Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸಮಾಜವನ್ನು ಎಚ್ಚರಿಸುವ “SPARK”
- ರಿವ್ಯೂ - ಸಿನಿಮಾ

ಸಮಾಜವನ್ನು ಎಚ್ಚರಿಸುವ “SPARK”

ಸಮಾಜವನ್ನು ಎಚ್ಚರಿಸುವ “SPARK” ಸ್ಪಾರ್ಕ್ ಚಿತ್ರದ ವಿಮರ್ಶೆ ರೇಟಿಂಗ್ 3.5 / 5 ಕಷ್ಟಪಟ್ಟು ದುಡಿದ ಹಣ, ಬೆವರು ಸುರಿಸಿ ಸಂಪಾದನೆ ಮಾಡಿದ ಹಣ, ಮಗಳ ಮದುವೆಗೆ ಕೂಡಿಟ್ಟ ಹಣ, ಮಗನ ವಿದ್ಯಾಭ್ಯಾಸಕ್ಕೆ ಸಂಗ್ರಹಿಸಿಟ್ಟ ಹಣ, ಮನೆ ಕಟ್ಟಲು ತಮ್ಮ ಬಳಿ ಇದ್ದ ಒಡವೆಗಳನ್ನ ಮಾರಿದ ಹಣ, ಬದುಕನ್ನ ತುಂಬಾ ಹಿತಮಿತವಾಗಿಯೇ ನಡೆಸುತ್ತಾ ಕೂಡಿಟ್ಟ ಆ ಹಣವನ್ನೆಲ್ಲ ತಮ್ಮ ತಮ್ಮ ಭವಿಷ್ಯದ ಕನಸಿಗೋಸ್ಕರ ಬ್ಯಾಂಕುಗಳ ಸಂಸ್ಥೆಗಳಲ್ಲಿ ಇಟ್ಟು ತಾವು ಸೇಫ್ ಎಂಬ ಭರವಸೆಯೊಂದಿಗೆ ಜೀವನ ನಡೆಸುತ್ತಿದ್ದ ಜನರ […]

ಸಮಾಜವನ್ನು ಎಚ್ಚರಿಸುವ “SPARK”

ಸ್ಪಾರ್ಕ್ ಚಿತ್ರದ ವಿಮರ್ಶೆ

ರೇಟಿಂಗ್ 3.5 / 5

ಕಷ್ಟಪಟ್ಟು ದುಡಿದ ಹಣ, ಬೆವರು ಸುರಿಸಿ ಸಂಪಾದನೆ ಮಾಡಿದ ಹಣ, ಮಗಳ ಮದುವೆಗೆ ಕೂಡಿಟ್ಟ ಹಣ, ಮಗನ ವಿದ್ಯಾಭ್ಯಾಸಕ್ಕೆ ಸಂಗ್ರಹಿಸಿಟ್ಟ ಹಣ, ಮನೆ ಕಟ್ಟಲು ತಮ್ಮ ಬಳಿ ಇದ್ದ ಒಡವೆಗಳನ್ನ ಮಾರಿದ ಹಣ, ಬದುಕನ್ನ ತುಂಬಾ ಹಿತಮಿತವಾಗಿಯೇ ನಡೆಸುತ್ತಾ ಕೂಡಿಟ್ಟ ಆ ಹಣವನ್ನೆಲ್ಲ ತಮ್ಮ ತಮ್ಮ ಭವಿಷ್ಯದ ಕನಸಿಗೋಸ್ಕರ ಬ್ಯಾಂಕುಗಳ ಸಂಸ್ಥೆಗಳಲ್ಲಿ ಇಟ್ಟು ತಾವು ಸೇಫ್ ಎಂಬ ಭರವಸೆಯೊಂದಿಗೆ ಜೀವನ ನಡೆಸುತ್ತಿದ್ದ ಜನರ ಬದುಕು ಬೀದಿಗೆ ಬೀಳೋದು ಯಾವಾಗ ಗೊತ್ತಾ ??

ದಿವಾಳಿಯಾದ ಪ್ರತಿಷ್ಠಿತ ಬ್ಯಾಂಕುಗಳ ಹಗರಣಗಳ ಮೇಲೆ ಬೆಳಕು ಚೆಲುವ ಕಥೆ ಸ್ಪಾರ್ಕ್.

