Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಅಮರಾವತಿ ಅಡ್ಡಾದಲ್ಲಿ “ನವೀನ್ ಸಜ್ಜು”
- ಸಿನಿಮಾ

ಅಮರಾವತಿ ಅಡ್ಡಾದಲ್ಲಿ “ನವೀನ್ ಸಜ್ಜು”

ಗಾಯಕನಾಗಿಯೂ ಸೈ,,ಸಾಹಿತ್ಯ ಬರೆಯುವುದಕ್ಕೂ ಸೈ, ಸಂಗೀತ ನಿರ್ದೇಶನಕ್ಕೂ ಸೈ, ಇತ್ತೀಚಿಗೆ ನಟನೆಯಲ್ಲಿಯೂ ಸೈ ಎನಿಸಿಕೊಂಡ ಕನ್ನಡದ ಅಪ್ಪಟ ಸ್ವದೇಶಿ ಪ್ರತಿಭೆ ನವೀನ್ ಸಜ್ಜು. ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಇಲ್ಲಿಯ ತನಕ ನಾವು ನೀವೆಲ್ಲರೂ ಬಹಳಷ್ಟು ಅತ್ಯಂತ ಶ್ರೇಷ್ಠ ಮಟ್ಟದ ಪ್ರತಿಭಾವಂತ ಗಾಯಕರನ್ನ ಗಾಯಕಿಯರನ್ನ ಕಂಡಿದ್ದೇವೆ, ಪ್ರತಿಯೊಬ್ಬ ಗಾಯಕರು ತಮ್ಮದೇ ಆದಂತಹ ವಿಭಿನ್ನವಾದಂತ ಸ್ಟೈಲ್ ಮೂಲಕ, ಕೇಳುವುದರಲ್ಲಿ ಒಂದು ವಿಶೇಷವಾದಂತಹ ಅಭಿರುಚಿಯನ್ನ ಬಿಟ್ಟಿರುತ್ತಾರೆ. ನವೀನ್ ಸಜ್ಜುಕೂಡ ನಮಗೆ ಹಾಗೆ ನೆನಪಾಗುತ್ತಾರೆ ನೆನಪಿನಲ್ಲಿ ಉಳಿಯುತ್ತಾರೆ ಕೂಡ, ಗಾಯಕ ರಾಗಿ ಸಾಹಿತಿಯಾಗಿ […]

ಗಾಯಕನಾಗಿಯೂ ಸೈ,,ಸಾಹಿತ್ಯ ಬರೆಯುವುದಕ್ಕೂ ಸೈ, ಸಂಗೀತ ನಿರ್ದೇಶನಕ್ಕೂ ಸೈ, ಇತ್ತೀಚಿಗೆ ನಟನೆಯಲ್ಲಿಯೂ ಸೈ ಎನಿಸಿಕೊಂಡ ಕನ್ನಡದ ಅಪ್ಪಟ ಸ್ವದೇಶಿ ಪ್ರತಿಭೆ ನವೀನ್ ಸಜ್ಜು.

ಕನ್ನಡ ಚಿತ್ರರಂಗ ಇತಿಹಾಸದಲ್ಲಿ ಇಲ್ಲಿಯ ತನಕ ನಾವು ನೀವೆಲ್ಲರೂ ಬಹಳಷ್ಟು ಅತ್ಯಂತ ಶ್ರೇಷ್ಠ ಮಟ್ಟದ ಪ್ರತಿಭಾವಂತ ಗಾಯಕರನ್ನ ಗಾಯಕಿಯರನ್ನ ಕಂಡಿದ್ದೇವೆ, ಪ್ರತಿಯೊಬ್ಬ ಗಾಯಕರು ತಮ್ಮದೇ ಆದಂತಹ ವಿಭಿನ್ನವಾದಂತ ಸ್ಟೈಲ್ ಮೂಲಕ, ಕೇಳುವುದರಲ್ಲಿ ಒಂದು ವಿಶೇಷವಾದಂತಹ ಅಭಿರುಚಿಯನ್ನ ಬಿಟ್ಟಿರುತ್ತಾರೆ.

