Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹ್ಯಾಪಿ ಬರ್ತಡೆ ಕಿಚ್ಚ ಸುದೀಪ
- ಸಿನಿಮಾ

ಹ್ಯಾಪಿ ಬರ್ತಡೆ ಕಿಚ್ಚ ಸುದೀಪ

ಸಪ್ಟಂಬರ್ 2 ಕಿಚ್ಚ ಸುದೀಪ ಅವರನ್ನು ಹುಚ್ಚರಂತೆ ಪ್ರೀತಿಸುವ ಎಲ್ಲಾ ಅಭಿಮಾನಿ ದೇವರುಗಳಿಗೆ ಒಂದು ಮಹಾ ಸಂಭ್ರಮ, ಕಳೆದ ವರ್ಷ ನನಗೆ ನೆನಪಿರುವಂತೆ ಜಯನಗರದ ಬಳಿರುವ ಒಂದು ಗ್ರೌಂಡ್ ಅಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆಸಿದ್ದು ನನಗೆ ನೆನಪಾಯಿತು, ಅನೂಪ್ಭಂ ಡಾರಿ ಮತ್ತು ಕಿಚ್ಚ ಸುದೀಪ್ ಅವರ ಕಾಂಬಿನೇಷನ್ನಲ್ಲಿ ವಿಕ್ರಾಂತ ಋಣ ಚಿತ್ರ ತೆರೆಕಂಡ ನಂತರ ಸ್ವಲ್ಪ ದಿನಗಳ ಗ್ಯಾಪ್ ಅಲ್ಲಿ ಮತ್ತೊಂದು ಚಿತ್ರದ ಅಪ್ಡೇಟ್ ಸಿಗುತ್ತೆ ಅದುವೇ […]

ಸಪ್ಟಂಬರ್ 2 ಕಿಚ್ಚ ಸುದೀಪ ಅವರನ್ನು ಹುಚ್ಚರಂತೆ ಪ್ರೀತಿಸುವ ಎಲ್ಲಾ ಅಭಿಮಾನಿ ದೇವರುಗಳಿಗೆ ಒಂದು ಮಹಾ ಸಂಭ್ರಮ, ಕಳೆದ ವರ್ಷ ನನಗೆ ನೆನಪಿರುವಂತೆ ಜಯನಗರದ ಬಳಿರುವ ಒಂದು ಗ್ರೌಂಡ್ ಅಲ್ಲಿ ಕಿಚ್ಚ ಸುದೀಪ್ ಅವರು ತಮ್ಮ ಹುಟ್ಟು ಹಬ್ಬವನ್ನು ಭರ್ಜರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆಸಿದ್ದು ನನಗೆ ನೆನಪಾಯಿತು,

ಅನೂಪ್ಭಂ ಡಾರಿ ಮತ್ತು ಕಿಚ್ಚ ಸುದೀಪ್ ಅವರ ಕಾಂಬಿನೇಷನ್ನಲ್ಲಿ ವಿಕ್ರಾಂತ ಋಣ ಚಿತ್ರ ತೆರೆಕಂಡ ನಂತರ ಸ್ವಲ್ಪ ದಿನಗಳ ಗ್ಯಾಪ್ ಅಲ್ಲಿ ಮತ್ತೊಂದು ಚಿತ್ರದ ಅಪ್ಡೇಟ್ ಸಿಗುತ್ತೆ ಅದುವೇ ಬಿಲ್ಲ ರಂಗ ಭಾಷಾ, ಈ ಚಿತ್ರದ ಪ್ರೋಸೆಸ್ ಮಧ್ಯೆ ಸುದೀಪ್ ಎರಡು ಅದ್ಭುತ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಕನ್ನಡದ ಅಭಿಮಾನಿಗಳಿಗೆ ಕೊಟ್ಟರು ಒಂದು ಮ್ಯಾಕ್ಸ್ ಮತ್ತೊಂದು ಮಾರ್ಕ್, ಪತ್ರಕರ್ತರಿಗಾಗಲಿ ಅಥವಾ ಅಭಿಮಾನಿಗಳಿಗಾಗಿ ಕಿಚ್ಚ ಸುದೀಪ್ ಅವರು ಸಿಕ್ಕಾಗ ಹೇಳುತ್ತಿದ್ದ ಒಂದೇ ಒಂದು ಮಾತು ಬಿಲ್ಲ ರಂಗ ಭಾಷಾ ದೊಡ್ಡ ಸ್ಕೇಲ್ ನಲ್ಲಿ ನಿರ್ಮಾಣವಾಗುತ್ತಿರುವಂತಹ ಚಿತ್ರ ಅದಕ್ಕೆ ನಾನು ಅವಸರ ಮಾಡುವುದಿಲ್ಲ ಎಂದು, ಮಾರ್ಕ್ ಚಿತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನಗಳ ಸಂದರ್ಭದಲ್ಲಿಯೇ ಕಿಚ್ಚ ಸುದೀಪ್ ಅವರು ತಮ್ಮ ಮತ್ತು ಅನುಪ ಅವರ ಮಧ್ಯದ ಬಿಲ್ಲಾ ರಂಗ ಭಾಷಾ, ಚಿತ್ರದ ಕುರಿತಾಗಿ ಮಾತನಾಡಿದ್ದರು,ಈಗ ಚಿತ್ರತಂಡ ಮತ್ತೊಂದು ಅದ್ಭುತವಾದ ಪೋಸ್ಟರ್ ಬಿಡುಗಡೆ ಮಾಡುವುದರ ಜೊತೆಗೆ ಸುದ್ದಿಯಲ್ಲಿದೆ,ಹೌದು.

ʻಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ (BRB) ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿದೆ.

ಬ್ಲಾಕ್‌ಬಸ್ಟರ್ ‘ವಿಕ್ರಾಂತ್ ರೋಣ’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ.

ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಅತ್ಯಂತ ರೋಮಾಂಚಕವಾಗಿದ್ದು, ಚಿತ್ರವು ವಿಶ್ವದರ್ಜೆಯ ಮೇಕಿಂಗ್ ಒಳಗೊಂಡಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಒದಗಿಸಿದೆ.

ಈ ಚಿತ್ರಕ್ಕಾಗಿ ಬೆಂಗಳೂರಿನಲ್ಲಿ ಬೃಹತ್ ಹಾಗೂ ಅದ್ಧೂರಿ ಸೆಟ್ ನಿರ್ಮಿಸಲಾಗಿದ್ದು, ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದೆ.

ತೆಲುಗಿನ ಪ್ಯಾನ್-ಇಂಡಿಯಾ ಹಿಟ್ ಸಿನಿಮಾ ‘ಹನುಮಾನ್’ ಖ್ಯಾತಿಯ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಈ ಬಿಗ್ ಬಜೆಟ್ ಸಿನಿಮಾವನ್ನು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.

2027ರ ಮಾರ್ಚ್ ಒಳಗೆ ಟೀಸರ್ ಬಿಡುಗಡೆ ಆಗಲಿದ್ದು, 2027ರ ಜುಲೈ-ಸೆಪ್ಟೆಂಬರ್ ನಡುವೆ ಟ್ರೇಲರ್ & ಹಾಡುಗಳು ಅನಾವರಣಗೊಳ್ಳಲಿವೆ. 2027ರ ವರ್ಷಾಂತ್ಯದಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ‘ಬಿಲ್ಲ ರಂಗ ಬಾಷಾ’ ತೆರೆಗೆ ಬರಲಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.