Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಸುರಕ್ಷಾ “ಟೀ” ಜೊತೆಗೆ “ಧಗೆ”
- ಸಿನಿಮಾ

ಸುರಕ್ಷಾ “ಟೀ” ಜೊತೆಗೆ “ಧಗೆ”

ವೀಕೆಂಡ್ ಸುರಕ್ಷಾ ಟೀ ಪ್ರಾಡಕ್ಟ್ ಜೊತೆಗೆ ಧಗೆ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ,ಶ್ರೀ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು. ಉತ್ತರ ಕರ್ನಾಟಕದ ಅರವಿಂದ್ ಪಾಟೀಲ್,ಸುರಕ್ಷಾ ಟೀ ಶುರು ಮಾಡುವ ಮೊದಲು ನಮ್ಮ ಬಳಿ ಬಂದು ಕೇಳಿಕೊಂಡು, ನಮ್ಮ ಆಶೀರ್ವಾದ ಪಡೆದರು,ಅವ್ರ ಶ್ರಮ ಮತ್ತು ಕರ್ತವ್ಯ ಪ್ರಜ್ಞೆಗೆ ದೇವರೇ ಆಶೀರ್ವಾದ ಮಾಡಿದ್ದು ಅವ್ರು ಒಳ್ಳೆಯ ಹೆಸರನ್ನು ಮಾಡುತ್ತಾರೆ ಎಂದು ಆಶೀರ್ವಾದ ಮಾಡಿ,ಶುಭ ಹಾರೈಸಿದರು. ನನಗೀಗ 75 ವರ್ಷ,ನಾನ್ಯಾವತ್ತೂ ಚಹಾ ಕುಡಿದಿರಲಿಲ್ಲ, ನನ್ನ ಸಹಾಯಕನ ಮಾತು ಮತ್ತು […]

ವೀಕೆಂಡ್ ಸುರಕ್ಷಾ ಟೀ ಪ್ರಾಡಕ್ಟ್ ಜೊತೆಗೆ ಧಗೆ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ,ಶ್ರೀ ಶ್ರೀ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು.

ಉತ್ತರ ಕರ್ನಾಟಕದ ಅರವಿಂದ್ ಪಾಟೀಲ್,ಸುರಕ್ಷಾ ಟೀ ಶುರು ಮಾಡುವ ಮೊದಲು ನಮ್ಮ ಬಳಿ ಬಂದು ಕೇಳಿಕೊಂಡು, ನಮ್ಮ ಆಶೀರ್ವಾದ ಪಡೆದರು,ಅವ್ರ ಶ್ರಮ ಮತ್ತು ಕರ್ತವ್ಯ ಪ್ರಜ್ಞೆಗೆ ದೇವರೇ ಆಶೀರ್ವಾದ ಮಾಡಿದ್ದು ಅವ್ರು ಒಳ್ಳೆಯ ಹೆಸರನ್ನು ಮಾಡುತ್ತಾರೆ ಎಂದು ಆಶೀರ್ವಾದ ಮಾಡಿ,ಶುಭ ಹಾರೈಸಿದರು.

ನನಗೀಗ 75 ವರ್ಷ,ನಾನ್ಯಾವತ್ತೂ ಚಹಾ ಕುಡಿದಿರಲಿಲ್ಲ, ನನ್ನ ಸಹಾಯಕನ ಮಾತು ಮತ್ತು ಹಾಗು ಅರವಿಂದ್ ಮೇಲಿನ ಪ್ರೀತಿಗೆ, ಸುರಕ್ಷಾ ಟೀ ಕುಡಿದು ನೋಡಿದೆ,ಒಳ್ಳೆಯ ಕ್ವಾಲಿಟಿಯಿಂದ ಮಾಡಿದ ಪದಾರ್ಥ ಇದು ಯಶಸ್ವಿ ಆಗತ್ತೆ ಎಂದು ಹೇಳಿ ಅದರ ಜೊತೆಗೆ

