Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಬಹಳ ಹಿಂದಿನ ಕಥೆ…

ಬಹಳ ಹಿಂದಿನ ಕಥೆ… ಆವಾಗ ಊರಾಗ ಹೊಕ್ಕು ತುಂಬು ಭಾವಿ ಇದ್ದೋರಿ,ಹೊಳೆಯರು ಮಾದರು ಭಾವಿ ಕಡೆಕ್ಕ ಇರುತ್ತಿದ್ದರು.ಅದರಾಗ ಉತ್ತಮರು ಯಾರಾದರೂ ನೀರು ಕುಡಿದರು ಅಂತ ಹೇಳಿ ಸುತ್ತ ಎಲು ಚುಚ್ಚುತ್ತಿದ್ದರಂತೆ ಆ ಎಲುವು ನೋಡಾನ ಇದು ಹೊಲೆಯರ ಭಾವಿ ಮಾದರ ಬಾವಿ ಅಂತ ತಿಳಿಯಬೇಕು. ಮತ್ತು ನೀನು ಎಲುವಿನಾಳದೊಳಗ ಕುಳಿತಿದಿ . ನಿನ್ನ ಸುತ್ತ ಎಲುಬು ಅದಾವು ಅಂದಮೇಲೆ ಯಾಕೋ ಓಡಾಡುತ್ತಿದಿ .ಇದರ ಬಗ್ಗೆ ಏನಾದರೂ ತಿಳಿದಿ ಏನು ?ತಿಳಿದಿಲ್ಲ. ಮಹಾತ್ಮರು ಇದನ್ನು ಹೇಳಿ ನಗತಾರ. ಊರ […]

ಬಹಳ ಹಿಂದಿನ ಕಥೆ…

ಆವಾಗ ಊರಾಗ ಹೊಕ್ಕು ತುಂಬು ಭಾವಿ ಇದ್ದೋರಿ,ಹೊಳೆಯರು ಮಾದರು ಭಾವಿ ಕಡೆಕ್ಕ ಇರುತ್ತಿದ್ದರು.ಅದರಾಗ ಉತ್ತಮರು ಯಾರಾದರೂ ನೀರು ಕುಡಿದರು ಅಂತ ಹೇಳಿ ಸುತ್ತ ಎಲು ಚುಚ್ಚುತ್ತಿದ್ದರಂತೆ ಆ ಎಲುವು ನೋಡಾನ ಇದು ಹೊಲೆಯರ ಭಾವಿ ಮಾದರ ಬಾವಿ ಅಂತ ತಿಳಿಯಬೇಕು. ಮತ್ತು ನೀನು ಎಲುವಿನಾಳದೊಳಗ ಕುಳಿತಿದಿ . ನಿನ್ನ ಸುತ್ತ ಎಲುಬು ಅದಾವು ಅಂದಮೇಲೆ ಯಾಕೋ ಓಡಾಡುತ್ತಿದಿ .ಇದರ ಬಗ್ಗೆ ಏನಾದರೂ ತಿಳಿದಿ ಏನು ?ತಿಳಿದಿಲ್ಲ. ಮಹಾತ್ಮರು ಇದನ್ನು ಹೇಳಿ ನಗತಾರ.

ಊರ ನರಕವ ತಿಂದು ಬೋರ್ಯಾಡಿ ಹಿಂದು ಎಮ್ಮಿ ಬ್ರಾಹ್ಮಣರ ಮನೆ ಮನೆಯಾಗ ಗೌಡರ ಮನೆಯಾಗ ಕುಲಕರ್ಣಿ ಅವರ ಮನೆಯಾಗ ಮನೆಯಾಗಹಿಂಗ ಎಲ್ಲರ ಮನೆಯಾಗ ಹೆಮ್ಮೆ ಅದಾವು ಮುಂಜಾನೆ ಎದ್ದ ಕೂಡಲೇ ಎಮ್ಮೆ ಎಲ್ಲಿಗೆ ಬಿಡುತ್ತಾರೆ ? ಸೊರಗ್ರಡಾ ಕ್ಕ ಬಿಡುತ್ತಾರೆ.ಹೊಲಸು ಗೌಡರ್ದು ಕುಲಕರ್ಣಿ ಅವರದು ಬ್ರಾಹ್ಮಣರದ್ದು ಅಷ್ಟೇ ತಿಂತದೇನ್ರಿ ಎಲ್ಲರದು ತಿನ್ನುದ .

