Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬರ್ತಿದೆ ಪ್ರೇಮರೂಪ “ಸಾಯಿ ಪಾದಾನಂದ”
- ಸಿನಿಮಾ

ಬರ್ತಿದೆ ಪ್ರೇಮರೂಪ “ಸಾಯಿ ಪಾದಾನಂದ”

ಗುರು ಸಾಯಿಬಾಬಾ ಅವರ ಮಹತ್ವ ಎನ್ನುವುದು ಕೇವಲ ಭಕ್ತಿ ಮತ್ತು ಆರಾಧನೆಗೆ ಸೀಮಿತವಾದ ವಿಷಯವಲ್ಲ. ಅದು ಮಾನವೀಯತೆ, ಪ್ರೀತಿ, ಕರುಣೆ, ತಾಳ್ಮೆ, ಸಹನೆ ಮತ್ತು ಸರ್ವಧರ್ಮ ಸಮನ್ವಯದಂತಹ ಉದಾತ್ತ ಮೌಲ್ಯಗಳನ್ನು ಒಳಗೊಂಡಿರುವ ಜೀವನದರ್ಶನವಾಗಿದೆ. ಶಿರಡಿ ಸಾಯಿಬಾಬಾ ಅವರು ಭಾರತದ ಅತ್ಯಂತ ಗೌರವಾನ್ವಿತ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು. ಮಹಾರಾಷ್ಟ್ರದ ಶಿರಡಿಯಲ್ಲಿ ತಮ್ಮ ಜೀವನದ ಬಹುಭಾಗವನ್ನು ಕಳೆದ ಅವರು, ತಮ್ಮ ಸರಳ ಜೀವನ, ಆಧ್ಯಾತ್ಮಿಕ ಬೋಧನೆಗಳು, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳ ಮೂಲಕ ಕೋಟ್ಯಂತರ ಭಕ್ತರ ಹೃದಯದಲ್ಲಿ ವಿಶೇಷ […]

ಗುರು ಸಾಯಿಬಾಬಾ ಅವರ ಮಹತ್ವ ಎನ್ನುವುದು ಕೇವಲ ಭಕ್ತಿ ಮತ್ತು ಆರಾಧನೆಗೆ ಸೀಮಿತವಾದ ವಿಷಯವಲ್ಲ. ಅದು ಮಾನವೀಯತೆ, ಪ್ರೀತಿ, ಕರುಣೆ, ತಾಳ್ಮೆ, ಸಹನೆ ಮತ್ತು ಸರ್ವಧರ್ಮ ಸಮನ್ವಯದಂತಹ ಉದಾತ್ತ ಮೌಲ್ಯಗಳನ್ನು ಒಳಗೊಂಡಿರುವ ಜೀವನದರ್ಶನವಾಗಿದೆ.

ಶಿರಡಿ ಸಾಯಿಬಾಬಾ ಅವರು ಭಾರತದ ಅತ್ಯಂತ ಗೌರವಾನ್ವಿತ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರು. ಮಹಾರಾಷ್ಟ್ರದ ಶಿರಡಿಯಲ್ಲಿ ತಮ್ಮ ಜೀವನದ ಬಹುಭಾಗವನ್ನು ಕಳೆದ ಅವರು, ತಮ್ಮ ಸರಳ ಜೀವನ, ಆಧ್ಯಾತ್ಮಿಕ ಬೋಧನೆಗಳು, ಸೇವಾ ಮನೋಭಾವ ಮತ್ತು ಮಾನವೀಯ ಮೌಲ್ಯಗಳ ಮೂಲಕ ಕೋಟ್ಯಂತರ ಭಕ್ತರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.


ಸಾಯಿಬಾಬಾ ಅವರ ಜೀವನ ಮತ್ತು ಬೋಧನೆಗಳು ಇಂದಿಗೂ ಜನರಿಗೆ ಆಧ್ಯಾತ್ಮಿಕ ಪ್ರೇರಣೆಯನ್ನು ನೀಡುತ್ತಿವೆ.
ಅವರನ್ನು ಹಿಂದೂಗಳು, ಮುಸ್ಲಿಮರು ಸೇರಿದಂತೆ ವಿವಿಧ ಧರ್ಮಗಳ ಜನರು ಗೌರವಿಸುತ್ತಾರೆ. ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವುದಕ್ಕಿಂತ, ಎಲ್ಲರಲ್ಲಿಯೂ ಮಾನವೀಯತೆಯನ್ನು ಕಾಣಬೇಕು ಎಂಬ ಸಂದೇಶ ಅವರ ಜೀವನದಲ್ಲಿ ಪ್ರಮುಖವಾಗಿ ಕಾಣುತ್ತದೆ.

