ಹೊಸ ಹುಡುಗರ ಪ್ರತಿ ಪ್ರಯತ್ನವೂ ಹೊಸ ಯೋಚನೆಗಳಿಂದ ಕೂಡಿರತ್ತೆ, ವಿವೇಕ್ ಸಿಂಹ ನನಗೆ ಹಳೆಯ ಪರಿಚಯ ತುಂಬಾ ಬ್ರಿಲಿಯಂಟ್ ನಟ,ಆತನ ಜೊತೆಗೆ ಒಂದೊಳ್ಳೆ ತಂಡ ಇದೆ,ಅವರೆಲ್ಲ ಮಾಡಿರೋ ಒಂದೊಳ್ಳೆ ಪ್ರಯತ್ನ ಅನಿರೀಕ್ಷಿತ ಅತಿಥಿಗಳು.
ಟ್ರೈಲರ್ ಇವತ್ತು ರಿಲೀಸ್ ಆಗ್ತಾ ಇದೆ ಆದ್ರೆ ಈಗಾಗಲೇ ಟ್ರೈಲರ್ ನಾನು ನೋಡಿರುವುದರಿಂದ,
ತುಂಬಾ ನಿರೀಕ್ಷೆ ಹುಟ್ಟಿಸುವ ಕಂಟೆಂಟ್ ಇದಾಗಿರತ್ತೆ ಅನ್ನೋ ಭರವಸೆ ನನಗಿದೆ ಎನ್ನುತ್ತಾ,ಹೊಸ ತಂಡಕ್ಕೆ ಶುಭ ಹಾರೈಸಿದರು ಪ್ರಮೋದ್ ಶೆಟ್ಟಿ.

ನಿರ್ಮಾಪಕನಾದ ನನಗೆ ಇದು ಒಂದೊಳ್ಳೆ ಪ್ರಯತ್ನ,ಸಿನಿಮಾ ಉದ್ಯಮದಲ್ಲಿ ಬಹಳ ವರ್ಷಗಳಿಂದ ತಾಂತ್ರಿಕ ವರ್ಗದಲ್ಲಿ ಇದ್ದು ಕೆಲಸ ಮಾಡಿದ್ದು, ಅನಿರೀಕ್ಷಿತ ಅತಿಥಿಗಳು ಚಿತ್ರ ನಿರ್ಮಾಣ ನನಗೆ ಎಲ್ಲ ಖುಷಿಯನ್ನು ಕೊಟ್ಟಿದ್ದು,ಚಿತ್ರ ಸೆಪ್ಟೆಂಬರ್ 18ಕ್ಕೇ ರಿಲೀಸ್ ಆಗತ್ತೆ ಎಂದು, ಹೇಳಿದ್ದು ನಿರ್ಮಾಪಕ ಬಿ ವಿನೋದ್ ಕುಮಾರ್
ಹೊಸ ತಂಡದ ಹುಡುಗರಿಗೆ ಪ್ರೋತ್ಸಾಹ ಕೊಡುವ ಎಲ್ಲರೂ ಸ್ಟಾರ್ ಇದ್ದಂಗೆ,ಅದರಲ್ಲೂ ವಿಶೇಷವಾಗಿ ಹೇಳುವುದಾದರೆ ಪ್ರಮೋದ್ ಶೆಟ್ಟಿ ನಮಗೆ ನಿಜವಾಗ್ಲೂ ಸ್ಟಾರ್ ಎಂದು ಹೇಳಿದ್ದು ನಿರ್ದೇಶಕ ಮನೋಜ್ ಅಣ್ಣಯ್ಯ,
ಅನಿರೀಕ್ಷಿತ ಅತಿಥಿಗಳು
ಚಿತ್ರಕ್ಕೆ A ಸರ್ಟಿಫಿಕೇಟ್ ಸಿಕ್ಕಿದೆ,
ಈಗಿನ ಕಾಲಘಟ್ಟದ ಕೆಲವು ಟ್ರೆಂಡಿಂಗ್ ವಿಷಯಗಳನ್ನು ಇಟ್ಕೊಂಡು ಸಿನ್ಮಾ ಮಾಡಿದ್ದೀವಿ.
ಸಸ್ಪೆನ್ಸ್,ಥ್ರಿಲ್ಲಿಂಗ್,ಕಾಮಿಡಿ,
ಪ್ರೀತಿ ಪ್ರೇಮ ಮತ್ತು ಚಿಕ್ಕ ಪ್ರಣಯ ಎಲ್ಲವೂ ಇದೆ,
ಅನಿರೀಕ್ಷಿತ ಅತಿಥಿಗಳು ಪ್ರೇಕ್ಷಕರು ಕೊಡುವ ದುಡ್ಡಿಗೆ ಮೋಸವಾಗುವುದಿಲ್ಲ.

