೀ ಸಾಸನೂರ್


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.