“ಮತ್ತ ಕುಂಬಾರ ಮಾಡಿದ ಗಡಿಗೆ ಕಡಾ ತಂದಿದಿ ಸುಮ್ಮಸುಮ್ಮನ ಕೂಲಿ ಬೇಡ್ತೀನಿ ಅಂತ ಹೇಳಿದಿ.
ಇನ್ನೂ ಗಡಗಿ ಒಂದು ಕೊಡ್ತೀನಿ
ತನ್ನ ತಾನು ತಿಳಿದ ಮೇಲೆ ಇನ್ನೇನು ಇನ್ನೇನು
ತನ್ನಂತೆ ತಾ ಸರ್ವರ ಜೀವ ಮನ್ನಿಸಿ
ಮೂಕನಾದ ಮೇಲೆ ಇನ್ನೇನು ಇನ್ನೇನು.
ತಾನೇ ಪೃಥ್ವಿ ಅಪ್ಪು ತೇಜ
ತಾನೇ ವಾಯು ಆಕಾಶ ಆತ್ಮ
ತಾನೆ ಸೂರ್ಯ ತಾರೆ ಚಂದ್ರ
ತಾನೇ ಬ್ರಹ್ಮಾಂಡ ಆದ ಮೇಲೆ
ನಿನ್ನ ಗಡಗಿ ಎಲ್ಯದ ತಗೊಂಡು ಬಾ ll ೧ ll
ಮುಂದಿನ ಭಾಗ –
ತಾನೇ ಪ್ರಾಣ ಜೀಹ್ವಾ ನೇತ್ರ
ತಾನೇ ತೊಕ್ಕು ಶ್ರೋತೃ ಹೃದಯ
ತಾನೆ ಕಾಯ ಕರುಣ ಹರಣ
ತಾನೇ ಪಿಂಡಾಂಡ ಆದ ಮೇಲೆ
ನಿನ್ನ ಗಡಿಗೆಯಲ್ಲಿ ಅದ ಹೇಳು ?
ತಾನೇ ಹೆತ್ತ ಸತ್ತ ಅತ್ತ
ತಾನೇ ನಿತ್ಯ ನುತ್ಯ ಸತ್ಯ
ತಾನೇ ಅರ್ತ ಬೆರ್ತ ಮರ್ತ
ತಾನೇ ಸರ್ವನಾದ ಮೇಲೆ
ಇನ್ನೇನಿನ್ನೇನು ?
ತಾನೇ ಸರ್ವನಾದ ಮೇಲೆ
ನಿನ್ನ ಗಡಿಗೆ ಎಲ್ಲದ ಹೇಳು ?
ತಾನೆ ಲಕ್ಷ ಸಾವಿರ ನೂರು
ತಾನೇ ಹತ್ತೊಂಬತ್ತೆಂಟೇಳು
ತಾನೇ ಆರೈದುನಾಲ್ಕುಮೂರು
ತಾನೇ ಎರಡೊಂದಾದ ಮೇಲೆ
ನಿನ್ನ ಗಡಿಗಿ ಎಲ್ಯದ ಹೇಳು ?
ತಾನೆ ನೀನು ನೀನೆ ತಾನು
ತಾನೇ ಅಲ್ಲ ತಾನೇ ಇಲ್ಲ
ತಾನೇ ಮಹಂತ ತಾನೇ ತಾನು
ಏನೋ ಏನೊಂದಾದ ಮೇಲೆ
ನಿನ್ನ ಗಡಿಗೆಯಲ್ಲದ ಹೇಳು ? ತಗೊಂಡು ಬಾ . “
ಆಕೆಗೆ 45 50 ವರುಷ ವಯಸ್ಸಾಗಿತ್ತು ಸ್ವಲ್ಪ ತೆಳ್ಳಗೂ ಇದ್ದಳು ಬೆಳಗಿದ್ಲು ಆಮೇಲೆ ಅವರು ಏಳು ಎಂಟು ಜನ ಇದ್ದರು. ಅವರು ಪದ ಹಾಡಕ್ಕೆ ಶುರು ಮಾಡಿದರು.
“ನಮ್ಮ ಎದುರಿಗೆ ನೀರಿಗೆಗಳೆಯುವುದು ಸಾಕು.
