Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಯೋಗಿ “ಫಾರೆವರ್” ಅಪ್ಡೇಟ್
- ಸಿನಿಮಾ

ಯೋಗಿ “ಫಾರೆವರ್” ಅಪ್ಡೇಟ್

ಲೂಸ್ ಮಾದ ಯೋಗಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ತುಂಬಾ ಇಂಟೆನ್ಸ್ ಆದಂತಹ ಫೀಲ್ ಕೊಡುವ ಕಲಾವಿದ, ನಾಯಕ ನಟನಾಗಿ ನಟಿಸುವುದರ ಜೊತೆ ಜೊತೆಗೆ ಯೋಗಿ, ಬೇರೆ ರೀತಿಯ ಪ್ರಮುಖ ಪಾತ್ರಗಳನ್ನು ಸೇರಿದಂತೆ ವಿಲನ್ ಪಾತ್ರಗಳಲ್ಲಿಯೂ ಸಹ ನಟಿಸಿ, ಎಂದಿನಂತೆ ತಮ್ಮ ಖಡಕ್ ಖದರನ್ನ ತೋರಿಸುತ್ತಲೇ ಬಂದಿದ್ದಾರೆ. ಕೆಲವು ತಿಂಗಳ ಹಿಂದೆ ಬಂದಂತಹ ವಿನಯರಾಜಕುಮಾರ್ ನಟನೆಯ ಗ್ರಾಮಾಯಣ ಚಿತ್ರದಲ್ಲಿನ ಯೋಗಿ ನಟನೆಯನ್ನು ಕಂಡು ಎಲ್ಲರೂ ವಾವ್ ಎಂದು ಚಪ್ಪಾಳೆ ತಟ್ಟಿದ್ದರು, ಈಗ ಯೋಗಿ ಮತ್ತೆ ಸುದ್ದಿಯಲ್ಲಿರುವುದಕ್ಕೆ […]

ಲೂಸ್ ಮಾದ ಯೋಗಿ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಮತ್ತು ತುಂಬಾ ಇಂಟೆನ್ಸ್ ಆದಂತಹ ಫೀಲ್ ಕೊಡುವ ಕಲಾವಿದ, ನಾಯಕ ನಟನಾಗಿ ನಟಿಸುವುದರ ಜೊತೆ ಜೊತೆಗೆ ಯೋಗಿ, ಬೇರೆ ರೀತಿಯ ಪ್ರಮುಖ ಪಾತ್ರಗಳನ್ನು ಸೇರಿದಂತೆ ವಿಲನ್ ಪಾತ್ರಗಳಲ್ಲಿಯೂ ಸಹ ನಟಿಸಿ, ಎಂದಿನಂತೆ ತಮ್ಮ ಖಡಕ್ ಖದರನ್ನ ತೋರಿಸುತ್ತಲೇ ಬಂದಿದ್ದಾರೆ.

ಕೆಲವು ತಿಂಗಳ ಹಿಂದೆ ಬಂದಂತಹ ವಿನಯರಾಜಕುಮಾರ್ ನಟನೆಯ ಗ್ರಾಮಾಯಣ ಚಿತ್ರದಲ್ಲಿನ ಯೋಗಿ ನಟನೆಯನ್ನು ಕಂಡು ಎಲ್ಲರೂ ವಾವ್ ಎಂದು ಚಪ್ಪಾಳೆ ತಟ್ಟಿದ್ದರು, ಈಗ ಯೋಗಿ ಮತ್ತೆ ಸುದ್ದಿಯಲ್ಲಿರುವುದಕ್ಕೆ ಕಾರಣ ಶಿವರಾಜ್ ಕುಮಾರ್ ನಟನೆಯ ಬೇಲ್ ಚಿತ್ರ.

ಬೇಲ್ ಚಿಕ್ಕದ ದ್ವಿತೀಯಾರ್ಧದಲ್ಲಿ ಎಂಟ್ರಿ ಕೊಡುವ ಲೂಸ್ ಮಾದ ಯೋಗಿ, ಯೋಗಿ ರೆಡ್ಡಿಯಾಗಿ ಸಕ್ಕತ್ತಾಗಿ ಕಾಣಿಸಿಕೊಂಡಿದ್ದಾರೆ, ಲೂಸ್ ಮಾದ ಯೋಗಿ ನಟನೆಯ ಬಗ್ಗೆ ಸ್ವತಹ ಶಿವಣ್ಣ ಕೂಡ ಮೆಚ್ಚುಗೆಯ ಮಾತುಗಳನ್ನು ಚಿತ್ರದ ಟ್ರೈಲರ್ ಟೈಮಲ್ಲಿ ಹೇಳಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ.