ಹನುಮಾನ್‌ ಅಂಶ್‌ ರೀತಿಯಲ್ಲಿಯೇ ಕನ್ನಡದಲ್ಲಿಯೂ ಸಿದ್ದವಾಯ್ತು ಪ್ರೇಮರೂಪ ಸಾಯಿಪಾದಾನಂದ ಸಿನಿಮಾ

ಪ್ರೇಮರೂಪ ಸಾಯಿಪಾದಾನಂದ ಸಿನಿಮಾ ಸಾಯಿಬಾಬ ಅನುಯಾಯಿಗಳು ಸೇರಿ ಮಾಡಿರುವ ಸಿನಿಮಾ

ರಾಧಾಕೃಷ್ಣ ಸ್ವಾಮೀಜಿ ಅವರ ಜೀವನ ಕುರಿತ ಸಿನಿಮಾ ಪ್ರೇಮರೂಪ ಸಾಯಿಪಾದಾನಂದ

ಸಾಯಿಬಾಬಾ ಅವರ ಅನುಯಾಯಿ ಅವಧೂತ ಸಾಯಿ ಪಾದಾನಂದ ರಾಧಾಕೃಷ್ಣ ಸ್ವಾಮೀಜಿಯವರ ಜೀವನ ಚರಿತ್ರೆ ಕುರಿತ ಚಿತ್ರ ಪ್ರೇಮರೂಪ ಸಾಯಿಪಾದಾನಂದ. ಅಪಾರ ಶಿಷ್ಯರನ್ನ ಹೊಂದಿದ್ದ ರಾಧಾಕೃಷ್ಣ ಸ್ವಾಮೀಜಿಯ ಶಿಷ್ಯರಾದ ಟಿ ಕೃಷ್ಣಕುಮಾರ್ ಖ್ಯಾತ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ ಸಹಕಾರದೊಂದಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.. ಬಿ ನಿತ್ಯಾನಂದ ಸಿನಿಮಾ ನಿರ್ದೇಶನ ಮಾಡಿದ್ದು ಆನಂದ್ ಮೌಳಿ ಸ್ವಾಮೀಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ , ಅಭಿಷೇಕ್ ರಾಜು ಸಂಗೀತ ನಿರ್ದೇಶನದ ಪ್ರೇಮರೂಪ ಸಾಯಿಪಾದಾನಂದ ಸಿನಿಮಾದ ಚಿತ್ರೀಕರಣ ತಮಿಳುನಾಡು , ಬೆಂಗಳೂರಿನಲ್ಲಿ ಸೇರಿ ಹಲವೆಡೆ ಚಿತ್ರೀಕರಣ ಮಾಡಲಾಗಿದೆ.

ತಮಿಳು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮೂಡಿಬಂದಿರುವ ಪ್ರೇಮರೂಪ ಸಾಯಿಪಾದಾನಂದ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ ,,
ಸಿನಿಮಾದ ಪ್ರದರ್ಶನ ಹಾಗೂ ಸುದ್ದಿಗೋಷ್ಠಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಆಗಮಿಸಿ ಸಿನಿಮಾ ಬಗ್ಗೆ ಮಾತನಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭಕೋರಿದ್ರು..ಕರ್ನಾಟಕದಲ್ಲಿ ಸಾಯಿಬಾಬಾ ಅವರ ಬಗ್ಗೆ ಪ್ರಚಾರ ಮಾಡುತ್ತಿದ್ದ ರಾಧಾಕೃಷ್ಣ ಸ್ವಾಮೀಜಿಯ ಜೀವನದ ಸಂದೇಷವನ್ನ ಎಲ್ಲರ ಅಳವಡಿಸಿಕೊಳ್ಳಬೇಕು ,ಸಾಯಿಬಾಬಾರ ತತ್ವವನ್ನ ಪಸರಿಸಿದ ಖ್ಯಾತಿ ಸ್ವಾಮೀಜಿಗೆ ಸಲ್ಲಬೇಕು ಸಿನಿಮಾ ನೋಡಿ ಕಲಿಯುವುದು ಬಹಳಷ್ಟಿದೆ ಎಂದರು. ಸಿ.ಎನ್. ಮಂಜುನಾಥ್‌.

ಕಾರ್ಯಕ್ರಮದಲ್ಲಿ ಸ್ವಾಮೀಜಿ ಜೊತೆಗಿನ ಒಡನಾಟ ಮೆಲುಕು ಹಾಕಿ ಕಣ್ಣೀರಿಟ್ಟ ಟಿ ಕೃಷ್ಣಕುಮಾರ್ . ಇವರನ್ನ ಸೇರಿದಂತೆ ಸಾಯಿ ಆಧ್ಯಾತ್ಮಿಕ ಕೇಂದ್ರದ ಚೇರ್ಮನ್ ಶ್ರೀ ಶ್ರೀಚಂದ್ ರಾಜ್ ಪಾಲ್ ಕನ್ನಡ ಸಾಯಿ ಸಚ್ಚರಿತೆಯ ಬರಹಗಾರರಾದ ಶ್ರೀ ಅನಂತ ರಾಮು ಇನ್ನು ಅನೇಕರು ಭಾಗಿ ಆಗಿದ್ರು ಸದ್ಯ ಸುದ್ದಿಗೋಷ್ಠಿ ಮಾಡಿರೋ ಸಿನಿಮಾತಂಡ ಶೀಘ್ರದಲ್ಲೆ ಥಿಯೇಟರ್‌ ನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲಿದ್ದಾರೆ…

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.