ರೇಟಿಂಗ್ : 3.5 / 5
ಚಿತ್ರದ ನಾಯಕನ ಹೆಸರು ಕುಮಾರ್ ಕಂಸಾಳೆ ( ಗೌರಿಶಂಕರ್ SRG ) ಇವರ ತಂದೆ ಧರ್ಮತೇಜ ಕಂಸಾಳೆ ( ಬಲರಾಜ್ ವಾಡಿ )
ವೃತ್ತಿಯಲ್ಲಿ ರಂಗಭೂಮಿ ಕಲಾವಿದರು ಊರೂರು ಸುತ್ತಿ ನಾಟಕ ಪ್ರದರ್ಶನಗಳನ್ನ ನೀಡುತ್ತಾ ಜನರಲ್ಲಿ ಸಾಮಾಜಿಕ ಜಾಗೃತಿ ಸಾಮಾಜಿಕ ಪ್ರಜ್ಞೆ ಎಚ್ಚರಿಕೆಯ ಗಂಟೆ ಹೀಗೆ ಸಮಾಜದ ಬಗ್ಗೆ ಅರಿವು ಮೂಡಿಸಿ ಭ್ರಷ್ಟ ರಾಜಕಾರಣಿಗಳನ್ನ ಹಾಗೂ ಭ್ರಷ್ಟರನ್ನ ಬೈದು ವ್ಯಂಗ್ಯ ಮಾಡಿ ನಾಟಕಗಳನ್ನು ಆಡುತ್ತಿರುತ್ತಾರೆ ಅದು ಸಹ ಪ್ರಮುಖ ಪಾತ್ರದಲ್ಲಿ ನಟಿಸುವುದರ ಮೂಲಕ, ಕುಮಾರನಿಗೆ ತಾಯಿ ಇರುವುದಿಲ್ಲ ತಂದೆಯೇ ಎಲ್ಲವೂ ಆಗಿರುತ್ತಾರೆ.
ನಾಟಕಗಳನ್ನು ಮಾಡಿ ತಮ್ಮ ವಿರುದ್ಧ ಧ್ವನಿಯೆತ್ತಿದ್ದ ಕುಮಾರಣ್ಣ ತಂದೆ ಧರ್ಮತೇಜನನ್ನು , ಯಾವುದೋ ಕಾರಣವಿಲ್ಲದ ಕೇಸಲ್ಲಿ ಸಿಕ್ಕಿಹಾಕಿಸಿ ಜಲಿಸಿರುವಂತೆ ಮಾಡುವುದಲ್ಲದೆ ಆತ ಇನ್ನೇನು ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ ಮತ್ತೊಂದು ಕೇಸ್ ಹಾಕಿ ಇನ್ನೊಂದು ಜೈಲಿಗೆ ಹಾಕುತ್ತಿರುತ್ತಾರೆ. ಇಂಥದ್ದೊಂದು ದುಷ್ಟರ ಕೂಟ ಅವರ ವಿರುದ್ಧ ಕೆಲಸ ಮಾಡುತ್ತಿರುತ್ತದೆ.
ಹೀಗೆ ಒಂದು ದಿನ ಜೈಲುವಾಸದಲ್ಲಿರುವಾಗಲೇ ತಂದೆ ಧರ್ಮ ತೇಜ ತೀರಿಹೋಗಿದ್ದ ವಿಚಾರ ತಿಳಿದು ಕುಮಾರ ದುಕ್ಕಿತನಾಗುತ್ತಾನೆ ಹಾಗೂ ತಂದೆಗೆ ಕೊಟ್ಟ ಮಾತಿನಂತೆ ಬೆಳೆದು ದೊಡ್ಡವನಾದ ಮೇಲೆ ಕ್ರಿಮಿನಲ್ ಲಾಯರಾಗಿ ಚಾಣಾಕ್ಷ ರೀತಿಯಲ್ಲಿ ಹಲವಾರು ಕೇಸ್ ಗಳನ್ನ ಸಾಲ್ವ್ ಮಾಡಿ ಸೈ ಎನಿಸಿಕೊಂಡಿರುತ್ತಾನೆ. ಇದೇ ರೀತಿಯಾಗಿ ಒಂದು ಕೇಸಿನ ವಿಚಾರದಲ್ಲಿ ನಾಯಕಿ ಪೂಜಾ ( ಶೋನಾ ಲಾಡ್ವ್ ) ತಂದೆಯನ್ನು ಕೋರ್ಟ್ ಕಟಕಟೆಗೆ ಹತ್ತುವಂತೆ ಮಾಡಿ ನಂತರ ಪರಸ್ಪರ ಒಪ್ಪಂದದ ಮೇಲೆ ಕುಮಾರ್ ಕಂಸಾಳೆ ಕೇಸ್ ವಾಪಸ್ ಪಡೆದಾಗ ನಾಯಕಿ ಪೂಜಾ ಮತ್ತು ಕುಮಾರ್ ಮದ್ದೆ ಗೆಳೆತನ ಪ್ರೀತಿ ಇದು ಒಂದು ಟ್ರ್ಯಾಕ್ ನಲ್ಲಿ ನಡೆಯುತ್ತಿರುತ್ತದೆ.
