Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ರಾಮ್ ಚರಣ್ – ಸುಕುಮಾರ್
- ಸಿನಿಮಾ

ರಾಮ್ ಚರಣ್ – ಸುಕುಮಾರ್

ರಾಮ್ ಚರಣ್ – ಸುಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘#RC17’ ಚಿತ್ರಕ್ಕೆ ಅದ್ಧೂರಿ ಮುಹೂರ್ತ ತೆಲುಗು ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ಜೋಡಿಗಳಲ್ಲಿ ಒಂದಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಕ್ಕೆ #RC17 ಅಧಿಕೃತವಾಗಿ ಅದ್ಧೂರಿ ಚಾಲನೆ ಸಿಕ್ಕಿದೆ. ಟಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಸಂಸ್ಥೆಗಳು ದೇಶದ ಖ್ಯಾತ ಮನರಂಜನಾ ಸಂಸ್ಥೆ ಟಿ-ಸೀರೀಸ್ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ನ […]

ರಾಮ್ ಚರಣ್ – ಸುಕುಮಾರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ‘#RC17’ ಚಿತ್ರಕ್ಕೆ ಅದ್ಧೂರಿ ಮುಹೂರ್ತ

ತೆಲುಗು ಚಿತ್ರರಂಗದ ಮೋಸ್ಟ್ ಸಕ್ಸಸ್‌ಫುಲ್ ಜೋಡಿಗಳಲ್ಲಿ ಒಂದಾದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಕ್ರಿಯೇಟಿವ್ ನಿರ್ದೇಶಕ ಸುಕುಮಾರ್ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಚಿತ್ರಕ್ಕೆ #RC17 ಅಧಿಕೃತವಾಗಿ ಅದ್ಧೂರಿ ಚಾಲನೆ ಸಿಕ್ಕಿದೆ. ಟಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಸಂಸ್ಥೆಗಳು ದೇಶದ ಖ್ಯಾತ ಮನರಂಜನಾ ಸಂಸ್ಥೆ ಟಿ-ಸೀರೀಸ್ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ನ ಮುಹೂರ್ತ ಸಮಾರಂಭವು ಹೈದರಾಬಾದ್‌ನಲ್ಲಿ ಹಲವಾರು ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಈ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೆಗಾಸ್ಟಾರ್ ಚಿರಂಜೀವಿ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಚಿತ್ರಕಥೆಯ ಪ್ರತಿಯನ್ನು ಚಿತ್ರತಂಡಕ್ಕೆ ಹಸ್ತಾಂತರಿಸಲಾಯಿತು. ಇನ್ನು ಟಿ-ಸೀರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರೆ, ಸಮಾರಂಭದಲ್ಲಿ ಉಪಸ್ಥಿತರಿದ್ದ ಖ್ಯಾತ ನಿರ್ದೇಶಕರು ಮುಹೂರ್ತದ ಶಾಟ್‌ಗೆ ಗೌರವ ನಿರ್ದೇಶನ ಮಾಡಿದರು.

ಈ ಹಿಂದೆ ರಾಮ್ ಚರಣ್ ಮತ್ತು ಸುಕುಮಾರ್ ಒಟ್ಟಾಗಿ ನೀಡಿದ್ದ ‘ರಂಗಸ್ಥಲಂ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೃಷ್ಟಿಸಿದ್ದ ದಾಖಲೆಗಳು ಅಪಾರ. ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲಾಗಿ ಉಳಿದ ಆ ಚಿತ್ರದ ನಂತರ, ಈ ಹಿಟ್ ಜೋಡಿ ಮತ್ತೆ ಒಂದಾಗಿರುವುದು ಅಭಿಮಾನಿಗಳಲ್ಲಿ ಮತ್ತು ಸಿನಿಪ್ರಿಯರಲ್ಲಿ ನಿರೀಕ್ಷೆಗಳನ್ನು ಗಗನಕ್ಕೇರಿಸಿದೆ. ಈ ಹೊಸ ಚಿತ್ರದಲ್ಲಿ ರಾಮ್ ಚರಣ್ ಸಂಪೂರ್ಣ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರಿಗಾಗಿ ನಿರ್ದೇಶಕ ಸುಕುಮಾರ್ ವಿಶಿಷ್ಟ ಪಾತ್ರವೊಂದನ್ನು ಸೃಷ್ಟಿಸಿದ್ದಾರೆ. ಇದಕ್ಕಾಗಿ ರಾಮ್ ಚರಣ್ ಸಂಪೂರ್ಣ ಮೇಕ್ ಓವರ್ ಆಗಲಿದ್ದಾರೆ.

ಚಿತ್ರದ ಅಧಿಕೃತ ಅನೌನ್ಸ್‌ಮೆಂಟ್ ಪೋಸ್ಟರ್ ಕೂಡ ಬಿಡುಗಡೆಯಾಗಿದ್ದು, ಅದ್ಭುತ ಕಲಾತ್ಮಕ ವಿನ್ಯಾಸದಿಂದ ಗಮನ ಸೆಳೆಯುತ್ತಿದೆ. ನೀಲಿ, ಹಸಿರು ಮತ್ತು ಚಿನ್ನದ ಬಣ್ಣಗಳಿಂದ ಕೂಡಿದ ಸುಂದರ ನವಿಲುಗರಿಯ ಕಲಾಕೃತಿಯಲ್ಲೇ ರಾಮ್ ಚರಣ್ ಅವರ ಮುಖವನ್ನು ಬರೆಯಲಾಗಿದೆ. ಪೋಸ್ಟರ್‌ನಲ್ಲಿರುವ “You Can Imagine” ಎಂಬ ಟ್ಯಾಗ್‌ಲೈನ್ ಸಿನಿಮಾ ಮೇಲಿನ ಹೈಪ್ ಅನ್ನು ಇನ್ನಷ್ಟು ಹೆಚ್ಚಿಸಿದೆ.

ನಿರ್ಮಾಪಕರಾದ ನವೀನ್ ಯೆರ್ನೇನಿ, ವೈ. ರವಿಶಂಕರ್, ವಿಜಯ ಪ್ರಸಾದ್ ಬಂಡ್ರೆಡ್ಡಿ ಮತ್ತು ಭೂಷಣ್ ಕುಮಾರ್ ಅವರು ಈ ಚಿತ್ರವನ್ನು ಅದ್ದೂರಿ ಬಜೆಟ್‌ನಲ್ಲಿ, ವಿಶ್ವದರ್ಜೆಯ ಮೇಕಿಂಗ್‌ನೊಂದಿಗೆ ಬೃಹತ್ ಪ್ಯಾನ್-ಇಂಡಿಯಾ ಮಟ್ಟದಲ್ಲಿ ನಿರ್ಮಿಸುತ್ತಿದ್ದಾರೆ. ಚಿತ್ರದ ಉಳಿದ ಪ್ರಮುಖ ತಾರಾಗಣ ಹಾಗೂ ತಾಂತ್ರಿಕ ಬಳಗದ ವಿವರಗಳನ್ನು ಶೀಘ್ರದಲ್ಲೇ ಚಿತ್ರತಂಡ ಅಧಿಕೃತವಾಗಿ ಪ್ರಕಟಿಸಲಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.