Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕಲ್ಯಾಣಿ ಮೂಲಕ ಬಂದ್ರು – ಮೈತ್ರಿ ಡೈರೆಕ್ಟರ್ ಗಿರಿರಾಜ್
- ಸಿನಿಮಾ

ಕಲ್ಯಾಣಿ ಮೂಲಕ ಬಂದ್ರು – ಮೈತ್ರಿ ಡೈರೆಕ್ಟರ್ ಗಿರಿರಾಜ್

ಕಲ್ಯಾಣಿ ಮೂಲಕ ಬಂದ್ರು – ಮೈತ್ರಿ ಡೈರೆಕ್ಟರ್ ಗಿರಿರಾಜ್ ಕನ್ನಡದ ಪ್ರತಿಭಾವಂತ ನಿರ್ದೇಶಕ ಬಿ ಎಂ ಗಿರಿರಾಜ್ ನಿರ್ದೇಶನದ, ಕಲ್ಯಾಣಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ,ತಮ್ಮ ಚಿತ್ರಗಳ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ,ಪ್ರತಿಭಾವಂತ ರೈಟರ್ ಕಮ್ ನಿರ್ದೇಶಕ ಗಿರಿರಾಜ್ ಬಗ್ಗೆ ಮನಸ್ಸು ತುಂಬಿ ಮಾತನಾಡಿದ,ಕನ್ನಡ ಚಿತ್ರರಂಗದ ಸಕ್ಸಸ್ ಫುಲ್ ನಿರ್ದೇಶಕಶಶಾಂಕ್. ಆಡಿಯೋ ಲಾಂಚ್ ಅನ್ನೋ ಪದ ಕೇಳಿ ಖುಷಿ ಆಯಿತು..ನಮ್ಮ ಪ್ರೀತಿಯ ಕುಮಾರ್ ನಿರ್ಮಾಣ ಮಾಡಿರುವ,ನಮ್ಮ ಆತ್ಮೀಯ ಗೆಳೆಯ ಗಿರಿರಾಜ್ ಮಾಡುವ ಪ್ರತಿ ಸಿನಿಮಾಗಳನ್ನು ಮಾಡ್ತಾನೆ […]

ಕಲ್ಯಾಣಿ ಮೂಲಕ ಬಂದ್ರು – ಮೈತ್ರಿ ಡೈರೆಕ್ಟರ್ ಗಿರಿರಾಜ್

ಕನ್ನಡದ ಪ್ರತಿಭಾವಂತ ನಿರ್ದೇಶಕ ಬಿ ಎಂ ಗಿರಿರಾಜ್ ನಿರ್ದೇಶನದ, ಕಲ್ಯಾಣಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ,ತಮ್ಮ ಚಿತ್ರಗಳ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದ,ಪ್ರತಿಭಾವಂತ ರೈಟರ್ ಕಮ್ ನಿರ್ದೇಶಕ ಗಿರಿರಾಜ್ ಬಗ್ಗೆ ಮನಸ್ಸು ತುಂಬಿ ಮಾತನಾಡಿದ,
ಕನ್ನಡ ಚಿತ್ರರಂಗದ ಸಕ್ಸಸ್ ಫುಲ್ ನಿರ್ದೇಶಕ
ಶಶಾಂಕ್.

ಆಡಿಯೋ ಲಾಂಚ್ ಅನ್ನೋ ಪದ ಕೇಳಿ ಖುಷಿ ಆಯಿತು..
ನಮ್ಮ ಪ್ರೀತಿಯ ಕುಮಾರ್ ನಿರ್ಮಾಣ ಮಾಡಿರುವ,ನಮ್ಮ ಆತ್ಮೀಯ ಗೆಳೆಯ ಗಿರಿರಾಜ್ ಮಾಡುವ ಪ್ರತಿ ಸಿನಿಮಾಗಳನ್ನು ಮಾಡ್ತಾನೆ ಇರ್ತಾರೆ,ನಾವೆಲ್ಲ ಒಂದು ಫಾರ್ಮ್ಯಾಟ್ ನಲ್ಲಿ ಚಿತ್ರ ಮಾಡ್ತಾ ಇರ್ತೀವಿ,ಆದ್ರೆ ಗಿರಿ ಯಾವತ್ತೂ ಡಿಫರೆಂಟ್ ಅದನ್ನು ಆತ ಸದಾ ಸಾಬೀತು ಮಾಡಿದ್ದಾರೆ,