ಚಿತ್ರದಲ್ಲಿ ಅಸಲಿ ಟ್ವಿಸ್ಟ್ ಸಿಗುವುದೇ..!!
ಕುಮಾರ್ ಕಂಸಾಳೆ ವಿಧಾನಸೌಧದಲ್ಲೂ ನನ್ನ ಪಾಲು ಇದೆ,ಅದು ನನಗೆ ಬೇಕೇ ಬೇಕು ಎಂದು ಕರ್ನಾಟಕದ ಎಲ್ಲ ಏಳುವರೆ ಕೋಟಿ ಜನರ ಪರವಾಗಿ ಸ್ವ ಹಿತಾಸಕ್ತಿ ಕೇಸನ್ನ ಹಾಕಿದ ಮೇಲೆ.
ಯಾವಾಗ ವಿಧಾನಸೌಧದಲ್ಲಿ ನನ್ನದು ಒಂದು ಪಾಲು ಇದೆ ನಾವು ಕೊಟ್ಟಿರೋ ಟ್ಯಾಕ್ಸಣದಲ್ಲಿ ವಿಧಾನಸೌಧ ಆಗಿದ್ದು ಎಂಬ ಲಾಜಿಕ್ ಪ್ರಶ್ನೆಯನ್ನ ಇಡುತ್ತಾನೋ ಆಗ ರಾಜ್ಯದ ಮುಖ್ಯಮಂತ್ರಿ ಆಗಿದ್ದವರ ( ಎನ್ ನರಸಿಂಹಮೂರ್ತಿ ) ಯವರ ತಲೆ ಗಿರ್ ಅನ್ನುತ್ತದೆ ಅವರ ಜೊತೆಗಿದ್ದ ಇನ್ನೊಬ್ಬ ಮಂತ್ರಿ ( ನಾಗೇಂದ್ರ ಅರಸ್ ) ಕೂಡ ಗಲಿಬಿಲಿಗೊಂಡು ಹೇಗಾದರೂ ಮಾಡಿ ಕುಮಾರ್ ಕಂಸಾಳೆಯ ಬಾಯಿ ಮುಚ್ಚಲು ಸಕಲ ಪ್ಲಾನ್ ಮಾಡಿಕೊಳ್ಳುತ್ತಾರೆ ಒಂದು ಕೋಟಿಯಿಂದ ಶುರುವಾದ ಡೀಲ್ 25 ಕೋಟಿಯ ತನಕ ಬಂದು ನಿಲ್ಲುತ್ತದೆ ಆದರೆ ವಿಚಿತ್ರ ಎಂದರೆ ಕುಮಾರ ಕಂಸಾಳೆ, ಇದ್ಯಾವುದಕ್ಕೂ ಗಮನ ಕೊಡದೆ ಜಪಯ್ಯ ಅನ್ನದೇ ಕಾಂಪ್ರಮೈಸ್ ಆಗದಿರುವುದು.
ಇದೇ ಸಮಯಕ್ಕೆ ಸರಿಯಾಗಿ ಮುಖ್ಯಮಂತ್ರಿಗಳ ಆಪ್ತ ಸ್ವಾಮೀಜಿಗಳೊಬ್ಬರ ಸಲಹೆ ಮತ್ತು ಮಾಸ್ಟರ್ ಪ್ಲಾನ್ ನ ಮೂಲಕ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಬ್ಬರನ್ನ ತಂದು ಕುಡಿಸಲು ಅಕಾಡ ಸಿದ್ಧಪಡಿಸುತ್ತಾರೆ.
ಕಹಾನಿ ಮೇ ಮತ್ತೊಂದು ಬಿಗ್ ಟ್ವಿಸ್ಟ್ ಅನ್ನೋ ಹಾಗೆ ಕ್ರಿಮಿನಲ್ ಲಾಯರ್ ಆಗಿದ್ದ ಕುಮಾರ್ ಕಂಸಾಳೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತಾನೆ, ಆದರೆ ಅದರ ಮರುಗಳಿಗೆ ಹೂಗುಚ್ಛ ಕೊಟ್ಟು ಶುಭಾಶಯ ಕೋರಲು ಬಂದಿದ್ದ ಸುಂದರವಾದ ಹೆಣ್ಣು ಮಗಳು ಸಿಎಂ ಕುಮಾರ್ ಕಂಸಾಳೆ ಮೇಲೆ ಗುಂಡು ಹಾರಿಸುತ್ತಾಳೆ.
