ಚಿತ್ರ : ವಿಡಿಯೋ….
ನಿರ್ಮಾಪಕರು : ದೀಕ್ಷಿತ್ ಶೆಟ್ಟಿ….
ನಿರ್ದೇಶನ : ಶ್ರೀನಿಧಿ ಬೆಂಗಳೂರು….
ಕಲಾವಿದರು: ಭರತ,ಜೀವನ್,ತೇಜಸ್,ಪ್ರಿಯಾ ಆಚಾರ,
ನಲ್ಮೆ ನಾಚಿಯಾರ್,ನಾಗೇಶ್ ಯಾದವ್ ಇನ್ನಿತರರು…..
____________________________________________
ಪ್ರೇಕ್ಷಕ ಮಹಾಪ್ರಭುಗಳೆ ನಿಮಗೇನಾದರೂ ಹಾರರ್ ಶೈಲಿಯ ಸಿನಿಮಾಗಳನ್ನ ನೋಡುವ ಅಭ್ಯಾಸವಿದ್ದರೆ,ಖಂಡಿತವಾಗಿಯೂ ವಿಡಿಯೋ ಚಿತ್ರ ನಿಮಗೆ ಮೋಸ ಮಾಡುವುದಿಲ್ಲ,
ಚಿತ್ರ ನೋಡುವಾಗ, ನಿರ್ದೇಶಕರು ಪ್ರೇಕ್ಷಕರಿಗೆ ತೋರಿಸುವ ಭಯದ ದೃಶ್ಯಗಳು ಹಾಗೂ ಸಂಭಾಷಣೆಗಳು ನಿಮಗೆ ತೊಂದರೆ ಮಾಡುವುದಿಲ್ಲ,ಒಂದು ವೇಳೆ ನೀವೇನಾದರೂ ಹಾರರ್ ಚಿತ್ರಗಳನ್ನು ಇಲ್ಲಿಯವರೆಗೆ ನೋಡಿರದಿದ್ದರೂ ಸಹ ಈ ವಿಡಿಯೋ ಸಿನಿಮಾ ಆರಾಮಾಗಿ ನೋಡಬಹುದು,ಸ್ವಲ್ಪ ಭಯದಲ್ಲಿ ಚಿತ್ರಮಂದಿರದಿಂದ ಆಚೆ ಬರುಬಹುದು.
ಮೂರು ಜನ ತರ್ಲೆ ಹುಡುಗರ ತರ್ಲೆ ಬಾಯ್ಸ್ ಗುಂಪೊಂದು, ತಾವೇ ಕ್ರಿಯೇಟ್ ಮಾಡಿಕೊಂಡಿರುವ ಯುಟ್ಯೂಬ್ ವಾಹಿನಿಗಾಗಿ ಸಾಕಷ್ಟು ಕಂಟೆಂಟ್ಗಳನ್ನ ಮಾಡಿ ತಮ್ಮ ಚಂದಾದಾರರಿಗೆ ಸಕ್ಕತ್ ಎಂಟರ್ಟೈನ್ಮೆಂಟ್ ಮತ್ತು ಇನ್ಫಾರ್ಮಶನ್ ವಿಡಿಯೋಗಳನ್ನು ಕೊಡುತ್ತಿರುತ್ತದೆ, ಇಂತಹ ತರ್ಲೆ ಬಾಯ್ಸ್ ಗ್ಯಾಂಗಿಗೆ ಇಬ್ಬರು ಹುಡುಗಿಯರು ಬಂದು ಸೇರಿಕೊಳ್ಳುತ್ತಾರೆ ಆನಂತರ ಅವರ ಗ್ಯಾಂಗ್ ತರ್ಲೆ ಗ್ಯಾಂಗ್, ಯೂಟ್ಯೂಬ್ ಚಾನೆಲ್ ಆಗಿ ಹೆಸರು ಬದಲಾವಣೆ ಮಾಡಿಕೊಳ್ಳುತ್ತದೆ..
ತಮ್ಮ ಚಾನೆಲ್ಲಿಗೆ 10 ಲಕ್ಷ ಚಂದಾದಾರರು ಆಗಿರುವ ಸಂತಸ ಸಂಭ್ರಮದ ಮಧ್ಯೆ ಪಾರ್ಟಿ ಮಾಡುವ ಈ ಗ್ಯಾಂಗ್, ಯಾವುದಾದರೂ ಒಂದು ಕಂಟೆಂಟನ ವೈರಲ್ ಮಾಡಿ ಮತ್ತಷ್ಟು ಹೆಸರು ಮಾಡಬೇಕು ಎಂಬ ನಿಟ್ಟಿನಲ್ಲಿ , ನಿಗೂಢವಾದಂತಹ ಜಾಗ ಮತ್ತು ಕುತೂಹಲಕಾರಿ ರಹಸ್ಯಗಳನ್ನ ಹೊಂದಿರುವ,ಓಡಿಷಾದ ಪದ್ಮಾಪುರ ಸರಕಾರಿ ಶಾಲೆಯ ಕಡೆಗೆ ಪ್ರಯಾಣ ಬೆಳೆಸುತ್ತದೆ.
