ಡ್ಯಾಡ್’ ಚಿತ್ರದ “ಮಗಳೆ ನಿನ್ನ ಜೊತೆ” ಹಾಡು ಬಿಡುಗಡೆ
ಅಪ್ಪನ ಮಮತೆಗೆ ಮಗಳೇ ಮಧುರ ರಾಗ; ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ‘ಡ್ಯಾಡ್’ ಚಿತ್ರದ ‘ಮಗಳೆ ನಿನ್ನ ಜೊತೆ’ ಹಾಡು ಬಿಡುಗಡೆ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ನಾಯಕರಾಗಿ ಅಭಿನಯಿಸಿರುವ ಬಹುನಿರೀಕ್ಷಿತ ‘ಡ್ಯಾಡ್’ ಚಿತ್ರದ ‘ಮಗಳೆ ನಿನ್ನ ಜೊತೆ’ ಹಾಡು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಅಪ್ಪ–ಮಗಳ ನಡುವಿನ ಪ್ರೀತಿ, ಮಮತೆ ಹಾಗೂ ಭಾವನಾತ್ಮಕ ಬಾಂಧವ್ಯವನ್ನು ಸಾರುವ ಈ ಹಾಡಿಗೆ ಪ್ರೇಮಕವಿ ಕೆ. ಕಲ್ಯಾಣ್ ಸಾಹಿತ್ಯ ರಚಿಸಿದ್ದು, ದರ್ಶನ್ ಮೆಳವಂಕಿ ಧ್ವನಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. […]