ಅಮರ ಜ್ಯೋತಿ ಕೋ ಆಪರೇಟಿವ್ ಬ್ಯಾಂಕ್ ಒಂದರ ದಿವಾಳಿ ಎನ್ನುವ ಬ್ರೇಕಿಂಗ್ ನ್ಯೂಸ್ ಹಾಗೂ ಆ ಬ್ಯಾಂಕ್ ಅನ್ನು ನಂಬಿ ಹಣವಿಟ್ಟಂತಹ ಲಕ್ಷಾಂತರ ಜನರನ್ನು ಸಂಕಟ ಕಣ್ಣೀರು ಎಲ್ಲವನ್ನ ತೋರಿಸುವ ಸುದ್ದಿ ಎಲ್ಲ ಕಡೆಗೂ ಬ್ರೇಕಿಂಗ್ ನ್ಯೂಸ್ ಹಾಗೂ ಅದಕ್ಕೆ ಸಂಬಂಧಪಟ್ಟಂತಹ ಹಗರಣದ ತನಿಖೆಯನ್ನು ನಡೆಸುವಂತೆ ಖಡಕ್ ಪೊಲೀಸ್ ಆಫೀಸರ್, ಎಸ್ ಪಿ ರಂಜಿತ್ ಕುಮಾರ್ ( ನೆನಪಿರಲಿ ಪ್ರೇಮ್ ) ಅಖಾಡಕ್ಕೆ ಕೇಳುತ್ತಾರೆ ಅಷ್ಟೇ ಅಲ್ಲದೆ ಆ ಸ್ಕ್ಯಾಮ್ ನಲ್ಲಿ ಭಾಗಿಯಾಗಿರುವ ಯಾರೊಬ್ಬರನ್ನು ಬಿಡುವುದಿಲ್ಲ ಎಂಬ ಚಾಲೆಂಜ್ ಕೂಡ ಮಾಡುತ್ತಾರೆ.

ಇನ್ನೊಂದು ಕಡೆ ಉತ್ಸಾಹಿ ಯುವ ಪತ್ರಕರ್ತ ಅಭಿರಾಮ್ ( ನಿರಂಜನ್ ಸುಧೀಂದ್ರ ) “ನ್ಯೂಸ್ ಚಾನೆಲ್ ಗಳು ಯಾವತ್ತೂ ಎಂಟರ್ಟೈನ್ಮೆಂಟ್ ನೀಡೋ ಚಾನೆಲ್ ಗಳು ಆಗಬಾರದು” ಎಂಬ ಡೇರ್ ಅಂಡ್ ಡೆವಿಲ್ ತರಹದ ಮೈಂಡ್ ಸೆಟ್ ನವನು, ಇಂತಹ ಅಭಿರಾಮ್ ತಾನು ಈ ಮುಂಚೆ ಕೆಲಸ ಮಾಡ್ತಿದ್ದ ಡೆಮಾಕ್ರಸಿ ನ್ಯೂಸ್ ಚಾನೆಲ್ ತಿಳಿಸ ಬಿಟ್ಟು ತ್ರಿನೇತ್ರ ಟಿವಿ 24*7 ಎಂಬ ಹೊಸ ಚಾನೆಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿರುತ್ತಾನೆ, ತಾನಿದ್ದ ಹಳೆಯ ಚಾನೆಲ್ ಬರಿ ಟಿ ಆರ್ ಪಿ ಗಾಗಿ ಕೆಲಸ ಮಾಡುತ್ತಾ, ಪ್ರಾಮಾಣಿಕ ಸತ್ಯ ಸುದ್ದಿಗಳನ್ನು ಪ್ರಸಾರ ಮಾಡಲು ತನಗೆ ಅವಕಾಶ ನೀಡಿಲ್ಲ ಎಂಬ ಕಾರಣ ಅಭಿಗೆ ಬೇಸರ ತಂದಿರುತ್ತದೆ.

ಹೊಸ ಚಾನೆಲ್ ನಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ, ಅಭಿ ಮತ್ತು ಗೆಳೆಯ ( ಧರ್ಮಣ್ಣ ಕಡೂರು ) ಇಬ್ಬರು ಸೇರಿ ಚಿಕ್ಕದೊಂದು ಪಾರ್ಟಿ ಮಾಡಲು ಕ್ಲಬ್ ಗೆ ಹೋದಾಗ ಅಲ್ಲಿದ್ದ ಸುಮಾರು ಹುಡುಗಿಯರಲ್ಲಿ ಒಬ್ಬಳಾದ ತಾನು ಕುಡಿಯದಿದ್ದರೂ ಕುಡಿದಂತೆ ನಟಿಸುತ್ತಾ ಡಾನ್ಸ್ ಮಾಡುತ್ತಿದ್ದ ತುಂಬಾ ಒಳ್ಳೆಯ ಹುಡುಗಿ ವೃತ್ತಿಯಲ್ಲಿ ಡಾಕ್ಟರ್ ಆಗಿದ್ದ ಮಧುಮಿತಾ ( ರಚನಾ ಇಂದರ್ ) ಜೊತೆ ಅಭಿರಾಮ್ ಪರಿಚಯ ನಂತರ ಸ್ವಲ್ಪ ಟೈಮ್ ಲ್ಯಾಪ್ಸ್ ದೃಶ್ಯಗಳ ನಂತರ ಅಭಿ ಮತ್ತು ಮಧು ಮಧ್ಯ ಪ್ರೀತಿ ಪ್ರೇಮ ಹಾಡುಗಳು ಇತ್ಯಾದಿ ಇತ್ಯಾದಿ..

