ಕನ್ನಡದಲ್ಲಿ ಬಹಳಷ್ಟು ವೆಬ್ ಸೀರೀಸ್ಗಳು ತನ್ನದೇ ಆದಂತಹ ಗಟ್ಟಿ ಕಂಟೆಂಟ್ ನಿಂದಾಗಿ ಸುದ್ದಿ ಮಾಡ್ತಾ ಇರೋದು ಎಲ್ಲರಿಗೂ ಗೊತ್ತಿರೋ ವಿಷ್ಯ,ಅದರಲ್ಲೂ ವಿಶೇಷವಾಗಿ ಕನ್ನಡದಲ್ಲಿ ರುವಂತಹ ದೊಡ್ಡ ದೊಡ್ಡ ಪ್ರೊಡಕ್ಷನ್ ಹೌಸಗಳು ಕೂಡಾ, ದೊಡ್ಡ ಬಜೆಟ್ ನಲ್ಲಿ ವೆಬ್ ಸೀರೀಸ್ಗಳ ನಿರ್ಮಾಣ ಮಾಡಿ,ದೊಡ್ಡ ಕ್ಯಾನ್ವಾಸ್ ನಲ್ಲಿ ಪ್ರಾಜೆಕ್ಟ್ ಮಾಡಿ,ಎಲ್ಲ ನೋಡುಗರಿಗೆ ಹೊಸ ಕಂಟೆಂಟ್ ಡೆಲಿವರಿ ಮಾಡಿದ್ದು ಸತ್ಯ..
ಮತ್ತೊಂದು ಕ್ರಿಯೇಟಿವ ಕಾನ್ಸೆಪ್ಟ್ ನೊಂದಿಗೆ RPF – AI Web Series ಎನ್ನುವ ಹೊಸ ತಂಡ ಹೊಸ ಅಪ್ಡೇಟ್ ಜೊತೆಗೆ ಬಂದಿದ್ದಾರೆ..
ಮಾದೇಶ್ ಆರಾಧ್ಯ ನಿರ್ದೇಶನದ “RPF” – AI WEB SERIES” ಗೆ ಮಧು ಮಂದಗೆರೆ ನಾಯಕ.
ಈಗ AI ಜಗತ್ತು. ಈ ತಂತ್ರಜ್ಞಾನದಿಂದ ಸಾಧ್ಯವಾಗದ್ದು ಯಾವುದು ಇಲ್ಲ. ಈಗ ಇದೇ ತಂತ್ರಜ್ಞಾನ ಬಳಸಿಕೊಂಡು “RPF” ವೆಬ್ ಸಿರೀಸ್ ನಿರ್ಮಾಣವಗುತ್ತಿದೆ. ರಾಯರ ಕೃಪೆ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ವೆಬ್ ಸರಣಿಯನ್ನು ಮಾದೇಶ್ ಆರಾಧ್ಯ ನಿರ್ದೇಶಿಸುತ್ತಿದ್ದು, ಮಧು ಮಂದಗೆರೆ ನಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ವೆಬ್ ಸರಣಿಯ ಟೀಸರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ನಡೆಯಿತು.