ನವೀನ್ ಸಜ್ಜುಕೂಡ ನಮಗೆ ಹಾಗೆ ನೆನಪಾಗುತ್ತಾರೆ ನೆನಪಿನಲ್ಲಿ ಉಳಿಯುತ್ತಾರೆ ಕೂಡ, ಗಾಯಕ ರಾಗಿ ಸಾಹಿತಿಯಾಗಿ ಸಂಗೀತ ನಿರ್ದೇಶಕರಾಗಿದ್ದ ನವೀನ್ ಸಜ್ಜು ಲೋ ನವೀನ ಚಿತ್ರದ ಮೂಲಕ ನಾಯಕ ನಟನಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ, ಲೋ ನವೀನ ಒಂದು ಸದಭಿರುಚಿಯ ಚಿತ್ರ, ನವೀನ್ ಸಜ್ಜು ಮತ್ತೆ ನಟನಾಗಿ ನಾಯಕನಟನಾಗಿ ನಟಿಸಲು ಯೋಗ್ಯರು ಎಂಬ ಮಾತು ಎಲ್ಲ ಕಡೆ ಕೇಳಿಬಂದಿತ್ತು, ಈಗ ನವೀನ್ ಸಜ್ಜು ಮತ್ತೊಂದು ಚಿತ್ರದ ಮೂಲಕ ಎಲ್ಲರನ್ನ ರಂಜಿಸಲು ಬರುತ್ತಿದ್ದಾರೆ ಇಲ್ಲಿದೆ ಮಾಹಿತಿ.

ನವೀನ್ ಸಜ್ಜು ನಾಯಕತ್ವದಲ್ಲಿ ಪರಿಸರ ಕಾಳಜಿಯ ‘ಅಮರಾವತಿ’ ಕಟ್ಟಿದ ನಿರ್ದೇಶಕ ಕುಮಾರ್

ಬೆಂಗಳೂರು: ‘ಕೆಮಿಸ್ಟ್ರಿ ಆಫ್ ಕರಿಯಪ್ಪ’, ‘ಕ್ರಿಟಿಕಲ್ ಕೀರ್ತನೆಗಳು’ ಹಾಗೂ ‘ಲವ್ ಯು ಮುದ್ದು’ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ನಿರ್ದೇಶಕ ಕುಮಾರ್, ಇದೀಗ ಮತ್ತೊಂದು ಹೊಸ ಕಥೆಯೊಂದಿಗೆ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ. ಸದಾ ಕುಟುಂಬ ಪ್ರೇಕ್ಷಕರನ್ನು ಸೆಳೆಯುವಂತಹ ಕಾಮಿಡಿ, ಬೆಟ್ಟಿಂಗ್ ಹಾಗೂ ಪ್ರೇಮಕಥೆಗಳನ್ನು ಕಟ್ಟಿಕೊಡುತ್ತಿದ್ದ ಕುಮಾರ್, ಈ ಬಾರಿ ಗಂಭೀರ ಪರಿಸರ ಕಾಳಜಿಯ ಕಥಾವಸ್ತುವನ್ನು ಮನರಂಜನಾತ್ಮಕ ಚೌಕಟ್ಟಿನಲ್ಲಿ ತರುತ್ತಿದ್ದು, ಚಿತ್ರಕ್ಕೆ ‘ಅಮರಾವತಿ’ ಎಂದು ಶೀರ್ಷಿಕೆ ಇಡಲಾಗಿದೆ. ‘ಲೋ ನವೀನ’ ಯಶಸ್ಸಿನ ಬಳಿಕ ಗಾಯಕ, ನಟ ನವೀನ್ ಸಜ್ಜು ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಇದೊಂದು ವಿಶಿಷ್ಟ ಕಾಮಿಡಿ ಥ್ರಿಲ್ಲರ್ ಶೈಲಿಯ ಸಿನಿಮಾವಾಗಿದ್ದು, ಮಡಿಕೇರಿಯಲ್ಲಿ ಸಂಭವಿಸಿದ ಭೂಕುಸಿತದ ಹಿನ್ನೆಲೆಯಲ್ಲಿ, ಕೇವಲ ಒಂದೇ ದಿನದಲ್ಲಿ ನಡೆಯುವ ಕಾಲ್ಪನಿಕ ಘಟನೆಗಳನ್ನು ಆಧರಿಸಿದೆ. ಚಿತ್ರತಂಡವು ಮಡಿಕೇರಿ ಮತ್ತು ಸುತ್ತಮುತ್ತಲ ಸುಂದರ ಪ್ರಕೃತಿಯ ನಡುವೆ, ನೈಜ ಮಳೆಯಲ್ಲಿ ಸತತ 40 ದಿನಗಳ ಕಾಲ ಚಿತ್ರೀಕರಣ ನಡೆಸಿದೆ. ಮಲಯಾಳಂ ಸಿನಿಮಾಗಳ ಮಾದರಿಯಲ್ಲಿ ನೈಜ ಹಾಗೂ ಆಪ್ತವಾದ ದೃಶ್ಯಾನುಭವವನ್ನು ಈ ಚಿತ್ರ ಪ್ರೇಕ್ಷಕರಿಗೆ ನೀಡಲಿದೆ ಎಂಬುದು ಚಿತ್ರತಂಡದ ವಿಶ್ವಾಸ.

