ಇತ್ತೀಚಿಗಷ್ಟೇ ರಶ್ಮಿಕಾ ಮಂದಣ್ಣ ನಟಿಸುತ್ತಿರುವ, ಎಂ ಎಸ್ ಸುಬ್ಬಲಕ್ಷ್ಮಿ ಬಯೋಪಿಕ್ ಚಿತ್ರದ ಕುರಿತಾದ ಮಾಹಿತಿ, ಕೇಳಿದ ತಕ್ಷಣ ಸಿನಿಮಾ ಅಭಿಮಾನಿಗಳಲ್ಲಿ ಒಂದು ಕುತೂಹಲ ಮತ್ತು ರಶ್ಮಿಕ ಮಂದಣ್ಣ ಅವರ್ದು ಏನ್ ಲಕ್ ಗುರು ಎಂದು ಮಾತಾಡಿದ್ದು ಉಂಟು, ರಶ್ಮಿಕಾ ಅವ್ರ ಅವರ ಸಿನಿಮಾ ಗ್ರಾಫ್ ಅನ್ನ ನೋಡಿದಾಗ ಕಿರಿಕ್ ಪಾರ್ಟಿಯಿಂದ ಶುರುವಾದ ಅವರ ಜರ್ನಿ ಇಲ್ಲಿಯ ತನಕ ಅಂದರೆ ರಣಬಾಲಿ ಯ ವರೆಗೆ ನೋಡಿದಾಗ, ರಶ್ಮಿಕಾ ಮಾಡಿದ ಸಿನಿಮಾಗಳು ವಿಭಿನ್ನ ಪಾತ್ರಗಳು ಕೂಡ ವಿಭಿನ್ನ, ಕನ್ನಡ ಭಾಷೆ ಸೇರಿ ಎಲ್ಲ ಕಡೆಯೂ ತನ್ನ ಅಭಿಮಾನಿಗಳನ್ನು ಹೊಂದಿರುವ ಈ ನಟಿ, ಯಾವತ್ತಿಗೂ ತಾವು ಮಾಡುವ ಸಿನಿಮಾಗಳಿಂದ ಸುದ್ದಿಯಲ್ಲಿ ಇರುತ್ತಾರೆ,
ವಿಜಯ್ ದೇವರಕೊಂಡ – ರಶ್ಮಿಕಾ ಜೋಡಿಯ ‘ರಣಬಾಲಿ’ ಚಿತ್ರದ ‘ಎಂದಯ್ಯಾ ಸಾಮಿ’ ಲಿರಿಕಲ್ ಸಾಂಗ್ ರಿಲೀಸ್: ಅಕ್ಟೋಬರ್ 16ಕ್ಕೆ ವಿಶ್ವದಾದ್ಯಂತ ಅದ್ಧೂರಿ ಬಿಡುಗಡೆ!
ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಕಾಂಬಿನೇಷನ್ನ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಬಿಗ್ ಬಜೆಟ್ ಸಿನಿಮಾ ‘ರಣಬಾಲಿ’ಯ ಮೊದಲ ಲಿರಿಕಲ್ ಹಾಡು “ಎಂದಯ್ಯಾ ಸಾಮಿ” ಇಂದು ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ. ರಾಹುಲ್ ಸಂಕೃತ್ಯನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಐತಿಹಾಸಿಕ ಚಿತ್ರವು ವಿಜಯದಶಮಿ ಹಬ್ಬದ ವಿಶೇಷ ಕೊಡುಗೆಯಾಗಿ ಇದೇ ಅಕ್ಟೋಬರ್ 16ರಂದು ತೆರೆಕಾಣಲು ಸಜ್ಜಾಗಿದೆ. ಈ ನಡುವೆ ಚಿತ್ರತಂಡ ಬಿಡುಗಡೆ ಮಾಡಿರುವ ಈ ರೊಮ್ಯಾಂಟಿಕ್ ಮೆಲೋಡಿ ಹಾಡು ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದೂ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರಗಳ ಮದುವೆಯ ಸಂಭ್ರಮದ ಸನ್ನಿವೇಶದಲ್ಲಿ ಈ ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿದೆ. 19ನೇ ಶತಮಾನದ ಸಾಂಪ್ರದಾಯಿಕ ಕಲ್ಯಾಣ ಮಹೋತ್ಸವದ ಸೊಬಗು, ಅಂದಿನ ಕಾಲಘಟ್ಟದ ಗ್ರಾಮೀಣ ವೈಭವ ಹಾಗೂ ಹಬ್ಬದ ವಾತಾವರಣವನ್ನು ಪರದೆಯ ಮೇಲೆ ಅತ್ಯಂತ ನೈಜವಾಗಿ ಮರುಸೃಷ್ಟಿಸಲಾಗಿದೆ. ನವದಂಪತಿಗಳ ನಡುವಿನ ಮುಗ್ಧ ಪ್ರೇಮ, ಒಲವಿನ ತುಂಟಾಟ ಹಾಗೂ ಭಾವನಾತ್ಮಕ ಕ್ಷಣಗಳನ್ನು ಸೆರೆಹಿಡಿದಿರುವ ಈ ಹಾಡು ಪ್ರೇಕ್ಷಕರಿಗೆ ಕಣ್ಣಿಗೂ ಮತ್ತು ಕಿವಿಗೂ ರಸದೌತಣ ನೀಡುವಂತೆ ಅದ್ಭುತವಾಗಿ ಮೂಡಿಬಂದಿದೆ.