ಮೂರು ಜನ ಹುಡುಗರು ಹಾಗೂ ಇಬ್ಬರು ಹುಡುಗಿಯರಿರುವ ಆ ಗ್ಯಾಂಗ್ನಲ್ಲಿ ಮಧುರಾ ( ಪ್ರಿಯಾ ಆಚಾರ್ಯ ) ಮನೆಯಲ್ಲಿ ಆಕೆಯ ಮದುವೆ ಕುರಿತ ವಿಚಾರ, ಆಕೆ ತಾಯಿಯಿಂದ ತರ್ಲೆ ಗ್ಯಾಂಗ್ ಗೆ ಗೊತ್ತಾಗುತ್ತದೆ,ಆದರೂ ಮಧುರಾ ತಮ್ಮ ಟೀಮ್ ಜೊತೆಗೆ ಪದ್ಮಾಪುರ ಸರ್ಕಾರಿ ಶಾಲೆಯ ಕಡೆಗೆ ಪ್ರಯಾಣ ಬೆಳೆಸುತ್ತಾಳೆ.
ವಿಡಿಯೋ ಚಿತ್ರದಲ್ಲಿ ಒಂದು ಸ್ಪೆಷಲ್ ಪಾತ್ರದಲ್ಲಿ,ದೂತ ಸಮೀರ್ ಕೂಡಾ ನಟಿಸಿದ್ದು,ಸಿನಿಮಾ ಶುರುವಾಗುವುದೇ ಅವ್ರ ಮಾತುಗಳಿಂದ.
ಚಿತ್ರದ ಫಸ್ಟ್ ಹಾಫ್ ನಲ್ಲಿ ಮೂರು ಜನ ಹುಡುಗರು ಇಬ್ಬರು ಹುಡುಗಿಯರ,ತರ್ಲೆ ಗ್ಯಾಂಗ್ ನಡುವೆ ಆಗುವಂತಹ ಸ್ನೇಹ ಹಾಸ್ಯ,ಸಣ್ಣಪುಟ್ಟ ಗೊಂದಲ ಇವೆಲ್ಲದರ ನಡುವೆ ಕಥೆ ಸಾಗುತ್ತಾ ಚಿತ್ರ ನೋಡುವ ಪ್ರೇಕ್ಷಕರಿಗೆ ಮಜಾ ಕೊಡುತ್ತದೆ.
ಈ ತರ್ಲೆ ಗ್ಯಾಂಗ್ ಮಾಡುವ ಕೆಲಸಗಳು, ಹೇಳುವ ಸಂಭಾಷಣೆಗಳು, ಆಗಾಗ ಹೊಡೆಯುವ ಸಿನಿಮಾ ನಟರ ಡೈಲಾಗ್ಸ್ ಗಳು, ಚಿತ್ರದಲ್ಲಿ ಅಲ್ಲಲ್ಲಿ ಕಾಣುವ ಸ್ಟಾರ್ ನಟರು, ಇದೆಲ್ಲ ನೋಡಿದಾಗ ಈಗಿನ ಯುವಕ ಯುವತಿಯರ ಮನಸ್ಥಿತಿಯನ್ನು ನಾವು ಆ ತರಲೇ ಗ್ಯಾಂಗ್ಸ್ ಟೀಮ್ ಮೂಲಕ ನೋಡಬಹುದು,

ಚಿತ್ರದ ದ್ವಿತೀಯಾರ್ಧಕ್ಕೆ,ಇಂಟರ್ವಲ್ ಮುಂಚೆ ಕೊಟ್ಟಂತಹ ಒಂದು ಹಾರರ್ ಫೀಲ್ ಅದು ಸಂಪೂರ್ಣ ದ್ವಿತೀಯಾರ್ಧವನ್ನ ತೆಗೆದುಕೊಂಡು ಹೋಗುತ್ತದೆ,ತರ್ಲೆ ಗ್ಯಾಂಗ್ ನಲ್ಲಿನ ಕೆಲವರು ಭಯಂಕರವಾಗಿ ಸತ್ತು ಹೋಗುತ್ತಾರೆ,ಅಸಲಿಗೆ ತರ್ಲೆ ಗ್ಯಾಂಗ್ ಓಡಿಶಾಗೆ ಬಂದಿದ್ದು ಯಾಕೆ ?
