KVN – ಚಿರಂಜೀವಿ
ಮೆಗಾ ಕಾಂಬೋ ಕಾಕಾ….
ಕನ್ನಡ ಸೇರಿ ಯಾವುದೇ ಭಾಷೆಯ ಚಿತ್ರಗಳಾಗಲಿ, ಆಯಾ ಚಿತ್ರಗಳ ಮೇಕಿಂಗ್ ಆಯಾ ಚಿತ್ರಗಳ ಸ್ಟಾರ್ ಕ್ಯಾಸ್ಟ್ ಹಾಗೂ ಆಯಾ ಚಿತ್ರಗಳ ಬಜೆಟ್ ವಿಚಾರಕ್ಕೆ, ಕೆವಿಎನ್ ಸಂಸ್ಥೆ ಯಾವತ್ತೂ ಹಿಂದೇಟು ಹಾಕಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷ್ಯ..
ಮೊದಮೊದಲು ಕನ್ನಡ ಚಿತ್ರಗಳನ್ನು ದೊಡ್ಡಮಟ್ಟದಲ್ಲಿ ನಿರ್ಮಾಣ ಮಾಡಿ, ಯಾರು ಊಹಿಸಲಾಗದ ರೇಂಜಿನಲ್ಲಿ ದೊಡ್ಡ ರಿಸ್ಕ್ ಅನ್ನ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದ KVN ಸಂಸ್ಥೆ ನಿಧಾನವಾಗಿ ತನ್ನ ಹೆಜ್ಜೆಯನ್ನ ಇಟ್ಟಿದ್ದು ಪರಭಾಷೆಗಳತ್ತ,
ಈಗಾಗಲೇ ಕನ್ನಡ ಸೇರಿ ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡಿ ತನ್ನ ವ್ಯಾಪ್ತಿಯನ್ನ ಹೆಚ್ಚಿಸಿಕೊಂಡಿದ್ದ ಕೆವಿಎಂ ಸಂಸ್ಥೆ ಈಗ,
ಮೆಗಾಸ್ಟಾರ್ ಚಿರಂಜೀವಿ ಅವರ ಕಾಕಾ ಸಿನಿಮಾ ನಿರ್ಮಾಣ ಮಾಡುವುದರ ಮೂಲಕ ಟಾಲಿವುಡ್ ಗು ಲಗ್ಗೆ ಇಟ್ಟಿದ್ದಾರೆ.

ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 158ನೇ ಚಿತ್ರ ಇದೊಂದು ಹೈ ವೋಲ್ಟೇಜ್ ಇರುವ ಆಕ್ಷನ್ ಚಿತ್ರವಾಗಿದ್ದು,ಇದರಲ್ಲಿ ಮಲಯಾಳಂ ನಟಿ ಅನಸ್ವರ್ ರಾಜನ್ ಹಾಗೂ ನಿವೇದಾ ಪೇತುರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ,ಚಿತ್ರಕ್ಕೆ ತಮನ್ ಎಸ್ ಸಂಗೀತ ನೀಡಿದ್ದಾರೆ.ಈಗಾಗಲೇ ಕಾಕಾ ಚಿತ್ರದ ಚಿತ್ರೀಕರಣ ಶೇಕಡ 50ರಷ್ಟು ಮುಗಿದಿದ್ದು, ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಿದ್ಧವಾಗಿದೆ.
ಮೆಗಾಸ್ಟಾರ್ ಚಿರಂಜೀವರ ಹುಟ್ಟು ಹಬ್ಬದ ಪ್ರಯುಕ್ತ ( ಆಗಸ್ಟ್ 22 ) ಮೆಗಾ @158 ಚಿತ್ರದ ಟೈಟಲ್ ಗ್ಲಿಂಪ್ಸಸ್ ಬಿಡುಗಡೆ ಮಾಡಿದ್ದು,ಚಿರಂಜೀವಿ ಮತ್ತು ಕಮರ್ಷಿಯಲ್ ನಿರ್ದೇಶಕ ಬಾಬಿ ಕೊಲ್ಲಿ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ಇದಾಗಿದ್ದು ಇದರ ಶೀರ್ಷಿಕೆ ಕಾಕಾ.ಚಿಕ್ಕದೊಂದು ಲೆದರ್ ಬ್ಯಾಗ್ ಹಿಡಿದುಕೊಂಡ, ಸ್ಟೈಲಿಶ್ ಸ್ಪೆಕ್ಸ್ ಹಾಕಿರುವ ಚಿರಂಜೀವಿ ಅವರ ಆ ಗೆಟಪ್ ಕುತೂಹಲ ಮೂಡಿಸಿದೆ
ರವೀ ಸಾಸನೂರ್

