ಟಾಕ್ಸಿಕ್ ಎಂಪೈರ್ – ಈಶಾನಿ

ರಾಕಿಂಗ್ ಸ್ಟಾರ್ ಯಶ್ ಬಾಸ್ ಟಾಕ್ಸಿಕ್ ಚಿತ್ರಕ್ಕೆ ಟ್ರಿಬ್ಯೂಟ್ ಮಾಡೋದಕ್ಕೆ ನಾವು ಮಾಡಿದ ಒಂದು ಪ್ರೀತಿಯ ಪ್ರಯತ್ನವೇ ಈ ಟಾಕ್ಸಿಕ್ ಎಂಪೈರ್ ಹಾಡು.

ಈ ಹಾಡು ಟಾಕ್ಸಿಕ್ ನಲ್ಲಿ ಯಶ್ ಮಾಡಿದ ರಾಯ ಪಾತ್ರದ,ಛಾಯೆಯ ಮೇಲೆ ನಾವು ನಮ್ಮದೇ ಸ್ಟೈಲ್ ನಲ್ಲಿ ಮಾಡಿದ ಹಾಡು,ಟಾಕ್ಸಿಕ್ ತುಂಬಾ ಒಳ್ಳೆಯ ಓಪನಿಂಗ್ ಪಡೆದು ಸಖತ್ ಸೌಂಡ್ ಮಾಡ್ತಾ ಇರೋದು ನಮಗೆಲ್ಲ ಪ್ರೌಡ್ ಫೀಲ್ ಇದೆ,
ಟಾಕ್ಸಿಕ್ ಪ್ರಪಂಚದ ತುಂಬೆಲ್ಲ ಸೂಪರ್ ಹವಾ ಎಬ್ಬಿಸಿರುವ ಸುದ್ದಿ ಎಲ್ಲ ಕಡೆ ಸುನಾಮಿ ತರಹ ಹಬ್ಬಿದ್ದು,ನಮ್ಮ ಈ ಪ್ರಯತ್ನ ರಾಕಿಂಗ್ ಸ್ಟಾರ್ ಯಶ್ ಅವ್ರಿಗೆ ಹಾಗೆ ಅವ್ರ ತಂಡಕ್ಕೆ ತಲುಪತ್ತೆ ಅನ್ನೋ ನಂಬಿಕೆ ಇದೆ ಅನ್ನೋದು ಇಶಾನಿ ಮಾತು..
ಟಾಕ್ಸಿಕ್ ಎಂಪೈರ್ ಆಲ್ಬಮ್ ಸಾಂಗ್ ಮೂಲಕ
ಈಶಾನಿ ಲೇಡಿ ರಾಪರ್ ಸೂಪರ್ ಹೆಜ್ಜೆ ಇಟ್ಟಿದ್ದು,
ಒಂದು ವರ್ಷದಿಂದ ಈ ಪ್ರಾಜೆಕ್ಟ್ ಮೇಲೆ ಕೆಲಸ ಮಾಡಿದ್ದು ಈಗ ಸಾರ್ಥಕ ಅನ್ನಿಸ್ತಾ ಇದೆ ಅಂದದ್ದು ಚಿತ್ರದ ಮತ್ತೊಬ್ಬ ತಂತ್ರಜ್ಞ.

ಈ ಹಾಡು ಶೂಟ್ ಮಾಡುವಾಗ,ಈಶಾನಿ ಯವರಿಗೆ ಕಾಲಿಗೆ ಸ್ವಲ್ಪ ಏಟಾಗಿದ್ದರು ಸಹ ಅದನ್ನ ಲೆಕ್ಕಿಸದೆ ಟಾಕ್ಸಿಕ್ ಎಂಪೈರ್ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ದು ಒಂಥರ ಮ್ಯಾಜಿಕ್ ಆದಂತಹ ಅನುಭವ ಆಗ್ತಾ ಇದೆ ಎನ್ನುವುದರ ಮೂಲಕ,ಡಾನ್ಸ್ ಮಾಸ್ಟರ್ ಸಂತು ಅವ್ರ ಅಸೋಸಿಯೇಟ್ ತಮ್ಮ ಅನುಭವ ಹಂಚಿಕೊಂಡರು.

ನಿರ್ದೇಶಕ ಗಿರಿ ಗೌಡ ಮಾತನಾಡಿ
ಇಲ್ಲಿಯವರೆಗೂ ನಾನು 11 ಆಲ್ಬಮ್ ಸಾಂಗ್ಸ್ ಡೈರೆಕ್ಟ್ ಮಾಡಿದ್ದು, ಈಶಾನಿ ಜೊತೆಗೆ ಕಳೆದ ಆರು ವರ್ಷಗಳಿಂದ ಆಲ್ಬಮ್ ಹಾಡುಗಳ ಕೆಲಸ ಮಾಡಿದ್ದೇನೆ,ಯಶ್ ನಮಗೆ ದೊಡ್ಡ ಇನ್ಸ್ಪಿರೇಷನ್.

ಸ್ಯಾಂಡಲ್ ವುಡ್ ನಲ್ಲಿ ತಮ್ಮ ಭರ್ಜರಿ ಡ್ಯಾನ್ಸ್ ಕೊರಿಯೋಗ್ರಫಿ ಮೂಲಕ ಟ್ರೆಂಡ್ ಸೆಟ್ ಮಾಡಿರೋ ಸಂತು ಮಾಸ್ಟರ್, ಈ ಹಾಡಿಗೆ ಸಖತ್ ಹೆಜ್ಜೆ ಹಾಕಿಸಿದ್ದಾರೆ,ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಬಂದಿದ್ದ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ನೇಹಿತ್ ಮತ್ತು ಪವಿ ಪೂವಯ್ಯ ಈಶಾನಿ ಪ್ರಯತ್ನಕ್ಕೆ ಬೆಂಬಲ ಸೂಚಿಸಿದ್ದು ವಿಶೇಷವಾಗಿತ್ತು.
ಟಾಕ್ಸಿಕ್ ಎಂಪೈರ್ ಹಾಡು,ಈಶಾನಿ ಯವರ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದ್ದು,
ತಮ್ಮ ಬರಹವನ್ನು ಹಾಗೆ, ತಮ್ಮ ನೃತ್ಯವನ್ನು ತಮ್ಮನ್ನ ಪ್ರೀತಿಸುವ ಎಲ್ಲಾ ಅಭಿಮಾನಿಗಳಿಗೆ ಟಾಕ್ಸಿಕ್ ಎಂಪೈರ್ ಹಾಡು ಇಷ್ಟವಾಗಲಿದೆ ಎನ್ನುವುದು ಈಶಾನಿ ಮಾತಾಗಿತ್ತು
ರವೀ ಸಾಸನೂರ್
MasterNews365.Com

