ಶಂಕರ ನೀ ಭಯಂಕರ………………..
ಬೆಂಗಳೂರು ಎಂಬ ಮಾಯನಗರಿ,ಈ ಮಾಯ ನಗರಿಯಲ್ಲಿ ಗಾಂಧಿನಗರ ಎಂಬ ಸಿನಿಮಾ ಜಾಗ, ಅಂತದ್ದೊಂದು ಜಾಗದಲ್ಲಿ ಪ್ರತಿದಿನ ನಡೆಯುವಂತಹ ಹಲವಾರು ಸಿನಿಮಾಗಳ ಕಾರ್ಯ ಚಟುವಟಿಕೆಗಳು, ಆ ಚಟುವಟಿಕೆಗಳಲ್ಲಿ ನಾವು ಸಹ ಭಾಗಿಯಾಗಬೇಕು ಎನ್ನುವ ಒಂದಷ್ಟು ಉತ್ಸಾಹಿ ಯುವಕರು ಯುವತಿಯರು, ಕೆಲವರು ನಟನೆಯನ್ನ ಆಯ್ಕೆ ಮಾಡಿಕೊಂಡರೆ ಇನ್ನೂ ಕೆಲವರು ತಾಂತ್ರಿಕ ವಿಭಾಗವನ್ನಾಗಿ ಮಾಡಿಕೊಳ್ಳುತ್ತಾರೆ, ಇನ್ನೊಂದಷ್ಟು ಜನ ತಮಗೆ ಏನೇ ಕೆಲಸ ಸಿಕ್ಕರೆ ಸಾಕು ಸಿನಿಮಾದಲ್ಲಿ ಇದ್ದುಬಿಡೋಣ ಎಂದು ನಿರ್ಧಾರ ಮಾಡುತ್ತಾರೆ, ಇಂತಹ ಹಲವಾರು ಕನಸುಗಳನ್ನು ಕಂಡು ದೂರದ ಹಳ್ಳಿ ಹಳ್ಳಿಗಳಿಂದ, ತಾಲೂಕುಗಳಿಂದ, ಜಿಲ್ಲೆಗಳಿಂದ ಬೆಂಗಳೂರಿಗೆ ಬರುವಂತಹ ಉತ್ಸಾಹಿಗಳ ಸಂಖ್ಯೆ ಕಮ್ಮಿ ಏನೂ ಇಲ್ಲ, ಸಿನಿಮಾ ಹುಟ್ಟಿದಾಗಿನಿಂದಲೂ ಇಲ್ಲಿಯತನಕವು ಹಾಗೂ ಇನ್ನು ಮುಂದೆಯೂ ಸಹ ಸಿನಿಮಾಗಾಗಿ ಕೆಲಸ ಮಾಡಲು ತವಕ ಪಡುವ ಕೆಲಸಗಾರರು ಯಾವತ್ತೂ ಕಮ್ಮಿ ಆಗುವುದು ಇಲ್ಲ.
ಸಿನಿಮಾ ಮಾಡುವ, ಸಿನಿಮಾದಲ್ಲಿ ನಟಿಸುವ ಅದಮ್ಯ ಪ್ರೀತಿಯೊಂದಿಗೆ ನಿರಂತರವಾಗಿ, ಉದ್ಯಮದಲ್ಲಿ ಒಬ್ಬ ಕಲಾವಿದನಾಗಿ ತೊಡಗಿಸಿಕೊಂಡಿರುವ ಶೈನ್ ಶೆಟ್ಟಿ ಎಂಬ
ಪ್ರತಿಭಾವಂತನ ಬಗ್ಗೆ ಒಂಚೂರು ಮಾತು.
ಕಿರುತೆರೆಯಿಂದ ಆರಂಭವಾದ ಶೈನ್ ಶೆಟ್ಟಿ ಪಯಣ,ನಂತರ ಸಿನಿಮಾ ಜೊತೆ ಜೊತೆಗೆ ನಿರೂಪಣೆ ಮುಂದೆ ಬಿಗ್ ಬಾಸ್ ರಿಯಾಲಿಟಿ ಷೋ ಜರ್ನಿ ಹಾಗೆ ವಿನ್ನರ್ ತನಕ ಹಾಗೆ ಮುಂದುವರೆದಂತೆ ಮತ್ತೆ ಸಿನಿ ಜರ್ನಿ ಕಂಟಿನ್ಯೂ ಆಗ್ತಾ ಇದೆ,ಅದು ಶಂಕರಾಭರಣ ಚಿತ್ರದ ವರೆಗೂ.
ಹೌದು ಶೈನ್ ಶೆಟ್ಟಿ ಎಂಬ ಪ್ರತಿಭಾವಂತ ನಟ,
ಕನ್ನಡ ಹಾಗೂ ತುಳು ಸೇರಿ ಸುಮಾರು 15ಕ್ಕು ಹೆಚ್ಚು ಸಿನಿಮಾಗಳು, ಕೆಲವು ಧಾರಾವಾಹಿಗಳು, ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡುತ್ತಲೇ ತಾವು ಉದ್ಯಮದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದು ಅವ್ರ ಸಿನಿಮಾ ಪ್ರೀತಿಗೆ ಹಿಡಿದ ಕನ್ನಡಿಯಾಗಿದೆ.
