Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕ್ರೇಜಿ ಸ್ಟಾರ್ ಇನ್ ಪ್ಯಾರ್
- ಸಿನಿಮಾ

ಕ್ರೇಜಿ ಸ್ಟಾರ್ ಇನ್ ಪ್ಯಾರ್

ಪ್ಯಾರ್ ಚಿತ್ರ ನನ್ನ ಜೀವನದ ಅತಿದೊಡ್ಡ ಕನಸು,ನೀವು ಕೊಡುವ ಪ್ರೀತಿಗಾಗಿ ನಾನು ಕಾಯ್ತಾ ಇದ್ದೀನಿ,ಕಳೆದ ನಾಲ್ಕು ವರ್ಷಗಳಿಂದ ಪ್ಯಾರ್ ಚಿತ್ರಕ್ಕಾಗಿ ನಾನು,ನಾವೆಲ್ಲ ಬಹಳ ಶ್ರಮ ಪಟ್ಟಿದ್ದೇವೆ ಎನ್ನುವುದರ ಮೂಲಕ ಮಾತು ಶುರು ಮಾಡಿದರಿಶ್ವಿನ್,ತಂದೆ ಮಗಳ ಬಾಂಧವ್ಯದ ಗಟ್ಟಿ ಕಥಾ ಎಳೆ ನೋಡುಗರಿಗೆ ಸಿಗಲಿದೆ,ಪ್ಯಾರ್ ಅನ್ನೋ ಪದಕ್ಕೆ ಪರ್ಯಾಯ ಪದವೇ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಸರ್ ಎನ್ನುವುದರ ಮೂಲಕ,ಕನಸುಗಾರನಿಗೆ ಒಂದು ಹ್ಯಾಟ್ಸಾಫ್ ಹೇಳಿದ್ರು. ವಿ ರವಿಚಂದ್ರನ್ ಸರ್ ಈ ಚಿತ್ರದಲ್ಲಿ ನನ್ನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಅಂತಹ ಲೆಜೆಂಡ್ಸ್ […]

ಪ್ಯಾರ್ ಚಿತ್ರ ನನ್ನ ಜೀವನದ ಅತಿದೊಡ್ಡ ಕನಸು,ನೀವು ಕೊಡುವ ಪ್ರೀತಿಗಾಗಿ ನಾನು ಕಾಯ್ತಾ ಇದ್ದೀನಿ,ಕಳೆದ ನಾಲ್ಕು ವರ್ಷಗಳಿಂದ ಪ್ಯಾರ್ ಚಿತ್ರಕ್ಕಾಗಿ ನಾನು,ನಾವೆಲ್ಲ ಬಹಳ ಶ್ರಮ ಪಟ್ಟಿದ್ದೇವೆ ಎನ್ನುವುದರ ಮೂಲಕ ಮಾತು ಶುರು ಮಾಡಿದ
ರಿಶ್ವಿನ್,ತಂದೆ ಮಗಳ ಬಾಂಧವ್ಯದ ಗಟ್ಟಿ ಕಥಾ ಎಳೆ ನೋಡುಗರಿಗೆ ಸಿಗಲಿದೆ,ಪ್ಯಾರ್ ಅನ್ನೋ ಪದಕ್ಕೆ ಪರ್ಯಾಯ ಪದವೇ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಸರ್ ಎನ್ನುವುದರ ಮೂಲಕ,ಕನಸುಗಾರನಿಗೆ ಒಂದು ಹ್ಯಾಟ್ಸಾಫ್ ಹೇಳಿದ್ರು.

ವಿ ರವಿಚಂದ್ರನ್ ಸರ್ ಈ ಚಿತ್ರದಲ್ಲಿ ನನ್ನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ಅಂತಹ ಲೆಜೆಂಡ್ಸ್ ಜೊತೆ ಮಾಡಿದ ಜರ್ನಿ ಇದರಲ್ಲಿ ನಾನು ಅತೀವ ಪಾತ್ರಧಾರಿಯಾಗಿ ಕಾಣಿಸಿದ್ದು,ಈಗಾಗಲೇ ನಾನು ಮನದ ಕಡಲು ಸಿನ್ಮಾ ಮೂಲಕ ಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಇದು ನನ್ನ ಎರಡನೇ ಪ್ರಾಜೆಕ್ಟ್.ಅತೀವ ಅನ್ನೋ ಪಾತ್ರ ಸಿಕ್ಕಾಪಟ್ಟೆ ಬೋಲ್ಡ್ ಅಂಡ್ ಪವರ್ಫುಲ್ ಕ್ಯಾರೆಕ್ಟರ್ ನನ್ನದು ಅಂದ್ರು ಹಾಗೆ ಮಾತು ಮುಂದುವರೆಸಿದ ರಾಶಿಕಾ ಶೆಟ್ಟಿ ತಾವು ಭಾಗವಹಿಸಿದ್ದ ಬಿಗ್ಬಾಸ್ ರಿಯಾಲಿಟಿ ಷೋ ನನ್ನನ್ನ ಇಡೀ ಕರ್ನಾಟಕಕ್ಕೆ ಪರಿಚಯ ಮಾಡಿ ಕೊಡ್ತು.

