Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಫಾದರ್ ಡಿಸ್ಟ್ರಿಬ್ಯೂಷನ್ ಪಡೆದ ಮ್ಯಾಕೀಸ್
- ವಿಶೇಷ ಸಮಾಚಾರ

ಫಾದರ್ ಡಿಸ್ಟ್ರಿಬ್ಯೂಷನ್ ಪಡೆದ ಮ್ಯಾಕೀಸ್

ಮ್ಯಾಕೀಸ್ ತೆಕ್ಕೆಗೆ ಫಾದರ್ ಖುಷಿಯಾಗಿದೆ ಏಕೋ ನಿನ್ನಿಂದಲೇ ಹಾಡು ಇವತ್ತಿಗೂ ಎಷ್ಟೋ ಜನರ ಫೇವರೆಟ್ ರಿಂಗ್ಟೋನ್ ಆಗಿದೆ ಅಷ್ಟೇ ಅಲ್ಲ ಎಷ್ಟೋ ಜನರು ತಮ್ಮ ಪ್ಲೇ ಲಿಸ್ಟ್ ನಲ್ಲಿ ಈ ಹಾಡನ್ನು ತಪ್ಪದೆ ಇಟ್ಟು ಕೊಂಡಿರುತ್ತಾರೆ, ಇಂತದ್ದೊಂದು ಸುಮಧುರ ಹಾಡಿನ ಸೃಷ್ಟಿಕರ್ತ ಆರ್ ಚಂದ್ರು.,ತಾಜ್ ಮಹಲ್ ಚಿತ್ರದಿಂದ ಇಲ್ಲಿಯ ತನಕ ಆರ್ ಚಂದ್ರು ಮಾಡಿರುವ ಬಹುತೇಕ ಸಿನಿಮಾಗಳು ಒಂದಕ್ಕೊಂದು ವಿಭಿನ್ನವಾದ ಅಂತಹ ಸಿನಿಮಾಗಳೇ ಅದರಲ್ಲೂ ತಾಜಮಹಲ್ ಹಾಗೂ ಮೈಲಾರಿ ಇವತ್ತಿಗೂ ಮಾಸ್ಟರ್ ಪೀಸ್.. ಇತ್ತೀಚಿಗೆ ಆರ್ ಚಂದ್ರು […]

ಮ್ಯಾಕೀಸ್ ತೆಕ್ಕೆಗೆ ಫಾದರ್

ಖುಷಿಯಾಗಿದೆ ಏಕೋ ನಿನ್ನಿಂದಲೇ ಹಾಡು ಇವತ್ತಿಗೂ ಎಷ್ಟೋ ಜನರ ಫೇವರೆಟ್ ರಿಂಗ್ಟೋನ್ ಆಗಿದೆ ಅಷ್ಟೇ ಅಲ್ಲ ಎಷ್ಟೋ ಜನರು ತಮ್ಮ ಪ್ಲೇ ಲಿಸ್ಟ್ ನಲ್ಲಿ ಈ ಹಾಡನ್ನು ತಪ್ಪದೆ ಇಟ್ಟು ಕೊಂಡಿರುತ್ತಾರೆ, ಇಂತದ್ದೊಂದು ಸುಮಧುರ ಹಾಡಿನ ಸೃಷ್ಟಿಕರ್ತ ಆರ್ ಚಂದ್ರು.,ತಾಜ್ ಮಹಲ್ ಚಿತ್ರದಿಂದ ಇಲ್ಲಿಯ ತನಕ ಆರ್ ಚಂದ್ರು ಮಾಡಿರುವ ಬಹುತೇಕ ಸಿನಿಮಾಗಳು ಒಂದಕ್ಕೊಂದು ವಿಭಿನ್ನವಾದ ಅಂತಹ ಸಿನಿಮಾಗಳೇ ಅದರಲ್ಲೂ ತಾಜಮಹಲ್ ಹಾಗೂ ಮೈಲಾರಿ ಇವತ್ತಿಗೂ ಮಾಸ್ಟರ್ ಪೀಸ್..

ಇತ್ತೀಚಿಗೆ ಆರ್ ಚಂದ್ರು ಮತ್ತೆ ಸುದ್ದಿಯಲ್ಲಿರುವುದು ಫಾದರ್ ಎಂಬ ಎಮೋಷನಲ್ ಸಿನಿಮಾವನ್ನ ನಿರ್ಮಾಣ ಮಾಡುತ್ತಿರುವುದರಿಂದ, ಪ್ರಕಾಶ್ ರಾಜ್ ಅವರ ಆ ಮುಗ್ಧ ಗೆಟಪ್ ನೋಡಿದಾಗ ಎಂತವರಿಗು ಸಹ ಅವರವರ ತಂದೆ ನೆನಪಾಗುತ್ತಾರೆ ಅವರ ಆ ಕಾಸ್ಟ್ಯೂಮ್ ಆ ಮುಗ್ಧತೆ ಎಲ್ಲವನ್ನು ಚಂದ್ರು ತುಂಬಾ ಚೆನ್ನಾಗಿ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ ಅನ್ನೋ ಸೂಚನೆ ಸಿಕ್ಕಿದೆ ಇನ್ನೂ ಪ್ರಕಾಶ್ ರಾಜ್ ಅವರ ಮಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಕಾಣಿಸಿಕೊಂಡಿದ್ದು ಇಬ್ಬರ ಕಾಂಬಿನೇಷನ್ ನ ಕೆಲವು ಪೋಸ್ಟರ್ಸ್ ಗಳು ಕೆಲವು ಕಂಟೆಂಟ್ ಗಳು ಚಿತ್ರವನ್ನ ನೋಡಲೇಬೇಕೆಂಬ ಹಂತಕ್ಕೆ ತಂದು ನಿಲ್ಲಿಸಿವೆ.

ಹೇಳಿ ಕೇಳಿ ಫಾದರ್ ಅಪ್ಪ ಮಗನ ಕಥೆ ಹೊಂದಿರುವುದರಿಂದ ಆರ್ ಚಂದ್ರು ಮತ್ತೊಮ್ಮೆ ಅಭಿಮಾನಿಗಳ ಮೂಡಿ ಮಾಡಲಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ ಅಂದ ಹಾಗೆ ಈ ಚಿತ್ರದ ನಿರ್ದೇಶಕರು ರಾಜ್ ಮೋಹನ್.

ಒಂದು ಕಡೆ ಲವ್ ಮಾಡೆಲ್ ಸರಣಿಯ ಯಶಸ್ವಿ ನಟನ ತೂಕ ಮತ್ತೊಂದು ಕಡೆ ಪ್ರಕಾಶ್ ರಾಜ್ ಎಂಬ ದೈತ್ಯ ಪ್ರತಿಭೆಯ ಅನಾವರಣ, ಇವೆರಡರ ಮಧ್ಯೆ ಆರ್ ಚಂದ್ರು ಎಂಬ ಮ್ಯಾಜಿಕಲ್ ಮ್ಯಾನ್.

ಆಗಸ್ಟ್ 25ರಂದು ಸಂಜೆ 4 ಗಂಟೆಗೆ ಬಿಡುಗಡೆಯಾಗಲಿರುವ ಫಾದರ್ ಚಿತ್ರದ ಟೀಸರ್ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.

ರವೀ ಸಾಸನೂರ್

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.