ಖ್ಯಾತ ಸಂಗೀತ ಸಂಯೋಜಕ ಜೋಡಿ ಅಜಯ್-ಅತುಲ್ ಈ ಗೀತೆಗೆ ಮಧುರವಾದ ರಾಗ ಸಂಯೋಜನೆ ಮಾಡಿದ್ದು, ರಾಮಜೋಗಯ್ಯ ಶಾಸ್ತ್ರಿ ಅವರ ಅರ್ಥಪೂರ್ಣ ಸಾಹಿತ್ಯ ಈ ಹಾಡಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಗಾಯಕಿ ಶ್ವೇತಾ ಮೋಹನ್ ಮತ್ತು ಅಜಯ್ ಗೊಗಾವಲೆ ತಮ್ಮ ಸುಮಧುರ ಕಂಠದಿಂದ ಈ ಯುಗಳ ಗೀತೆಗೆ ಜೀವ ತುಂಬಿದ್ದಾರೆ. ಕಾವ್ಯಾತ್ಮಕ ಸಾಲುಗಳು, ಮಣ್ಣಿನ ಸೊಗಡಿನ ಇಂಪಾದ ನಾದ ಹಾಗೂ ಸಾರ್ವಕಾಲಿಕ ಪ್ರೇಮದ ಹಿನ್ನೆಲೆಯುಳ್ಳ ಈ ಲಿರಿಕಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಬ್ರಿಟಿಷರ ಆಳ್ವಿಕೆಯ ಕಾಲಘಟ್ಟವಾದ 1854ರಿಂದ 1878ರ ನಡುವೆ ನಡೆದ ನೈಜ ಐತಿಹಾಸಿಕ ಘಟನೆಗಳನ್ನು ಆಧರಿಸಿ ಈ ಸಿನಿಮಾವನ್ನು ತೆರೆಗೆ ತರಲಾಗುತ್ತಿದ್ದು, ಈಗಾಗಲೇ ರಿಲೀಸ್ ಆಗಿದ್ದ ಟೀಸರ್ ದೇಶಾದ್ಯಂತ ಸಿನಿಪ್ರಿಯರಲ್ಲಿ ತೀವ್ರ ಕೌತುಕವನ್ನು ಸೃಷ್ಟಿಸಿತ್ತು. ಇದೀಗ ಬಿಡುಗಡೆಯಾಗಿರುವ ಮೆಲೋಡಿ ಹಾಡು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.
ಪ್ರತಿಷ್ಠಿತ ‘ಮೈತ್ರಿ ಮೂವಿ ಮೇಕರ್ಸ್’ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಹಾಗೂ ವೈ. ರವಿಶಂಕರ್ ಈ ಮೆಗಾ ಪ್ರಾಜೆಕ್ಟ್ಗೆ ಬಂಡವಾಳ ಹೂಡಿದ್ದು, ಟಿ-ಸೀರೀಸ್ನ ಗುಲ್ಶನ್ ಕುಮಾರ್ ಮತ್ತು ಭೂಷಣ್ ಕುಮಾರ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಸಿನಿಮಾದಲ್ಲಿ ಹಾಲಿವುಡ್ ನಟ ಅರ್ನಾಲ್ಡ್ ವೋಸ್ಲೂ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಮತ್ತೊಂದು ವಿಶೇಷ. ಚಿತ್ರಕ್ಕೆ ಅನುರಾಗ್ ಪರ್ವತನೇನಿ ಮತ್ತು ಶಿವ್ ಚನನ್ ಸಹ-ನಿರ್ಮಾಪಕರಾಗಿದ್ದು, ಚೆರ್ರಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದಾರೆ. ನೀರವ್ ಶಾ ಮತ್ತು ಜಿಷ್ಣು ಭಟ್ಟಾಚಾರ್ಜಿ ಅವರ ಅದ್ಭುತ ಛಾಯಾಗ್ರಹಣ ಚಿತ್ರಕ್ಕಿದ್ದು, ತಾಂತ್ರಿಕವಾಗಿಯೂ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬಂದಿದೆ. ದಸರಾ ಹಬ್ಬದ ರಜಾದಿನಗಳಲ್ಲಿ ತೆರೆಕಾಣಲಿರುವ ‘ರಣಬಾಲಿ’ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದೆ.