ನಿರ್ಮಾಪಕಿ ನಾಗಶ್ರೀಯವರ ಪ್ರತಿ ಮಾತಲ್ಲಿಯೂ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಬಗ್ಗೆ ಪ್ರಸ್ತಾಪ ಇತ್ತು ಕಾರಣ,ಅವ್ರ ಪ್ರಸೆನ್ಸ್ ನಮ್ಮಂತಹ ಹೊಸ ತಂಡಕ್ಕೆ ಎಷ್ಟು ಪ್ರಾಮುಖ್ಯತೆ ಪಡೆಯುತ್ತಾ ಅನ್ನೋದು ಚಿತ್ರ ನೋಡಿದ ಮೇಲೆ ಗೊತ್ತಾಗತ್ತೆ,ನಮ್ಮ ಬ್ಯಾನರ್ ನಿಂದ ಒಂದೊಳ್ಳೆ ಸದಭಿರುಚಿಯ ಚಿತ್ರ ಮಾಡಿದ್ದು ನಮಗೆ ಹೆಮ್ಮೆ ತಂದಿದೆ.

ಪ್ಯಾರ್ ಚಿತ್ರ ನಿರ್ದೇಶಕ,ಎಸ್ ಸುಪ್ರೀತ್,ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್,ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಸರ್ ನಮ್ಮ ಚಿತ್ರದ ಮುಖ್ಯ ಹೈಲೈಟ್,ನಾಯಕಿಯ ತಂದೆಯಾಗಿ ನಮ್ಮ ರವಿಚಂದ್ರನ್ ಅವ್ರು ತುಂಬಾ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ, ಎಂಬುದರ ಮೂಲಕ ಮಾತು ಶುರು ಮಾಡಿದ,ನಿರ್ದೇಶಕ ಎಸ್ ಸುಪ್ರೀತ್..ಇವತ್ತು ರಿಲೀಸ್ ಆದ ಪ್ಯಾರ್ ಚಿತ್ರದ ಟೀಸರ್,ನಿಮ್ಮಿಂದ ಸಿಕ್ಕ ಈ ಅಭಿಮಾನಕ್ಕೆ ನಮ್ಮ ತಂಡ ಚಿರಋಣಿ.ಇಲ್ಲಿಯ ತನಕ ಬಿಡುಗಡೆಯಾದ ಪ್ಯಾರ್ ಹಾಡುಗಳ ಬಗ್ಗೆ ಇನ್ನಿತರ ಕಂಟೆಂಟ್ ಗಳ ಬಗ್ಗೆ ಮಾತಾಡಿದ್ದೆ,ಆದ್ರೆ ಇವತ್ತು ಚಿತ್ರದ ಪ್ರಮುಖ ಘಟ್ಟದ ಬಗ್ಗೆ ಹೇಳುವುದಾದರೆ, ನಿರ್ಮಾಪಕಿ H S ನಾಗಶ್ರೀ ಒಬ್ಬ ಹೆಣ್ಣುಗಳಾಗಿ ಪ್ಯಾರ್ ಚಿತ್ರಕ್ಕಾಗಿ ತೆಗೆದುಕೊಂಡ ರಿಸ್ಕ್ ದೊಡ್ದದು.
ನಿರ್ದೇಶಕನಾಗಿ ಕಥೆ ಬರೆದು,ಅವ್ರಿಗೆ ಒಪ್ಪಿಸಿ ಸಿನ್ಮಾ ಶುರು ಮಾಡ್ದೆ,ಆದ್ರೆ ಚಿತ್ರೀಕರಣ ಶುರುವಾಗುವ ಸಮಯ ನಮಗೆ ದೊಡ್ಡ ಶಕ್ತಿಯಾಗಿ ನಿಂತ ನಾಗಶ್ರೀ ಮ್ಯಾಮ್ ಬಹಳ ಜನಕ್ಕೆ ಪ್ರೇರಣೆ ಆಗ್ತಾರೆ ಎಂಬ ವಿಷ್ಯ ಹಂಚಿಕೊಂಡರು.

ತುಂಬಾ ವರ್ಷದ ನಂತರ ನಾನು ತುಂಬಾ ಒಳ್ಳೊಳ್ಳೆ ಫ್ರೇಮ್ ಇಡೋದಕ್ಕೆ ಅವಕಾಶ ಸಿಕ್ತು, ಅಂಡರ ವಾಟರ್ ಹಾಡಿನ ಚಿತ್ರೀಕರಣಕ್ಕಾಗಿ ಅಂಡಮಾನ್ ಗೆ ಹೋಗಿದ್ವಿ,ಕಾಶ್ಮೀರದಲ್ಲಿಯೂ ಒಂದೊಳ್ಳೆ ಹಾಡು ಚಿತ್ರೀಕರಣ ಮಾಡಿದ್ದೀವಿ,ಎಂದು ತಮ್ಮ ಕೆಲಸದ ಬಗ್ಗೆ ಹೇಳಿಕೊಂಡಿದ್ದು ಚಿತ್ರದ ಛಾಯಾಗ್ರಾಹಕ ಕೆ ಎಸ್ ಚಂದ್ರಶೇಖರ್.ಭಾರತದಲ್ಲಿನ ಅತೀ ಹೆಚ್ಚು ಪ್ರಖ್ಯಾತರು ಎನಿಸಿಕೊಂಡಿದ್ದ ಸಂಗೀತ ಕ್ಷೇತ್ರದ ಜನ ಕೆಲಸ ಮಾಡಿದ ಚಿತ್ರ ಪ್ಯಾರ್ ಅಂದ್ರು ಸಂಗೀತ ನಿರ್ದೇಶಕ ಪಳನಿ ಡಿ ಸೇನಾಪತಿ

ರವೀ ಸಾಸನೂರ್ MasterNews365

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.