ಒಳ್ಳೆಯ ಕಲಾವಿದರು ಯಾರೇ ಆಗಿರಲಿ, ಭಾಷೆಯನ್ನು ಮೀರಿ ಅವರು ಬೆಳೆಯಬೇಕು ಹಾಗೂ ವಿಶೇಷವಾಗಿ ಕನ್ನಡಿಗರ ಎಲ್ಲ ಪ್ರೀತಿಯನ್ನ ಅವರು ಸಂಪಾದಿಸಬೇಕು, ಲೂಸ್ ಮಾದ ಯೋಗಿಗೆ ಆ ಎಲ್ಲ ಅರ್ಹತೆಗಳು ಇವೆ.

ಸದ್ಯ ಯೋಗಿ ನಾಯಕ ನಟನಾಗಿ 50 ಚಿತ್ರಗಳನ್ನು ಪೂರೈಸಿ, 51ನೇ ಚಿತ್ರ ಫಾರೆವರ್ ಮೂಡನಲ್ಲಿದ್ದಾರೆ..

ಲೂಸ್ ಮಾದ ಯೋಗಿ ಅಭಿನಯದ 51 ಚಿತ್ರ “ಫಾರೆವರ್”ಗೆ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಲೂಸ್ ಮಾದ ಯೋಗಿ ಅಭಿನಯದ 51 ನೇ ಚಿತ್ರ “ಫಾರೆವರ್”. ಸುಪ್ರೀಮ್ ಕ್ರಿಯೇಷನ್ಸ್ ಲಾಂಛನದಲ್ಲಿ ಎಂ.ವೆಂಕಟನಾರಾಯಣ್(ಠಾಗೋರ್ ಕೃಷ್ಣ) ನಿರ್ಮಿಸುತ್ತಿರುವ ಹಾಗೂ “ಚಂದ್ರಿಕ” ಚಿತ್ರದ ಖ್ಯಾತಿಯ ಯೋಗೇಶ್ ಎಂ ನಿರ್ದೇಶಿಸುತ್ತಿರುವ “ಫಾರೆವರ್” ಚಿತ್ರದ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ‌. ಬೆಂಗಳೂರನಲ್ಲೇ ಚಿತ್ರೀಕರಣ ನಡೆದಿದೆ. ಹೆಸರಾಂತ ನಿರ್ದೇಶಕ ರವಿವರ್ಮ ಅವರ ಸಾಹಸ ಸಂಯೋಜನೆಯಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶ ಹಾಗೂ ಖ್ಯಾತ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಅವರ ನೃತ್ಯ ಸಂಯೋಜನೆಯಲ್ಲಿ ಹಾಡೊಂದರ ಚಿತ್ರೀಕರಣ ಸೇರಿದಂತೆ ಮಾತಿನ ಭಾಗದ ಚಿತ್ರೀಕರಣ ಸಹ ಎರಡನೇ ಹಂತದಲ್ಲಿ ನಡೆದಿದೆ. ನಾಯಕ ಲೂಸ್ ಮಾದ ಯೋಗಿ, ನಾಯಕಿ ಆಕಾಂಕ್ಷ ರಾವ್, ಪ್ರಮೋದ್ ಶೆಟ್ಟಿ, ವಿಜಯ್ ಚೆಂಡೂರ್, ಗೌರವ್ ಶೆಟ್ಟಿ, ಅಶ್ವಿನ್ ಪಲ್ಲಕ್ಕಿ, ಮಾಲಾ, ಕಡ್ಡಿಪುಡಿ ಚಂದ್ರು, ಅನಂತ್ ಮುಂತಾದವರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯದಲ್ಲೇ ಮೂರನೇ ಹಂತದ ಚಿತ್ರೀಕರಣ ಸಹ ಆರಂಭವಾಗಲಿದೆ.

ಈ ಚಿತ್ರದಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್ ಸೇರಿದಂತೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ರಘು ನಿಡುವಳ್ಳಿ ಅವರದು. ಪ್ರದ್ಯೂತನ್ ಸಂಗೀತ ನಿರ್ದೇಶನ ಹಾಗೂ ಸಂಕೇತ್ ಛಾಯಾಗ್ರಹಣ “ಫಾರೆವರ್” ಚಿತ್ರಕ್ಕಿದೆ.

ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ಎಲ್ಲರ ಗಮನ ಸೆಳೆದಿದ್ದು, ಯೋಗಿ ಅವರು ಬೈಕ್ ಲವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.