ದಾಸ ಸಾಹಿತ್ಯದ ಶ್ರೇಷ್ಠರು ಕಾಖಂಡಕಿ ಶ್ರೀ ಮಹಿಪತಿ ದಾಸರು
ಕಲೆ ಸಾಹಿತ್ಯ ಧರ್ಮ ಆಧ್ಯಾತ್ಮ ಭಕ್ತಿ ಪರಂಪರೆ ದೇವರು ದೈವ ಭಕ್ತರು ಹೀಗೆ ಪ್ರತಿಯೊಬ್ಬರ ದೈವಿ ಭಾವನೆಗಳಿಗೆ ಬಹಳಾನೇ ಹತ್ತಿರವಾಗುವಂತಹ ಚಿತ್ರಗಳು ಧಾರಾವಾಹಿಗಳು ಹಾಡುಗಳು ಬಂದಾಗ ನೋಡುಗರು ಅಂತಹ ಪ್ರಯತ್ನಗಳನ್ನು ಮನಸ್ಸಾರೆ ನೋಡಿ ಮೆಚ್ಚಿ ಅಂತವುಗಳನ್ನ ಗೆಲ್ಲಿಸಿದ್ದು ಇತಿಹಾಸದ ಪುಟದಲ್ಲಿ ಶಾಶ್ವತವಾಗಿದೆ .ಪವಾಡ ಪುರುಷರ ಜೀವನ ಆಧಾರಿತ ಕಥೆಗಳು ಸಿನಿಮಾಗಳಾದಾಗ ಜನ ಇನ್ನೂ ಭಾವಕರಾಗಿ ಕಣ್ಣು ತುಂಬಿಕೊಳ್ಳುವುದು ಎಷ್ಟು ಸತ್ಯವೋ ಅಂತಹ ಪವಾಡ ಪುರುಷರ ಬಗ್ಗೆ ಮತ್ತಷ್ಟು ಸಾರಿ ಸಾರಿ ಹೇಳುವುದು ಕೂಡ ಅಷ್ಟೇ ಸತ್ಯ…

ಇನ್ನು ದಾಸ ಸಾಹಿತ್ಯ ಅಥವಾ ದಾಸರ ಯುಗದ ಬಗ್ಗೆ ಅದೆಷ್ಟೇ ಕಥೆಗಳು ಬರಲಿ ಕಾದಂಬರಿಗಳು ಬರಲಿ ಸಿನಿಮಾಗಳು ಬರಲಿ ಅಥವಾ ಅವುಗಳ ಕುರಿತು ಯಾವುದೇ ತರಹದ ಡಾಕ್ಯುಮೆಂಟರಿ ಬಂದರೂ ಸಹ ಅವು ತನ್ನ ಘನತೆಯನ್ನು ಗಾಂಭೀರ್ಯವನ್ನ ಎಂದು ಕಳೆದುಕೊಳ್ಳುವುದಿಲ್ಲ ಕಾರಣ ಅವೆಲ್ಲವೂ ದೈವಿ ಸಂಕಲ್ಪದೊಂದಿಗೆ ಬೆಸೆದುಕೊಂಡಿರುವ ಗಟ್ಟಿ ಕೊಂಡಿಗಳು.ಕನ್ನಡ ಚಿತ್ರರಂಗದಲ್ಲಿ ಬಹಳ ವಿಶೇಷವಾದಂತಹ ನಿರ್ದೇಶಕ ಎಂಬ ಹೆಸರನ್ನು ಹೊಂದಿರುವ ಹಾಗೂ ಅಷ್ಟೇ ಒಳ್ಳೆಯ ಗುಣಮಟ್ಟದ ಚಿತ್ರಗಳನ್ನು ನಿರ್ದೇಶನ ಮಾಡಿರುವ ಮಧುಸೂದನ್ ಹವಾಲ್ದಾರರ ಮತ್ತೊಂದು ಚಿತ್ರ, ಇದು ಹಲವು ಕ್ಷೇತ್ರದ ಗಣ್ಯರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಅದುವೇ ಕಾಕಂಡಕಿ ಶ್ರೀ ಮಹಿಪತಿ ದಾಸರು ಎನ್ನುವಂತಹ ಭಕ್ತಿ ಪ್ರಧಾನ ಚಿತ್ರ.

ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ವಿಶೇಷವಾಗಿ ದಾಸ ಸಾಹಿತ್ಯಕ್ಕೆ ದಾಸರ ಯುಗದ ಮಹಾಪುರುಷರು ನೀಡಿದ ಕೊಡುಗೆ ಅಪಾರ, ಅಂತಹ ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರ ಎನಿಸಿಕೊಳ್ಳುವಂತಹ ಎಲ್ಲ ಮಹಾಪುರುಷರ ಸಿನಿಮಾಗಳನ್ನ ಜನರಿಗೆ ತಲುಪಿಸುವ ಮಧುಸೂಧನ್ ಹವಾಲ್ದಾರರ ಈ ಪ್ರಯತ್ನ ಅವರ ಮತ್ತೊಂದು ಮೈಲುಗಲ್ಲು ಎಂದರೆ ಅತಿಶಯೋಕ್ತಿಯಾಗಲಾರದು
ರವೀ ಸಾಸನೂರ್