ಇದರ ನಡುವೆ ತಾನು ಪ್ರೀತಿಸುವ ಮಧುಮಿತ ಅಣ್ಣ ರಂಜಿತ್ ಕುಮಾರ್ ಎಂಬುದನ್ನು ತಿಳಿಯುವ ಅಭಿರಾಮ್,,
ತನ್ನ ತಂಗಿಯನ್ನು ಮದುವೆಯಾಗುವ ಹುಡುಗ ತನಗಿಂತ ಶಾರ್ಪ್ ಬುದ್ಧಿವಂತ ಆಗಿರಬೇಕು ಎಂಬ ಮಾತು,
ಭಾವಭಾಮೈದನ ಮಧ್ಯೆ ಒಂದು ಟಾಸ್ಕ್ ಬೀಳುತ್ತದೆ ಅದೇ ಸ್ಪಾರ್ಕ್ ಚಿತ್ರದ ಮೊದಲ ಪ್ರಮುಖ ಹೈಲೈಟ್.

ಒಂದು ಮುಖ್ಯ ಘಟ್ಟದಲ್ಲಿ ಅಮರ ಜ್ಯೋತಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಹಣವಿಟ್ಟು ಮೋಸ ಹೋದಾಗಕರು ಹಾಗೂ ಆ ಬ್ಯಾಂಕ್ ನಲ್ಲಿದ್ದ ದೊಡ್ಡವರ ಮಾತು ಕೇಳಿ ಗ್ರಾಹಕರನ್ನು ನಂಬಿಸಿ ಹಣ ಹಾಕಿಸಿದ ಕೆಲವು ಮಹಿಳೆಯರು ಎಲ್ಲರೂ ಒಟ್ಟಾಗಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಾಗ ಇಂತಹ ಸಮಯದಲ್ಲಿ ತುಂಬಾ ಜನ ಕ್ರಿಮಿನಲ್ ಲಾಯರ್ ಗಳಿದ್ದರೂ ಸಹ ಅಂತಹ ನೊಂದವರ ಪರವಾಗಿ ಅಖಾಡಕ್ಕೆ ಎಂಟ್ರಿಯಾಗುವ ವಕೀಲೆ ವೈದೇಹಿ ( ಜಾಕಿ ಭಾವನಾ ) ನೊಂದವರ ಪರವಾಗಿ ಧ್ವನಿ ಎತ್ತಲು ತಾನೇ ವಕಾಲತ್ತು ವಹಿಸಿ ಬ್ಯಾಂಕ್ ಹಗರಣದ ಆ ಕೇಸ್ಗೆ ಟಕ್ಕರ್ ಕೊಡುತ್ತಾಳೆ.

ಅಮರ ಜ್ಯೋತಿ ಕೋ ಆಪರೇಟಿವ್ ಬ್ಯಾಂಕ್ ಹಗರಣ ಆಗಿ ಇಷ್ಟು ಸಮಯ ಆದರೂ ಅಪರಾಧಿಗಳು ಯಾರು ಸಿಕ್ಕಿಲ್ಲ, ಹಗರಣದ ತನಿಖಾ ನೇತೃತ್ವ ವಹಿಸಿದ
S P ರಂಜಿತ್ ಕುಮಾರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಷ್ಟೇ ಯಾಕೆ ಈ ಹಗರಣದಲ್ಲಿ ಇವರು ಕೂಡ ಶಾಮಿಲ್ ಆಗಿದ್ದಾರೆ ಎಂಬ ಗಂಭೀರ ಆರೋಪ ಮಾಡಿದಾಗ ಇಲ್ಲಿ ಮತ್ತೊಂದು ಪ್ರಮುಖ ಟ್ವಿಸ್ಟ್ ಆಗುತ್ತದೆ,
ಅಲ್ಲಿಗೆ ತನಕ ನಡೆದಿದ್ದ ತನಿಖೆ ಮತ್ತು ಇನ್ನಿತರ ಮಾಹಿತಿಯನ್ನು ಗಮನಿಸಿದಾಗ ಎಲ್ಲರಿಗೂ ಎಸ್ಪಿ ರಂಜಿತ್ ಮೇಲೆ ಸಂಶಯ ಬರುತ್ತದೆ ನಾಯಕ ಅಭಿಗು ಸೇರಿ.