ಈಗ ಸಧ್ಯ ಶೈನ್ ಶೆಟ್ಟಿ ಸುದ್ದಿಯಲ್ಲಿರುವುದು ಅವ್ರು ನಿರ್ಮಾಣ ಮಾಡ್ತಾ ಇರುವ ಶಂಕರಾಭರಣ ಚಿತ್ರದ ಮೂಲಕ,ಹೌದು ಶ್ರೀಶೈಲ – ದಿವಾಕರ್ ಜೊತೆಗೆ ಶೈನ್ ಶೆಟ್ಟಿ ಸಹ ಜೊತೆಗೂಡಿ ನಿರ್ಮಾಣ ಮಾಡ್ತೀರುವ ಈ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿಗಳನ್ನು ನಾವು ನೀಡಿದ್ದು,ಈಗ ಮತ್ತೊಂದು ಅಪ್ಡೇಟ್ ಚಿತ್ರ ತಂಡ ಕೊಟ್ಟಿದ್ದು, ಶಂಕರಾಭರಣ ಚಿತ್ರದ “ತ್ರಿಲೋಕ ತ್ರಿವಿಕ್ರಮ” ಸಾಹಿತ್ಯದ,ಚರಣ್ ರಾಜ್ ಸಂಗೀತವಿರುವ,”ಶಂಕರ ನೀ ಭಯಂಕರ” ಎಂಬ ಹಾಡು ಎಲ್ಲರಿಗೂ ಇಷ್ಟವಾಗಿದ್ದು,ಕಳೆದ ಕೆಲವು ದಿನಗಳ ಹಿಂದೆ,ಶೈನ್ ಶೆಟ್ಟಿಯವರೇ ಶುರು ಮಾಡಿದ್ದ ಬಸ್ ಪ್ರಯಾಣದ ಕುರಿತ ಪ್ರಮೋಷನ್ ಹಾಡು ನೋಡಿದ ಅನುಭವವಾಯ್ತು.
ಕಳೆದ ಕೆಲವು ದಿನಗಳ ಹಿಂದಷ್ಟೇ ಶಂಕರಾಭರಣ ಬಸ್ ಮತ್ತು ಅದು ಪ್ರಮೋಶನಲ್ ಪ್ರವಾಸಕ್ಕೆ ಸಿದ್ಧವಾದ ವಿಡಿಯೋ ಎಲ್ಲ ಕಡೆ ವೈರಲ್ ಆಗಿದ್ದನ್ನು ನಾವು ಗಮನಿಸಿದ್ದೇವೆ,ಅದಕ್ಕೆ ಸಂಬಂಧಪಟ್ಟ ಕೆಲವು ಪೊಟೋಸ ಮತ್ತು ಬಿಡುಗಡೆಯಾದ ಹಾಡನ್ನು ನೋಡಿದಾಗ, ಎಲ್ಲವೂ ಸಿನಿಮಾ ರೀತಿಯಲ್ಲಿಯೇ ಕನೆಕ್ಟ್ ಆಗ್ತಾ ಇದೆ ಎನ್ನಬಹುದು.
ಶಂಕರಾಭರಣ ಚಿತ್ರದ ಕಥೆಯನ್ನು ಸ್ವತಃ ಶೈನ್ ಶೆಟ್ಟಿ ಬರೆದಿದ್ದು,ಸುಮಂತ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ,ಇನ್ನೂ ಸಂಭಾಷಣೆಯನ್ನು ಸುಮಂತ್ ಭಟ್ ಮತ್ತು ತ್ರಿಲೋಕ ತ್ರಿವಿಕ್ರಮ ಸೇರಿ ಬರೆದಿದ್ದಾರೆ ಹಾಗೆ ಇನ್ನೂ ಕಲಾವಿದರ ಬಗ್ಗೆ ವಿವರ ಕೊಟ್ಟರೆ,
ಪ್ರಮುಖ ಪಾತ್ರದಲ್ಲಿ ಶೈನ್ ಶೆಟ್ಟಿ, ಸಂಪತ್ ಕುಮಾರ್, ತನ್ವಿ ರಾಮ್,ಅನಿಲ ಕುಮಾರ್ ಏ,ಕೃತಿ ಶೆಟ್ಟಿ,ದೀಪಕ್ ರೈ ಪಣಾಜೆ, ಮೈಮ ರಮೇಶ್,ಉಮೇಶ್ ಶ್ರೀಕಾಂತ್ ತೇಲಿ ಮತ್ತು ನಿತೇಶ್ ಕುಲಾಲ್ ಮುಂತಾದವರು ಇದ್ದಾರೆ.

ಶಂಕರಾಭರಣ ನವೆಂಬರ್ 20ಕ್ಕೆ ಬಿಡುಗಡೆ ಆಗುತ್ತಿದ್ದು,ತನ್ನದೇ ಆದ ಹೊಸ ರೀತಿಯ ಕಂಟೆಂಟ್ ನಿಂದಾಗಿ ಸುದ್ದಿ ಮಾಡ್ತಾ ಇದೆ ಎನ್ನಬಹುದು.
ರವೀ ಸಾಸನೂರ್ MasterNews365.Com

