ಕರಿ ಕೋರ್ಟಲ್ಲಿ ಶಿವಣ್ಣ – ವಿಜಯ್…………………….!! ಮಹಾನ್ ಚಿತ್ರದ ಒಡಹುಟ್ಟಿದವಳು ಹಾಡು,ಬಿಡುಗಡೆಯಾಗುತ್ತಿದ್ದಂತೆ ಸ್ವಲ್ಪ ಭಾವುಕರಾದ ನಟ ವಿಜಯ್ ರಾಘವೇಂದ್ರ,,
“ಒಡಹುಟ್ಟಿದವಳು” ಹಾಡು,ಇಷ್ಟು ಅದ್ಭುತವಾಗಿ ಬಂದಿದೆ ಅಂತಾ ನನಗೆ ಗೊತ್ತಿರಲಿಲ್ಲ,ನಿಜ ಜೀವನಕ್ಕೂ ನನಗೆ ಹಾಡು ಕನೆಕ್ಟ್ ಆಯ್ತು,ಮತ್ತೊಂದು ವಿಶೇಷವಾದ ಅಂಶ ಅದು ಮಹಾನ್ ಚಿತ್ರದಲ್ಲಿ ಶಿವಣ್ಣ ಮಾಮಾ ಮಾಡಿದ ಪಾತ್ರ,ಅಂತಹ ಪಾತ್ರಕ್ಕೆ ಶಿವಣ್ಣ ಮಾಮಾ ಎಷ್ಟು ಸೂಕ್ತ ಆದರೂ ಅಂದ್ರೆ ವಾವ್,ಆ ಪಾತ್ರವನ್ನು ಶಿವಣ್ಣ ಮಾಡಬೇಕು ಅನ್ನೋ ಆಸೆ ನಮಗಿತ್ತು ಆದರೆ ಆ ಸಮಯ ಶಿವಣ್ಣ ಮಾಮನ ಆರೋಗ್ಯ ಸರಿ ಇರ್ಲಿಲ್ಲ ನಾನು ಕೇಳಲಿಲ್ಲ, ಆನಂತರ ನಿರ್ದೇಶಕ ಮೂಲಕ ಶಿವಣ್ಣನಿಗೆ ನಿರ್ದೇಶಕ ಮೂಲಕ ವಿಷ್ಯ ಗೊತ್ತಾದಾಗ, ಶಿವಣ್ಣನೇ ಪ್ರೀತಿಯಿಂದ ಪಾತ್ರ ಮಾಡಿದ್ದು ಅವ್ರ ವೃತ್ತಿ ಪರತೆ ಬಗ್ಗೆ ವಿಜಯ್ ಹೆಮ್ಮೆಯಿಂದ ಹೇಳಿದರು.
ನಾಯಕಿ ವರ್ಷಾ ಮಾತನಾಡಿ,ನಾನೊಬ್ಬ ಕನ್ನಡತಿ ನನಗೆ ಸ್ವಲ್ಪ ಬೇಸರ ಇರೋದು ಕನ್ನಡದಲ್ಲಿ ಇಲ್ಲಿಯತನಕ ನನಗೆ ಯಾರು ಒಳ್ಳೆಯ ಅವಕಾಶ ಕೊಟ್ಟಿಲ್ಲ ಯಾಕೆ ಅಂತಾ ಗೊತ್ತಿಲ್ಲ,ಇಲ್ಲಿಯ ತನಕ ನಾನು ತೆಲುಗು,ತಮಿಳು,ಮತ್ತು ಮಲಯಾಳಂ ನಲ್ಲಿ ಚಿತ್ರ ಮಾಡಿದ್ದೆ,ನನ್ನ ಅದೃಷ್ಟ,ಮಹಾನ್ ಚಿತ್ರದಲ್ಲಿ ನನಗೆ ತುಂಬಾ ಸವಾಲು ಅನ್ನಿಸುವ ಪಾತ್ರ ಸಿಕ್ಕಿದ್ದೆ,ಅದಕ್ಕೆ ಅವಕಾಶ ಕೊಟ್ಟಿದ್ದು ನಿರ್ದೇಶಕರು.
ವಿಜಯ್ ರಾಘವೇಂದ್ರ ಬಹಳ ಸಿಂಪಲ್ ಗ್ರೇಟ್ ಕಲಾವಿದ ಎಂದರು.
