Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಶಿವಣ್ಣ” ಇನ್ *ಸತ್ಯ* ಸನ್ ಆಫ್ “ಹರಿಶ್ಚಂದ್ರ”
- ಸಿನಿಮಾ

“ಶಿವಣ್ಣ” ಇನ್ *ಸತ್ಯ* ಸನ್ ಆಫ್ “ಹರಿಶ್ಚಂದ್ರ”

ನಿರೂಪ್‌ ಭಂಡಾರಿ ನಟನೆಯ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅತಿಥಿ ಪಾತ್ರ……………….. ನಟ ನಿರೂಪ್‌ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ವಿಶೇಷ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಗ್ರ್ಯಾಂಡ್ ಎಂಟ್ರಿಯಿಂದಾಗಿ ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ತಮ್ಮ ಪಾತ್ರದ ಕುರಿತು ಮಾತನಾಡಿರುವ ಶಿವರಾಜ್‌ಕುಮಾರ್, “ಈ ಸಿನಿಮಾವನ್ನು ನಾನು ಪ್ರಮುಖವಾಗಿ ನಿರೂಪ್, ಸಾಯಿಕುಮಾರ್ ಹಾಗೂ ಆ […]

ನಿರೂಪ್‌ ಭಂಡಾರಿ ನಟನೆಯ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅತಿಥಿ ಪಾತ್ರ………………..

ನಟ ನಿರೂಪ್‌ ಭಂಡಾರಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಸತ್ಯ ಸನ್‌ ಆಫ್‌ ಹರಿಶ್ಚಂದ್ರ’ ಸಿನಿಮಾಗೆ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಸಾಥ್ ನೀಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ವಿಶೇಷ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಗ್ರ್ಯಾಂಡ್ ಎಂಟ್ರಿಯಿಂದಾಗಿ ಚಿತ್ರದ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ತಮ್ಮ ಪಾತ್ರದ ಕುರಿತು ಮಾತನಾಡಿರುವ ಶಿವರಾಜ್‌ಕುಮಾರ್, “ಈ ಸಿನಿಮಾವನ್ನು ನಾನು ಪ್ರಮುಖವಾಗಿ ನಿರೂಪ್, ಸಾಯಿಕುಮಾರ್ ಹಾಗೂ ಆ ವಿಶಿಷ್ಟ ಪಾತ್ರಕ್ಕಾಗಿಯೇ ಒಪ್ಪಿಕೊಂಡು ಮಾಡಿದ್ದೇನೆ. ತುಂಬಾ ಖುಷಿಪಟ್ಟು ಈ ಪಾತ್ರದಲ್ಲಿ ನಟಿಸಿದ್ದು, ಇದು ಅತ್ಯಂತ ವಿಭಿನ್ನ ಹಾಗೂ ನನ್ನ ಲುಕ್ ಕೂಡ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಇನ್ನು ಶಿವಣ್ಣ ಅವರ ಜೊತೆಗಿನ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡಿರುವ ನಾಯಕ ನಿರೂಪ್ ಭಂಡಾರಿ, “ಶೂಟಿಂಗ್ ಸಮಯದಲ್ಲಿ ನಾವು ನಿರ್ಮಿಸಿದ್ದ ಸೆಟ್ ಮತ್ತು ಚಿತ್ರಕಥೆಯ ಬರವಣಿಗೆ ಅವರಿಗೆ ಅಪಾರವಾಗಿ ಇಷ್ಟವಾಯಿತು. ಚಿತ್ರೀಕರಣದುದ್ದಕ್ಕೂ ಅವರು ನೀಡಿದ ಸಹಕಾರ ಮತ್ತು ಅವರ ಎನರ್ಜಿ ನಮ್ಮಿಡೀ ತಂಡಕ್ಕೆ ದೊಡ್ಡ ಸ್ಫೂರ್ತಿ ತಂದಿತು. ಅತ್ಯಂತ ಸರಳವಾಗಿ ಹಾಗೂ ಅಷ್ಟೇ ವೇಗವಾಗಿ ಅವರು ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿಕೊಟ್ಟರು” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.

ಯುವ ಪ್ರತಿಭೆ ಸಚಿನ್ ಆಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರದಲ್ಲಿ ನಿರೂಪ್‌ ಭಂಡಾರಿ ಜೊತೆಗೆ ಹಿರಿಯ ನಟ ಸಾಯಿಕುಮಾರ್ ಹಾಗೂ ನಟಿಯರಾದ ಬೃಂದಾ ಆಚಾರ್ಯ, ಅಂಕಿತಾ ಅಮರ್ ಪ್ರಮುಖ ತಾರಾಗಣದಲ್ಲಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್‌ಟೇನರ್ ಚಿತ್ರವಾಗಿದ್ದು, ನಿರೂಪ್ ಇಲ್ಲಿ ‘ಸತ್ಯ’ ಎಂಬ ವಿಚಿತ್ರವಾಗಿ ಯೋಚಿಸಿ ಎಂತಹದ್ದೇ ಸಮಸ್ಯೆಯನ್ನೂ ಬಗೆಹರಿಸುವ ಬುದ್ಧಿವಂತ ಯುವಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆ ‘ಹರಿಶ್ಚಂದ್ರ’ನ ಪಾತ್ರಕ್ಕೆ ನಟ ಸಾಯಿಕುಮಾರ್ ಜೀವ ತುಂಬಿದ್ದಾರೆ.

ತೀರ್ಥಹಳ್ಳಿ, ಚನ್ನಗಿರಿ ಸೇರಿದಂತೆ ಬಹುತೇಕ ಮಲೆನಾಡಿನ ಸುಂದರ ತಾಣಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ಮೊದಲಾರ್ಧ ಸಂಪೂರ್ಣ ಹಾಸ್ಯಮಯವಾಗಿದ್ದು, ದ್ವಿತೀಯಾರ್ಧದಲ್ಲಿ ಪ್ರಮುಖ ಸಾಮಾಜಿಕ ಕಾಳಜಿಯ ವಿಷಯದ ಜೊತೆಗೆ ಸಣ್ಣ ಕೋರ್ಟ್‌ ರೂಮ್‌ ಡ್ರಾಮಾ ಕೂಡ ಇರಲಿದೆ. ವಿಶೇಷವೆಂದರೆ ಈ ಚಿತ್ರಕ್ಕೆ ನಿರೂಪ್‌ ಭಂಡಾರಿ ಅವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.

ತಾರಾಗಣದಲ್ಲಿ ಸ್ವಾತಿ ಗುರುದತ್, ಎಂ.ಕೆ. ಮಠ, ಚೇತನ್ ದುರ್ಗಾ ಸೇರಿದಂತೆ ಹಲವು ಕಲಾವಿದರಿದ್ದಾರೆ. ‘ಅಂಕಿತ್ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಅಂಕಿತ್ ಸೋನಿಗಾರ ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ ಸಂದೀಪ್ ವಲ್ಲೂರಿ ಛಾಯಾಗ್ರಹಣ, ಸಚಿನ್ ಬಸ್ರೂರು ಸಂಗೀತ ಹಾಗೂ ಉಜ್ವಲ್ ಚಂದ್ರ ಅವರ ಸಂಕಲನವಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.