“ಕೊನೆಯ ಪತ್ರ”
ಮೋಷನ್ ಪೋಸ್ಟರ್
ಕನ್ನಡದ ಹುಡುಗ,ತೆಲುಗು ಭಾಷೆಯಲ್ಲಿ ಸಿನ್ಮಾ ಮಾಡ್ತಾನೆ ಅಂದ್ರೆ ತಮಾಷೆ ಅಲ್ಲ, ಇಂತದೊಂದು ಸಾಹಸಕ್ಕೆ ಕೈ ಹಾಕಿದ್ದು ನಮಗೆಲ್ಲ ಹೆಮ್ಮೆ..
ನಿರ್ಮಾಪಕ ನಾಗರಾಜು B A ಮಾತನಾಡಿ,
ನನ್ನ ಮೂಲ ಆಂಧ್ರದ ಅನಂತಪುರ ಆದ್ರು ಸಹ
ಕರ್ನಾಟಕ ಅಂದ್ರೆ ನನಗೆ ಹೆಮ್ಮೆ,ಇಲ್ಲಿ ನಾನು ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡ್ತಾ ಇದ್ದೀನಿ,ಭಾರ್ಗವ ಬಂದು ಕಥೆ ಹೇಳಿ ಸಿನ್ಮಾ ಮಾಡೋಣ ಅಂತಾ ಬಂದಾಗ,ಕಥೆ ಕೇಳಿ ನಮ್ಮದೇ ಆದಂತಹ
ಕೊಸಾಲಾ ಕ್ರಿಯೇಟಿವ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ “ಕೊನೆಯ ಪತ್ರ” ಚಿತ್ರವನ್ನು ನಿರ್ಮಾಣ ಮಾಡಿದ್ದೇನೆ,ಕೊನೆಯ ಪಾತ್ರದ ಮೂಲಕ ಒಂದೊಳ್ಳೆಯ ಸಿನಿಮಾವನ್ನು ಅಭಿಮಾನಿಗಳಿಗೆ ಕೊಡ್ತಾ ಇದ್ದೀನಿ,ಇದಕ್ಕೆ ಭಾರ್ಗವ ಹೀರೋ ಅವ್ರ ಜೊತೆಗೆ ನನ್ನ ಮಗ ಸಾಯಿ ಕಿಶೋರ್ ಕೂಡಾ ಪಾತ್ರ ಮಾಡಿದ್ದು,ಕೊನೆಯ ಪತ್ರ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಡಿಸೆಂಬರ್ ನಲ್ಲಿ ಬಿಡುಗಡೆ ಮಾಡುವ ಯೋಚನೆ ಮಾಡಿದ್ದೇವೆ,ಅದಕ್ಕೆ ಸಂಬಂಧಪಟ್ಟ. ಮಾಹಿತಿ ನಿಮಗೆ ಕೊಡ್ತೀವಿ..ನಿಮ್ಮ ಪ್ರೀತಿ ಆತನ ಮೇಲೆಯೂ ಇರಲಿ ಎಂದು ವಿನಂತಿಸಿಕೊಂಡರು.
ನಟ ನಿರ್ದೇಶಕ ಭಾರ್ಗವ ಮಾತನಾಡಿ,ಕೊನೆಯ ಪತ್ರ ಚಿತ್ರದ
ಕಥೆ,ಚಿತ್ರಕಥೆ,ಮಾಡಿ ನಿರ್ದೇಶನ ಮಾಡ್ತಾ ಇರೋದು ನನಗೆ ಸವಾಲಿನ ಕೆಲಸ ಆಗಿತ್ತು,ಇಲ್ಲಿಯವರೆಗೆ ನಾನು
ಬಹಳಷ್ಟು ಕಥೆಗಳನ್ನ ಬರೆದಿದ್ದೀನಿ,ಕೊನೆಯ ಪತ್ರ ಎರಡು ಭಾಗಗಳಲ್ಲಿ ಬರತ್ತೆ,,ಕೊನೆಯ ಪತ್ರ ಚಿತ್ರದಲ್ಲಿ,ನರಸಾಪುರದ ನರಸಪ್ಪನಾಗಿರ ಒಬ್ಬ ಮಾಸ್ ನಾಯಕನ ಪಾತ್ರದಲ್ಲಿ ನಟಿಸಿದ್ದು,ಊರಿನ ಹಲವು ಸಮಸ್ಯೆಗಳನ್ನ ಎದುರಿಸಿ ಹೋರಾಡುವ ಕಥೆ ಇದರ ಜೊತೆಗೆ ಮತ್ತು ಪ್ರೀತಿ ಪ್ರೇಮದ ಮಾಯೆ ಮತ್ತು ಛಾಯೆ ತುಂಬಾ ಚೆಂದವಾಗಿ ಕಾಣತ್ತೆ.ಈಗಾಗಲೇ ಆರು ಚಿತ್ರಗಳಲ್ಲಿ ನಾಯಕ ನಟನಾಗಿ ನಾನು ಕಾಣಿಸಿಕೊಂಡಿದ್ದು,ಎಲ್ಲವೂ ಬೇರೆ ಬೇರೆ ಜಾನರ ಕಥೆಗಳು,ಕೊನೆಯ ಪತ್ರ ಅನ್ನೋ ಚಿತ್ರವು ನನ್ನ ಸಿನಿ ಕೆರಿಯರ್ ನಲ್ಲಿ ಒಂದೊಳ್ಳೆಯ ಪ್ರಾಜೆಕ್ಟ್ ಆಗಿ ನಿಲ್ಲುತ್ತೆ..