ನಿರ್ಮಾಪಕ ಪ್ರಕಾಶ್ ಬುದುರು ಮಾತನಾಡಿ,
ಮಹಾನ್ ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಬರ್ತಾ ಇರುವ ಮೊದಲ ಸಿನ್ಮಾ,ಎರಡನೆಯದು ಬೆಟಾಲಿಯನ್ ಶೂಟಿಂಗ್ ನಡೀತಾ ಇದೇ,ಮೂರನೆಯದು ಡಾರ್ಲಿಂಗ್ ಕೃಷ್ಣ ರವರ ಹೊಸ ಚಿತ್ರದ ಕೆಲಸ ನಡೀತಾ ಇದೇ.ನಿರ್ದೇಶಕಪಿ ಸಿ ಶೇಖರ್ನಮ್ಮ ಪ್ರೀತಿಯ ವಿದ್ಯಾರ್ಥಿ,ಈ ಮಹಾನ್ ಚಿತ್ರ ಮಾಡುವುದಕ್ಕೂ ಮುಂಚೆ ನಾನು ಅವರ ಬಳಿ ಕಥೆ ಕೇಳಿರಲಿಲ್ಲ ಆದರೆ ಅವರು ಮಾಡಿದ ಎಲ್ಲ ಸಿನಿಮಾಗಳನ್ನು ನಾನು ನೋಡಿದ್ದೆ, ಅವರೊಬ್ಬ ಒಳ್ಳೆಯ ಪ್ರತಿಭಾವಂತ ತಂತ್ರಜ್ಞ,ಮಹಾನ್ ಕಥೆ ಕೇಳಿದ ತಕ್ಷಣ ನನಗೆ ಖುಷಿ ಆಯ್ತು ಸೋ ಸಿನಿಮಾ ಶುರು ಮಾಡಿದ್ವಿ,ಅಂದುಕೊಂಡಂತೆ ಚಿತ್ರ ಕಂಪ್ಲೀಟ್ ಆಗಿದೆ,ಕಥೆಗೆ ಬೇಕಾದ ಕಲಾವಿದರು ಮತ್ತು ತಂತ್ರಜ್ಞರನ್ನು ನಾವು ಬಳಸಿಕೊಂಡಿದ್ದೇವೆ. ಚಿತ್ರದಲ್ಲಿನ ಒಡಹುಟ್ಟಿದವಳು ಹಾಡನ್ನು
ನನ್ನ ಸಹೋದರಿಯರಿಗೆ ಕೇಳಿಸಿದಾಗ ಅವರೆಲ್ಲ ಕನೆಕ್ಟ್ ಆದ್ರು,
ಮಹಾನ್ ಚಿತ್ರದ ನಿರ್ದೇಶಕ ಪಿ ಸಿ ಶೇಖರ್ ಮಾತನಾಡಿ.
ನನ್ನ ಗುರುಗಳಾಗಿದ್ದ ಎಲ್ಲರೂ ಸೇರಿ ಶಿಷ್ಯನ ಸಿನ್ಮಾ ನಿರ್ಮಾಣ ಮಾಡ್ತಾ ಇದಾರೆ,ನಾನೊಬ್ಬ ಅದೃಷ್ಟವಂತ ಅಂತಾ ಫೀಲ್ ಮಾಡ್ತೀನಿ.
22 ವರ್ಷ..
ಹತ್ತಕ್ಕೂ ಹೆಚ್ಚು ಸಿನಿಮಾಗಳು..
ಇಲ್ಲಿಯ ತನಕ ಮಾಡಿದ ಸಿನಿಮಾ ಕಥೆಗಳು ಓಕೇ.
ಇನ್ಮುಂದೆ ಒಂದಷ್ಟು ಗಟ್ಟಿ ಕಂಟೆಂಟ್ ಮೇಲೆ ಚಿತ್ರಗಳನ್ನು ಮಾಡೋ ಯೋಚನೆ ಮಾಡ್ತಾ ಇದೀನಿ,ಮಹಾನ್ ನನ್ನ ಜೀವನದ ಬೆಸ್ಟ್ ಸಿನಿಮಾ,ಇದೊಂದು ಜೆನ್ವಿನ್ ಐಡಿಯಾ, ಎವರ್ಗ್ರೀನ್ ಕಂಟೆಂಟ್ ಆಗಿದೆ ಅನ್ನೋ ಭಾವನೆ ನನಗಿದೆ, ಈ ಚಿತ್ರದ ಮುಖ್ಯ ಹೈಲೈಟ್ ವಿಜಯ್ ರಾಘವೇಂದ್ರ ಮತ್ತು ಬಹುಭಾಷೆಯ ನಟಿ ವರ್ಷ,ವಿಜಯ್ ರಾಘವೇಂದ್ರ ನಮ್ಮ ಕನ್ನಡದ ಬೆಸ್ಟ್ ನಟ,ಹೆವಿ ಕ್ಯಾಲಿಬರ್ ಇರುವ ನಟ.