ಮುಖ್ಯಮಂತ್ರಿಯಾಗಿ ಆಗಷ್ಟೇ ಪ್ರಮಾಣವಚನ ಸ್ವೀಕರಿಸಿದ್ದ ಕುಮಾರ್ ಕಂಸಾಳೆ ಮೇಲೆ ಗುಂಡು ಹಾರಿಸಿದ ಲೇಡಿ ಯಾರು ??
ಮಾಜಿ ಸಿಎಂ ಯಾಕೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ??
ಸಿಎಂ ಕುಮಾರ್ ಕಂಸಾಳೆ ಬದುಕಿದರಾ ಅಥವಾ ಇಲ್ಲವಾ ??
ಅಷ್ಟಕ್ಕೂ ಕ್ರಿಮಿನಲ್ ಲಾಯರ್ ಆಗಿದ್ದ ಕುಮಾರ್ ಕಂಸಾಳೆ ಯಾಕೆ ಮುಖ್ಯಮಂತ್ರಿ ಆದ ಅನ್ನುವುದೇ ಕಥೆಯ ಪ್ರಮುಖ ಹೈಲೈಟ್ ??
ಕಾಮನ್ ಮ್ಯಾನ್ ಚಿತ್ರದ ಮೊದಲಾರ್ಧ ಸ್ವಲ್ಪ ನವಲವಿಕೆಯಿಂದ ಹಾಡುಗಳಿಂದ ಪಂಚಿಂಗ್ ಸಂಭಾಷಣೆಯ ಮೂಲಕ ಸಾಗಿದರೆ ದ್ವಿತೀಯಾರ್ಧ ಸ್ವಲ್ಪ ಲ್ಯಾಗ್ ಎನಿಸುವ ಭಾವ ಮೂಡುತ್ತದೆ.
ನಟನೆಯಲ್ಲಿ ಗೌರಿಶಂಕರ್ ಚೆನ್ನಾಗಿ ನಟಿಸಿದ್ದಾರೆ, ಅವರ ಇದಕ್ಕಿಂತ ಮುಂಚಿನ ಜೋಕಾಲಿ,ರಾಜಹಂಸ ಮತ್ತು ಕೆರೆಬೇಟೆ ಚಿತ್ರಗಳ ನಿರೂಪಣ ಶೈಲಿ ಬೇರೆಯಾಗಿದ್ದರಿಂದ, ಹಾಸ್ಯ ಮಿಶ್ರಿತ ಗೌರಿಶಂಕರ್ ನ ಪಾತ್ರವನ್ನು ಸಂಪೂರ್ಣವಾಗಿ ನೋಡಲು ಸಾಧ್ಯವಾಗಿರದ ಅಭಿಮಾನಿಗಳಿಗೆ ಇಲ್ಲಿ ಗೌರಿಶಂಕರ್ ನಟನೆ ಇಷ್ಟವಾಗುತ್ತದೆ.

ಇನ್ನು ನಾಯಕಿ ಶೋನಾ,ನಾಗೇಂದ್ರ ಅರಸ್,ಎನ್ ನರಸಿಂಹಮೂರ್ತಿ, ಪ್ರಕಾಶ್ ತುಮ್ಮಿನಾಡು, ಬಲರಾಜ್ ವಾಡಿ,ಪಿಡಿ ಸತೀಶ್, ರಮೇಶ್ ಭಟ್,
ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಹಾಗೇ ಸಂಗೀತ ನಿರ್ದೇಶಕ ವಿನಯ್ ಚಂದ್ರ ವೆರಿ ಗುಡ್ ವರ್ಕ್,ಕ್ಯಾಮೆರಾ ಕೈಚಳಕ ಓಕೇ,ಇನ್ನು ಹಿರಿಯರಾದ ಓಂ ಸಾಯಿ ಪ್ರಕಾಶರಂತಹ ದಿಗ್ಗಜ ನಿರ್ದೇಶಕರ ಬಗ್ಗೆ ನಮಗೆ ಹೆಮ್ಮೆ ಇದ್ದೇ ಇರುತ್ತದೆ.
ತುಂಬಾ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ, ಒಬ್ಬ ಕಾಮನ್ ಮ್ಯಾನ್ ಆಗಿಯೇ, “ಕಾಮನ್ ಮ್ಯಾನ್” ಚಿತ್ರವನ್ನ ನೋಡಿದರೆ ಎಲ್ಲರಿಗೂ ಇಷ್ಟವಾಗಬಹುದು
ರವೀ ಸಾಸನೂರ್
MasterNews365.Com