ಮುದುಕಿ ಆದಿ ಮುರುಕ ನಿನಗ್ಯಾಕ ” ಅವರು ಸಾಲಾಗಿ ಕುತ್ತಿದ್ರು ಮೊದಲಿಗೆ ಮೂವರು ಕೂಡಿ ಹಾಡುದು ಶುರು ಆತ್ರಿ .
ಮಾಯ ಮದನ ಮಂದಿರದೊಳು
ಮುಧಧಿ ಮಾತಾಡಿ ಮುಂದೆ
ಹದಗೆಟ್ಟು ಹದರ ಮಾಡಿ
ಮುಂದೆ ಬದುಕಿನ ಎಚ್ಚರ ನಿನಗಿಲ್ಲ ಕೊಡಿ
ಮುದುಕ್ಯಾದಿ ....
ನಮ್ಮ ಎದುರಿಗೆ ನಿರಿಗೆಗಳೊಡೆಯುವುದು ಸಾಕು
ಮುದುಕ್ಯಾದಿ ಮುರುಕ ನಿನಗ್ಯಾಕ ...
ಏಳೆಂಟು ಗೆಳೆಯರು ಜತ್ತ
ಹಳ್ಳಿ ಸುಳ್ಯಾರು ತಿರುಗಿದಂಗ ತಿರುಗುತ್ತಿರಿ ಎತ್ತ
ಕಾಳ ಕತ್ತಲದೊಳು ಗೊತ್ತ
ಹಾಳಗುಡಿಯೊಳಗ ಬಂಧು ಮಲಗುವ ಕತ್ತೆ
ಮುದುಕಿಯಾಗಿ ಮುರುಕ ನಿನಗ್ಯಾಕ ....
ನಮ್ಮ ಎದುರಿಗೆ ನೀರಿಗೆಗಳ ಒದೆಯುವುದು ಸಾಕು
ಮುದುಕ್ಯಾದಿ ಮುರುಕ ನಿನಗ್ಯಾಕ ...
ಸಿರಿ ಹೋಯ್ತು ತಲೆ ಬೆಳ್ಳಗಾಯಿತು
ಬುದ್ದಿ ಬರಲಿಲ್ಲ ಹಿರಿಯ ಕಿರಿಯರು ಹೇಳಲಾಗಿ
ಜನ ಹರರಿಗೆ ಗುರಿಯಾಗಿ
ಶಿಶುನಾಳಧೀಶ ಗ ಜೋಡುಗಾಯಿ
ಒಡ್ಸವ ಮುದುಕಿ
ಮುದುಕ್ಯಾದಿ ......
ಹಿಂಗ ಹಾಡಿಬಿಟ್ಟೆ ಕೂಡಿದ ಮಂದಿ ಬಲ್ಲಂಗ ಕೂಗು ಹೊಡೆದು ನನಗೆ ಎತ್ತಿಕೊಂಡುಬಿಟ್ಟರು ಎಂದು ಕಳೆದು ಹೋದ ಅಂದಿನ ದಿನದ ಹಳೆಯ ನೆನಪನ್ನು ಮೆಲಕು ಹಾಕುತ್ತಾ ಗಹಗಹಿಸಿ ನಗುವರು ಬಸಪ್ಪ ಶರಣರು.
ಇದನ್ನು ಕಂಡ ಖುಷಿಯಾದ ಗೆಳೆಯ ಮಾಸ್ಟರ್ ಚಹದ ಅಂಗಡಿ ಹೋಗಿ ನಾಷ್ಟ ಮಾಡಿಸಿ ಚಹಾ ಕುಡಿಸಿದ ಯಾಕಂದ್ರೆ ಅವನಿಗೆ ಕಂಡಾಪಟ್ಟಿ ಸಂತೋಷಾಗಿತ್ತು. ನಾವು ಚಹಾ ಕುಡಿಯಾಕ ಹೋಗಿಂದ ....
"ಇವ ಯಾರು ? ಯಾವ ಊರು ? " ಅಂತ ಗಂಡ ಜೋಗಪ್ಪ ದಾವಲಸಾಬಗ ಕೇಳಿಯಾರ.