ಇದು ಮಧು ಮಂದಗೆರೆಯ ಜೀವನದಲ್ಲಿ ನಡೆದಂತ ನೈಜ ಘಟನೆಯೊಂದನ್ನು
ಆಧಾರವಾಗಿಟ್ಟುಕೊಂಡು ಮಾಡುತ್ತಿರುವ WEB SERIES ಆಗಿರುತ್ತದೆ. ಇದರ ವಿಶೇಷತೆ ಏನೆಂದರೆ ಈ ವೆಬ್ ಸಿರೀಸ್ ಅನ್ನು AI ತಂತ್ರಜ್ಞಾನವನ್ನು ಬಳಸಿಕೊಂಡು ಮಾಡುತ್ತಿದ್ದೇವೆ. ಕಲಾವಿದರ ಅಭಿನಯ ಮಾತ್ರ ನೈಜವಾಗಿರುತ್ತದೆ. ಉಳಿದಿದ್ದು AI ತಂತ್ರಜ್ಞಾನದೆ ಆಗಿರುತ್ತದೆ. ಇದನ್ನು ಕೆಲವು ವರ್ಷಗಳ ಹಿಂದ ಸಿನಿಮಾ ಮಾಡೋಣ ಅಂದು ಕೊಂಡೆವು ಆಗಲಿಲ್ಲ. ಈಗ ವೆಬ್ ಸಿರೀಸ್ ಮಾಡುತ್ತಿದ್ದೇವೆ. ಮೊದಲ ಹೆಜ್ಜೆಯಾಗಿ ಟೀಸರ್ ಬಿಡುಗಡೆ ಮಾಡಿದ್ದೇವೆ. ಈಗಾಗಲೇ ಐದಾರು ಕಂತುಗಳು ಸಿದ್ದವಾಗಿದೆ. ಯಾವಾಗ ಹಾಗೂ ಯಾವುದರಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಸದ್ಯದಲ್ಲೇ ತಿಳಿಸುತ್ತೇವೆ. ಸಹ ಹಾಗೂ ಸಹಾಯಕ ನಿರ್ದೇಶಕನಾಗಿ ಹಲವು ವರ್ಷಗಳ ಸಿನಿರಂಗದ ಒಡನಾಟವಿರುವ ನನಗೆ ನನಗೆ ನಿರ್ದೇಶಕನಾಗಿ ಇದು ಮೊದಲ ಪ್ರಯತ್ನ ಎಂದರು ಮಾದೇಶ್ ಆರಾಧ್ಯ.

ನಾನು ಮೂವತ್ತು ವರ್ಷಗಳಿಂದ ಚಲನಚಿತ್ರ ಕಲಾವಿದ ಹಾಗೂ “RPF” ನೌಕರ. ವಂಶಿ ಸೇರಿದಂತೆ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ರೈಲ್ವೇ ಇಲಾಖೆಯಲ್ಲಿ ನಾನು ಕಂಡಿರುವ ನೈಜ ಘಟನೆಗಳು ಹಾಗೂ ಅಲ್ಲಿ ಅನುಭವಿಸಿರುವ ನೋವನ್ನು ಈ ವೆಬ್ ಸೀರಿಸ್ ಮೂಲಕ ಜನರಿಗೆ ತಲುಪಿಸುವ ಉದ್ದೇಶದಿಂದ ಈ ವೆಬ್ ಸಿರೀಸ್ ನಿರ್ಮಾಣ ಮಾಡುತ್ತಿದ್ದೇನೆ. ಮಾದೇಶ್ ಆರಾಧ್ಯ ನಿರ್ದೇಶನ ಮಾಡುತ್ತಿದ್ದಾರೆ. ನನ್ನ ಪತ್ನಿ ವಾಣಿ ಅವರು ಸಹಕಾರ ನೀಡುತ್ತಿದ್ದಾರೆ. ಬಹುತೇಕ AI ತಂತ್ರಜ್ಞಾನ ಬಳಸಿಕೊಳ್ಳುತ್ತಿರುವುದು ವಿಶೇಷ. ಟೀಸರ್ ಬಿಡುಗಡೆ ಮಾಡಿದ್ದೇವೆ. ಆದಷ್ಟು ಬೇಗ ಮೊದಲ ಎಪಿಸೋಡ್ ಸಹ ಬಿಡುಗಡೆ ಮಾಡುತ್ತೇವೆ. ರಾಯರ ಕೃಪೆ ಲಾಂಛನದಲ್ಲಿ ಮೂಡಿಬರುತ್ತಿರುವ ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಹಾಗೂ ನಿರ್ಮಾಪಕ ಮಧು ಮಂದಗೆರೆ. ತಮ್ಮ ಪತಿ ಮಧು ಮಂದಗೆರೆ ಅವರ ಹೊಸ ಪ್ರಯತ್ನಕ್ಕೆ ವಾಣಿ ಮಧು ಮಂದಗೆರೆ ಅವರು ಶುಭ ಕೋರಿದರು.