ಅದರಲ್ಲೂ ಪದ್ಮಾಪುರ ಮತ್ತು ಅಲ್ಲಿನ ಸರ್ಕಾರಿ ಶಾಲೆಗೆ ಭೇಟಿ ಕೊಟ್ಟಿದ್ಯಾಕೆ ? ತರ್ಲೆ ಗ್ಯಾಂಗ್ ತಂಡದ, ಒಬ್ಬೊಬ್ಬರು ಒಂದೊಂದು ಸ್ಥಳದಲ್ಲಿ ಭಯಂಕರವಾಗಿ ಸಾಯುವುದಾದರೂ ಹೇಗೆ ?
ಈ ಎಲ್ಲರ ಸಾವಿಗೆ ಕಾರಣ ಯಾರು ?
ಇವರನ್ನು ಕೊಂದವರು ಮನುಷ್ಯರಾ ಅಥವಾ ದೆವ್ವವಾ ಅಥವಾ ಮತ್ಯಾರು ?
ಸಂಪೂರ್ಣ ಕಥೆ ನಿಮಗೆ ಗೊತ್ತಾಗಬೇಕೆಂದರೆ ಒಮ್ಮೆ ವಿಡಿಯೋ ಚಿತ್ರವನ್ನು ನೋಡಿ.
ವಿಡಿಯೋ ಚಿತ್ರದ ಅತಿ ಮುಖ್ಯ ಹೈಲೈಟ್ ಎಂದರೆ ಸಂಗೀತ ಮತ್ತು ಕ್ಯಾಮರಾ ವರ್ಕ್,ಚಿತ್ರದಲ್ಲಿ ನಟಿಸಿದ ಎಲ್ಲ ಕಲಾವಿದರು, ತಮ್ಮ ಪಾತ್ರಕ್ಕೆ ಎಷ್ಟು ನ್ಯಾಯ ಸಲ್ಲಿಸಿದ್ದಾರೋ ಅಷ್ಟೇ ಸಂಗೀತ ಮತ್ತು ಛಾಯಾಗ್ರಹಣ ತಂಡ ದುಪ್ಪಟ್ಟು ನ್ಯಾಯ ಸಲ್ಲಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ವಿಡಿಯೋ ಚಿತ್ರದ ಫಸ್ಟ್ ಹಾಫ್ ಸ್ವಲ್ಪ ಎಡಿಟಿಂಗ್ ನಲ್ಲಿ ಟ್ರಿಮ್ ಆಗಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ,
ಆದರೆ ಸೆಕೆಂಡ್ ಹಾಫ್ ಮಾತ್ರ ತುಂಬಾ ಚೆನ್ನಾಗಿ, ತೆಗೆದುಕೊಂಡು ಹೋಗಿದ್ದಾರೆ.
ಕನ್ನಡ ಸೇರಿ ಇತರೆ ಭಾಷೆಗಳಲ್ಲಿ ಈ ತರಹದ ಹಾರರ್ ಚಿತ್ರಗಳನ್ನು ನೋಡುವ ಮತ್ತು ನೋಡಿರುವ ಪ್ರೇಕ್ಷಕರಿಗೆ, ಯುವ ಉತ್ಸಾಹಿ ನಿರ್ಮಾಪಕ ದೀಕ್ಷಿತ್ ಶೆಟ್ಟಿಯ ಈ ಪ್ರಯತ್ನ,, ನಿರ್ದೇಶಕ ಶ್ರೀನಿಧಿ ಬೆಂಗಳೂರು ರವರ ಬರವಣಿಗೆ,ಮತ್ತು ಎಲ್ಲ ಕಲಾವಿದರ ಪ್ರಾಮಾಣಿಕ ನಟನೆಯ ಪ್ರಯತ್ನ ಇಷ್ಟವಾಗುತ್ತದೆ,ಮತ್ತೊಂದು ವಿಶೇಷ ಪಾತ್ರದಲ್ಲಿ ನಾಗೇಶ್ ಯಾದವ್ ಇದ್ದಾರೆ.ಒಟ್ಟಾಗಿ ಹೇಳುವುದಾದರೆ ಇದೊಂದು ಹೊಸ ಪ್ರಯತ್ನದ.
ವಿಡಿಯೋ ಚಿತ್ರವನ್ನು ಚಿತ್ರ ಮಂದಿರದಲ್ಲಿ ನೋಡಿದರೆ ಮಾತ್ರ ನಿಮಗೆ,ಹಾರರ್ ಅನುಭವ ಸಿಗುತ್ತದೆ.
ರೇಟಿಂಗ್ 3.5 / 5
ರವೀ ಸಾಸನೂರ್ MasterNews365