ಇದೇ ಸಂದರ್ಭದಲ್ಲಿ ಧಗೆ ಚಿತ್ರದ ಪೋಸ್ಟರ್ ಕೂಡಾ ಲಾಂಚ್ ಆಗಿದೆ,ಇದೊಂದು
ಅಮ್ಮ ಮಗನ ಬಾಂಧವ್ಯದ ಕಥೆ,ಕುಡುಕ ಮಗನನ್ನು ತಾಯಿ ಹೇಗೆ ಸಹಿಸಿಕೊಳ್ಳುತ್ತಾಳೆ ಮತ್ತು ಹೇಗೆ ಮಗನ ಬದುಕನ್ನು ತಿದ್ದಿ ಉದ್ದಾರ ಮಾಡುತ್ತಾಳೆ ಅನ್ನೋದೇ ಮುಖ್ಯ ಎಳೆಯಾಗಿದೆ,ಇಂತಹ ಕಥೆಗಳು ಸಮಾಜಕ್ಕೆ ದೊಡ್ಡ ದಾರಿ ದೀಪಗಳಾಗಿ ಜನ ಸಾಮಾನ್ಯರು ಉದ್ದಾಗ ಆಗ್ಬೇಕು ಎಂದರು.

ಕರ್ನಾಟಕ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಕೆಎಎಸ್ ಅಧಿಕಾರಿ ಡಾಕ್ಟರ್ ಸಂಗಮೇಶ ಉಪಾಸೆ ಯವರು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದು ಇದರ ಜೊತೆಗೆ ಇದೇ ಕಾರ್ಯಕ್ರಮದಲ್ಲಿ ಅವರು ನಟಿಸಿರುವ ಧಗೆ ಚಿತ್ರದ ಪೋಸ್ಟರ್ ಕೂಡಾ ಲಾಂಚ್ ಆಗಿದ್ದು,ಸ್ವತಃ ಉಪಾಸೆಯವರಿಗೂ ಸಂತಸ ತಂದಿತು,ನಂತರ ಮಾತನಾಡಿದ ಉಪಾಸೆ,,

ವೀಕೆಂಡ್ ಸುರಕ್ಷಾ ಟೀ ಪ್ರಾಡಕ್ಟ್ ಲಾಂಚ್ ಜೊತೆಗೆ ನಮ್ಮ “ಧಗೆ” ಚಿತ್ರದ ಪೋಸ್ಟರ್ ಕೂಡಾ ಲಾಂಚ್ ಆಗಿದ್ದು,ನನಗೆ ಹೆಮ್ಮೆ ಮತ್ತು ಖುಷಿ ತಂದಿದ್ದು.

ಸುರಕ್ಷಾ ಟೀ ಆರೋಗ್ಯಕ್ಕೆ ತುಂಬಾ ಒಳ್ಳೆಯದು ನಮ್ಮ ಧಗೆ ಚಿತ್ರವು ಕೂಡಾ ಒಳ್ಳೆಯ ಸಂದೇಶ ಸಾರುವ ಕಥೆ
ಇದೇ ಸಂದರ್ಭದಲ್ಲಿ ನಾವು ಕೂಡಾ ಧಗೆ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ್ದೇವೆ.
“ಧಗೆ” ಚಿತ್ರದಲ್ಲಿ ಪದ್ಮಶ್ರೀ ಜೋಗತಿ ಮಂಜಮ್ಮ ಹಾಗೂ ನಾನು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದೇವೆ.ಇದರಲ್ಲಿ ನನ್ನದು ಕುಡುಕ ಮಗನ ಪಾತ್ರ,ಯಾವುದೇ ಚಿತ್ರವಾಗಲಿ ಅದು ನೋಡುಗನ ಮನಸ್ಸನ್ನು ಪರಿವರ್ತನೆ ಮಾಡಬೇಕು,ಅಂತಹ ಸಾಲಿಗೆ ನಮ್ಮ ಕಥೆ “ಧಗೆ” ನಿಲ್ಲಲಿದೆ ಎಂದರು.