ಕಲ್ಯಾಣಿ ಚಿತ್ರದ,
ಬಂಗಾರ ನೀರ,
ನಿನ್ನ ಲುಕ್ಕು.
ಮಾಯಾವಿ ಮಾಯಾವಿ ಹಾಡುಗಳ ಪ್ರದರ್ಶನದ ನಂತರ ಮಾತನಾಡಿದ ಕನ್ನಡದ ಉದಯೋನ್ಮುಖ ರೈಟರ್,ವಿಜಯ್ ಈಶ್ವರ ಮಾತನಾಡಿ,ನಾನು ಗಿರಿರಾಜ್ ರವರ ದೊಡ್ಡ ಅಭಿಮಾನಿ, ಕನ್ನಡ ಅಂದಾಗ ಗಿರಿರಾಜ್ ಸರ್ ನೆನಪಾಗುತ್ತಾರೆ,ಅವ್ರು ಮಾತನಾಡುವ ಕನ್ನಡ,ಬಳಸುವ ಕನ್ನಡ,ಕನ್ನಡದ ಮೇಲಿರುವ ಅವರ ಪ್ರೇಮ ಎಲ್ಲವೂ ಶುದ್ಧ,ಅವರು ನನ್ನಂತಹ ಎಲ್ಲರಿಗೆ ಪ್ರೇರಣೆ,ಕಲ್ಯಾಣಿ ಚಿತ್ರದಲ್ಲಿನ “ಮಾಯಾವಿ ಮಾಯಾವಿ” ಹಾಡು ಬರೆದಿದ್ದೇನೆ,ನಿಮ್ಮ ಪ್ರೋತ್ಸಾಹವಿರಲಿ ಎಂದರು.

ಬಿ ಎಂ ಗಿರಿರಾಜ್ ಹೇಳಿದ ಮಾತುಗಳೇ ಸಖತ್ ಆಗಿತ್ತು,
ನಮ್ಮದು ಪ್ಯಾನ್ ಇಂಡಿಯಾ ಚಿತ್ರ ಅಲ್ಲ.
ಇಂಡಿಯಾದ ಪೇನ್ ಹೇಳುವ ಕಥೆ..
ಕನ್ನಡ ಮತ್ತು ಹಿಂದಿ ಸಂಸ್ಕೃತಿ ಕುರಿತ ಹೇಳುವ ಕಥಾವಸ್ತು ಕಲ್ಯಾಣಿ.

ಅಮರಾವತಿಯಿಂದ ಹಿಡಿದು ಇಲ್ಲಿಯ ತನಕ ನಾನು ಮಾಡಿದ ಎಲ್ಲ ಚಿತ್ರಗಳು ಬೇರೆ ಬೇರೆ ರೇಂಜ್ ನ ಕಥೆಗಳು,
ಕಮರ್ಷಿಲ್ ಆಗಿ ವರ್ಕ್ ಆಗದೆ ಇರಬಹುದು, ಆದರೆ ಎಲ್ಲವೂ ಅದ್ಬುತ ಚಿತ್ರಗಳೇ.
ರಾಮರಸ ಚಿತ್ರದಲ್ಲಿ ಅವಕಾಶ ವಂಚಿತರಾದ ಕೆಲವು ಅದ್ಬುತ ಪ್ರತಿಭೆಗಳಿಗೆ ನಾವು ಕಲ್ಯಾಣಿ ಚಿತ್ರದಲ್ಲಿ ನಟಿಸಿದ್ದಾರೆ.