"ನೀವ್ಯಾಕೆ ಅವಂಗ ತಡೆದಿರಿ ?"ನಾವೆಲ್ಲ ಅವನ ಕೈಯಾಗ ಸಿಕ್ಕು ಪಜಿತಿ ಆಗಿ ಹೋಗಿವೆ. ಇನ್ನೂ ಬಿಡುವುದಿಲ್ಲ ಚಹಾ ಕುಡಿದು ಮತ್ತೆ ಬರ್ತೀನಂತ ಹೇಳಿ ಹೋಗ್ಯಾನ. ಅಂತ ದಾವಲಸಾಬ್ ಅನ್ನೋದು ತಡ ಶ್ರುತಿ ಗಿತಿ ಕಟ್ಕೊಂಡು ನಾವು ಬರುದ್ರಾಗ ಅವರು ಜಾಗ ಖಾಲಿ ಮಾಡಿಬಿಟ್ಟಿದ್ದರು. ಚಹಾ ಕುಡಿದು ನಾವು ಹೊಳ್ಳಿ ಬಂದಿವ್ರಿ .
"ಎಲ್ಲಿ ಅದಾರ ಅವರು ? " ಅಂತ ದಾವಲಸಾಬಗ ಕೇಳ್ದೆ .
"ಯಾಕ ? ಇಲ್ಲಿಂದ ಅಕಿ ಮೆಟ್ಟಬಿಟ್ಲು,
"ಯಾಕಿಂಗ್ ಕಳಿಸಿದಿರಿ ? ಅಂದೆ. ಅವಾ ಚಹಾ ಕುಡಿದು ಹೊಳ್ಳಿ ಬರ್ತೀನಿ ಅಂದಾನ ನಿಮಗೆ ಬಿಡುವುದಿಲ್ಲ ಅಂದೆ, ಅದಕ್ಕೆ ಹೋಗಿಬಿಟ್ಟರು.
ಹಿಂಗೆಲ್ಲ ಜೀವನದಾಗ ಬಹಳ ಆಗ್ಯಾವಪ್ಪ.. ಎಲ್ಲಾ ಗುರುನಾಥನ ಆಶೀರ್ವಾದ ನಾವು ಮೊದಲು ತಪ್ಪು ಮಾಡಕ್ಕೆ ಹೋಗುವುದಿಲ್ಲ. ನಾವು ಏನು ಹಾಡಿದರೂ ಒಂದು ಆಧಾರ ಇಟ್ಕೊಂಡು ಹಾಡೋರು. ಇತರಹ ಉತ್ತರ ಕೊಡಬೇಕಾದರೆ ಮಹಾತ್ಮರ ಪದಗಳನ್ನು ಆಧಾರವಾಗಿಟ್ಟುಕೊಂಡು ಸಂದರ್ಭಕ್ಕ ತಕ್ಕ ಹಾಂಗ ಆ ಪದ ಬಳಸಿಕೊಳ್ಳುತ್ತೇವೆ. ಇವೆಲ್ಲ ನಮ್ಮ ಮಾತುಗಳಲ್ಲ ಮಹಾತ್ಮರ ನುಡಿಗಳು ಸವಾಲಿಗಿ ಉತ್ತರವಾಗಿ ಕೊಡುವಾಗ ಅವರನ್ನು ಉದ್ದೇಶಿಸಿ ಅದು ಬಯ್ಯುವಂತಿರುತ್ತದೆ. ಎಂಬ ವಿಷಯವನ್ನು ಎಳೆ ಎಳೆಯಾಗಿ ವಿವರಿಸುತ್ತಾ ಹೋಗುತ್ತಾರೆ ಬಸಪ್ಪ ಶರಣರು.
ಅದು ಹಾಗಲ್ಲ ಸಂದರ್ಭಕ್ಕೆ ತಕ್ಕಂತೆ ಬಳಸಿದಾಗ ಪದಗಳು ಎರಡು ಅರ್ಥ ಕೊಡ್ತಾವು. ಹಿಂಗೋ ಐತಿ ಹಂಗುವ ಐತಿ ಒಳಗೆ ದೇಹಕ್ಕೆ ಹತ್ಯದ ಹೊರಗೆ ಹತ್ಯದ ಶರೀಫ ಸಾಹೇಬರ ಪದಾರಿ ಇದು.
ಮುಂದುವರಿಯುತ್ತದೆ ….
ನಾಳಿನ ಸಂಚಿಕೆಯಲ್ಲಿ ಮತ್ತೆ ಕಾಯಿರಿ