ಉತ್ತರ ಕರ್ನಾಟಕದ ಮಂದಿ ಚಹಾ ಕುಡಿಯುವ ಬಗ್ಗೆ ಮಾತನಾಡಿ,ಖಾಯಿಲೆ ಏನೇ ಇದ್ರೂ ಸರಿ ಬಿಟ್ಟರು ಸರಿ,ಗೆಳೆಯರು ಸಂಬಂಧಿಕರು ಸಿಕ್ಕಾಗ ಚಹಾ ಕುಡಿಯಲೇ ಬೇಕು,ಕುಡಿದು ಹೋದ ಮೇಲೆ ಏನೇ ಆದರೂ ಆಗಲಿ ಅನ್ನುವಂತಹ ಹಾಸ್ಯ ಚಟಾಕಿ ಹಾರಿಸುವ ಮೂಲಕ ಚಹಾ ಉತ್ತರ ಕರ್ನಾಟಕದ ಜನಕ್ಕೆ ಎಷ್ಟು ಮುಖ್ಯ ಎಂಬ ಮಾತನ್ನು ಹೇಳಿದರು.

ಬಸವರಾಜ್ ಮಹಾಮನಿ ಮಾತನಾಡಿ,
ಚಹಾ ಇಲಾಂದ್ರ ನಮ್ಮ ಕಡೆ ಏನೂ ಆಗಲ್ಲ, ಖುಷಿ ಆದಾಗಲೂ ಚಹಾ ಬೇಕು, ದುಃಖ ಆದಾಗಲೂ ಚಹಾ ಬೇಕು. ಸುರಕ್ಷಾ ಟೀ ಪ್ರಾಡಕ್ಟ್ ಗೇ ನನ್ನನ್ನ ಯಾಕೆ ಬ್ರ್ಯಾಂಡ್ ಅಂಬಾಸಿಡರ್ ಮಾಡಲಿಲ್ಲ ಅನ್ನೋದು ಗೊತ್ತಾಯ್ತು ನಾನು ಸ್ವಲ್ಪ ಬಿಳಿ ಬಣ್ಣ ಚಹಾಪುಡಿ ಸ್ವಲ್ಪ ಕಪ್ಪು ಬಣ್ಣ,ಮುಂದೆ ಪಾಟೀಲ್ ರು ಹಾಲಿನ ಪ್ರಾಡಕ್ಟ್ ಮಾಡ್ತಾರೆ ಆಗ ನಾನೇ ಬ್ರ್ಯಾಂಡ್ ಅಂಬಾಸಿಡರ್ ಅಂತಾ ನಗುತ್ತಾ ಶುಭ ಹಾರೈಸಿದರು.

ಪದ್ಮಶ್ರೀ
ಮಂಜಮ್ಮ ಜೋಗತಿ,ವೀಕೆಂಡ್ ಸುರಕ್ಷಾ ಟೀ ಪ್ರಾಂಚೈಸಿ ಮತ್ತು ಡಿಸ್ಟ್ರಿಬ್ಯೂಷನ್ ಲಾಂಚ್ ನಲ್ಲಿ ಭಾಗವಹಿಸಿ,
ಅರವಿಂದ್ ಪಾಟೀಲ್ ನೇತೃತ್ವದ ಈ ಸುರಕ್ಷಾ ಟೀ ಪ್ರಾಡಕ್ಟ್ ಮೂಲಕ ಹೊಸ ಹೆಜ್ಜೆಯನ್ನು ಇಟ್ಟಿದ್ದು,ನಾವು ಬೆಳಿಬೇಕು ಅನ್ನೋ ಹಠ ಇರ್ಬೇಕು,ಆ ಹಠ ಶ್ರಮ ಅವರಲ್ಲಿ ಸದಾ ಇರಲಿ,ನಾವು ಚಿಕ್ಕವರಾಗಿದ್ದ ಸಮಯ ನಮ್ಮ ಅಮ್ಮ ಬೆಲ್ಲದ ಟೀ ಮಾಡಿ ಕೊಡ್ತಾ ಇದ್ರು ಅದು ನೆನಪಾಯ್ತು ಅಂದ್ರು.