ಅದನ್ನು ತಿಂದು ಬಂದಾಗ ಡುಬ್ಬ ಚಪ್ಪರಿಸಿ ಹಾಲು ಹಿಂಡಿಕೊಳ್ಳುತ್ತೇವೆ. ಅದನ್ನು ತಿಂದು ಬಂದ ಆ ಎಮ್ಮೆ ನಿಮಗ ಹಾಲುಕೊಟ್ಟದ …ಏನ ನಮ್ಮ ಎಮ್ಮಿ ಹಾಲು ಅದೇನು ರುಚಿ ಅಂತ ಬಾಯಿ ಚಪ್ಪರಿಸಿ ಕುಡಿತೀವಿ. ಅವಾಗ ನಿಮ್ಮ ಶೀಲಾ ಎಲ್ಲಿ ಹೋಯಿತು ?ಎಮ್ಮಿ ಎಲ್ಲಿ ಹೋಗಿ ಬಂದದ ಅದನ್ನು ವಿಚಾರ ಮಾಡಲಿಲ್ಲ. ಬರಿ ಹಾಲನ್ನೇ ನೋಡಿದಿರಿ ಅದು ತಿಂದಿದ್ದು ನೋಡಲಿಲ್ಲ. ಅಂದಮ್ಯಾಗ ನಿಮ್ಮ ಶೀಲ ಎಲ್ಲಿ ಹೋಯಿತು ?

ಊರ ಬಾವಿಯ ನೀರು ಯಾರಾದರೂ ತುಂಬುವರು .ನಿಮ್ಮ ನೀರು ಏನರ ಬ್ಯಾರೆ ಐತೇನು ? ಅವಾಗ ಬೋರು ಗೀರು ಇದ್ದಿದ್ದಿಲ್ಲ . ಹೊಕ್ಕು ತುಂಬಾ ಭಾವಿ ಇದ್ದು ಎಲ್ಲರೂ ಅದೇ ಭಾವಿ ನೀರು ತುಂಬೋರು. ಅದೇ ಭಾವಿಯ ನೀರು ತಂದು ತಮ್ಮನ್ಯಾಗ ಹಾಂಡೆದಾಗ ಹಾಕವ್ರು.

ಪಂಚಮ ಶಾಲೆಯರು ಬ್ರಾಹ್ಮಣರು ರೆಡ್ಡಿಯರು ಆವಾಗ ಒಬ್ಬೊಬ್ಬರಿ ಒಬ್ಬರಿಗೊಬ್ಬರು ಚರಗಿ ನೀರು ಕೊಡುತ್ತಿದ್ದರು.ಇವರಿಗೆ ಬಿಳಿ ಮಂದಿ ಅಂತಿದ್ರು ಅವರಿಗಿಂತ ಕೆಳಗ ಪೂಜಾರಿಗಳು ಮುಸ್ಲಿಮರು ಮತ್ತು ಕಬ್ಬಲಿ ಗೇರು ಬ್ಯಾಡ್ರು ಇವರೆಲ್ಲ ಕಪ್ಪು ಮಂದಿ. ಇವರಿಗೆ ನೀರು ಕೊಡುತ್ತಿದ್ದಿಲ್ಲರಿ .ಇವರಿಗೆ ನೀರು ಎತ್ತಿ ಹಾಕುತ್ತಿದ್ದರು ಮತ್ತು ನೀರು ಎಲ್ಲಿಂದ ತಂದೀರಿ, ಅದೇ ಭಾವಿ ಒಳಗೆ ತಂದಿರಿ ಅವನ್ನ ಮನೆಯಾಗ ಹಾಕಿರಿ.ಈಗ ಅವೇ ನೀರು ನಮಗೆ ಎತ್ತಿ ಹಾಕ್ತಿರಿ. ನಿಮ್ಮ ನೀರು ಎಲ್ಲಿಂದ ತಂದೀರಿ ?ನಿಮ್ಮ ನೀರು ಏನರ ಬ್ಯಾರೆ ಅದವೇನು ?