ಹಿರಿಯ ನಟಿ,ಬಿಗ್ ಬಾಸ್ ನ ಮಾಜಿ ಸ್ಪರ್ಧಿ,
ಯಮುನಾ ಶ್ರೀನಿಧಿ ಮಾತನಾಡಿ.ಕಲ್ಯಾಣಿ ಚಿತ್ರವನ್ನು ನಿರ್ದೇಶನ ಮಾಡಿದ್ದು, ಬಿ ಎಂ ಗಿರಿರಾಜ್ ಆದರೂ ನನ್ನನ್ನ ಚಿತ್ರಕ್ಕೆ ಆಯ್ಕೆ ಮಾಡಿದ್ದು ಮಾತ್ರ,ನಿರ್ದೇಶಕರ ಹೆಂಡ್ತಿ ಕಾತ್ಯಾಯಿನಿ.ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಕಮ್ ನಿರ್ದೇಶಕ ಗಿರಿರಾಜ್ ಅಂತಾನೆ ನಾನು ಫೀಲ್ ಮಾಡ್ತೀನಿ ಎಂದರು.

ನಾಯಕನ ಪಾತ್ರ ಮಾಡಿದ,ಸಾಮ್ರಾಟ್ ಶೆಟ್ಟಿ,ಇದು ನಾಯಕ ನಟನಾಗಿ ನನ್ನ ಮೊದಲ ಪ್ರಯತ್ನ ,ಗೌರಿಶಂಕರ್ ಪಾತ್ರದಲ್ಲಿ ನಟಿಸಿದ್ದೇನೆ, ಕಥೆ ಕೇಳಿದ ತಕ್ಷಣ,ಚಿತ್ರೀಕರಣ ಆಗುವ ಸಮಯ,ಈಗ ಔಟ್ ಪುಟ ನೋಡಿದಾಗ ಖುಷಿ ಆಗುತ್ತೆ.

ಮತ್ತೊಬ್ಬ ಕಲಾವಿದ,ಪಿ ಡಿ ಸತೀಶ್,ಗಿರಿ ಚಿತ್ರ ಅಂದಾಗ ಯಾವಾಗಲೂ ನಾನು ಥ್ರಿಲ್ ಆಗಿರ್ತೀನಿ,ಕಾರಣ ಗಿರಿರಾಜ್ ಮಾಡೋ ಕೆಲಸದ ಫಾರ್ಮ್ಯಾಟ್, ಚಿತ್ರದಲ್ಲಿ ಬಂದಿರುವ, “ದ ರಾ ಬೇಂದ್ರೆಯವರ” ಬಂಗಾರ ನೀರ ಹಾಡೊಂದು ಬೆಸ್ಟ್ ಹಾಡು,ಹಾಡಿನ ಮೂಲಕವೇ ಕಥೆ ಹೇಳುವ ಪ್ರಯತ್ನ ಆಗಿದೆ,

ನಿರ್ಮಾಪಕ ಆರ್ ಕೆ ಸಂಸ್ಥೆಯ ಮುಖ್ಯಸ್ಥ ಕುಮಾರ್ ಮಾತನಾಡಿ,
ಕನ್ನಡದಲ್ಲಿ ಬಹಳಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುವ ಪ್ರಯತ್ನದಲ್ಲಿ ಆರ್‌ಕೆ ಸಂಸ್ಥೆ ಹೆಜ್ಜೆ ಇಟ್ಟಿದ್ದು, ಕಲ್ಯಾಣಿ ಚಿತ್ರ ಒಂದೊಳ್ಳೆ ಸಾಮಾಜಿಕ ಕಳಕಳಿಯ ಸಂದೇಶ ಕೊಡುವ ಚಿತ್ರವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕಂಟೆಂಟ್ ಆಧಾರಿತ ಚಿತ್ರಗಳನ್ನೇ ಮಾಡುವ ಪ್ರಯತ್ನ ಮಾಡುತ್ತೇವೆ ಎಂದರು.

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.