ವೀಕೆಂಡ್ ಸುರಕ್ಷಾ ಟೀ ಪ್ರಾಡಕ್ಟ್. ಮುಖ್ಯಸ್ಥರು,
ಅರವಿಂದ್ ಪಾಟೀಲ್ ಮಾತನಾಡಿ,ಅಜ್ಜಯ್ಯನ ಕಾಲಿಗೆ ಹೋಗಿ ನಮಸ್ಕಾರ ಮಾಡಿದ್ದೆ ಅವ್ರ ಆಶೀರ್ವಾದ ಪಡೆದೆ,ಹಾಗೆ ಪದ್ಮಶ್ರೀ ಮಂಜಮ್ಮ ಜೋಗತಿ ನನಗೆ ದೊಡ್ಡ ಪ್ರೇರಣೆ,
ನಮ್ಮ ಸುರಕ್ಷಾ ಟೀ ಪ್ರಾಡಕ್ಟ್ ನ ಪ್ರಮುಖ ರಾಯಭಾರಿ (ಬ್ರ್ಯಾಂಡ್ ಅಂಬಾಸಿಡರ್ ) ಹೈಲೈಟ್ ಅಂದ್ರೆ ಪ್ರಾಣೇಶ್ ಸರ್,ನಮ್ ಜೊತೆ ಕೈ ಜೋಡಿಸಿದ್ದಕ್ಕೆ ಧನ್ಯವಾದಗಳು,ನನ್ನದೊಂದು ಫೋನ್ ಕಾಲ್ ಗೆ ಬಂದಿದ್ದು ಕನ್ನಡದ ಹೀರೋ ನವೀನ್ ಶಂಕರ್ ರವರಿಗೆ ಧನ್ಯವಾದ ಹೇಳಿದರು.

ಹಾಸ್ಯ ಮಾಡುತ್ತಲೇ ಮಾತು ಶುರು ಮಾಡಿದ ಹಾಸ್ಯ ಚಕ್ರವರ್ತಿ ಗಂಗಾವತಿಯ ಪ್ರಾಣೇಶ್,ಉತ್ತರ ಕರ್ನಾಟಕದ ಕಡೆ ಚಹಾ ಕುಡಿಯದೇ ಮಾತೆ ಶುರು ಮಾಡಲ್ಲ.ಪ್ರಪಂಚದಾದ್ಯಂತ ನಾನು ಇಲ್ಲಿಯ ತನಕ 4500 ಕಾರ್ಯಕ್ರಮ ಮಾಡಿದ್ದೇನೆ,ಯಾರೊಬ್ಬರು ನನ್ನನ್ನು ಈ ರೀತಿಯಾಗಿ ಬಳಸಿಕೊಂಡಿರಲಿಲ್ಲ,ಅರವಿಂದ್ ನನ್ನನ್ನ ಸುರಕ್ಷಾ ಟೀ ಪ್ರಾಡಕ್ಟ್ ಗೇ( ಬ್ರ್ಯಾಂಡ್ ಅಂಬಾಸಿಡರ್ ) ಮಾಡಿದ್ದಾರೆ,
ನನ್ನ ಬಳಿ ಈಗ ಅಂಬಾಸಿಡರ್ ಬಂತು ಎಂದರು.

ಧಗೆ ಚಿತ್ರದ ನಿರ್ದೇಶಕ
ಕೆರ್ನಳ್ಳಿ ಈಶ್ವರ್ ಮಾತನಾಡಿ,ಎರಡು ಸಂಸ್ಥೆಗಳು ಒಂದಾದಾಗ ಎಷ್ಟು ದೊಡ್ಡ ಎನರ್ಜಿ ಬರುತ್ತದೆ ಎಂಬುದು ನಮಗೆ ಗೊತ್ತು,ಇವತ್ತು ಆದದ್ದು ಅದೇ,ಹಾಗೆ ಧಗೆ ಚಿತ್ರಕ್ಕಾಗಿ ನಾವು ತುಂಬ ಕಷ್ಟ ಪಟ್ಟಿದ್ದೇವೆ,ಇಂತದೊಂದು ಕಥೆ ಚಿತ್ರ ಮಾಡೋದಕ್ಕೆ ಧೈರ್ಯ ಬೇಕು ನಿಮ್ಮೆಲ್ಲರ ಸಹಕಾರ ಇರ್ಲಿ ಎಂದರು.