ಬಹುತೇಕ ಎಲ್ಲ ಕಲಾವಿದರು ಮಾತಾಡುವಾಗ,ತಮ್ಮ ಚಿತ್ರದ ಜೊತೆ ಗಟ್ಟಿಯಾಗಿ ನಿಂತು,ಬಿಗ್ ಸ್ಟ್ರೆಂತ ಆದವರು ಪ್ರಮೋದ ಶೆಟ್ಟಿ,ಅವ್ರು ಹೇಳಿರೋ ಡೈಲಾಗ್,ಉಗ್ರ ಹೋರಾಟದ ಸಂಭಾಷಣೆ ಹೇಳಿ ಕಥೆಗೆ ಕನೆಕ್ಟ್ ಆದ್ರು..
ಅದರಲ್ಲೂ ಜಗ್ಗಿ ಮಾತಾಡುವಾಗ,
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ ಮೈತ್ರಿ ಚಿತ್ರದಲ್ಲಿ ನಟಿಸುವಾಗ,ನಾನು ನಿಮ್ಮ ಹಾಗೆ ಹೀರೋ ಆಗಬೇಕು ಅಂದಾಗ,ಅಪ್ಪು ಸರ್ ಆಗ್ತೀಯಾ ಹೋಗೋ ಅಂದಿದ್ದು ಈಗ ನೆನಪಾಯ್ತು ಎನ್ನುವುದರ ಮೂಲಕ ತಮ್ಮ ಮತ್ತು ಅಪ್ಪು ಮಧ್ಯ ನಡೆದ ಇಂಟ್ರೆಸ್ಟಿಂಗ್ ಮಾತುಕತೆ ಹೇಳಿ ಸ್ವಲ್ಪ ಭಾವುಕ ರಾದರು ಹಾಗೆ ಮಾತು ಮುಂದುವರೆಸಿ ಮೈತ್ರಿ ಚಿತ್ರದ ಸಮಯದಲ್ಲಿಯೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಬಗ್ಗೆ ಹೊಗಳಿದ್ದ ಮಾತು ನೆನೆದು,ಮತ್ತೊಮ್ಮೆ ಎನರ್ಜಿ ಪಡೆದುಕೊಂಡರು.
ನಾಯಕ ನಟಿಯರು ಮಾತನಾಡಿ,ನಿರ್ದೇಶಕರ ಕೆಲಸದ ಕ್ಲಾರಿಟಿ ಬಗ್ಗೆ ಹೇಳಿ,ಕನ್ನಡದಲ್ಲಿ ಇದೊಂದು ಪ್ರಾಮಿಸಿಂಗ್ ಚಿತ್ರವಾಗಿ ನಿಲ್ಲುತ್ತೆ ಎಂದು ಹೊಗಳಿದರು.
ಒಬ್ಬ ಪ್ರೇಕ್ಷಕನಾಗಿ ನಾನು ಅನಿರೀಕ್ಷಿತ ಅತಿಥಿಗಳು ಚಿತ್ರದ ಟ್ರೈಲರ್ ನೋಡಿದಾಗ ನನ್ನಲ್ಲಿ ಕುತೂಹಲ ಮೂಡಿದಂತು ನಿಜ, ಇಂತಹ ಹೊಸಬರ ಪ್ರಯತ್ನಗಳು ಯಶಸ್ವಿಯಾದಾಗ ಮತ್ತಷ್ಟು ಹೊಸ ತಂಡಗಳ ಹುಟ್ಟಿಕೊಳ್ಳುತ್ತವೆ ಹಾಗೂ ಚಂದನವನದಲ್ಲಿ ಚಂದದ ಸಿನಿಮಾಗಳನ್ನು ಮಾಡುತ್ತವೆ ಎಂಬ ಭರವಸೆ ನಮ್ಮೆಲ್ಲರಲ್ಲಿ ಮೂಡುತ್ತದೆ. ಅನಿರೀಕ್ಷಿತ ಅತಿಥಿಗಳು ಸಪ್ತಂ 18ರಂದು ಬಿಡುಗಡೆ ಆಗ್ತಿದೆ
ರವೀ ಸಾಸನೂರ್ MasterNews365