ಸಾಯಿ ಕಿಶೋರ್ ಕೂಡಾ ನನ್ನ ಜೊತೆ ನಟಿಸ್ತಾ ಇದ್ದಾರೆ, ಇದರಲ್ಲಿ ನನ್ನ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡು,ಅವ್ರ ತಂದೆಯೇ ಈ ಚಿತ್ರದ ನಿರ್ಮಾಪಕ ಎಂದು ಹೇಳುವುದರ ಜೊತೆಗೆ,ಅನ್ನದಾತ ನಿರ್ಮಾಪಕರಿಗೆ ಧನ್ಯವಾದ ಹೇಳಿದರು.
ನಾಯಕಿ ನಟಿ ಅರಿಯಾ ಮೆನನ್ ಅವ್ರಿಗೆ
ಇದು ನನ್ನ ಮೊದಲ ತೆಲುಗು ಚಿತ್ರ,ನಾನು ಈಗಾಗಗಲೇ ಎರಡು ಕನ್ನಡ ಚಿತ್ರಗಳನ್ನು ಮಾಡಿದ್ದೇನೆ,ತೆಲುಗು ಮತ್ತು ಕನ್ನಡದಲ್ಲಿ ಒಟ್ಟಿಗೆ ಬರ್ತಾ ಇರೋ ಮೊದಲ ಚಿತ್ರ ಕೊನೆಯ ಪತ್ರ,ನನ್ನ ಪಾತ್ರ ಇಂಟ್ರೆಸ್ಟಿಂಗ್ ಆಗಿದೆ ಎಂದರು.
ಕಾರ್ಯಕ್ರಮಕ್ಕೆ ಶುಭ ಕೋರಲು ಬಂದಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧೆ,ಡಾಗ್ ಸತೀಶ್ ಹೇಳಿದ್ದು,,ನಟ ಭಾರ್ಗವ ಮಾಡಿರೋ ಎಲ್ಲ ಚಿತ್ರಗಳ ಕಾರ್ಯಕ್ರಮಕ್ಕೆ ಬಂದಿದ್ದೇನೆ,ಅವ್ರ ಎನರ್ಜಿಗೆ ನಾನು ಫ್ಯಾನ್,ಕಲಾವಿದರು ಯಾವತ್ತೂ ನಿಲ್ಲಬಾರದು,ಸಿನಿಮಾಗಳನ್ನು ಮಾಡ್ತಾನೆ ಇರಬೇಕು ಅಂದಾಗಲೇ ಸಕ್ಸಸ್ ಕಾಣತ್ತೆ, ಕೊನೆಯ ಪತ್ರ ಚಿತ್ರ, ಭಾರ್ಗವ ಮತ್ತು ತಂಡಕ್ಕೆ ಒಳ್ಳೆಯ ಹೆಸರು ಕೊಡುತ್ತೆ ಅನ್ನೋ ಭರವಸೆ ನನಗಿದೆ ಎಂದರು.

ಸಂಗೀತ ನಿರ್ದೇಶಕ PR ಮಾತನಾಡಿ ಇದರಲ್ಲಿ ಒಟ್ಟು ನಾಲ್ಕು ಹಾಡುಗಳು ಇವೆ,ಎಲ್ಲವೂ ಭಿನ್ನ ವಿಭಿನ್ನ ವಾದ ಫೀಲ್ ಕೊಡುವಂತಹ ಹಾಡುಗಳು ನಿಮಗೆ ರಂಜನೆ ನೀಡಲಿವೆ ಎಂದರು,ಚಿತ್ರಕ್ಕೆ,DOP ಯಾಗಿ ಸಾಯಿ ತಮ್ಮ ಕೈಚಳಕ ತೋರಿಸಲಿದ್ದಾರೆ.
ಬಾಹುಬಲಿ ಕಟ್ಟಪ್ಪನನ್ನು ಯಾಕೆ ಕೊಂದ ಅನ್ನೋದನ್ನ ತಿಳಿದುಕೊಳ್ಳಲು,ನಾವೆಲ್ಲ ಹೇಗೆ ಬಾಹುಬಲಿ ಮುಂದುವರೆದ ಭಾಗವನ್ನು ನೋಡಿದೆವು ಹಾಗೆ,ಕೊನೆಯ ಪತ್ರದಲ್ಲಿ ಏನಿದೆ ಅಂತಾ ತಿಳಿದುಕೊಳ್ಳಲು,ಚಿತ್ರವನ್ನು ನೋಡೋಣ ಎಂದು ಚಿತ್ರತಂಡ ಕೋರಿಕೊಂಡಿತು.
ರವೀ ಸಾಸನೂರ್
Masternews365.Com