ತಮ್ಮ ಬಳಿ ಕಲಿತ ಶಿಷ್ಯನ ಕಾರ್ಯಕ್ರಮಕ್ಕೆ ಬಂದಿದ್ದ
ವಿಜಯಪುರ ಚಾಣಕ್ಯ ಟ್ಯೂಷನ್ ಸೆಂಟರ್ ನ ಮುಖ್ಯಸ್ಥರು ಬಿರಾದಾರ್ ಸರ್ ಮಾತನಾಡಿ,ನಾನು ಬಹಳ ಮಕ್ಕಳಿಗೆ ಟ್ಯೂಷನ್ ಮಾಡಿದ್ದೇನೆ,ಎಲ್ಲರಿಗೂ ಸರ್ಕಾರಿ ಕೆಲಸವೇ ಬೇಕು ಅಂದ್ರೆ ಅದು ಸಾಧ್ಯವಿಲ್ಲ,ಬದುಕು ದೊಡ್ದದು ಬೇರೆ ಬೇರೆ ದಾರಿಗಳನ್ನು ಹುಡುಕಿ ಸಾಧನೆ ಮಾಡಿ ಎಂದು ಹೇಳುತ್ತಿದ್ದೆ,ಅರವಿಂದ್ ಮಾಡಿಕೊಂಡ ಆಯ್ಕೆ ಗಟ್ಟಿಯಾಗಿದೆ ಎಂದರು.

ಚಂದನವನದ ಚಂದದ ಪ್ರತಿಭಾವಂತ ನಾಯಕ ನಟ
ನವೀನ್ ಶಂಕರ್, ಪ್ರತಿಸಾರಿಯೋ ಮಾತನಾಡುವಂತೆ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತಾಡುತ್ತಾ,
ಗುರುಗಳುಮಾನವೀಯತೆಯ ಸಾಕಾರ ಮೂರ್ತಿಗಳು,
ಪದ್ಮಶ್ರೀ ಮಂಜಮ್ಮ ಜೋಗತಿ ಯವರ ಆಶೀರ್ವಾದ.ನಿಮ್ಮೆಲ್ಲರ ಮೇಲೆ ಇರಲಿ,ನಾನು ಕೂಡಾ ಚಹಾ ಪ್ರಿಯ,ನಾವು ಚಹಾಗೆ ದೊಡ್ಡ ಫ್ಯಾನ್.ನಾನು ಕಂಡ ಹಾಗೆ ಮಾತನಾಡುತ್ತಾ,ತಮ್ಮ ಕ್ಷೇತ್ರಪತಿ ಚಿತ್ರದ ಚಿತ್ರದ ಶೂಟಿಂಗ್ ಸಮಯ ಚಹಾ ಕುರಿತಾದ ಘಟನೆ ಬಗ್ಗೆ ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ನಾವು ಕಂಡ ಹಾಗೆ ಉತ್ತರ ಕರ್ನಾಟಕದ ಮೊಟ್ಟ ಮೊದಲ ಸೂಪರ್ ಸ್ಟಾರ್ ಪ್ರಾಣೇಶ್ ಸರ್ ಅವರ ಮಾತಿಗೆ ಇಡೀ ಪ್ರಪಂಚವೇ ನಕ್ಕಿದ್ದು ಎಲ್ಲರಿಗೂ ತಿಳಿದ ವಿಚಾರ

ನಾನು ಉತ್ತರ ಕರ್ನಾಟಕವನ್ನ ಪ್ರತಿನಿಧಿಸ್ತೀನಿ,ನಮ್ಮ ಉತ್ತರ ಕರ್ನಾಟಕ ಮಹಾನ ಸಾಧಕರ ತವರೂರು ಎಂಬಂತಹ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಹುರುಪು ತುಂಬಿದರು

ರವೀ ಸಾಸನೂರ್ MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.