ಅವರ ಜತೆಗೆ ಅತ್ಯಂತ ಮುಖ್ಯ ಪಾತ್ರದಲ್ಲಿ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದಾರೆ,ಅವರೇ ಮಹಾನ್ ಚಿತ್ರದ ಕೀ ಪ್ಲೇಯರ್ ಆಗುತ್ತಾರೆ ಹಾಗೆ ಅವ್ರ ಮತ್ತು ಶರತ್ ಲೋಹಿತಾಶ್ವ,ದೇವರಾಜ್,ಮಿತ್ರ,ಅವಿನಾಶ್ ಸೇರಿದಂತೆ ತುಂಬಾ ಜನರ ಕೊಲ್ಯಾಬ್ ಇದೆ,ನನ್ನ ಈ ಮಹಾನ್ ಚಿತ್ರ ದೊಡ್ಡ ಸಿನಿಮಾ ಆಗತ್ತೆ ಎನ್ನುವ ಭರವಸೆ ನನಗಿದೆ ಎಂದರು.
ಶರತ್ ಲೋಹಿತಾಶ್ವ,
ಮಹಾನ್ ಚಿತ್ರದಲ್ಲಿ ನಾನು ನೆಗೆಟಿವ್ ಶೇಡ್ ಪಾತ್ರ ಮಾಡಿದ್ದೇನೆ, ಇಲ್ಲಿಯ ತನಕ ನಾನು ಕಲಾವಿದನಾಗಿ ಬಹಳಷ್ಟು ಚಿತ್ರಗಳನ್ನು ಮಾಡಿದ್ದರು ಸಹ,ಪ್ರತಿ ಹೊಸ ಕಥೆ ಕೇಳಿದಾಗ ನಾವು ಉತ್ಸುಕರಾಗಿ ಕಥೆ ಕೇಳಿ, ಹೊಸ ಚಿತ್ರದ ಭಾಗವಾಗೋದಕ್ಕೆ ಕಾಯುತ್ತೇವೆ,ಅದಕ್ಕೆ ಉದಾಹರಣೆ ಮಹಾನ್ ಚಿತ್ರ.
ನಟನೆ ಮಾಡಿ ಬಂದ ನಂತರ ಸಿನಿಮಾ ನಮಗೆ ತುಂಬಾ ದೊಡ್ಡದಾಗಿ ಕಾಣೋದು,ಚಿತ್ರದ ಡಬ್ಬಿಂಗ್ ಹಂತದಲ್ಲಿ ಎಂದರೆ ತಪ್ಪಿಲ್ಲ,ಇವತ್ತು ಬಿಡುಗಡೆಯಾದ ಹಾಡು ನೋಡಿದಾಗ ಖುಷಿ ಆಯ್ತು,ಮಹಾನ್ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಮತ್ತು ವರ್ಷ ನಟನೆ ನೋಡಿದಾಗ ಮನಸ್ಸಿಗೆ ಮುಟ್ಟಿತು ಅನ್ನೋ ಮಾತು ಹೇಳಿ,ತಮ್ಮ ನಿಜ ಜೀವನದ ಹತ್ತಿರಕ್ಕೂ ಈ ಚಿತ್ರ ಕನೆಕ್ಟ್ ಆಯ್ತು ಎನ್ನುವ ಮೂಲಕ ಶರತ್ ಲೋಹಿತಾಶ್ವ ಸ್ವಲ್ಪ ಎಮೋಷನಲ್ ಆದರು.

ನಂತರ ಮಾತನಾಡಿದ ನಟ ಮಿತ್ರ,ನಾನೊಬ್ಬ ನಟನಾಗಿ ಹಾಗೂ ನಿರ್ಮಾಪಕನಾಗಿ ಹಲವು ಚಿತ್ರಗಳನ್ನು ಮಾಡಿದ್ದೇನೆ, ಇದೊಂದು ಅದ್ಬುತ ಕಥೆ,ನನ್ನ ಮತ್ತು ನಿರ್ದೇಶಕರ ಸ್ನೇಹ ಬಹಳ ವರ್ಷದ್ದು,ನಾನು ನಿರ್ಮಾಣ ಮಾಡಿ ನಾಯಕ ನಟನಾಗಿ ನಟಿಸಿದ್ದ ರಾಗಾ ಅನ್ನೋ ಚಿತ್ರವನ್ನು ನಿರ್ದೇಶನ ಮಾಡಿದ್ದು ಇದೇ ಪಿ ಸಿ ಶೇಖರ್,ತುಂಬಾ ಒಳ್ಳೆಯ ಕಥೆಯೊಂದಿಗೆ ನಾವು ಬರ್ತಾ ಇದೀವಿ ಸಪೋರ್ಟ್ ಮಾಡಿ ಎಂದರು.
ರವೀ ಸಾಸನೂರ್ MasterNews365.Com