ಅನಧಿಕೃತವಾಗಿ ನಡೆಯುವ ಮರಗಳ ಮಾರಣಹೋಮ ಹಾಗೂ ಅದರಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಸುತ್ತ ಚಿತ್ರದ ಕಥೆ ಸಾಗಲಿದೆ. ಚಿತ್ರದಲ್ಲಿ ನವೀನ್ ಸಜ್ಜು ‘ಮುತ್ತು’ ಎಂಬ ಪ್ರಕೃತಿ ಪ್ರೇಮಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪರಿಸರ ನಾಶದಂತಹ ಸೂಕ್ಷ್ಮ ಹಾಗೂ ಗಂಭೀರ ವಿಷಯವನ್ನು ಪ್ರೇಕ್ಷಕರಿಗೆ ಬೋಧನೆ ಮಾಡದೆ, ಹಾಸ್ಯದ ಲೇಪನದೊಂದಿಗೆ ರಂಜನೀಯವಾಗಿ ಪ್ರಸ್ತುತಪಡಿಸಿರುವುದು ಈ ಚಿತ್ರದ ಹೈಲೈಟ್.

ನಿರ್ದೇಶನದ ಜೊತೆಗೆ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಹೊಸ ಹೆಜ್ಜೆ ಇಟ್ಟಿದ್ದಾರೆ. ಚಿತ್ರದ ಚಿತ್ರೀಕರಣ, ಪೋಸ್ಟ್-ಪ್ರೊಡಕ್ಷನ್ ಮತ್ತು ಸೆನ್ಸಾರ್ ಪ್ರಕ್ರಿಯೆಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಇದೇ ನವೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳು ನಡೆದಿವೆ. ಇತ್ತೀಚೆಗಷ್ಟೇ ಚಿತ್ರದ ಆಕರ್ಷಕ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಅಧಿಕೃತ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಚಿತ್ರದಲ್ಲಿ ನವೀನ್ ಸಜ್ಜು ಅವರೊಂದಿಗೆ ಗಿರೀಶ್ ಶಿವಣ್ಣ, ಯಶ್ ಶೆಟ್ಟಿ, ಸಮೀಕ್ಷಾ ರಾಮ್, ಗೌರಿ ಶೇವಾ, ಸುಮಂತ್ ಹಾಗೂ ವಿಜೇತ್ ಪ್ರಮುಖ ತಾರಾಗಣದಲ್ಲಿದ್ದಾರೆ. ನವೀನ್ ಚಲ್ಲ ಅವರ ಛಾಯಾಗ್ರಹಣವಿದ್ದು, ನವೀನ್ ಸಜ್ಜು ಮತ್ತು ಆಕಾಶ್ ಪರ್ವ ಜೋಡಿ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.