ಇಂತಹ ಬಿಸಿ ಬಿಸಿ ಚರ್ಚೆ ಬ್ರೇಕಿಂಗ್ ನ್ಯೂಸ್ ಹಾವಳಿಗಳ ಮಧ್ಯೆ ಅಮರ ಜ್ಯೋತಿ ಕೋ ಆಪರೇಟಿವ್ ಬ್ಯಾಂಕ್ ಗೆ ಸಂಬಂಧಪಟ್ಟಂತಹ ಅತ್ಯಂತ ಪ್ರಮುಖ ಆರೋಪಿ ರಾಕೀ ಎಂಬ ಹುಡುಗನ ಕೊಲೆ ಆಗುತ್ತದೆ,ಈತ ದೊಡ್ಡ ರಾಜಕೀಯ ನಾಯಕ ( ರಮೇಶ್ ಇಂದಿರಾ ) ಮಗ, ರಾಕೀ ಕೊಲೆಯಾದ ಸುದ್ದಿ ಸ್ಪಾರ್ಕ್ ದಂತೆ ಎಲ್ಲರ ನಿದ್ದೆಗೆಡಿಸುತ್ತದೆ.

ಹಾಗಿದ್ದರೆ ದಿವಾಳಿಯಾದ ಬ್ಯಾಂಕ್ ಜೊತೆಗೆ ಈ ರಾಖಿಯ ಸಂಬಂಧ ಏನು ??

ಅಷ್ಟಕ್ಕೂ ಈ ರಾಕಿಯನ್ನು ಕೊಲೆ ಮಾಡಿದ್ದು ಯಾರು ??

ಖಡಕ್ ಪೊಲೀಸ್
S P ರಂಜಿತ್ ಕುಮಾರ್ ಪ್ರಾಮಾಣಿಕನ ಅಥವಾ ಭ್ರಷ್ಟನ ??

ಯಂಗ್ ಅಂಡ್ ಎನರ್ಜೆಟಿಕ್ ಅಭಿರಾಮ್ ಮುಂದೆ ಏನು ಮಾಡುತ್ತಾನೆ ??

ತುಂಬಾ ಜನ ಕ್ರಿಮಿನಲ್ ಲಾಯರ್ಸ್ಗಳಿದ್ದರೂ ಸಹ ವೈದೇಹಿ ಯಾಕೆ ಆ ಕೇಸ್ ನ್ನ ತೆಗೆದುಕೊಳ್ಳುತ್ತಾಳೆ ??

ಇಂತಹ ಇಂಟರೆಸ್ಟಿಂಗ್ ಆದಂತಹ ವಿಚಾರಗಳಿಗೆ ಉತ್ತರ ಸಿಗಬೇಕೆಂದರೆ ನೀವೆಲ್ಲರೂ ಪಾರ್ಕ್ ಚಿತ್ರವನ್ನ ನೋಡಬೇಕು.

ಪಾರ್ಕ್ ಚಿತ್ರದ ಕಥೆ ತುಂಬಾ ಗಟ್ಟಿಯಾಗಿದೆ, ಚಿತ್ರಕಥೆಯಲ್ಲಿ ಆಗಾಗ ಸಿಗುವಂತಹ ಕೆಲವು ಟ್ವಿಸ್ಟ್ ಅಂಡ್ ಟರ್ನ್ ಗಮನಸಿದಾಗ, ಅಭಿರಾಮ್ ಮತ್ತು ಮಧುಮಿತ ಬಿಟ್ಟರೆ ಬಹಳಷ್ಟು ಸಾರಿ ಎಸ್ ಪಿ ರಂಜಿತ್, ವಕೀಲೆ ವೈದೇಹಿ, ರಾಜಕಾರಣಿ ರಮೇಶ್ ಇಂದಿರಾ, ಸೇರಿದಂತೆ ಇನ್ನೂ ಹಲವು ಪ್ರಮುಖ ಪಾತ್ರಗಳು ಪಾಸಿಟಿವ್ ನಾ ಇಲ್ಲ ನೆಗೆಟಿವ್ ನಾ ಅನ್ನುವಷ್ಟು ಸಂಶಯ ಮತ್ತು ಟ್ರಿಲ್ ಆಗುವಂತೆ ನಿರ್ದೇಶಕ ಮಹಾಂತೇಶ ಹಂದ್ರಾಳ ನಿರೂಪಣೆ ಮಾಡಿದ್ದಾರೆ, ಸಂಭಾಷಣೆಗಳು ಎಲ್ಲರಿಗೂ ಮಜಾ ಕೊಡುತ್ತವೆ ಹಾಗೆ ಅಷ್ಟೇ ಕಮರ್ಷಿಯಲ್ ಆಗಿಯೂ ರೀಚ್ ಆಗುತ್ತವೆ.

ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವಂತಹ, ಕೆಲವು ಹಗರಣಗಳು ಕಣ್ಮುಂದೆ ಬಂದರು ತಪ್ಪಿಲ್ಲ, ನಾಯಕ ನಟನಾಗಿ ನಿರಂಜನ್ ಸುಧೀಂದ್ರ ಸಿಂಪ್ಲಿ ಸೂಪರ್, ಅಭಿನಯ ನೃತ್ಯ ಸಾಹಸ ಎಲ್ಲವೂ ಫೆಂಟಾಸ್ಟಿಕ್, ಎಂದಿನಂತೆ ರಚನಾ ಇಂದೋರ್ ಬಗ್ಗೆ ಹೇಳುವ ಹಾಗಿಲ್ಲ ಶಿ ಈಸ್ ವೆರಿ ಶಾರ್ಪ್, ಇನ್ನು ನೆನಪಿರಲಿ ಪ್ರೇಮ್ ಮತ್ತು ಜಾಕಿ ಭಾವನ ಹಠಕ್ಕೆ ಬಿದ್ದವರಂತೆ ನಟಿಸಿದ್ದಾರೆ ಇಂತಹ ಪಾತ್ರಗಳು ಇವರಿಬ್ಬರಿಗೂ ಯಾವತ್ತೂ ಸಿಗಬೇಕಿತ್ತು ಎನ್ನುವ ಫೀಲಿಂಗ್ ಬಂದೇ ಬರುತ್ತದೆ.

ಇನ್ನುಳಿದಂತೆ ಧರ್ಮಣ್ಣ ಕಡೂರು,ರಮೇಶ್ ಇಂದಿರಾ,ಮಹಾಂತೇಶ್, ಅಶ್ವಿನ್ ಹಾಸನ ಸೇರಿದಂತೆ ನಟಿಸಿರುವ ಎಲ್ಲ ಕಲಾವಿದರು ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದು ಹಾಗೆ ತಂತ್ರಜ್ಞಾನ ಕೆಲಸವು ಅದ್ಭುತ ಮತ್ತು ಅಚ್ಚುಕಟ್ಟಾಗಿ ಮೂಡಿಬಂದಿದೆ, ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕ್ಯಾಚಿಯಾಗಿದೆ. ಪ್ರಮೋದ್ ಮರವಂತೆ ಬರೆದ ಶಕಲಕ ಹಾಡು ಸೂಪರ್ ಹಾಡಿಗೆ ಅಷ್ಟೇ ಸಕ್ಕತ್ತಾಗಿ ನಿರಂಜನ್ ರಚನಾ ಹೆಜ್ಜೆ ಹಾಕಿದ್ದಾರೆ.

ಚಿತ್ರದ ದ್ವಿತೀಯಾರ್ಧದಲ್ಲಿ ನಿರ್ದೇಶಕರು ಬಹಳಷ್ಟು ಡೀಟೈಲ್ ಆಗಿ ಕಥೆ ಹೇಳಿದ್ದಾರೆ ಎನ್ನುವ ಫೀಲ್ ಬರುತ್ತದೆ ಆದರೂ ಓಕೆಪ ಒಮ್ಮೆ ನೋಡಬಹುದು.

ಕೊನೆಯ ಮಾತು ನಾನು ನನ್ನ ಅನೇಕ ಸ್ನೇಹಿತರಿಗೆ ಹೇಳಿದ್ದ ಮಾತು ಸತ್ಯ, ಇದರಲ್ಲಿ ನಿರಂಜನ್ ಸುಧೀಂದ್ರ ಹೀರೋ ಯಾವುದೇ ಡೌಟ್ ಇಲ್ಲ ಆದರೂ ಸ್ವಲ್ಪ ನೆಗೆಟಿವ್ ಶೇಡ್ ನಲ್ಲಿ ಕಂಡರೂ ಸಹ ನೆನಪಿರಲಿ ಪ್ರೇಮ್ ಕೂಡ ಹೀರೋನೇ….

ರವೀ ಸಾಸನೂರ್ MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.