ಲಂಡೇನಹಳ್ಳ ಬಂದು ನದಿಯ ಕೂಡಿದ ಮೇಲೆ ನೈವೇದ್ಯ ಹೆಂಗಾಯ್ತು ಹೇಳಣ್ಣ ? ಹೊಳಿಗಿ ಹೋಗಬೇಕು ಹೋಳಿ ನೀರು ತರಬೇಕು ದೇವರಿಗೆ ನೈವೇದ್ಯ ಮಾಡಬೇಕು ಹೊಳೆಯಾಗ ಏನೇನು ಕೂಡ ಅದರ ವಿಚಾರ ಯಾರಿಗೂ ಇಲ್ಲ ಲಂಡೇನ ಹಳ್ಳ ಅಲ್ಲೇ ಹೋಗ್ಯಾವು. ಎಷ್ಟೋ ಹೆಣ ಅಲ್ಲಿ ಒಗದಾರ. ಅದರಾಗ ಆಸ್ತಿ ಬಿಡ್ತಾರೆ ಎಷ್ಟೋ ಪಕ್ಷಿ ಪ್ರಾಣಿಗಳು ಹೊಳೆಯೊಳಗೆ ಸತ್ತಿರ್ತಾವು.ದನಕ ನೀರ್ ಕುಡಿಸುತ್ತಾರೆ ಮೈಲಿಗೆ ಬಟ್ಟೆ ತೊಳಿತಾರೆ ಸ್ವರ್ಗ್ಯಾಡಿ ಬಂದ ದನ ಅಲ್ಲೇ ನೀರು ಕುಡಿತಾವು ಅಂತಹ ನೀರು ತಂದು ದೇವರಿಗೆ ಮಜ್ಜನ ಮಾಡುತ್ತೀರಿ ಲಂಡೇನ ಹಳ್ಳ ಕೂಡಿದ ಮೇಲೆ ಹ್ಯಾಂಗ್ ಆಯ್ತು ಹೇಳಣ್ಣ ?ಅಂದ ಮೇಲೆ ನೈವೇದ್ಯ ಹೆಂಗಾಯ್ತು?.

ಸೂಸಲಾಡುವ ದೇಹ ಸೋಸಿ ನೀರನೆ ಮಾಡಿ ಈ ದೇಹದೊಳಗೆ ದುರ್ಗಣಗಳು ತುಂಬಿ ತುಳುಕ ತಾವು ಇದರೊಳಗೆ ಕಾಮ ಕ್ರೋಧ ಲೋಭ ಮಧ ಮತ್ಸರ ಮೋಹಗಳು ಅದಾವು.ಮತ್ತೆ ಸಪ್ತ ವ್ಯಸನಗಳು ಅದಾವು. ಪಂಚ ವಿಷಯಗಳು ಅದಾವು. ಶಡ್ವಿಕಾರಗಳು ಅದಾವು. 8 ಮದಗಳು ಅದಾವು. 9 ಜೀವನ ಗುಣಗಳು ಅದಾವು. ಒಂದು 108 ದುಷ್ಟ ಗುಣಗಳು ಅದಾವು.

ಮುಂದುವರೆಯುತ್ತದೆ . . . . .

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.